Latest News on Bigg Boss Kannada Season 9: ಅನೇಕ ಯಶಸ್ವಿ ಸೀಸನ್‌ಗಳ ನಂತರ ಕಿಚ್ಚ ಸುದೀಪ್ (Kiccha Sudeep) ಮತ್ತೊಮ್ಮೆ ಬಿಗ್ ಬಾಸ್ ಕನ್ನಡದ ಸೀಸನ್ 9 ಗಾಗಿ ಹೋಸ್ಟ್ ಕ್ಯಾಪ್‌ನಲ್ಲಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 9 (Bigg Boss Kannada Season 9) ಸೀಸನ್ನ ಕುರಿತು ಈಗಾಗಲೇ ಜನರಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ಅದರಲ್ಲಿಯೂ ಈ ನಿರೀಕ್ಷೆಯನ್ನು ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ (Parameshwar Gundkal) ಸಹ ಹೆಚ್ಚಿಸುತ್ತಿದ್ದಾರೆ. ಕೆಲದಿನಗಳ ಹಿಂದೆ ಬಿಗ್ ಬಾಸ್ ಮನೆಯ ಸಿದ್ಧತೆಗಳು ನಡೆಯುತ್ತಿರುವುದಾಗಿ ಅವರು ತಿಳಿಸಿದ್ದರು. ಅದಾದ ಬಳಿಕ ಅವರು ಸುದೀಪ್ ಜೊತೆಗಿನ ಫೋಟೋ ಹಂಚಿಕೊಂಡು ಪ್ರೋಮೋ ಶೂಟಿಂಗ್ ಮಾಡುತ್ತಿರುವುದಾಗಿ ಹೇಳಿದ್ದರು. ಇದೀಗ ಅದೇ ಪ್ರೋಮೋ ಶೂಟ್ ವೇಳೆಯ ಕಿಚ್ಚನ ಫೋಟೋಗಳು ಲೀಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.
Survey
✅ Thank you for completing the survey!
ಬಿಗ್ ಬಾಸ್ ಕನ್ನಡ ಸೀಸನ್ 9 (Bigg Boss Kannada Season 9)
ಲೀಕ್ ಆದ ಫೋಟೋದಲ್ಲಿ ಸುದೀಪ್ ವೈಟ್ ಆಂಡ್ ಬ್ಲಾಕ್ ಬಟ್ಟೆಯಲ್ಲಿ ಸೂಟ್ ಹಾಕಿಕೊಂಡು ಮಿಂಚುತ್ತಿದ್ದಾರೆ. ಸುದೀಪ್ ಅವರ ಫೋಟೋ ನೋಡಿದ ಅಭಿಮಾನಿಗಳು ಕಿಚ್ಚನ ಹೊಸ ಲುಕ್ಗೆ ಫಿದಾ ಆಗಿದ್ದು ಫೋಟೋವನ್ನು ಎಲ್ಲಡೆ ವೈರಲ್ ಮಾಡಿದ್ದಾರೆ. ಜೊತೆಗೆ ಪ್ರೋಮೋ ವೇಳೆಯ ಸುದೀಪ್ ಅವರ ಫೋಟೋವನ್ನು ಸ್ವತಃ ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಮೂಲಗಳ ಪ್ರಕಾರ ಪ್ರೋಮೋ ಶೂಟ್ ಮುಗಿದಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 9ರ ಪ್ರೋಮೋ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ.
Exciting promo shoot for the new #BigBossKannada. Thanks to the entire team for all ua efforts,, and also to all those lovely people who participated in the shoot. You all,,look forward to the promo soon ,,, its a supaa announcement . @ColorsKannada
ಬಿಗ್ ಬಾಸ್ ಕುರಿತು ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ ‘ಬಿಗ್ ಬಾಸ್ ಕನ್ನಡ ಸೀಸನ್ 9 (Bigg Boss Kannada Season 9) ಹೊಸ ಸೀಸನ್ಗಾಗಿ ಪ್ರೋಮೋ ಶೂಟ್ ಮುಗಿಸಿದೆ. ಹೀಗಾಗಿ ಇಡೀ ತಂಡಕ್ಕೆ ಧನ್ಯವಾದ. ಈ ವೇಳೆ ಭಾಗಿಯಾಗಿದ್ದ ಎಲ್ಲರಿಗೂ ಥ್ಯಾಂಕ್ಸ್. ಪ್ರೋಮೋ ಶೀಘ್ರದಲ್ಲಿಯೇ ಬರಲಿದೆ. ನಿಜಕ್ಕೂ ಇದು ಸೂಪರ್ ಘೋಷಣೆ‘ ಎಂದು ಬರೆದುಕೊಂಡಿದ್ದಾರೆ. ಇದರ ನಡುವೆ ಬಿಗ್ಬಾಸ್ ಸೀಸನ್ 9ರ ಬಗ್ಗೆ ಕುತೂಹಲ ಮನೆಮಾಡಿದ್ದು ಯಾರೆಲ್ಲಾ ಮನೆಯೊಳಕ್ಕೆ ಕಾಲಿಡಲಿದ್ದಾರೆ ಎಂಬ ಪ್ರಶ್ನೆ ಕಾಡತೊಡಗಿದೆ.
ಇನ್ನು ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 9 (Bigg Boss Kannada Season 9) ಟಿವಿ ಬದಲಿಗೆ ಓಟಿಟಿ ಅಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದ್ದು ಈ ಕುರಿತು ವಾಹಿನಿ ಕಡೆಯಿಂದ ಅಧಿಕೃತ ಮಾಹಿತಿ ತಿಳಿದುಬರಬೇಕಿದೆ. ಇದರ ಜೊತೆಗೆ ಬಿಬಿಕೆ 9 ಇದೇ ಅಗಷ್ಟ್ ತಿಂಗಳಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಕುರಿತ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile