ವಿಶ್ವದ ಈ 61 ದೇಶಗಳಲ್ಲಿ 5G ಸೇವೆ ಶುರುವಾಗಿದೆ, ಭಾರತದಲ್ಲಿ 5G ಸೇವೆ ಯಾವಾಗ ಪ್ರಾರಂಭವಾಗಲಿದೆ?

ವಿಶ್ವದ ಈ 61 ದೇಶಗಳಲ್ಲಿ 5G ಸೇವೆ ಶುರುವಾಗಿದೆ, ಭಾರತದಲ್ಲಿ 5G ಸೇವೆ ಯಾವಾಗ ಪ್ರಾರಂಭವಾಗಲಿದೆ?
HIGHLIGHTS

ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ 5G ಸೇವೆಗೆ ಇನ್ನು ಸಾಕಷ್ಟು ಸಿದ್ಧತೆ ಮಾಡಿಲ್ಲವೆಂದ ಸರ್ಕಾರ.

ದೇಶ ಮತ್ತು ವಿದೇಶಗಳಿಂದ 5G ತಂತ್ರಜ್ಞಾನ ಬಳಕೆಗಾಗಿ 16 ಅರ್ಜಿಗಳು ಬಂದಿವೆ.

ಭಾರತದಲ್ಲಿ 5G ನೆಟ್‌ವರ್ಕ್ ಅನ್ನು ಯಾವಾಗ ಪರಿಚಯಿಸಲಾಗುವುದು.

ಭಾರತದಲ್ಲಿ ಜನರು 5G ನೆಟ್‌ವರ್ಕ್ ಬಿಡುಗಡೆಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ ಮತ್ತು ಇದು ಯಾವಾಗ ಸಾಧ್ಯ ಎಂಬ ಉಹಾಪೋಹಗಳು ಮುಂದುವರೆದಿದೆ. ಏತನ್ಮಧ್ಯೆ ಏರ್ಟೆಲ್ 5G ನೆಟ್ವರ್ಕ್ ಅನ್ನು ಸಹ ಪರೀಕ್ಷಿಸಿದೆ ಮತ್ತು ಈ ಟೆಲಿಕಾಂ ನೆಟ್ವರ್ಕ್ ಆಪರೇಟರ್ ಬಳಕೆದಾರರಿಗೆ 5G ಸೇವೆಯನ್ನು ಒದಗಿಸಲು ಸಿದ್ಧವಾಗಿದೆ ಎಂದು ಹೇಳಿಕೊಂಡಿದೆ. ಸರ್ಕಾರವು ದೇಶದಲ್ಲಿ 5G ಸಂಪರ್ಕ ಸೇವೆಯನ್ನು ಪ್ರಾರಂಭಿಸಿದೆ. ಈ ವರ್ಷ 5G ನೆಟ್‌ವರ್ಕ್ ಸ್ಪೆಕ್ಟ್ರಮ್ ಹಂಚಿಕೆ ಕುರಿತು ಕೆಲವು ನಿರ್ಧಾರವಿರಬಹುದು. ಮತ್ತು ದೇಶದಲ್ಲಿ 5G ಸೇವೆಯನ್ನು ಪರಿಚಯಿಸಲು ಸರ್ಕಾರ ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು. ಏತನ್ಮಧ್ಯೆ ಭಾರತದಲ್ಲಿ 5G ಸೇವೆ ಯಾವಾಗ ಪ್ರಾರಂಭವಾಗುತ್ತದೆ ಎಂದು ತಿಳಿಯಲು ಬಳಕೆದಾರರು ಉತ್ಸುಕರಾಗಿದ್ದಾರೆ.

61 ದೇಶಗಳಲ್ಲಿ 5G ಸೇವೆ ಪ್ರಾರಂಭ

ಭಾರತದಲ್ಲಿ 5G ನೆಟ್‌ವರ್ಕ್ ಅನ್ನು ಯಾವಾಗ ಪರಿಚಯಿಸಲಾಗುವುದು ಈ ಪ್ರಶ್ನೆಗೆ ಉತ್ತರವು ಮುಂಬರುವ ಸಮಯದಲ್ಲಿ ತಿಳಿಯುತ್ತದೆ ಆದರೆ ಇಂದು ವಿಶ್ವದ ಎಷ್ಟು ದೇಶಗಳು ಕಮರ್ಷಿಯಲ್ 5G ಸೇವೆಯನ್ನು ಪ್ರಾರಂಭಿಸಿವೆ ಮತ್ತು ಕಾರ್ಯಕ್ಷಮತೆ ತಿಳಿಸಿವೆ. ಗ್ಲೋಬಲ್ ಮೊಬೈಲ್ ಸರಬರಾಜುದಾರರ ಸಂಘದ (GSA – General Services Administration) ಮಾಹಿತಿಯ ಪ್ರಕಾರ ಜನವರಿ 2021 ರ ಹೊತ್ತಿಗೆ 61 ದೇಶಗಳ 144 ನಿರ್ವಾಹಕರು ಕಮರ್ಷಿಯಲ್ GPP ಹೊಂದಾಣಿಕೆಯ 5G ಸೇವೆಯನ್ನು ಪ್ರಾರಂಭಿಸಿದ್ದಾರೆ. 

ಅದೇ ಸಮಯದಲ್ಲಿ 131 ದೇಶಗಳ 413 ನಿರ್ವಾಹಕರು ಶೀಘ್ರದಲ್ಲೇ 5G ನೆಟ್ವರ್ಕ್ ಅನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದಾರೆ. ಈ ಪ್ರಯತ್ನದಲ್ಲಿ 5G ಪರೀಕ್ಷೆಯ ಜೊತೆಗೆ ಪ್ರಯೋಗಗಳು ಮತ್ತು ನಿಯೋಜನೆಯಂತಹ ವಿಷಯಗಳಿಗೆ ಗಮನ ನೀಡಲಾಗುತ್ತಿದೆ. ಅದೇ ಸಮಯದಲ್ಲಿ 5G ಸೇವೆಯನ್ನು ಪ್ರಾರಂಭಿಸಲು 65 ಕ್ಕೂ ಹೆಚ್ಚು ನಿರ್ವಾಹಕರು ಹೂಡಿಕೆ ಮಾಡುತ್ತಿದ್ದಾರೆ.

Jio ಮತ್ತು Airtel ಕಂಪನಿಗಳ 5G

ಈ ವಾರ ಭಾರತ ಸರ್ಕಾರದ 5G ಬಗ್ಗೆ ಹೇಳಿಕೆಯಿಂದಾಗಿ ಸಂಸದೀಯ ಸಮಿತಿ ವರದಿಯು ರಿಲಯನ್ಸ್ ಸಿಇಒ ಮುಖೇಶ್ ಅಂಬಾನಿಗೆ ಆಘಾತವಾಗಿದೆ. ಏಕೆಂದರೆ ಜಿಯೋ 2021 ರ ದ್ವಿತೀಯಾರ್ಧದ ವೇಳೆಗೆ ಭಾರತದಲ್ಲಿ 5G ಸೇವೆಯನ್ನು ಪ್ರಾರಂಭಿಸಲಿದೆ ಎಂದು ಈ ಹಿಂದೆ ಮುಖೇಶ್ ಅಂಬಾನಿ ಹೇಳಿದ್ದಾರೆ. ಅಂಬಾನಿಯ ಆ ಹೇಳಿಕೆಯ ಪ್ರಕಾರ ಜಿಯೋ 5G ಸೇವೆಯಲ್ಲಿ ಮುಂಚೂಣಿಯಲ್ಲಿದೆ. ಅದೇ ಸಮಯದಲ್ಲಿ ಈ ವರ್ಷ ಏರ್ಟೆಲ್‌ ಸಹ ತನ್ನ 5G ಸೇವೆಯನ್ನು ಹೈದರಾಬಾದ್‌ನ ಕಮರ್ಷಿಯಲ್ ನೆಟ್‌ವರ್ಕ್‌ನಲ್ಲಿ ಯಶಸ್ವಿಯಾಗಿ ಪರೀಕ್ಷಿಸಿ ಪೂರ್ಣಗೊಳಿಸಿದೆ. ಅಂದ್ರೆ ಶೀಘ್ರದಲ್ಲೇ 5G ವಲಯಕ್ಕೆ ಭಾರತ ಸಹ ಕಾಲಿಡಲು ಕಾಯುತ್ತಿದೆ. ಅಂದ್ರೆ ಒಟ್ಟಾರೆಯಾಗಿ ಭಾರತೀಯ ಟೆಲಿಕಾಂ ಕಂಪನಿಗಳು 5G ಸೇವೆಯ ಸಿದ್ಧತೆಗಳನ್ನು ಪೂರ್ಣಗೊಳಿಸಿವೆ. ಈಗ ಕೇವಲ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿವೆ.

ದೇಶದಲ್ಲಿ ಶೀಘ್ರದಲ್ಲೇ 5G ಪ್ರಯೋಗ ಪ್ರಾರಂಭ

ಭಾರತದಲ್ಲಿಯೂ ಟೆಲಿಕಾಂ ಆಪರೇಟರ್‌ಗಳ ಜೊತೆಗೆ ಕೇಂದ್ರ ಸರ್ಕಾರವು ಕೂಡ ಶೀಘ್ರದಲ್ಲೇ 5G ಸೇವೆಯನ್ನು ಪರಿಚಯಿಸಲು ಪ್ರಯತ್ನಿಸುತ್ತಿದೆ. ಮತ್ತು ಮೂಲಸೌಕರ್ಯಗಳು ಅಭಿವೃದ್ಧಿ ಹೊಂದುತ್ತಿವೆ. ಏರ್ಟೆಲ್ 5G ಪರೀಕ್ಷಿಸಿದೆ ಮತ್ತು ಶೀಘ್ರದಲ್ಲೇ ರಿಲಯನ್ಸ್ ಜಿಯೋ ಸಹ 5G ಪರೀಕ್ಷಿಸಲಿದೆ. ನಮ್ಮ ಸಹೋದ್ಯೋಗಿ ಎಕನಾಮಿಕ್ ಟೈಮ್ಸ್ ಸುದ್ದಿಯ ಪ್ರಕಾರ ಮುಂದಿನ ಒಂದು ಅಥವಾ ಎರಡು ತಿಂಗಳಲ್ಲಿ 5G ಪ್ರಯೋಗ ಪ್ರಾರಂಭವಾಗಲಿದೆ ಎಂದು ದೂರಸಂಪರ್ಕ ಇಲಾಖೆ ಐಟಿ ಸಂಸದೀಯ ಸಮಿತಿಗೆ ತಿಳಿಸಿದೆ. ಮತ್ತು ದೇಶ ಮತ್ತು ವಿದೇಶಗಳಿಂದ ತಂತ್ರಜ್ಞಾನ ಬಳಕೆಗಾಗಿ 16 ಅರ್ಜಿಗಳು ಬಂದಿವೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo