Valentine's Day Wishes In Kannada ವಾಟ್ಸಾಪ್, ಫೇಸ್ಬುಕ್ ಮತ್ತು ಇನ್‍ಸ್ಟಾಗ್ರಾಂ ಶುಭಾಶಯಗಳು
50+ ಅಧಿಕ ಪ್ರೇಮಿಗಳ ದಿನದ ಮೆಸೇಜ್, ಫೋಟೋ ಮತ್ತು ಸ್ಟಿಕರ್ ಶುಭಾಶಯಗಳು ಈ ಕೆಳಗೆ ನೀಡಲಾಗಿದೆ.
ಪ್ರೇಮಿಗಳ ದಿನ ಅಥವಾ ವ್ಯಾಲೆಂಟೈನ್ಸ್ ಡೇ ಜಗತ್ತಿನಾದ್ಯಂತ ವರ್ಷದ ಅತ್ಯಂತ ರೋಮ್ಯಾಂಟಿಕ್ ದಿನಗಳಲ್ಲಿ ಒಂದಾಗಿದೆ.
Valentine’s Day Wishes In Kannada: ಈ ಪ್ರೇಮಿಗಳ ದಿನ ಅಥವಾ ವ್ಯಾಲೆಂಟೈನ್ಸ್ ಡೇ ಜಗತ್ತಿನಾದ್ಯಂತ ವರ್ಷದ ಅತ್ಯಂತ ರೋಮ್ಯಾಂಟಿಕ್ ದಿನಗಳಲ್ಲಿ ಒಂದಾಗಿದ್ದು ಇಂದು 14ನೇ ಫೆಬ್ರವರಿ ಆಚರಿಸಲಾಗುತ್ತಿದೆ. ಇದು ಕೇವಲ ಪ್ರೇಮಿಗಳು ಮತ್ತು ದಂಪತಿಗಳ ನಡುವೆ ಮಾತ್ರವಲ್ಲದೆ ನಿಕಟ ಕುಟುಂಬ ಮತ್ತು ಸ್ನೇಹಿತರ ನಡುವೆಯೂ ಆಚರಿಸಲಾಗುತ್ತಿದೆ. ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಂದು ವಿಷಯವನ್ನು ಸೋಶಿಯಲ್ ಮೀಡಿಯಾದ ಮೂಲಕ ವ್ಯಕ್ತಪಡಿಸುವುದು ರೂಢಿಯಾಗಿದೆ.
Surveyಹಾಗಾದ್ರೆ ವಾಟ್ಸಾಪ್, ಫೇಸ್ಬುಕ್ ಮತ್ತು ಇನ್‍ಸ್ಟಾಗ್ರಾಂ ನಿಮ್ಮ ಪ್ರೀತಿ ಪಾತ್ರರಿಗೆ ಶುಭ ಕೋರಲು 50+ ಅಧಿಕ ಪ್ರೇಮಿಗಳ ದಿನದ ಮೆಸೇಜ್, ಫೋಟೋ ಮತ್ತು ಸ್ಟಿಕರ್ ಶುಭಾಶಯಗಳನ್ನು ನೋಡಿ. ಈ ಪ್ರೇಮಿಗಳ ದಿನದಂದು (Valentine’s Day) ಇದು ಜನರು ತಮ್ಮ ಜೀವನದ ವಿಶೇಷ ಜನರಿಗಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಶುಭದಿನವೆಂದು ನಂಬಿ ಆಚರಿಸಲಾಗುತ್ತಿದೆ.
Valentine’s Day Wishes In Kannada 2025
ಪ್ರತಿ ವರ್ಷ 14ನೇ ಫೆಬ್ರವರಿ ರಂದು ಆಚರಿಸಲಾಗುವ ವ್ಯಾಲೆಂಟೈನ್ಸ್ ಡೇ ತಮ್ಮ ಪ್ರೇಯಸಿ, ಪ್ರಿಯಕನಿಗೆ ಮತ್ತು ಪ್ರೀತಿಪಾತ್ರರಿಗೆ ನಿಮ್ಮ ನಿಜವಾದ ಪ್ರೀತಿ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ಶುಭ ದಿನವಾಗಿದೆ. ಪ್ರಾಚೀನ ರೋಮನ್ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳಿಂದ ಹುಟ್ಟಿಕೊಂಡ ಈ ಆಚರಣೆ ಪ್ರಸ್ತುತ ಭಾರತದಲ್ಲೂ ವಿಕಸನಗೊಂಡಿದೆ.

ಪ್ರೇಮಿಗಳ ದಿನದ (Valentine’s Day) ಮೆಸೇಜ್ ಶುಭಾಶಯಗಳು 2025!
ನಿನ್ನ ಕೈ ನನ್ನ ಕೈ ಸೇರಿದಾಗ ಜಗತ್ತು ಸ್ವರ್ಗವಾಗುತ್ತದೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಪ್ರೇಮಿಗಳ ದಿನದ ಶುಭಾಶಯಗಳು.
ನಾನು ಕ್ಯಾಮೆರಾ ಅಲ್ಲ ಆದರೆ ನಮ್ಮನ್ನು ಒಟ್ಟಿಗೆ ಚಿತ್ರಿಸುವಲ್ಲಿ ನಾನು ಪುಣ್ಯ ಮಾಡಿದ್ದೇನೆ. ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು!
ನೀನಿಲ್ಲದೆ ನಾನು ಏನೂ ಅಲ್ಲ, ನಿನ್ನೊಂದಿಗೆ ನಾನು ಸರ್ವಸ್ವ. ನನ್ನ ಸರ್ವಸ್ವವಾಗಿದ್ದಕ್ಕೆ ಧನ್ಯವಾದಗಳು. ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು!
ನಿಮ್ಮ ಪ್ರೀತಿ ನನಗೆ ಎಂದಿಗಿಂತಲೂ ಹೆಚ್ಚು ಜೀವಂತವಾಗಿರುವಂತೆ ಮಾಡುತ್ತದೆ. ನನ್ನ ಹೃದಯದ ಒಡೆಯನಿಗೆ/ಒಡತಿಗೆ ಪ್ರೇಮಿಗಳ ದಿನದ ಶುಭಾಶಯಗಳು.
ಪ್ರೇಮಿಗಳ ದಿನದ ಶುಭಾಶಯಗಳು, ನನ್ನ ಪ್ರೀತಿ. ನೀವು ಹರಡಿದ ಪ್ರೀತಿಯು ನಿಮ್ಮ ಜೀವನವನ್ನು ಸ್ವರ್ಗ ಸುಖವಾಗಿಸಲಿ ಪ್ರೇಮಿಗಳ ದಿನದ ಶುಭಾಶಯಗಳು.
ನಿನ್ನ ಪ್ರೀತಿಯೇ ನನ್ನ ಬದುಕಿನ ದೊಡ್ಡ ಸಂಪತ್ತು. ನನ್ನ ಬದುಕಿನಲ್ಲಿ ಅಪೂರ್ವ ಕ್ಷಣಗಳನ್ನು ತಂದ ಸಂಗಾತಿಗೆ ಪ್ರೇಮಿಗಳ ದಿನದ ಹಾರ್ದಿಕ ಶುಭಾಶಯಗಳು.
ನನ್ನ ಪ್ರೀತಿಯೇ, ನಿನ್ನ ಬೆರಗುಗೊಳಿಸುವ ಪ್ರೀತಿ ಮತ್ತು ಸೌಂದರ್ಯದಿಂದ ನನ್ನ ಜಗತ್ತನ್ನು ಬದಲಾಯಿಸಿದ್ದಕ್ಕಾಗಿ ಧನ್ಯವಾದಗಳು ಪ್ರೇಮಿಗಳ ದಿನದ ಶುಭಾಶಯಗಳು.
ನೊಂದಾಗ ಕೈ ಹಿಡಿದೆ, ಎಡವಿದಾಗ ಮೇಲಕ್ಕೆತ್ತಿದೆ, ತಪ್ಪು ಮಾಡಿದಾಗ ತಿದ್ದಿದೆ, ಕಷ್ಟ ಸುಖಗಳಲ್ಲಿ ಜೊತೆಯಾದೆ.. ಓ ಸಂಗಾತಿ ನಿನಗೆ ಪ್ರೇಮಿಗಳ ದಿನದ ಶುಭಾಶಯಗಳು
ನನ್ನ ಜೀವನದಲ್ಲಿ ಅತ್ಯಂತ ವಿಶೇಷ ವ್ಯಕ್ತಿಗೆ ಪ್ರೇಮಿಗಳ ದಿನದ ಶುಭಾಶಯಗಳು. ನೀನು ನನ್ನ ಪ್ರೀತಿ, ನನ್ನ ಹೃದಯ, ನನ್ನ ಸಂತೋಷ ಪ್ರೇಮಿಗಳ ದಿನದ ಶುಭಾಶಯಗಳು.
ನನ್ನ ಹೃದಯದ ಸುತ್ತಲೂ ನಾನು ಹಾಕಿಕೊಂಡಿದ್ದ ಗೋಡೆಗಳನ್ನು ದಾಟಿ ನನ್ನನ್ನು ಇನ್ನಷ್ಟು ಪ್ರೀತಿಸುವಂತ ಮಾಡಿದ್ದಕ್ಕೆ ಧನ್ಯವಾದಗಳು, ಪ್ರೇಮಿಗಳ ದಿನದ ಶುಭಾಶಯಗಳು.
ನನ್ನ ಹೃದಯದ ಪ್ರತಿಯೊಂದು ಬಡಿತವೂ ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಎಂದು ಹೇಳುತ್ತದೆ. ನೀನಿಲ್ಲದೆ ಬದುಕುವುದು ಅಸಾಧ್ಯ. ಪ್ರೇಮಿಗಳ ದಿನದ ಶುಭಾಶಯಗಳು ನನ್ನ ಪ್ರಿಯತಮೆ.
ನನ್ನ ಹೃದಯ ಬಡಿತಕ್ಕೆ ಕಾರಣವಾಗಿರುವ ನನ್ನ ಜೀವನದಲ್ಲಿ ನೀವು ಅತ್ಯಂತ ಪ್ರಮುಖ ವ್ಯಕ್ತಿ ಎಂದು ಹೇಳಲು ಬಯಸುತ್ತಿದ್ದೇನೆ. ನಾನು ನಿನ್ನನ್ನು ಪ್ರೀತಿಸುತ್ತೇನೆ ಪ್ರೇಮಿಗಳ ದಿನದ ಶುಭಾಶಯಗಳು.
ನನ್ನ ಬದುಕಿನಲ್ಲಿ ನಿನ್ನನ್ನು ಪಡೆದ ನಾನೇ ಧನ್ಯ. ನೀನೇ ನನ್ನ ಆತ್ಮ ಸಂಗಾತಿ. ನನ್ನ ಬದುಕಿನ ಪ್ರತಿ ಕ್ಷಣದಲ್ಲೂ ನೀನು ಜೊತೆಯಲ್ಲಿರಬೇಕು ಎನ್ನುವುದು ನನ್ನ ಬಯಕೆ. ಹ್ಯಾಪಿ ವ್ಯಾಲೆಂಟೈನ್ಸ್ ಡೇ ಸಂಗಾತಿ.
ನಿಮ್ಮ ಆಲೋಚನೆಗಳು ನನ್ನ ಮನಸ್ಸನ್ನು ದಾಟಿದಾಗ ನನ್ನ ಹೃದಯವು ವೇಗವಾಗಿ ಬಡಿಯಲು ಪ್ರಾರಂಭಿಸುತ್ತದೆ. ಪ್ರೇಮಿಗಳ ದಿನದಂದು ನಾನು ನಿನ್ನನ್ನು ನಿಜವಾಗಿಯೂ ಮಿಸ್ ಮಾಡಿಕೊಳ್ಳುತ್ತೇನೆ! ನನ್ನ ಪ್ರೀತಿಯನ್ನು ನಿನಗೆ ಕಳುಹಿಸುತ್ತಿದ್ದೇನೆ.
ಪ್ರೇಮಿಗಳ ದಿನದ (Valentine’s Day) ಫೋಟೋ ಪೋಸ್ಟ್ ಶುಭಾಶಯಗಳು 2025!





ಪ್ರೇಮಿಗಳ ದಿನದ (Valentine’s Day) ಸ್ಟಿಕರ್ ಶುಭಾಶಯಗಳು 2025!
ನೀವು ಈ ಪ್ರೇಮಿಗಳ ದಿನದ (Valentine’s Day) ಸ್ಟಿಕರ್ ಮೂಲಕ ಶುಭಾಶಯಗಳನ್ನು ಕೋರಲು ನೀವು ವಾಟ್ಸಾಪ್ ಚಾಟ್ ತೆರೆದು ಸ್ಟಿಕರ್ (Stickers) ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಬಲಭಾಗದ ಕೊನೆಯಲ್ಲಿ + ಆಯ್ಕೆಯನ್ನು ಕಾಣಬಹುದು. ಆರ ಮೇಲೆ ಕ್ಲಿಕ್ ಮಾಡಿ ಈಗ ನಿಮಗೆ ಅನೇಕ ಸ್ಟಿಕರ್ಸ್ ಕಾಣಬಹುದು. ಈಗ ಇಲ್ಲಿ ಕೆಳಭಾಗದಲ್ಲಿ Discover Sticker Apps ಮೇಲೆ ಕ್ಲಿಕ್ ಮಾಡಿ. ಈಗ ನೀವು ಗೂಗಲ್ ಪ್ಲೇ ಸ್ಟೋರ್ಗೆ ಬರುತ್ತಿರ. ಈಗ ಇಲ್ಲಿ Love Stickers Valentine’s Day ಎಂದು ಟೈಪ್ ಮಾಡಿ ಕ್ಲಿಕ್ ಇನ್‌ಸ್ಟಾಲ್ ಮಾಡಿಕೊಂಡು ನಿಮಗಿಷ್ಟ ಬಂದವರಿಗೆ ಚಾಟ್ ತೆರೆದು ಸೆಂಡ್ ಮಾಡಬವುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile