Netflix ಬಳಕೆದಾರರಿಗೆ ಸರ್ಪ್ರೈಸ್!..ಲೈವ್ ಕಾರ್ಯಕ್ರಮಗಳಿಗೆ ವೋಟ್ ಮಾಡುವ ಫೀಚರ್ ಪರಿಚಯ

HIGHLIGHTS

Netflix ಲೈವ್‌ ಕಾರ್ಯಕ್ರಮಗಳಲ್ಲಿ ವೀಕ್ಷಕರಿಗೆ ವೋಟ್ ಮಾಡುವ ಅವಕಾಶ ಒದಗಿಸಿದೆ

Netflix ಮೊಬೈಲ್ APP ಹಾಗೂ ಪ್ಲಾಟ್‌ಫಾರ್ಮ್‌ಗೆ ಸಂಬಂಧಿಸಿದ ಹೊಸ AI ಟೂಲ್‌ಗಳನ್ನೂ ಸಹ ಘೋಷಣೆ ಮಾಡಿದೆ

Netflix ಬಳಕೆದಾರರಿಗೆ ಸರ್ಪ್ರೈಸ್!..ಲೈವ್ ಕಾರ್ಯಕ್ರಮಗಳಿಗೆ ವೋಟ್ ಮಾಡುವ ಫೀಚರ್ ಪರಿಚಯ

ಪ್ರಮುಖ OTT ಪ್ಲಾಟ್‌ಫಾರ್ಮ್ಗಳ ಪೈಕಿ Netflix ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿದೆ. ಹತ್ತು ಹಲವು ವಿಶೇಷತೆಗಳ ಮೂಲಕ ಈಗಾಗಲೇ ವೀಕ್ಷಕರ ಗಮನ ಸೆಳೆದಿರುವ ಸಂಸ್ಥೆಯು ಈಗ ಮತ್ತೊಂದು ಬಿಗ್‌ ಸರ್ಪ್ರೈಸ್‌ ನೀಡಿದೆ. ಅದುವೇ ಲೈವ್ ವೋಟಿಂಗ್ (vote) ಸೌಲಭ್ಯವನ್ನು ಪರಿಚಯಿಸುವ ಮೂಲಕ Netflix ಲೈವ್‌ ಕಾರ್ಯಕ್ರಮಗಳಲ್ಲಿ ವೀಕ್ಷಕರು ರಿಯಲ್‌ ಟೈಮ್‌ನಲ್ಲಿ ವೋಟ್ ಮಾಡುವ ಅವಕಾಶ ಒದಗಿಸಿದೆ. ಹಾಗೆಯೇ ನೆಟ್‌ಫ್ಲಿಕ್ಸ್‌ ಕಂಪನಿಯು ತನ್ನ ನಾಲ್ಕನೇ ತ್ರೈಮಾಸಿಕ ಸಂದರ್ಭದಲ್ಲಿ ಹೊಸ ವಿನ್ಯಾಸದ ಮೊಬೈಲ್ APP ಹಾಗೂ ಪ್ಲಾಟ್‌ಫಾರ್ಮ್‌ಗೆ ಸಂಬಂಧಿಸಿದ ನೂತನ AI ಟೂಲ್‌ಗಳನ್ನೂ ಕೂಡಾ ಘೋಷಣೆ ಮಾಡಿದೆ. ಸಂಸ್ಥೆಯ ಈ ನೂತನ ಆಯ್ಕೆಗಳು ವೀಕ್ಷಕರಿಗೆ ಹೆಚ್ಚಿನ ಅನುಕೂಲ ಒದಗಿಸಲಿವೆ ಎನ್ನಲಾಗಿದೆ.

Digit.in Survey
✅ Thank you for completing the survey!

Netflix ನೂತನ ಲೈವ್ ವೋಟಿಂಗ್ ಫೀಚರ್ಸ್‌ ಮಾಹಿತಿ

Netflix ಜನವರಿ 20 ರಂದು ತನ್ನ ಸೈಟ್‌ಗೆ ನೂತನವಾಗಿ ಲೈವ್ ವೋಟಿಂಗ್ ಎಂಬ ಹೊಸ ಫೀಚರ್ ಅನ್ನು ಸೇರಿಸುವ ಕುರಿತು ಪೋಸ್ಟ್ ಮೂಲಕ ಘೋಷಿಸಿತು. ಈ ಆಯ್ಕೆಯು ಅಮೆರಿಕದಲ್ಲಿ ಪ್ರಸಾರವಾಗುತ್ತಿರುವ ಸ್ಟಾರ್ ಸರ್ಚ್ ಎಂಬ ಲೈವ್ ಟ್ಯಾಲೆಂಟ್ ಶೋದಲ್ಲಿ ಮೊದಲ ಬಾರಿಗೆ ಲಭ್ಯವಾಯಿತು. Netflix ಇತಿಹಾಸದಲ್ಲೇ ಇದೇ ಮೊದಲ ಬಾರಿ, ವೀಕ್ಷಕರ ಮತಗಳು ರಿಯಲ್ ಟೈಮ್‌ನಲ್ಲಿ ಸ್ಪರ್ಧೆಯಲ್ಲಿ ಯಾರು ಮುಂದಿನ ಹಂತಕ್ಕೆ ಹೋಗುತ್ತಾರೆ ಮತ್ತು ಯಾರು ಹೊರಗೆ ಉಳಿಯುತ್ತಾರೆ ಎಂಬುದನ್ನು ನಿರ್ಧರಿಸಲಿದೆ ಎಂದು ಸಂಸ್ಥೆಯು ತನ್ನ ಪೋಸ್ಟ್‌ನಲ್ಲಿ ಮಾಹಿತಿ ನೀಡಿದೆ.

ಇನ್ನು ಸಾಮಾನ್ಯವಾಗಿ ಇಂತಹ ರಿಯಾಲಿಟಿ ಕಾರ್ಯಕ್ರಮಗಳಲ್ಲಿ ವೀಕ್ಷಕರಿಗೆ ಹಲವು ದಿನಗಳ ಕಾಲ ವೋಟ್‌ ಮಾಡುವ ಅವಕಾಶ ನೀಡಿರುತ್ತಾರೆ ಮತ್ತು ಫಲಿತಾಂಶಗಳನ್ನು ವಾರಾಂತ್ಯದಲ್ಲಿ ತಿಳಿಸಲಾಗುತ್ತದೆ. ಆದರೆ Netflix ಪರಿಚಯಿಸಿರುವ ಈ ಹೊಸ ಫೀಚರ್ಸ್‌ನಲ್ಲಿ ವೋಟಿಂಗ್ ಫಲಿತಾಂಶಗಳನ್ನು ತಕ್ಷಣವೇ ಪ್ರಕಟಿಸಲಾಗುತ್ತದೆ ಎಂದು ವರದಿ ತಿಳಿಸಿದೆ.

Netflix ಸಂಸ್ಥೆಯು ನೀಡಿರುವ ಮಾಹಿತಿಯಂತೆ, ವೋಟಿಂಗ್ ಸಂಪೂರ್ಣವಾಗಿ ಲೈವ್ ಆಗಿರುವುದರಿಂದ, ವೀಕ್ಷಕರು ಕಾರ್ಯಕ್ರಮದ ಲೈವ್ ಪ್ರಸಾರವನ್ನು ವೀಕ್ಷಿಸುತ್ತಿರುವಾಗ ಮಾತ್ರವೇ ಮತ ಚಲಾಯಿಸಬಹುದು. ಅಂದಹಾಗೆ ಸ್ಟ್ರೀಮ್ ಅನ್ನು ರಿವೈಂಡ್ ಮಾಡಿದರೆ ವೋಟಿಂಗ್ ಆಯ್ಕೆ ಕೆಲಸ ಮಾಡುವುದಿಲ್ಲ. ವೆಬ್‌ಸೈಟ್‌ನಲ್ಲಿ ಈ ಸೌಲಭ್ಯ ಲಭ್ಯವಿಲ್ಲವಾಗಿದ್ದು, ಸ್ಮಾರ್ಟ್ ಟಿವಿಗಳ ರಿಮೋಟ್, ಸ್ಟ್ರೀಮಿಂಗ್ ಡಿವೈಸ್‌ಗಳು ಮತ್ತು ಮೊಬೈಲ್ app ಗಳಲ್ಲಿ ಮಾತ್ರವೇ ಲೈವ್ ವೋಟಿಂಗ್ ಆಯ್ಕೆ ಸಪೋರ್ಟ್ ಮಾಡಲಿದೆ.

ಟೆಕ್‌ಕ್ರಂಚ್ ವರದಿ ಪ್ರಕಾರ, ನಾಲ್ಕನೇ ತ್ರೈಮಾಸಿಕ ಆದಾಯ ಸಂದರ್ಭದಲ್ಲಿ ನೆಟ್‌ಫ್ಲಿಕ್ಸ್ ಸಂಸ್ಥೆಯ co-CEO ಗ್ರೆಗ್ ಪೀಟರ್ಸ್ ಹೊಸ app ಮುಂದಿನ ದಶಕದಲ್ಲಿ ಸಂಸ್ಥೆಯ ವ್ಯವಹಾರ ವಿಸ್ತರಣೆಗೆ ಇನ್ನಷ್ಟು ಬೂಸ್ಟ್‌ ನೀಡಲಿದೆ ಎಂದು ತಿಳಿಸಿದ್ದಾರೆ. ಆದರೆ ಈ ನೂತನ ವಿನ್ಯಾಸದಲ್ಲಿ ಯಾವ ಬದಲಾವಣೆಗಳು ಇರಲಿವೆ ಎಂಬ ವಿವರಗಳನ್ನು ಸಂಸ್ಥೆಯು ಇನ್ನೂ ಸ್ಪಷ್ಟವಾಗಿ ಬಹಿರಂಗಪಡಿಸಿಲ್ಲ.

ಹಾಗೆಯೇ Netflix ಸಂಸ್ಥೆಯು ಮೊಮೆಂಟ್ಸ್ ಎಂದು ಕರೆಯಲಾಗುವ ವರ್ಟಿಕಲ್ ವಿಡಿಯೋ ಫೀಡ್‌ಗಳನ್ನು ಇನ್ನಷ್ಟು ಅಪ್‌ಗ್ರೇಡ್ ಮಾಡುವ ಯೋಜನೆಯನ್ನು ಹೊಂದಿದೆ. ವರದಿಗಳ ಪ್ರಕಾರ, ಈ ವರ್ಟಿಕಲ್ ವಿಡಿಯೋಗಳಲ್ಲಿ ಮುಂದಿನ ದಿನಗಳಲ್ಲಿ ವಿಡಿಯೋ ಪಾಡ್‌ಕಾಸ್ಟ್‌ಗಳನ್ನೂ ಸೇರಿಸಲಾಗುತ್ತಿದ್ದು, ಕಂಟೆಂಟ್ ಆಯ್ಕೆಯನ್ನು ಇನ್ನಷ್ಟು ವಿಸ್ತರಿಸಲು ಕಂಪನಿ ನಿರಂತರವಾಗಿ ಪ್ರಯೋಗಗಳನ್ನು ಮುಂದುವರಿಸಲಿದೆ ಎಂದು ಗ್ರೆಗ್ ಪೀಟರ್ಸ್ ಹೇಳಿದ್ದಾರೆ.

Manthesh B
Digit.in
Logo
Digit.in
Logo