5G in India: ಭಾರತದಲ್ಲಿ ಇದೇ ತಿಂಗಳಿಂದ ಏರ್ಟೆಲ್ ಮತ್ತು ಜಿಯೋದಿಂದ 5G ನೆಟ್ವರ್ಕ್ ಶುರು!

5G in India: ಭಾರತದಲ್ಲಿ ಇದೇ ತಿಂಗಳಿಂದ ಏರ್ಟೆಲ್ ಮತ್ತು ಜಿಯೋದಿಂದ 5G ನೆಟ್ವರ್ಕ್ ಶುರು!
HIGHLIGHTS

ಆಗಸ್ಟ್ 15 ರಂದು ರಿಲಯನ್ಸ್ ಜಿಯೋ ತನ್ನ 5G ಸೇವೆಗಳನ್ನು ಪ್ರಾರಂಭಿಸುವ ಸಾಧ್ಯತೆ ಹೆಚ್ಚಾಗಿದೆ.

ಆಗಸ್ಟ್ 15 ರಂದು ಭಾರತವು `ಆಜಾದಿ ಕಾ ಅಮೃತ್ ಮಹೋತ್ಸವ'ವನ್ನು ಆಚರಿಸುತ್ತಿದೆ.

ಏರ್‌ಟೆಲ್‌ ಮತ್ತು ಜಿಯೋ 5ಜಿ (Airtel And Jio 5G) ಆರಂಭಿಸಲು ಯೋಜಿಸುತ್ತಿದೆ.

5G In India : ಆಗಸ್ಟ್ 15 ರಂದು ರಿಲಯನ್ಸ್ ಜಿಯೋ ತನ್ನ 5G ಸೇವೆಗಳನ್ನು ಪ್ರಾರಂಭಿಸುವ ಸಾಧ್ಯತೆ ಹೆಚ್ಚಾಗಿದೆ. ಆಗಸ್ಟ್ 15 ರಂದು ಭಾರತವು `ಆಜಾದಿ ಕಾ ಅಮೃತ್ ಮಹೋತ್ಸವ'ವನ್ನು ಆಚರಿಸುತ್ತಿದೆ. ಟೆಲಿಕಾಂ ದೈತ್ಯ ಪ್ಯಾನ್-ಇಂಡಿಯಾ 5G  ಅನ್ನು ಆರಂಭಿಸಲು ಯೋಜಿಸುತ್ತಿದೆ ಎಂದು IANS ನ ವರದಿ ಮಾಡಿದೆ. ಕಳೆದ ವಾರ ಟೆಲಿಕಾಂ ಇಲಾಖೆ (DoT) 5G ಸ್ಪೆಕ್ಟ್ರಮ್ ಹರಾಜಿನಲ್ಲಿ ರಿಲಯನ್ಸ್ ಜಿಯೋ 700MHz, 800MHz, 1800MHz, 3300MHz ಮತ್ತು 26GHz ಬ್ಯಾಂಡ್‌ಗಳಲ್ಲಿ 5G ಸ್ಪೆಕ್ಟ್ರಮ್ ಅನ್ನು ಸ್ವಾಧೀನಪಡಿಸಿಕೊಂಡಿದೆ.

ಏರ್‌ಟೆಲ್‌ ಮತ್ತು ಜಿಯೋ 5ಜಿ (Airtel And Jio 5G) 

ಅಲ್ಲದೇ ಭಾರ್ತಿ ಏರ್​ಟೆಲ್ (Bharti Airtel) ಸಹ ಮೊದಲ 5G ಗುತ್ತಿಗೆಯನ್ನು ಎರಿಕ್​ಸನ್ (Ericsson) ಕಂಪನಿಗೆ ನೀಡಿದ್ದು ಇದೇ ತಿಂಗಳು ಅಂದರೆ ಆಗಸ್ಟ್ 2022 ರಲ್ಲಿ ಸೇವೆಗಳನ್ನು ಒದಗಿಸಲಾಗುವುದು ಎಂದಿದೆ. ಏರ್​ಟೆಲ್​ನೊಂದಿಗೆ 25 ವರ್ಷಗಳಿಗೂ ಹೆಚ್ಚು ಕಾಲದ ವ್ಯಾಪಾರ ಸಂಬಂಧ ಹೊಂದಿರುವ ಎರಿಕ್​ಸನ್ ಭಾರತದಾದ್ಯಂತ ಕನೆಕ್ಟಿವಿಟಿ ಸೇವೆಯನ್ನು ನೀಡುತ್ತಿದೆ. ಜುಲೈ 26ರಂದು ಅಂತ್ಯಗೊಂಡ 5ಜಿ ತರಂಗಾಂತರ ಹರಾಜಿನ ನಂತರ ಏರ್​ಟೆಲ್‌ಗೆ ಎರಿಕ್​ಸನ್​ಗೆ ಹೊಸ ಗುತ್ತಿಗೆಯನ್ನು ಕೊಡಲಾಗಿದೆ.

5G ಸಂಪರ್ಕಕ್ಕಾಗಿ ಭಾರತೀಯರ ಸುದೀರ್ಘ ಕಾಯುವಿಕೆ ಅಂತ್ಯಗೊಳ್ಳುವ ಸಮಯ ಬಂದಿದೆ. ಭಾರತದ ಪ್ರಮುಖ ಟೆಲಿಕಾಂ ಆಪರೇಟರ್‌ಗಳಾಗಿರುವ ಭಾರ್ತಿ ಏರ್‌ಟೆಲ್‌ ಹಾಗೂ ರಿಲಯನ್ಸ್‌ ಜಿಯೋ ಸೆಲ್ಯುಲಾರ್‌ ತಂತ್ರಜ್ಞಾನಕ್ಕಾಗಿ ಅಧಿಕೃತ ಟೈಮ್‌ ಲೈನ್‌ ಅನ್ನು ಘೋಷಿಸಿದೆ. ಈ ಬಗ್ಗೆ ಏರ್‌ಟೆಲ್‌ ಹೊಸ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು ಈ ತಿಂಗಳಾಂತ್ಯದೊಳಗೆ ದೇಶದಲ್ಲಿ ತನ್ನ 5G ಸೇವೆಗಳನ್ನು ಹೊರತರುವುದಾಗಿ ದೃಢಪಡಿಸಿದೆ. ಇನ್ನೊಂದೆಡೆ ರಿಲಯನ್ಸ್‌ ಜಿಯೋ ಸಹ ಆಗಸ್ಟ್‌ 15 ರಂದು ದೇಶಾದ್ಯಂತ 5ಜಿ ಸೇವೆ ಆರಂಭಿಸುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.

ಆಜಾದಿ ಕಾ ಅಮೃತ್ ಮಹೋತ್ಸವ (Azadi Ka Amrit Mahotsav)

ವರದಿಗಳ ಪ್ರಕಾರ ಭಾರತ ಇದೇ ವೇಳೆ ಆಜಾದಿ ಕಾ ಅಮೃತ ಮಹೋತ್ಸವ ಆಚರಣೆ ಮಾಡುತ್ತಿದ್ದು ಭಾರತದಲ್ಲಿ ತನ್ನ 5ಜಿ ಸೇವೆ ಆರಂಭಿಸಲು ಇದ್ದಕ್ಕಿಂತ ಉತ್ತಮ ದಿನವಿಲ್ಲ ಎಂದು ಜಿಯೋ ನಿರ್ಧಾರ ಮಾಡಿದೆ. ಆಗಸ್ಟ್‌ನಲ್ಲಿ ಏರ್‌ಟೆಲ್‌ 5G ಸೇವೆಗಳನ್ನು ಪ್ರಾರಂಭಿಸುತ್ತದೆ ಎಂದು ಘೋಷಿಸಿದೆ. ನಮ್ಮ ನೆಟ್‌ವರ್ಕ್ ಒಪ್ಪಂದಗಳನ್ನು ಅಂತಿಮಗೊಳಿಸಿದೆ. ನಮ್ಮ ಗ್ರಾಹಕರಿಗೆ 5G ಸಂಪರ್ಕದ ಸಂಪೂರ್ಣ ಪ್ರಯೋಜನಗಳನ್ನು ತಲುಪಿಸಲು ವಿಶ್ವಾದ್ಯಂತ ಅತ್ಯುತ್ತಮ ತಂತ್ರಜ್ಞಾನ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಏರ್‌ಟೆಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನೊಂದೆಡೆ ಟೆಲಿಕಾಂ ಇಲಾಖೆ  5G ಸ್ಪೆಕ್ಟ್ರಮ್ ಹರಾಜಿನಲ್ಲಿ ರಿಲಯನ್ಸ್ ಜಿಯೋ ಸ್ವಾಧೀನ ಪಡಿಸಿಕೊಂಡ 700MHz, 800MHz, 1800MHz, 3300MHz ಮತ್ತು 26GHz ಬ್ಯಾಂಡ್‌ಗಳು 5G ನೆಟ್‌ವರ್ಕ್ ಬಳಕೆದಾರರು ಸ್ವೀಕರಿಸುವ ವೇಗ ಮತ್ತು ಗುಣಮಟ್ಟಕ್ಕೆ ಅಗತ್ಯವಾಗಿವೆ. 20 ವರ್ಷಗಳ ಅವಧಿಗೆ ತಂತ್ರಜ್ಞಾನದ  ತರಂಗಾಂತರವನ್ನು ಬಳಸುವ ಹಕ್ಕನ್ನು ಪಡೆಯುವ ಒಟ್ಟು ವೆಚ್ಚ 88,078 ಕೋಟಿ ರೂ. ಆಗಿದೆ. ಸ್ಪೆಕ್ಟ್ರಮ್ ಹರಾಜಿನ ನಿಯಮಗಳ ಪ್ರಕಾರ ಸ್ಪೆಕ್ಟ್ರಮ್ ಪಾವತಿಗಳನ್ನು 20 ಸಮೀಕರಿಸಿದ ವಾರ್ಷಿಕ ಕಂತುಗಳಲ್ಲಿ ನೀಡಬೇಕು ಮತ್ತು ಬಡ್ಡಿಯನ್ನು ವಾರ್ಷಿಕವಾಗಿ 7.2% ಎಂದು ತಿಳಿದುಬಂದಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo