Aadhaar Card ಜೊತೆಗೆ PAN ಕಾರ್ಡ್ ಲಿಂಕ್ ಮಾಡಲು ಸೆಪ್ಟೆಂಬರ್ 30 ಕೊನೆಯ ದಿನ, ಮಾಡದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಪ್ರಯೋಜಕ

Aadhaar Card ಜೊತೆಗೆ PAN ಕಾರ್ಡ್ ಲಿಂಕ್ ಮಾಡಲು ಸೆಪ್ಟೆಂಬರ್ 30 ಕೊನೆಯ ದಿನ, ಮಾಡದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಪ್ರಯೋಜಕ
HIGHLIGHTS

Aadhaar Card ಮತ್ತು PAN Card ಅನ್ನು ಲಿಂಕ್ ಮಾಡಲು ಸೆಪ್ಟೆಂಬರ್ 30 ಕೊನೆಯ ದಿನವನ್ನು ಸೂಚಿಸಿದೆ.

SMS ಕಳುಹಿಸುವ ಮೂಲಕ ಪ್ಯಾನ್ ಅನ್ನು ಆಧಾರ್‌ಗೆ ಲಿಂಕ್ ಮಾಡುವ ವಿಧಾನವೂ ಇದೆ.

ರದ್ದಾದ PAN Card (ಪ್ಯಾನ್ ಕಾರ್ಡ್) ಬಳಸಿದರೆ ಅದನ್ನು ಆದಾಯ ತೆರಿಗೆ ಕಾಯಿದೆಯಡಿ ಸೆಕ್ಷನ್ 272B ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.

ಭಾರತ ಸರ್ಕಾರವು ದೇಶದ ಜನರಿಗೆ ಟ್ವಿಟ್ಟರ್ ಮತ್ತು ಪ್ರಕಟಣೆಗಳ ಮೂಲಕ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ಸೆಪ್ಟೆಂಬರ್ 30 ದಿನಾಂಕವನ್ನು ಸೂಚಿಸಿದೆ. ಈ ತಾರೀಕಿನೊಳಗೆ ಲಿಂಕ್ ಮಾಡದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ಅನ್ನು ನಿಷ್ಕ್ರಿಯವಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದೆ. ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡದಿದ್ದರೆ ಭಾರೀ ದಂಡವನ್ನು ಪಾವತಿಸಬೇಕಾಗಬಹುದು ಎಂಬುದನ್ನು ಸಹ  ನೆನಪಿನಲ್ಲಿಡಿ. ಪ್ಯಾನ್ ಕಾರ್ಡ್ ರದ್ದಾದ ನಂತರ ಅದನ್ನು ಪುನಶ್ಚೇತನಗೊಳಿಸಬಹುದು. ಆದರೆ ಈ ಅವಧಿಯಲ್ಲಿ ಯಾರಾದರೂ ರದ್ದಾದ ಪ್ಯಾನ್ ಕಾರ್ಡ್ ಬಳಸಿದರೆ ಅದನ್ನು ಆದಾಯ ತೆರಿಗೆ ಕಾಯಿದೆಯಡಿ ಸೆಕ್ಷನ್ 272B ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪ್ಯಾನ್ ಹೊಂದಿರುವವರು ರೂ 10,000 ದಂಡವನ್ನು ಪಾವತಿಸಬೇಕಾಗುತ್ತದೆ. ಮತ್ತು ಇದು ಮಾತ್ರವಲ್ಲ ರದ್ದಾದ ಪ್ಯಾನ್ ಕಾರ್ಡ್ ಅನ್ನು ಮತ್ತೊಮ್ಮೆ ಬಳಸಿದರೆ ದಂಡವನ್ನು ಕೂಡ ಹೆಚ್ಚಿಸಬಹುದು.

ನಿಮ್ಮ ಪ್ಯಾನ್ ಕಾರ್ಡ್ ನಿಷ್ಪ್ರಯೋಜಕ

ಆದಾಯ ತೆರಿಗೆ ಇಲಾಖೆಯ ಪ್ರಕಾರ ನೀವು ಸೆಪ್ಟೆಂಬರ್ 30 ರೊಳಗೆ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದೆ. ನಿಮ್ಮ ಪ್ಯಾನ್ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ -139AA ಅಡಿಯಲ್ಲಿ ಅಮಾನ್ಯವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವು ITR – Income Tax Return ಅನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಇದರಲ್ಲಿ ನಿಮ್ಮ ತೆರಿಗೆ ಮರುಪಾವತಿಯನ್ನು ನಿಲ್ಲಿಸಬಹುದು. ಇದನ್ನು ಹೊರತುಪಡಿಸಿ ನೀವು ಯಾವುದೇ ಹಣಕಾಸಿನ ವಹಿವಾಟಿನಲ್ಲಿ ಪ್ಯಾನ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ.

Aadhar Pan Link

ಆನ್‌ಲೈನ್‌ನಲ್ಲಿ ಲಿಂಕ್ ಮಾಡುವುದು ಹೇಗೆ?

1.ಮೊದಲು ಆದಾಯ ತೆರಿಗೆ ವೆಬ್‌ಸೈಟ್‌ಗೆ ಹೋಗಿ.

2.ಆಧಾರ್ ಕಾರ್ಡ್ ನಲ್ಲಿ ನೀಡಿರುವಂತೆ ಹೆಸರು ಪ್ಯಾನ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ.

3.ಆಧಾರ್ ಕಾರ್ಡ್‌ನಲ್ಲಿ ಕೇವಲ ಹುಟ್ಟಿದ ವರ್ಷವನ್ನು ನೀಡಿದರೆ ನಂತರ ವರ್ಗವನ್ನು ಟಿಕ್ ಮಾಡಿ.

4.ಈಗ ನೀಡಿರುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.

5.ಈಗ ಲಿಂಕ್ ಆಧಾರ್ ಬಟನ್ ಮೇಲೆ ಕ್ಲಿಕ್ ಮಾಡಿ.

6.ನಿಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲಾಗುತ್ತದೆ.

7.ಪ್ಯಾನ್ ಕಾರ್ಡ್ ರದ್ದಾದರೆ ನಿರುಪಯುಕ್ತವಾಗುತ್ತದೆ. 

SMS ಮೂಲಕ ಲಿಂಕ್ ಮಾಡುವುದು ಹೇಗೆ?

SMS ಕಳುಹಿಸುವ ಮೂಲಕ ಪ್ಯಾನ್ ಅನ್ನು ಆಧಾರ್‌ಗೆ ಲಿಂಕ್ ಮಾಡುವ ವಿಧಾನವೂ ಇದೆ. ಇದಕ್ಕಾಗಿ ನೀವು ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಯಿಂದ UIDPAN< ಆಧಾರ್ ಕಾರ್ಡ್​ನ 12 ಸಂಖ್ಯೆಗಳು >< ಪಾನ್ ಕಾರ್ಡ್​ನ 10 ಸಂಖ್ಯೆಯನ್ನು> ಈ ಫಾರ್ಮೇಟ್ ನಲ್ಲಿ ಬರೆದು 567678 ಅಥವಾ 56161ಕ್ಕೆ ಎಸ್ಎಂಎಸ್ ಮಾಡಿದರೆ ಆಯಿತು. ಬಳಿಕ ನಿಮ್ಮ ಪ್ಯಾನ್ ಸಂಖ್ಯೆ ನಿಮ್ಮ ಆಧಾರ್ ಸಂಖ್ಯೆಯ ಜೊತೆಗೆ ಲಿಂಕ್ ಆಗಿರುವ ಸೂಚನೆ ನಿಮಗೆ ಸಿಗಲಿದೆ. ಉದಾಹರಣೆಗೆ ನಿಮ್ಮ ಆಧಾರ್ ನಂಬರ್ 108956743120 ಮತ್ತು ಪಾನ್ ನಂಬರ್ ABCD1234F ಎಂದಿಟ್ಟುಕೊಳ್ಳೋಣ. ಈಗ ನೀವು ಮೊದಲು UIDAI ಅಂತ ಟೈಪ್ ಮಾಡಿ ಒಂದು ಸ್ಪೇಸ್ ಕೊಟ್ಟು 108956743120 ABCD1234F ಅಂತ ಬರೆದು 567678 or 56161ಕ್ಕೆ ಕಳಿಸಿ. ನಿಮ್ಮ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಆದ ತಕ್ಷಣ ನಿಮಗೆ ಒಂದು ನೋಟಿಫಿಕೇಶನ್ ಬರುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo