Coronavirus: ನಿಮ್ಮ ಫೋನ್‌ನಲ್ಲಿ ಸೀನುವ ಮೂಲಕ ಕರೋನಾ ವೈರಸ್ ಪತ್ತೆ ಮಾಡಬವುದು

Coronavirus: ನಿಮ್ಮ ಫೋನ್‌ನಲ್ಲಿ ಸೀನುವ ಮೂಲಕ ಕರೋನಾ ವೈರಸ್ ಪತ್ತೆ ಮಾಡಬವುದು
HIGHLIGHTS

ಈ ಸೆನ್ಸರ್ ಕೇವಲ 60 ಸೆಕೆಂಡುಗಳಲ್ಲಿ ಕರೋನಾ ವೈರಸ್ ಅನ್ನು ಪತ್ತೆ ಮಾಡುತ್ತದೆಂದು ವಾದಿಸುತ್ತಿದೆ.

ಮುಂದಿನ 3 ತಿಂಗಳಲ್ಲಿ ಈ ಸೆನ್ಸರ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಅತಿ ಶೀಘ್ರದಲ್ಲೇ ಈ ಕರೋನಾ ವೈರಸ್ ಅನ್ನು ನಿಮ್ಮ ಮೊಬೈಲ್ನಲ್ಲಿ ಸೀನುವ ಅಥವಾ ಕೆಮ್ಮುವ ಮೂಲಕ ಕಂಡುಹಿಡಿಯಬಹುದು. ಈ ಮಾಹಿತಿಯನ್ನು ಅಮೆರಿಕದ ಸಂಶೋಧನಾ ತಂಡ ಹೊರ ತಂದಿದೆ. ವಾಸ್ತವವಾಗಿ ಅಮೇರಿಕ ಸಂಶೋಧನಾ ತಂಡ ನಿಮ್ಮ ಫೋನ್‌ಗೆ ಲಗತ್ತಿಸಬಹುದಾದ (ಸೇರಿಸಬವುದಾದ) ಸೆನ್ಸರ್ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇದು 60 ಸೆಕೆಂಡುಗಳಲ್ಲಿ ಕರೋನಾ ವೈರಸ್ ಅನ್ನು ಪತ್ತೆ ಮಾಡುತ್ತದೆಂದು ವಾದಿಸುತ್ತಿದೆ. 

ಮುಂದಿನ 3 ತಿಂಗಳಲ್ಲಿ ಈ ಸೆನ್ಸರ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಸಂವೇದಕವು ತುಲನಾತ್ಮಕವಾಗಿ ಕಡಿಮೆಯಾಗಲಿದೆ. ಈ ಸಾಧನದ ಬೆಲೆ ಸುಮಾರು $55 (ಭಾರತದಲ್ಲಿ 4,160 ರೂಗಳು) ಆಗುವ ನಿರೀಕ್ಷೆಯಿದೆ. ಕರೋನಾ ವೈರಸ್ ಅನ್ನು ಪತ್ತೆಹಚ್ಚುವಲ್ಲಿ ಈ ಸಂವೇದಕವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಈ ಯೋಜನೆಯ ನಾಯಕ ಪ್ರೊಫೆಸರ್ ಮಸೂದ್ ತಬೀಬ್ ಅಜರ್ ಅಭಿಪ್ರಾಯಪಟ್ಟಿದ್ದಾರೆ. 

ಪ್ರೊಫೆಸರ್ ಮಸೂದ್ ಯುನೈಟೆಡ್ ಸ್ಟೇಟ್ಸ್ನ ಉತಾಹ್ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರ್ ಆಗಿದ್ದು ಈ ಗ್ಯಾಜೆಟ್ ಅನ್ನು ಮೊದಲು ಈ ಡಿವೈಸ್ ಅನ್ನು ಸೊಳ್ಳೆಯಿಂದ ಹರಡುವ ವೈರಸ್ ವಿರುದ್ಧ ಹೋರಾಡಲು ವಿನ್ಯಾಸಗೊಳಿಸಲಾಗಿದೆ. ಪ್ರೊಫೆಸರ್ ಮಸೂದ್ ನಾವು ಈ ಯೋಜನೆಯನ್ನು ಸುಮಾರು 12 ತಿಂಗಳ ಹಿಂದೆಯಿಂದ ಪ್ರಾರಂಭಿಸಿದ್ದೇವೆ ಎಂದು ಹೇಳಿದರು. ಜಿಕಾ ವೈರಸ್ ಅನ್ನು ಪತ್ತೆಹಚ್ಚಲು ನಮ್ಮದೇ ಆದ ವೈಯಕ್ತಿಕ ಸೆನ್ಸರ್ ಅನ್ನು ಒದಗಿಸುವುದು ನಮ್ಮ ಮುಖ್ಯ ಉದ್ದೇಶವಾಗಿತ್ತು ಎಂದು ಅವರು ಹೇಳಿದರು.

ಆದರೆ ಇದು ಈಗ ಈ ಕೋವಿಡ್ -19 ಅನ್ನು ಕಂಡುಹಿಡಿಯಲು ನಾವು ಈಗ ಅದನ್ನು ಪ್ರೋಗ್ರಾಮಿಂಗ್ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು. ಈ ಡಿವೈಸ್ 1 ಇಂಚು ಅಗಲವಿದ್ದು ಈ ವೈರ್‌ಲೆಸ್ ತಂತ್ರಜ್ಞಾನವು ಬ್ಲೂಟೂತ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ಸಂವಹನ ನಡೆಸುತ್ತದೆ. ಒಬ್ಬ ವ್ಯಕ್ತಿ ಇದರ ಸೆನ್ಸಾರ್ ಡಿವೈಸ್‌ ಹತ್ತಿರದಿಂದ ಉಸಿರಾಟ, ಕೆಮ್ಮು ಅಥವಾ ಸೀನುವುದರಿಂದ ಆ ವ್ಯಕ್ತಿ COVID-19 ಸೋಂಕಿಗೆ ಒಳಗಾಗಿದ್ದಾನೆಯೇ ಇಲ್ವೇ  ಎಂದು ಹೇಳಲು ಸಾಧ್ಯವಾಗುತ್ತದೆ. ಎಡಕ್ಕೂ ಮೊದಲು ಲಾಲಾರಸದ ಸೂಕ್ಷ್ಮ ಕಣವನ್ನು ಸೇರಿಸುವ ಮೊದಲು ಬಳಕೆದಾರನು ತನ್ನ ಫೋನ್‌ನ ಚಾರ್ಜಿಂಗ್ ಪೋರ್ಟ್ನಲ್ಲಿ ಡಿವೈಸ್ ಸೆನ್ಸರ್ಗಳನ್ನು ಸ್ಥಾಪಿಸಬೇಕು ಮತ್ತು ಅಗತ್ಯವಾದ ಅಪ್ಲಿಕೇಶನ್ ಅನ್ನು ಪ್ರಾರಂಭಿಸಬೇಕಾಗುತ್ತದೆ.  

ಇದರ ನಂತರ ಮುಂದಿನ ಒಂದು ನಿಮಿಷದಲ್ಲಿ ಮೊಬೈಲ್ ಸ್ಕ್ರೀನ್ ಮೇಲೆ COVID-19 ಫಲಿತಾಂಶ ಬರುತ್ತದೆ. ಪ್ರೊಫೆಸರ್ ಮಸೂದ್ ಅವರು ಈ ಡಿವೈಸ್ ಸೆನ್ಸರ್ ಬಣ್ಣವನ್ನು ಬದಲಾಯಿಸುತ್ತದೆ ಅಥವಾ ಕೋವಿಡ್ -19 ಇರುವಿಕೆಯನ್ನು ದೃಷ್ಟಿಗೋಚರವಾಗಿ ಸೂಚಿಸುತ್ತದೆ ಎಂದು ಹೇಳಿದರು. ಈ ಸಂವೇದಕವನ್ನು ಬಹಳ ಸುಲಭವಾಗಿ ಮರುಬಳಕೆ ಮಾಡಬಹುದು ಏಕೆಂದರೆ ಡಿವೈಸ್ ಅಲ್ಲಿನ ಬೆಳಕಿನ ವಿದ್ಯುತ್ ಪ್ರವಾಹದಿಂದಾಗಿ ನಿಮ್ಮ ಹಿಂದಿನ ಟೆಸ್ಟ್ ಅನ್ನು ತೆಗೆದುಹಾಕಿ ಪುನಃ ಹೊಸದಾಗಿ ಬಳಸಲು ಅನುವು ಮಾಡಿಕೊಡುತ್ತದೆಂದು ಪ್ರೊಫೆಸರ್ ಮಸೂದ್ ಹೇಳಿದ್ದಾರೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo