ವಾಟ್ಸಾಪ್ ನಂತರ Facebook ಮೆಸೆಂಜರ್‌ಗಾಗಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಫೀಚರ್ ಪರಿಚಯಿಸಿದ ಮೆಟಾ!

Ravi Rao ಇವರಿಂದ | ಪ್ರಕಟಿಸಲಾಗಿದೆ 25 Jan 2023 15:25 IST
HIGHLIGHTS
  • Facebook ಬಳಕೆದಾರರ ರಕ್ಷಣೆ ಮತ್ತು ಗೌಪ್ಯತೆಗಾಗಿ Messenger ಶೀಘ್ರದಲ್ಲೇ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಹೊಂದಲಿದೆ.

  • ಎಂಡ್-ಟು-ಎಂಡ್ ಎನ್‌ಕ್ರಿಪ್ಟೆಡ್ ಮೋಡ್‌ನಲ್ಲಿ ಪ್ಲಾಟ್‌ಫಾರ್ಮ್‌ಗೆ ಪರಿಚಯಿಸಲಾದ ಫೀಚರ್‌ ಗಳ ವಿವರವಾದ ಪಟ್ಟಿ ಇಲ್ಲಿದೆ ನೋಡಿ.

  • ಚಾಟ್ ಥೀಮ್‌ಗಳು, ಗ್ರೂಪ್ ಪ್ರೊಫೈಲ್ ಪಿಕ್ಚರ್‌ಗಳು, Android ಗಾಗಿ ಬಬಲ್‌ಗಳು ಮತ್ತು ಇನ್ನೂ ಹೆಚ್ಚಿನ ಫೀಚರ್‌ ಗಳ ಪಟ್ಟಿಯನ್ನು Meta ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಾಟ್ಸಾಪ್ ನಂತರ Facebook ಮೆಸೆಂಜರ್‌ಗಾಗಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಫೀಚರ್ ಪರಿಚಯಿಸಿದ ಮೆಟಾ!
ವಾಟ್ಸಾಪ್ ಆಯ್ತು ಈಗ Facebook ಮೆಸೆಂಜರ್‌ನಲ್ಲೂ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಫೀಚರ್ ಪರಿಚಯಿಸಿದ ಮೆಟಾ!

End to End Encryption: ಜನಪ್ರಿಯ ಫೇಸ್‌ಬುಕ್ ಮೆಸೆಂಜರ್‌ಗಾಗಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಮತ್ತು ಇತರ ಕೆಲವು ಹೊಸ ಪೀಚರ್‌ ಗಳನ್ನು ಸೇರಿಸಿರುವುದರ ಬಗ್ಗೆ ಮೆಟಾ ಬ್ಲಾಗ್ ಪೋಸ್ಟ್‌ನಲ್ಲಿ ಬಹಿರಂಗಪಡಿಸಿದೆ. ವಾಟ್ಸಾಪ್ ಆಯ್ತು ಈಗ Facebook ಮೆಸೆಂಜರ್‌ನಲ್ಲೂ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಫೀಚರ್ ಪರಿಚಯಿಸಿದ ಮೆಟಾ! WhatsApp ಮತ್ತು Instagram ನಂತರ Meta-ಮಾಲೀಕತ್ವದ Facebook ಬಳಕೆದಾರರ ರಕ್ಷಣೆ ಮತ್ತು ಗೌಪ್ಯತೆಗಾಗಿ Messenger ಶೀಘ್ರದಲ್ಲೇ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಹೊಂದಲಿದೆ. ಮೆಸೆಂಜರ್‌ನ ಜನಪ್ರಿಯತೆಯನ್ನು ಹೆಚ್ಚಿಸುವ ಸಲುವಾಗಿ ಕ್ಯಾಲಿಫೋರ್ನಿಯಾ ಮೂಲದ ತಂತ್ರಜ್ಞಾನ ಕಂಪನಿಯು ಈ ಪ್ಲಾಟ್‌ಫಾರ್ಮ್‌ಗೆ ಹೊಸ ಫೀಚರ್‌ ಗಳನ್ನು ಸೇರಿಸಿದೆ. ಎಂಡ್-ಟು-ಎಂಡ್ ಎನ್‌ಕ್ರಿಪ್ಟೆಡ್ ಮೋಡ್‌ನಲ್ಲಿ ಪ್ಲಾಟ್‌ಫಾರ್ಮ್‌ಗೆ ಪರಿಚಯಿಸಲಾದ ಫೀಚರ್‌ ಗಳ ವಿವರವಾದ ಪಟ್ಟಿ ಇಲ್ಲಿದೆ ನೋಡಿ.

ಫೇಸ್‌ಬುಕ್ ಮೆಸೆಂಜರ್‌ ಕಸ್ಟಮ್ ಚಾಟ್ ಎಮೋಜಿಗಳು:

ಫೇಸ್‌ಬುಕ್ ಮೆಸೆಂಜರ್ ಬಳಕೆದಾರರು ಶೀಘ್ರದಲ್ಲೇ ಜನಪ್ರಿಯ ರಿಯಲ್-ಟೈಮ್ ಫೋಟೋ-ಹಂಚಿಕೆ ಅಪ್ಲಿಕೇಶನ್‌ ಆಗಿರುವ Snapchat ನಂತೆಯೇ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಚಾಟ್‌ಗಳಲ್ಲಿ ಪ್ರತಿಕ್ರಿಯೆಗಳನ್ನು ಒಳಗೊಂಡಂತೆ ಇತರ ಬಳಕೆದಾರರೊಂದಿಗೆ ಕಸ್ಟಮೈಸ್ ಮಾಡಿದ ಚಾಟ್ ಎಮೋಜಿಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ. 

ಫೇಸ್‌ಬುಕ್ ಮೆಸೆಂಜರ್‌ ಚಾಟ್ ಥೀಮ್‌ಗಳು:

ಈಗಾಗಲೇ ಹಲವು ಪ್ಲಾಟ್‌ಫಾರ್ಮ್‌ಗಳು ಚಾಟ್ ಥೀಮ್‌ಗಳನ್ನು ಹೊಂದಿರುವುದರಿಂದ ಅವು ಇನ್ನು ಮುಂದೆ ಹೆಚ್ಚು ಪರಿಣಾಮಕಾರಿಯಾಗಿರುವುಲ್ಲ. ಸಂಭಾಷಣೆಯ ಅನುಭವವನ್ನು ವೈಯಕ್ತೀಕರಿಸಲು ಮತ್ತು ಸುಧಾರಿಸಲು ಕಂಪನಿಯು ಸ್ಥಿರ ಮತ್ತು ಗ್ರೇಡಿಯಂಟ್ ಥೀಮ್‌ಗಳನ್ನು ನೀಡುವುದಾಗಿ ಘೋಷಿಸಿದೆ. 

ಫೇಸ್‌ಬುಕ್ ಮೆಸೆಂಜರ್‌ ಗ್ರೂಪ್ ಪ್ರೊಫೈಲ್ ಫೋಟೋಗಳು:

ನೀವು ಮೆಸೆಂಜರ್ ಗ್ರೂಪ್ ಸದಸ್ಯರಾಗಿದ್ದರೆ ಪ್ಲಾಟ್‌ಫಾರ್ಮ್ ವಿವಿಧ ಪ್ರೊಫೈಲ್ ಫೋಟೋಗಳನ್ನು ಡಿಸ್ಪ್ಲೇ ಫೋಟೋಗಳಾಗಿ ಆಯ್ಕೆ ಮಾಡಲು ನಿಮಗೆ ಅನುಮತಿಸುತ್ತದೆ.

ಫೇಸ್‌ಬುಕ್ ಮೆಸೆಂಜರ್‌ ಲಿಂಕ್ ಪ್ರಿವ್ಯೂಗಳು:

ಲ್ಯಾಂಡಿಂಗ್ ಪೇಜ್‌ ಅನ್ನು ಕ್ಲಿಕ್ ಮಾಡುವ ಮೊದಲು ಮತ್ತು ಭೇಟಿ ನೀಡುವ ಮೊದಲು ಬಳಕೆದಾರರಿಗೆ ವಿಷಯ/ಸೈಟ್/ಲ್ಯಾಂಡಿಂಗ್ ಪೇಜ್‌ನ ಮೊದಲ ನೋಟವನ್ನು ನೀಡುವುದು ಈ ಪ್ಲಾಟ್‌ಫಾರ್ಮ್‌ಗೆ ಸೇರಿಸಲಾದ ಮತ್ತೊಂದು ಸುರಕ್ಷತಾ ಫೀಚರ್‌ ಆಗಿದೆ.

ಫೇಸ್‌ಬುಕ್ ಮೆಸೆಂಜರ್‌ Android ನ ಬಬಲ್‌ಗಳು:

ಇತರ ಅಪ್ಲಿಕೇಶನ್‌ಗಳನ್ನು ಬಳಸುವಾಗ ನೀವು ಬಬಲ್‌ಗಳನ್ನು (ಅದರೊಳಗೆ ನಿಮ್ಮ ಸ್ನೇಹಿತರ ಫೋಟೋ ಇರುವ ವೃತ್ತ) ಬಳಸಿಕೊಂಡು ಸಂದೇಶಗಳನ್ನು ಓದಬಹುದು ಮತ್ತು ಪ್ರತಿಕ್ರಿಯಿಸಬಹುದು. ಇದನ್ನು ಮಾಡಿದ ನಂತರ ಪ್ರತಿ ಬಾರಿಯೂ ಹೊಸ ಸಂದೇಶವನ್ನು ಸ್ವೀಕರಿಸಿದಾಗ ಬಬಲ್ ಕಾಣಿಸಿಕೊಳ್ಳುತ್ತದೆ. ಕಂಪನಿಯು ತನ್ನ ಬಳಕೆದಾರರ ಗೌಪ್ಯತೆ, ಭದ್ರತೆ ಮತ್ತು ಸುರಕ್ಷತೆಯನ್ನು ರಕ್ಷಿಸುತ್ತದೆ ಎಂದು ಖಚಿತಪಡಿಸುವ ಸಲುವಾಗಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಪ್ರಸ್ತುತ ಪರೀಕ್ಷಿಸುತ್ತಿದೆ ಎಂದು ಹೇಳಿದೆ. ಚಾಟ್ ಥೀಮ್‌ಗಳು, ಗ್ರೂಪ್ ಪ್ರೊಫೈಲ್ ಪಿಕ್ಚರ್‌ಗಳು, Android ಗಾಗಿ ಬಬಲ್‌ಗಳು ಮತ್ತು ಇನ್ನೂ ಹೆಚ್ಚಿನ ಫೀಚರ್‌ ಗಳ ಪಟ್ಟಿಯನ್ನು Meta ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕನ್ನಡದಲ್ಲಿ ಹೆಚ್ಚಿನ ತಂತ್ರಜ್ಞಾನ ಸುದ್ದಿಗಳು, ಪ್ರಾಡಕ್ಟ್ ವಿಮರ್ಶೆಗಳು, ವೈಜ್ಞಾನಿಕ ತಂತ್ರಜ್ಞಾನದ ಫೀಚರ್ಗಳು ಮತ್ತು ಅಪ್ಡೇಟ್ಗಳಿಗಾಗಿ Digit.in ಓದುತ್ತಿರಿ ಅಥವಾ Google News ಪೇಜ್ ನೋಡಿ

Ravi Rao
Ravi Rao

Email Email Ravi Rao

Follow Us Facebook Logo Facebook Logo

About Me: Ravi Rao is an Indian technology journalist who has been covering consumer technology since 2016. He is a Senior Editor for Kannada at Digit.in Read More

WEB TITLE

Meta now announces end to end encryption for facebook messenger

Advertisements

ಟ್ರೆಂಡಿಂಗ್ ಲೇಖನಗಳು

Advertisements

ಇತ್ತೀಚಿನ ಲೇಖನಗಳು ಎಲ್ಲವನ್ನು ವೀಕ್ಷಿಸಿ

VISUAL STORY ಎಲ್ಲವನ್ನು ವೀಕ್ಷಿಸಿ