ನಿಮ್ಮ ಸ್ಮಾರ್ಟ್​ಫೋನ್ ಬಳಕೆಯಲ್ಲಿ ನಿಧಾನವಾಗಿದ್ದರೆ ಈ ಟ್ರಿಕ್ ಪ್ರಯೋಗಿಸಿ ಸೂಪರ್ ಫಾಸ್ಟ್ ಮಾಡಿಕೊಳ್ಳಿ

HIGHLIGHTS

ಸಾಮಾಜಿಕ ತಾಣಗಳು ಮತ್ತು ಮೆಸೆಜಿಂಗ್‌ ಆಪ್‌ಗಳು ಸೇರಿ ಸ್ಮಾರ್ಟ್‌ಫೋನ್‌ ಮೆಮೊರಿ ಭರ್ತಿಯಾಗಿ ಕಾರ್ಯ ಮಂದಗತಿಯಲ್ಲಿ ನಡೆಸುತ್ತದೆ.

ಫೋನ್‌ ಸರಿಯಾದ ವೇಳೆ ಅಪ್‌ಡೇಟ್‌ ಮಾಡದಿದ್ದರೂ ಸ್ಲೋ ಆಗುವ ಸಾಧ್ಯತೆಗಳಿರುತ್ತವೆ

ಹಲವು ಕಾರಣಗಳಿಂದಾಗಿ ಸಹ ಫೋನ್ ತನ್ನ ಕಾರ್ಯ ಸ್ಲೋ ಮಾಡಿರುತ್ತದೆ.

ನಿಮ್ಮ ಸ್ಮಾರ್ಟ್​ಫೋನ್ ಬಳಕೆಯಲ್ಲಿ ನಿಧಾನವಾಗಿದ್ದರೆ ಈ ಟ್ರಿಕ್ ಪ್ರಯೋಗಿಸಿ ಸೂಪರ್ ಫಾಸ್ಟ್ ಮಾಡಿಕೊಳ್ಳಿ

ಪ್ರಸ್ತುತ ಬಳಕೆದಾರರು ತಮ್ಮ ಮೊಬೈಲ್‌ ಫೋನ್‌ಗಳಲ್ಲಿ ಅಧಿಕ ಡೇಟಾ ಸಾಮರ್ಥ್ಯದ ಗೇಮ್ಸ್‌, ಥರ್ಡ್‌ಪಾರ್ಟಿ ಮೂಲದ ಅಪ್ಲಿಕೇಶನ್‌ಗಳಂತಹ ಕೆಲವು ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳುತ್ತಾರೆ. ಇವುಗಳ ಜೊತೆಗೆ ಸಾಮಾಜಿಕ ತಾಣಗಳು ಮತ್ತು ಮೆಸೆಜಿಂಗ್‌ ಆಪ್‌ಗಳು ಸೇರಿ ಸ್ಮಾರ್ಟ್‌ಫೋನ್‌ ಮೆಮೊರಿ ಭರ್ತಿಯಾಗಿ ಕಾರ್ಯ ಮಂದಗತಿಯಲ್ಲಿ ನಡೆಸುತ್ತದೆ. ಇದಲ್ಲದೇ ಫೋನ್‌ ಸರಿಯಾದ ವೇಳೆ ಅಪ್‌ಡೇಟ್‌ ಮಾಡದಿದ್ದರೂ ಸ್ಲೋ ಆಗುವ ಸಾಧ್ಯತೆಗಳಿರುತ್ತವೆ. ಇವುಗಳನ್ನು ಹೊರತುಪಡಿಸಿ ಇನ್ನು ಹಲವು ಕಾರಣಗಳಿಂದಾಗಿ ಸಹ ಫೋನ್ ತನ್ನ ಕಾರ್ಯ ಸ್ಲೋ ಮಾಡಿರುತ್ತದೆ.

Digit.in Survey
✅ Thank you for completing the survey!

ಮೆಮೊರಿ ಬಗ್ಗೆ ಗಮನವಿರಲಿ

16GB, 32GB ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಇಂದು ಹೆಚ್ಚು ಜನರ ಬಳಕೆಯಲ್ಲಿವೆ. ಹಾಗೆಂದು 16GB, 32GB ಮೆಮೊರಿಯನ್ನು ತುಂಬಿಸಿಕೊಳ್ಳಬಹುದು ಎಂದುಕೊಳ್ಳದಿರಿ. ಏಕೆಂದರೆ ಹೆಚ್ಚು ಸ್ಟೊರೇಜ್‌ನಿಂದಾಗಿ ಫೋನ್‌ಗಳು ನಿಧಾನವಾಗುತ್ತವೆ. ಹಾಗಾಗಿ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಇರುವ ಮೆಮೊರಿಗಿಂತ ಅರ್ಧಕ್ಕಿಂತಲೂ ಹೆಚ್ಚು ಸ್ಟೋರೇಜ್‌ ಖಾಲಿ ಇರಲಿ.

ಕಡಿಮೆ ಆ್ಯಪ್‌ಗಳನ್ನು ಬಳಸಿ

ಒಂದೇ ಸಾರಿ ಹಲವು ಆ್ಯಪ್‌ಗಳನ್ನು ಬಳಕೆ ಮಾಡಬಹುದಾದ ಶಕ್ತಿ ಸ್ಮಾರ್ಟ್‌ಫೋನ್‌ಗಳಿಗಿದ್ದರೂ ಸಹ ಒಮ್ಮೆಲೆ ಹೆಚ್ಚು ಆ್ಯಪ್‌ಗಳನ್ನು ಬಳಕೆ ಮಾಡುವುದು ಫೋನ್ ಸ್ಲೋ ಆಗಲು ಕಾರಣ. ಹಾಗಾಗಿ ಒಂದೇ ಸಾರಿ ಹಲವು ಆ್ಯಪ್‌ಗಳನ್ನು ಬಳಕೆ ಮಾಡದಿರುವುದು ಒಳ್ಳೆಯದು. ಇಲ್ಲದಿದ್ದರೆ, ನಿಮ್ಮ ಸ್ಮಾರ್ಟ್‌ಫೋನ್ ಸ್ಲೋ ಆಗುವುದನ್ನು ತಡೆಯಲು ಯಾರಿಗೂ ಸಾಧ್ಯವಾಗುವುದಿಲ್ಲ.

ಅಪ್‌ಡೇಟ್‌ ಮಾಡುವುದು ಉತ್ತಮ

ಸ್ಮಾರ್ಟ್‌ಫೋನ್‌ನಲ್ಲಿರುವ ಓಎಸ್‌ ಮೇಲಿಂದ ಮೇಲೆ ಅಪ್‌ಡೇಟ್ ಬೇಡುತ್ತಿರುತ್ತದೆ. ಅಪ್‌ಡೇಟ್ ಕೇಳಿದಾಗ ಅಪ್‌ಡೇಟ್ ಮಾಡಿಕೊಳ್ಳಿರಿ ಇದು ಸ್ಮಾರ್ಟ್‌ಫೋನ್ ವೇಗವನ್ನು ಉತ್ತಮ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ಹೊಸ ಫೀಚರ್ಸ್‌ಗಳಿದ್ದರೇ ಅವುಗಳು ಸಹ ಲಭ್ಯವಾಗುತ್ತವೆ. ಈ ಹಂತಗಳನ್ನು ಬಳಿಸಿ ಸೆಟ್ಟಿಂಗ್ > ಸಿಸ್ಟಮ್ > ಅಬೌಂಟ್ ಫೋನ್ > ಸಿಸ್ಟಮ್ ಅಪ್‌ಡೇಟ್.

ಬ್ಯಾಕ್‌ಗ್ರೌಂಡ್‌ ಆ್ಯಪ್ಸ್‌

ಸ್ಮಾರ್ಟ್‌ಫೋನ್‌ನಲ್ಲಿ ಅನೇಕ ಆ್ಯಪ್​​ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡಿರುತ್ತಾರೆ. ಅವುಗಳಲ್ಲಿ ಕೆಲವು ಆ್ಯಪ್ಸ್‌ಗಳನ್ನು ಬಳಕೆ ಮಾಡಿ ಮಿನಿಮೈಸ್‌ ಮಾಡಿರುತ್ತಾರೆ. ಆದ್ರೆ ಅವುಗಳು ಬ್ಯಾಕ್‌ಗ್ರೌಂಡ್‌ನಲ್ಲಿ ರನ್ ಆಗುತ್ತಿರುತ್ತವೆ. ಈ ಬ್ಯಾಕ್‌ಗ್ರೌಂಡ್‌ ರನ್ ಆಗುವ ಆ್ಯಪ್ಸ್‌ಗಳಿಗೆ ಬ್ರೇಕ್‌ ಹಾಕುವುದರಿಂದಲೂ ಸಹ ಸ್ಮಾರ್ಟ್‌ಫೋನ್ ಕಾರ್ಯವೈಖರಿ ವೇಗ ಪಡೆದುಕೊಳ್ಳುತ್ತದೆ.

ಜಂಕ್ ಫೈಲ್ ತೆಗೆಯಿರಿ ಡೇಟಾ ಸೇವರ್ ಮೋಡ್‌ ಆಯ್ಕೆ

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಜಂಕ್ ಫೈಲ್‌ಗಳು ಇದ್ದರೆ ಸ್ಮಾರ್ಟ್‌ಪೋನಿನ ಜೀವಿತಾವಧಿಯನ್ನು ಕುಂಠಿತಗೊಳಿಸುತ್ತವೆ. ಹಾಗಾಗಿ ನಿಮ್ಮ ಫೋನಿನಲ್ಲಿರುವ ಕಡತಗಳನ್ನು ಆಗಾಗ್ಗೆ ಆಯಂಟಿ ವೈರಸ್ ಆ್ಯಪ್ ಮೂಲಕ ಸ್ವಚ್ಛಗೊಳಿಸಿ. ಸೆಟ್ಟಿಂಗ್ಸ್ ತೆರೆದು ಅಲ್ಲಿ ಕಾಣಿಸುವ ಕ್ಯಾಚೆಯನ್ನು ವಾರಕ್ಕೆ ಒಮ್ಮೆಯಾದರೂ ಕ್ಲೀನ್ ಮಾಡುವುದನ್ನು ಮರೆಯದೇ ಇದ್ದರೆ ಫೋನ್ ವೇಗ ಹೆಚ್ಚುತ್ತದೆ. ಸ್ಮಾರ್ಟ್‌ಫೋನಿನಲ್ಲಿ ಕ್ರೋಮ್ ಬ್ರೌಸರ್ ಬಳಕೆ ಹೆಚ್ಚು. ಈ ಬ್ರೌಸರ್‌ನಲ್ಲಿ ಡೇಟಾ ಸೇವರ್ ಆಯ್ಕೆ ಸಿಗುತ್ತದೆ. ಅದನ್ನು ಸಕ್ರಿಯಗೊಳಿಸಿದರೆ ನಿಮ್ಮ ಮೊಬೈಲ್ ಡೇಟಾ ಬಳಕೆ ಕಡಿಮೆಯಾಗಿ ನಿಮ್ಮ ಫೋನಿನ ವೇಗ ಹೆಚ್ಚುತ್ತದೆ. ಕಡಿಮೆ ಡಾಟಾ ಬಳಸಿಕೊಂಡು ಹೆಚ್ಚು ಪೇಜ್‌ಗಳು ವೇಗವಾಗಿ ಲೋಡ್ ಆಗುತ್ತವೆ. ಜೊತೆಗೆ ಒಂದು ಸಿನೆಮಾವನ್ನೂ ಕಡಿಮೆ ಡೇಟಾದಲ್ಲೇ ನೋಡಬಹುದು.

 

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo