ದಾರಿಯಲ್ಲಿ ಹೊರಗೆ ಹೋಗುವಾಗ ಆಧಾರ್ ಕಾರ್ಡ್‌ನ ಅವಶ್ಯಕತೆ ಇದೆ ಎಂದು ಭಾವಿಸಿದಾಗ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ನಿಮ್ಮ ಫೋನ್ ಅಲ್ಲಿ ಸುಲಭವಾಗಿ ಆಧಾರ್ ಕಾರ್ಡ್ (Aadhaar Card) ಡೌನ್‌ಲೋಡ್ ಮಾಡುವುದೇಗೆ?
ನಿಮ್ಮ ಈ ಆಧಾರ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದ್ದು ಭಾರತ ಸರ್ಕಾರಕ್ಕೆ ಸಂಬಂಧಿಸಿದ ಅನೇಕ ಅಗತ್ಯ ಸೇವೆಗಳನ್ನು ನಿಮ್ಮ ಆಧಾರ್ ಇಲ್ಲದೆ ಪಡೆಯುವುದು ಕಷ್ಟವಾಗಿದೆ. ಇಂದು ನಮಗೆ ಯಾವುದನ್ನಾದರೂ ಬೇಕಾದರೆ ಅನೇಕ ಬಾರಿ ನಾವು ಮನೆಯಲ್ಲಿ ಆಧಾರ್ ಕಾರ್ಡ್ ಅನ್ನು ಮರೆತುಬಿಡುತ್ತೇವೆ. ಮತ್ತು ದಾರಿಯಲ್ಲಿ ಹೊರಗೆ ಹೋಗುವಾಗ ಆಧಾರ್ ಕಾರ್ಡ್‌ನ ಅವಶ್ಯಕತೆ ಇದೆ ಎಂದು ಭಾವಿಸಿದಾಗ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈಗ ಈ ಡಿಜಿಟಲ್ ಯುಗವು ನಿಮ್ಮ ಈ ಸಮಸ್ಯೆಯನ್ನು ಪರಿಹರಿಸಿದೆ.
Surveyಈಗ ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನಿಮ್ಮ ಆಧಾರ್ ಕಾರ್ಡ್ ಎಲ್ಲಿ ಬೇಕಾದರೂ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅದಕ್ಕಾಗಿ ನೀವು ಕೆಲವು ಮಾಹಿತಿಯನ್ನು ಹೊಂದಿರಬೇಕು ಅಷ್ಟೇ. ನಿಮ್ಮ ಈ ಡೌನ್‌ಲೋಡ್ ಆಧಾರ್ ಕಾರ್ಡ್ ಮಾನ್ಯವಾಗಿಲ್ಲ ಎಂಬ ಭ್ರಮೆಯಲ್ಲಿದ್ದರೆ ಮುದ್ರಣ (Print) ಮಾತ್ರ ಮಾನ್ಯವಾಗಿರುತ್ತದೆ. ಆದ್ದರಿಂದ ಡೌನ್‌ಲೋಡ್ ಮಾಡಿದ ನಿಮ್ಮ ಆಧಾರ್ ಕಾರ್ಡ್ ಸುರಕ್ಷಿತವಾಗಿದೆ ಎಂದು ವಿಶಿಷ್ಟ ಗುರುತಿನ ಸಂಖ್ಯೆ (UIDAI) ಸ್ಪಷ್ಟವಾಗಿ ಹೇಳಿದೆ. ಇದು ಮುದ್ರಿತ ಆಧಾರ್ ಕಾರ್ಡ್‌ನಂತೆಯೇ ಮೌಲ್ಯವನ್ನು ಹೊಂದಿದೆ.
ನಿಮ್ಮ ಫೋನ್‌ನಲ್ಲಿ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ?
1.ಮೊದಲಿಗೆ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಲು ನಿಮ್ಮ ಆಧಾರ್ ಬಗ್ಗೆ ಎಲ್ಲಾ ವಿಷಯಗಳನ್ನು ನೀವು ತಿಳಿದುಕೊಳ್ಳಬೇಕು. ಡೌನ್‌ಲೋಡ್ ಮಾಡಲು ಮೊದಲು ನೀವು ಅಧಿಕೃತ ವೆಬ್‌ಸೈಟ್ eaadhaar.uidai.gov.in/#/ ಗೆ ಭೇಟಿ ನೀಡಬೇಕು.
2.ನೀವು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು. ಇದರ ನಂತರ ನೀವು ಕ್ಯಾಪ್ಚಾವನ್ನು ಭರ್ತಿ ಮಾಡಬೇಕು. ಅದರ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಒಟಿಪಿ ಬರುತ್ತದೆ.
3.ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ ನಂತರ ನೀವು ವೆರಿಫೈ ಕ್ಲಿಕ್ ಮಾಡಿ. ಮತ್ತು ಡೌನ್‌ಲೋಡ್ ಮಾಡಿಕೊಳ್ಳಿ. ಈ ರೀತಿಯಾಗಿ ನಿಮ್ಮ ಆಧಾರ್ ಕಾರ್ಡ್ ಡೌನ್‌ಲೋಡ್ ಆಗುತ್ತದೆ. ಇದರ ನಂತರ ನೀವು ಅದನ್ನು ತೆರೆಯಲು ಪಾಸ್ವರ್ಡ್ ನೀಡಲೇಬೇಕಾಗುತ್ತದೆ.
4.ಅದನ್ನು ತೆರೆಯಲು ಪಾಸ್ವರ್ಡ್ ಈ ರೀತಿಯಾಗಲಿದ್ದು ಇದನ್ನು ಯಾವಾಗ ಬೇಕಾದರೂ ಪ್ರತಿ ಕಡೆ ಬೇಕಾಗಬಹುದು. ಈ ಪಾಸ್‌ವರ್ಡ್ ನಿಮ್ಮ ಮೊದಲ ಹೆಸರಿನಲ್ಲಿ ಮೊದಲ 4 ಅಕ್ಷರ ದೊಡ್ಡಕ್ಷರ (Capital Letter in English) ಮತ್ತು ನಂತರ ನಿಮ್ಮ ಹುಟ್ಟಿದ ವರ್ಷದ 4 ಸಂಖ್ಯೆ ಹಾಕಿ ಈ ರೀತಿಯಾಗಿ ನಿಮ್ಮ ಆಧಾರ್ ಕಾರ್ಡ್ ತೆರೆಯುತ್ತದೆ. ಉದಾಹರಣೆಗಾಗಿ ನನ್ನ ಹೆಸರು ವರುಣ್ ಕುಮಾರ್ (Varun Kumar) ಆಗಿದ್ದು ನಾನು 01-02-1990 ರಲ್ಲಿ ಜನಸಿದ್ದರೆ ನನ್ನ ಪಾಸ್ವರ್ಡ್ VARU1990 ಆಗಿರುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile