ಎಚ್ಚರ! ನಿಮ್ಮ ಹಳೆಯ ಸ್ಮಾರ್ಟ್​ಫೋನ್ ಮಾರುತ್ತಿದ್ದರೆ ಒಮ್ಮೆ ತಪ್ಪದೆ ಈ ಕೆಲಸ ಮಾಡಿ

ಎಚ್ಚರ! ನಿಮ್ಮ ಹಳೆಯ ಸ್ಮಾರ್ಟ್​ಫೋನ್ ಮಾರುತ್ತಿದ್ದರೆ ಒಮ್ಮೆ ತಪ್ಪದೆ ಈ ಕೆಲಸ ಮಾಡಿ
HIGHLIGHTS

ಮಾರುಕಟ್ಟೆಯಲ್ಲಿ ದಿಕ್ಕೊಂದರಂತೆ ಕಡಿಮೆ ಬೆಲೆಗೆ ಹೊಸ ಹೊಸ ಸ್ಮಾರ್ಟ್​ಫೋನುಗಳು ಬಿಡುಗಡೆ ಆಗುತ್ತಿರುತ್ತದೆ.

ಹಳೆಯ ಸ್ಮಾರ್ಟ್​ಫೋನನ್ನು ಸೇಲ್ ಮಾಡುವ ಮುನ್ನ ನೀವು ಕೆಲವೊಂದು ಕೆಲಸನ್ನು ತಪ್ಪದೆ ಮಾಡಬೇಕು.

ಮೊದಲನೆಯದಾಗಿ ಅದರಲ್ಲಿರುವ ಎಲ್ಲ ಫೈಲುಗಳು, ಸೆಟ್ಟಿಂಗ್‌ಗಳನ್ನು ನಿಮ್ಮಲ್ಲಿ ಬ್ಯಾಕಪ್ ಇಟ್ಟುಕೊಳ್ಳಬೇಕು.

ಮಾರುಕಟ್ಟೆಯಲ್ಲಿ ದಿಕ್ಕೊಂದರಂತೆ ಕಡಿಮೆ ಬೆಲೆಗೆ ಹೊಸ ಹೊಸ ಸ್ಮಾರ್ಟ್​ಫೋನುಗಳು ಬಿಡುಗಡೆ ಆಗುತ್ತಿರುತ್ತದೆ. ಅಗ್ಗದ ಬೆಲೆಗೆ ಆಕರ್ಷಕ ಫೋನುಗಳು (Budget Phone) ಸಿಗುವ ಕಾರಣ ಹಳೆಯ ಫೋನ್ ಸ್ವಲ್ಪ ಹಾಳಾದರೆ ಸಾಕು ಅದನ್ನು ಸೇಲ್ ಮಾಡಿ ಹೊಸ ಮೊಬೈಲ್ (Mobile) ತೆಗೆದುಕೊಳ್ಳುವವರೇ ಹೆಚ್ಚು. ಆದರೆ ಹಳೆಯ ಸ್ಮಾರ್ಟ್​ಫೋನನ್ನು ಸೇಲ್ ಮಾಡುವ ಮುನ್ನ ನೀವು ಕೆಲವೊಂದು ಕೆಲಸನ್ನು ತಪ್ಪದೆ ಮಾಡಬೇಕು. ನೀವು ಸ್ಮಾರ್ಟ್‌ಫೋನ್‌ನ್ನು ಮಾರಾಟ ಮಾಡಲು ಯೋಚನೆ ಮಾಡುತ್ತಿದ್ದರೆ ನಿಮ್ಮ ಫೋನ್‌ ಮಾರಾಟ ಮಾಡುವ ಮುನ್ನ ನೀವು ಅನುಸರಿಸಲೇಬೇಕಾದ ವಿಧಾನಗಳ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಎಷ್ಟು ಜಾಗರೂಕತೆಯಿಂದ ಇರಬೇಕು ಎಂಬುದನ್ನು ತಿಳಿಯೋಣ.

ಮೊದಲನೆಯದಾಗಿ ಅದರಲ್ಲಿರುವ ಎಲ್ಲ ಫೈಲುಗಳು, ಸೆಟ್ಟಿಂಗ್‌ಗಳನ್ನು ನಿಮ್ಮಲ್ಲಿ ಬ್ಯಾಕಪ್ ಇಟ್ಟುಕೊಳ್ಳಬೇಕು. ಕೆಲವು ಫೋನ್‌ಗಳಲ್ಲಿ ಮೆಮೊರಿ ಕಾರ್ಡ್‌ಗೆ ಬ್ಯಾಕಪ್ ಮಾಡಿಕೊಳ್ಳುವ ಆಯ್ಕೆಯಿದ್ದರೆ ಹೆಚ್ಚಿನ ಆಂಡ್ರಾಯ್ಡ್ ಫೋನ್‌ಗಳಲ್ಲಿ ಗೂಗಲ್ ಸರ್ವರ್‌ನಲ್ಲೇ ಬ್ಯಾಕಪ್ ಇರಿಸಿಕೊಳ್ಳುವ ಆಯ್ಕೆಯಿರುತ್ತದೆ. ಇದರ ಜೊತೆಗೆ ಸ್ಮಾರ್ಟ್‌ಫೋನ್‌ ಅನ್ನು ಮಾರುವ ಮುನ್ನ ನಿಮ್ಮ ಸ್ಮಾರ್ಟ್‌ಫೋನಿನ ಫ್ಯಾಕ್ಟ್ರಿ ಸೆಟ್ಟಿಂಗ್ಸ್ ರೀಸೆಟ್ ಮಾಡುವುದು ಕಡ್ಡಾಯ. ನೀವು ಸ್ಮಾರ್ಟ್‌ಫೋನ್ ಫ್ಯಾಕ್ಟ್ರಿ ಸೆಟ್ಟಿಂಗ್ಸ್ ರೀಸೆಟ್ ಮಾಡಿದರೆ ಫೋನಿನಲ್ಲಿನ ನಿಮ್ಮ ಡೇಟಾ ಸಂಪೂರ್ಣವಾಗಿ ಅಳಿಸಿಹೊಗುತ್ತದೆ. ಹಾಗಾಗಿ ಮರೆಯದೇ ಫ್ಯಾಕ್ಟ್ರಿ ರೀಸೆಟ್ ಮಾಡಿ.

ಇನ್ನು ಶೋರೂಂನಿಂದ ಸ್ಮಾರ್ಟ್​ಫೋನ್ ಹೊರತಂದರೆ ಸಾಕು ಆ ಮೊಬೈಲ್ ಬೆಲೆ ಶೇ. 40 ರಷ್ಟು ಇಳೆಕೆಯಾಗುತ್ತದೆ ಎನ್ನುತ್ತವೆ ಸೆಕೆಂಡ್‌ ಹ್ಯಾಂಡ್‌ ಬೆಲೆಗಳನ್ನು ಹೇಳುವಂತಹ ಸೈಟ್‌ಗಳು. ಹಾಗಾಗಿ ನಿಮ್ಮ ಸ್ಮಾರ್ಟ್‌ಫೋನ್ ಮಾರಾಟ ಮಾಡುವಾಗ ಅದರ ಮಾರ್ಕೆಟ್ ವ್ಯಾಲ್ಯೂ ಎಷ್ಟು ಎಂಬುದನ್ನು ಮೊದಲು ತಿಳಿದುಕೊಳ್ಳಿ. ಫೋನ್‌ನ ಒಳಭಾಗ ಮತ್ತು ಹೊರಭಾಗವನ್ನು ಚೆನ್ನಾಗಿ ಸ್ವಚ್ಛಮಾಡಿಕೊಳ್ಳಿ. ತಪ್ಪದೆ ಫಿಂಗರ್ ಪ್ರಿಂಟ್ ಕಲೆಗಳನ್ನು ನಿವಾರಿಸಿ ನಿಮ್ಮ ಹಳೆಯ ಫೋನ್ ಅನ್ನು ಮಾರಾಟ ಮಾಡಿ.

ಆ್ಯಂಡ್ರಾಯ್ಡ್‌ ಫೋನನ್ನು ರೀಸೆಟ್ ಮಾಡುವುದು ಹೇಗೆ?:

ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಸೆಟ್ಟಿಂಗ್ಸ್ ಆ್ಯಪ ಅನ್ನು ತೆರೆಯಿರಿ ಮತ್ತು ಈಗಿನ ಎಲ್ಲಾ ಆ್ಯಂಡ್ರಾಯ್ಡ್‌ ಫೋನ್‍ಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಸರ್ಚ್ ಬಾರ್ ಅಥವಾ ಐಕಾನ್ ಮೇಲೆ ಟ್ಯಾಪ್ ಮಾಡಿ. ‘ರೀಸೆಟ್’ಅನ್ನು ಹುಡುಕಿರಿ ಮತ್ತು ಫಲಿತಾಂಶಗಳಲ್ಲಿ ಫ್ಯಾಕ್ಟರಿ ಡಾಟಾ ರೀಸೆಟ್ ಆಯ್ಕೆಯನ್ನು ಒತ್ತಿರಿ. ಅನಂತರ ತೆರೆಯುವ ಪರದೆಯಲ್ಲಿ ರೀಸೆಟ್ ಆಯ್ಕೆ ಮಾಡಿ. ಫೋನ್‍ನ ಸಂಪೂರ್ಣ ಕ್ಲೀನಿಂಗ್ ಪ್ರಕ್ರಿಯೆ ನಡೆದು ರೀಸ್ಟಾರ್ಟ್ ಆಗಲು ಬಿಡಿ. ರೀಸ್ಟಾರ್ಟ್ ಯಶಸ್ವಿಯಾದರೆ ಆ್ಯಂಡ್ರಾಯ್ಡ್‌ ಫೋನ್ ಪರದೆಯಲ್ಲಿ ವೆಲ್‍ಕಮ್ ಸ್ಕ್ರೀನ್ ಕಾಣಸಿಗುತ್ತದೆ. ಇಲ್ಲಿ ಹೊಸ ಬಳಕೆದಾರರು ಸ್ವಂತ ಖಾತೆಗಳಿಗೆ ಸೈನ್‍ಇನ್ ಆಗಲು ಸಾಧ್ಯವಾಗುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo