ನೀವು WhatsApp ಮೂಲಕ ಮಾಡುವ ಕರೆಗಳು ಮತ್ತು ಲೊಕೇಶನ್ ಯಾರಾದರೂ ನೋಡಬಹುದಾ?

HIGHLIGHTS

WhatsApp ಅನ್ನು ಇಂದಿನ ದಿನಗಳಲ್ಲಿ ಸರಿ ಸುಮಾರು ಪ್ರತಿಯೊಂದು ಸ್ಮಾರ್ಟ್ಫೋನ್ಗಳಲ್ಲಿ ಕಾಣಬಹುದು.

ವಾಟ್ಸಾಪ್‌ನ ಕರೆಗಳು ಮತ್ತು ನಮ್ಮ ರಿಯಲ್ ಟೈಮ್ ಲೊಕೇಶನ್ ಅನ್ನು ಯಾರಾದರೂ ಕದ್ದು ಮುಚ್ಚಿ ಕೇಳುತ್ತಾರಾ?

ಇದರರ್ಥ ಕರೆಗಳು ಮುಗಿದ ಕೆಲವೇ ಹೊತ್ತಿನಲ್ಲಿ ಆಟೋಮ್ಯಾಟಿಕ್ ಆಗಿ ಕರೆಗಳು ಡಿಲೀಟ್ ಆಗೋತ್ತವೆ.

ನೀವು WhatsApp ಮೂಲಕ ಮಾಡುವ ಕರೆಗಳು ಮತ್ತು ಲೊಕೇಶನ್ ಯಾರಾದರೂ ನೋಡಬಹುದಾ?

ಜನಪ್ರಿಯ ಮತ್ತು ಸಿಕ್ಕಾಪಟ್ಟೆ ಬಳಕೆಯಲ್ಲಿರುವ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ WhatsApp ಅನ್ನು ಇಂದಿನ ದಿನಗಳಲ್ಲಿ ಸರಿ ಸುಮಾರು ಪ್ರತಿಯೊಂದು ಸ್ಮಾರ್ಟ್ಫೋನ್ಗಳಲ್ಲಿ ಕಾಣಬಹುದು. ಯಾಕೆಂದರೆ ಇದು ನಮ್ಮ ದಿನನಿತ್ಯದ ಹತ್ತಾರು ಕೆಲಸ ಕಾರ್ಯಗಳಿಗೆ ಪೂರಕವಾಗಿ ಬಳಸಲಾಗುತ್ತದೆ. ಪ್ರಸ್ತುತ ಈ ವಾಟ್ಸಾಪ್ ಬಗ್ಗೆ ನಿಮಗೆ ಹೆಚ್ಚಿನ ಫೀಚರ್ ವಿವರಣೆಗಳನ್ನು ಹೇಳುವ ಅಗತ್ಯವಿಲ್ಲ. ಆದರೂ ಅನೇಕರು ಕೆಲವೊಂದು ಸಣ್ಣಪುಟ್ಟ ಪ್ರಶ್ನೆಗಳೊಂದಿಗೆ ಗೊಂದಲದಲ್ಲಿರುತ್ತಾರೆ. ಅಂತಹ ಒಂದು ಸಾಮಾನ್ಯ ಪ್ರಶ್ನೆ ಅಂದ್ರೆ ನಾವು ವಾಟ್ಸಾಪ್ ಮೂಲಕ ಬಳಸುವ ಕರೆಗಳು ಮತ್ತು ನಮ್ಮ ರಿಯಲ್ ಟೈಮ್ ಲೊಕೇಶನ್ ಅನ್ನು ಯಾರಾದರೂ ಕದ್ದು ಮುಚ್ಚಿ ಕೇಳುತ್ತಾರೋ ಅಥವಾ ನಮ್ಮನ್ನು ಟ್ರ್ಯಾಕ್ ಮಾಡುತ್ತಾರೋ ಅನ್ನೋದು. ಆದ್ದರಿಂದ ಈ ಪ್ರಶ್ನೆಗಳಿಗೆ ಒಂದಿಷ್ಟು ನೇರ ಮತ್ತು ಕ್ಲಿಯರ್ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

Digit.in Survey
✅ Thank you for completing the survey!

Also Read: ಅಮೆಜಾನ್‌ನಲ್ಲಿ 65 ಇಂಚಿನ ಪವರ್ಫುಲ್ 4K Google Smart TV ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ!

ನಮ್ಮ WhatsApp ಕರೆಗಳನ್ನು ಯಾರಾದರೂ ಕದ್ದು ಮುಚ್ಚಿ ಕೇಳುತ್ತಾರಾ?

ಪ್ರಸ್ತುತ ಈ ಪ್ರಶ್ನೆ ಸಾಮಾನ್ಯವಾಗಿದ್ದು ವಾಟ್ಸಾಪ್ ಆಡಿಯೋ ಮತ್ತು ವಿಡಿಯೋ ಕರೆಗಳನ್ನು ತಮ್ಮ ಬಳಕೆದಾರರಿಗೆ ಉಚಿತವಾಗಿ ಬಳಸಲು ಅನುವು ಮಾಡಿಕೊಡುತ್ತದೆ. ಆದರೆ WhatsApp ತಮ್ಮ ಬಳಕೆದಾರರ ಪ್ರೈವಸಿ ಮತ್ತು ಸುರಕ್ಷತೆಯನ್ನು ಹೆಚ್ಚು ಗಮನದಲ್ಲಿಟ್ಟುಕೊಂಡು ನಾವು ಮಾಡುವ ಪ್ರತಿಯೊಂದು ಕರೆಗಳು ಅದು ವಿಡಿಯೋ ಕರೆ ಆಗಿರಬಹುದು ಅಥವಾ ಆಡಿಯೋ ಕರೆಯಾಗಿರಬಹುದು ವಾಟ್ಸಾಪ್ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ (end to end encryption) ಎಂಬ ಫೀಚರ್ ಬಳಸುತ್ತದೆ. ಇದರರ್ಥ ಕರೆಗಳು ಮುಗಿದ ಕೆಲವೇ ಹೊತ್ತಿನಲ್ಲಿ ಆಟೋಮ್ಯಾಟಿಕ್ ಆಗಿ ಕರೆಗಳು ಡಿಲೀಟ್ ಆಗೋತ್ತವೆ.

WhatsApp Update

ಆದರೆ ಕೆಲವರು ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಸಿ ಈ ಕರೆಗಳನ್ನು ರೆಕಾರ್ಡ್ ಮಾಡುವುದನ್ನು ನೀವು ಕಂಡು ಕೇಳಿರಬಹುದು ಆದರೆ ಇದು ಕಾನೂನು ಬಾಹಿರವಾಗಿದ್ದು ವಾಟ್ಸಾಪ್ ಅಧಿಕೃತವಾಗಿ ಈ ರೀತಿಯ ಫೀಚರ್ ಹೊಂದಿಲ್ಲ. ಅಲ್ಲದೆ ಒಂದು ವೇಳೆ ನಿಮ್ಮ ಸ್ಮಾರ್ಟ್ಫೋನ್ ಅನ್ನು ಯಾರಾದರೂ ಹ್ಯಾಕ್ ಮಾಡಿಕೊಂಡರೆ ನಿಮ್ಮ ಕರೆಗಳೊಂದಿಗೆ ಲೊಕೇಶನ್ ಮತ್ತು ಮೀಡಿಯಾ ಫೈಲ್ ಜೊತೆಗೆ ಎಲ್ಲ ಅನುಮತಿಗಳನ್ನು ಪಡೆದು ನಿಮ್ಮನ್ನು ಸತಾಯಿಸುವ ಸಾಧ್ಯತೆಗಳಿವೆ ಆದ್ದರಿಂದ ನಿಮ್ಮ ಫೋನ್ ಹ್ಯಾಕ್ ಆದರೆ ತಕ್ಷಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ನಿಮ್ಮ ನಷ್ಟವನ್ನು ಕಡಿಮೆ ಮಾಡಬಹುದು. ಆದರೆ ಹ್ಯಾಕ್ ಆಗದಂತೆ ತಡೆಯುವುದು ಉತ್ತಮ ಮಾರ್ಗವೆಂದರೆ ಯಾವುದೇ ಲಿಂಕ್ ಅಥವಾ ವೆಬ್‌ಸೈಟ್‌ಗಳನ್ನು ಕ್ಲಿಕ್ ಮಾಡದಿರುವುದು.

WhatsApp ಬಳಕೆಯಲ್ಲಿ ನಿಮ್ಮ ರಿಯಲ್ ಟೈಮ್ ಲೊಕೇಶನ್ ಟ್ರಾಕ್ ಮಾಡಬಹಹುದು?

ವಾಟ್ಸಾಪ್ ಮೂಲಕ ಕರೆ ಮಾಡಿದವರ ಮತ್ತು ಸ್ವೀಕರಿಸುವವರ ಫೋನ್ ನಂಬರ್, ಕರೆಯ ಸಮಯ ಮತ್ತು ಅವಧಿಯೊಂದಿಗೆ ನೀವು ಬಳಸುತ್ತಿರುವ ಡಿವೈಸ್ ಮತ್ತು ನಿಮ್ಮ IP ವಿಳಾಸದಿಂದ ಪಡೆದ ನಿಮ್ಮ ಸಾಮಾನ್ಯ ಸ್ಥಳದ ವಿವರಗಳು ಸೇರಿರುತ್ತವೆ. ಈ ಸೇವೆಯು ಕಾರ್ಯನಿರ್ವಹಿಸಲು ಈ ಮಾಹಿತಿಯು ಅವಶ್ಯಕವಾಗಿದ್ದು WhatsApp ಒಳಗೆ ಒಮ್ಮೆ ತಲುಪಿಸಿದ ನಂತರ ಮೆಸೇಜ್ ಅಥವಾ ಕರೆ ಲಾಗ್‌ಗಳನ್ನು ಸಂಗ್ರಹಿಸುವುದಿಲ್ಲ. ಆದರೆ ಕಾನೂನು ಜಾರಿ ಸಂಸ್ಥೆಗಳಿಂದ ಮಾನ್ಯವಾದ ನ್ಯಾಯಾಲಯದ ಆದೇಶ ಅಥವಾ ವಾರಂಟ್‌ನಿಂದ ಕಾನೂನುಬದ್ಧವಾಗಿ ಒತ್ತಾಯಿಸಲ್ಪಟ್ಟರೆ ಅವರಿಗೆ ನಿಮ್ಮ ಕರೆ ಲಾಗ್‌ಗಳು ಮತ್ತು ಸಂಬಂಧಿತ IP ವಿಳಾಸಗಳನ್ನು ನೀಡಲಾಗುತ್ತದೆ. ಆದರೂ ವಾಟ್ಸಾಪ್ ನಿಮ್ಮ ಕರೆಗಳ ಸಮಯದಲ್ಲಿ ತಮ್ಮ IP ವಿಳಾಸವನ್ನು ಮರೆಮಾಚಲು ಬಳಕೆದಾರರು ಕರೆಗಳಲ್ಲಿ IP ವಿಳಾಸವನ್ನು ರಕ್ಷಿಸುವ ಫೀಚರ್ ಷಾ ಈಗಾಗಲೇ ಸೆಟ್ಟಿಂಗ್ ಅಲ್ಲಿ ನೀಡಲಾಗಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo