Ai Siri ಅನ್ನು ಮತ್ತಷ್ಟು ಸ್ಮಾರ್ಟ್ ಮಾಡಲು Google ಜೊತೆ ಕೈ ಜೋಡಿಸಿದ Apple!

Ai Siri ಅನ್ನು ಮತ್ತಷ್ಟು ಸ್ಮಾರ್ಟ್ ಮಾಡಲು Google ಜೊತೆ ಕೈ ಜೋಡಿಸಿದ Apple!

ವಿಶ್ವದ ಪ್ರಸಿದ್ಧ ಟೆಕ್ ಕಂಪನಿಗಳಾದ ಆಪಲ್ (Apple) ಮತ್ತು ಗೂಗಲ್ (Google) ಈಗ ಕೈಜೋಡಿಸಿವೆ. ಹಲವು ವರ್ಷಗಳ ಈ ಒಪ್ಪಂದದ ಪ್ರಕಾರ ಗೂಗಲ್‌ನ ಸುಧಾರಿತ ‘ಜೆಮಿನಿ’ (Gemini) ತಂತ್ರಜ್ಞಾನವು ಇನ್ಮುಂದೆ ಆಪಲ್ ದಿವಾಸ್ ಸಾಧನಗಳ ಎಐ (AI) ಫೀಚರ್ಗಳಿಗೆ ಪವರ್ ನೀಡಲಿದೆ. ಆಪಲ್‌ನ ಧ್ವನಿ ಸಹಾಯಕ ‘ಸಿರಿ’ (Siri) ಸೇರಿದಂತೆ ಹಲವು ಫೀಚರ್‌ಗಳು ಈಗ ಗೂಗಲ್ ಎಐ ಮೂಲಕ ಮತ್ತಷ್ಟು ಸ್ಮಾರ್ಟ್ ಆಗಲಿವೆ. ಆಪಲ್ ಕಂಪನಿಯು ಕಳೆದ ಹಲವು ವರ್ಷಗಳಿಂದ ತನ್ನದೇ ಆದ ಎಐ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದರೂ ನಿರೀಕ್ಷಿತ ಯಶಸ್ಸು ಸಿಕ್ಕಿರಲಿಲ್ಲ. ಗೂಗಲ್, ಮೈಕ್ರೋಸಾಫ್ಟ್ ಮತ್ತು ಓಪನ್‌ಎಐ (ChatGPT) ಕಂಪನಿಗಳು ಎಐ ಕ್ಷೇತ್ರದಲ್ಲಿ ವೇಗವಾಗಿ ಮುನ್ನುಗ್ಗುತ್ತಿದ್ದರೆ ಆಪಲ್ ಮಾತ್ರ ಸ್ವಲ್ಪ ಹಿಂದೆ ಉಳಿದಿತ್ತು.

Digit.in Survey
✅ Thank you for completing the survey!

Ai Siri: ಆಪಲ್ (Apple) ಮತ್ತು ಗೂಗಲ್ (Google) ಈಗ ಕೈಜೋಡಿಸಿ

ಕಳೆದ ವರ್ಷವಷ್ಟೇ ಆಪಲ್ ತನ್ನ ಸ್ಮಾರ್ಟ್ ‘ಸಿರಿ’ ಅಪ್‌ಗ್ರೇಡ್ ಬರಲು 2025 ರವರೆಗೆ ಸಮಯ ಬೇಕು ಎಂದು ಒಪ್ಪಿಕೊಂಡಿತ್ತು. ಅಷ್ಟೇ ಅಲ್ಲದೆ ಡಿಸೆಂಬರ್ ತಿಂಗಳಿನಲ್ಲಿ ಆಪಲ್‌ನ ಎಐ ತಂಡದ ಮುಖ್ಯಸ್ಥರು ಕೂಡ ರಾಜೀನಾಮೆ ನೀಡಿದ್ದರು. ಇಂತಹ ಕಠಿಣ ಸಮಯದಲ್ಲಿ ಆಪಲ್ ತನ್ನ ಹಳೆಯ ಪಾಲುದಾರ ಗೂಗಲ್ ಮೊರೆ ಹೋಗಿದೆ. ಈಗಾಗಲೇ ಗೂಗಲ್ ತನ್ನ ಸರ್ಚ್ ಇಂಜಿನ್ ಐಫೋನ್‌ಗಳಲ್ಲಿ ಡೀಫಾಲ್ಟ್ ಆಗಿರಲು ಆಪಲ್‌ಗೆ ವರ್ಷಕ್ಕೆ ಸುಮಾರು $20 ಬಿಲಿಯನ್‌ಗಿಂತಲೂ ಹೆಚ್ಚು ಹಣವನ್ನು ಪಾವತಿಸುತ್ತಿದೆ. ಈಗ ಎಐ ಒಪ್ಪಂದವು ಈ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

Ai Siri

ಆಪಲ್ ಗೂಗಲ್ ಕಂಪನಿಯನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ?

ತನ್ನ ಭವಿಷ್ಯದ ಯೋಜನೆಗಳಿಗೆ ಗೂಗಲ್‌ನ ಎಐ ತಂತ್ರಜ್ಞಾನವು ಅತ್ಯಂತ ಬಲಿಷ್ಠವಾದ ಅಡಿಪಾಯವಾಗಿದೆ ಎಂದು ಆಪಲ್ ಹೇಳಿದೆ. ಸಾಮಾನ್ಯವಾಗಿ ಆಪಲ್ ಕಂಪನಿಯು ತನ್ನ ಎಲ್ಲಾ ಸಾಫ್ಟ್‌ವೇರ್ ಮತ್ತು ತಂತ್ರಜ್ಞಾನಗಳನ್ನು ತನ್ನ ಕಚೇರಿಯಲ್ಲೇ (In-house) ತಯಾರಿಸಲು ಇಷ್ಟಪಡುತ್ತದೆ. ಆದರೆ ಎಐ ರೇಸ್‌ನಲ್ಲಿ ಹಿಂದೆ ಬೀಳಬಾರದು ಎಂಬ ಕಾರಣಕ್ಕೆ ಈಗ ಗೂಗಲ್ ಜೊತೆ ಒಪ್ಪಂದ ಮಾಡಿಕೊಂಡಿರುವುದು ಒಂದು ದೊಡ್ಡ ಬದಲಾವಣೆಯಾಗಿದೆ.

Also Read: ನೀವು ಸತ್ತವರ PAN Card ಬಳಸುತ್ತಿದ್ದೀರಾ? ಈ ರೀತಿ ಸರಳವಾಗಿ ಅಸಲಿಯತೆಯನ್ನು ಪರಿಶೀಲಿಸಿಕೊಳ್ಳಿ!

ವೆಡ್‌ಬುಷ್ ಸೆಕ್ಯುರಿಟೀಸ್‌ನ ವಿಶ್ಲೇಷಕ ಡ್ಯಾನ್ ಐವ್ಸ್ ಅವರ ಪ್ರಕಾರ ಈ ಒಪ್ಪಂದದಿಂದ ಗೂಗಲ್‌ಗೆ ವಿಶ್ವದಾದ್ಯಂತ ಇರುವ 2 ಬಿಲಿಯನ್‌ಗಿಂತಲೂ ಹೆಚ್ಚು ಆಪಲ್ ಸಾಧನಗಳಿಗೆ (ಐಫೋನ್, ಐಪ್ಯಾಡ್) ಪ್ರವೇಶ ಸಿಗಲಿದೆ. ಇದು ಗೂಗಲ್‌ಗೆ ತನ್ನ ಎಐ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಲು ಸಿಕ್ಕ ದೊಡ್ಡ ಅವಕಾಶವಾಗಿದೆ. ಇತ್ತ ಆಪಲ್‌ಗೆ ತನ್ನ ಎಐ ತಂತ್ರಜ್ಞಾನವನ್ನು ಮತ್ತೆ ಸರಿಯಾದ ಹಾದಿಗೆ ತರಲು ಇದೊಂದು ದೊಡ್ಡ ಮೆಟ್ಟಿಲು ಇದ್ದಂತೆ.

ಮುಂದೆ ಏನಾಗಲಿದೆ? ಗ್ರಾಹಕರಿಗೆ ಏನು ಲಾಭ?

ಈ ಒಪ್ಪಂದದ ನಂತರವೂ ಆಪಲ್ ತನ್ನ ಗ್ರಾಹಕರ ‘ಗೌಪ್ಯತೆ’ (Privacy) ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಫೋನ್‌ನಲ್ಲಿ ನಡೆಯುವ ಹೆಚ್ಚಿನ ಸಂಸ್ಕರಣೆಗಳು ಸಾಧನದ ಮಟ್ಟದಲ್ಲೇ (Device-level processing) ನಡೆಯಲಿವೆ. ಈ ವರ್ಷದ ಕೊನೆಯ ವೇಳೆಗೆ ನಾವು ಇನ್ನೂ ಹೆಚ್ಚಿನ ಸಾಮರ್ಥ್ಯ ಹೊಂದಿರುವ ‘ಸಿರಿ’ಯನ್ನು ನೋಡಬಹುದು. ಆದಾಗ್ಯೂ ಈ ದೈತ್ಯ ಕಂಪನಿಗಳ ಒಪ್ಪಂದದ ಮೇಲೆ ಸರ್ಕಾರದ ನಿಯಂತ್ರಣ ಸಂಸ್ಥೆಗಳು ಕಣ್ಣಿಟ್ಟಿರುವುದರಿಂದ ಮತ್ತು ಆಪಲ್ ಸ್ವತಂತ್ರವಾಗಿ ಎಐ ಕ್ಷೇತ್ರದಲ್ಲಿ ಬೆಳೆಯಬಲ್ಲದೇ ಎಂಬ ಪ್ರಶ್ನೆಗಳು ಇನ್ನೂ ಹಾಗೆಯೇ ಉಳಿದಿವೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo