Samsung Galaxy M30 Vs Motorola One: ಬಜೆಟ್ ರೇಂಜಲ್ಲಿ ಯಾವ ಸ್ಮಾರ್ಟ್ಫೋನ್ ಬೆಸ್ಟ್

Updated on 29-Mar-2019
HIGHLIGHTS

ಚೀನೀ ಸ್ಮಾರ್ಟ್ಫೋನ್ ಕಂಪನಿಗಳ ಸ್ಮಾರ್ಟ್ಫೋನ್ಗಳಿಗೆ ಸವಾಲು ನೀಡಲು ಸ್ಯಾಮ್ಸಂಗ್ ಈ ಸರಣಿಯನ್ನು ಪ್ರಾರಂಭಿಸಿದೆ.

ದಕ್ಷಿಣ ಕೊರಿಯಾದ ಕಂಪನಿ ಸ್ಯಾಮ್ಸಂಗ್ ಈ ವರ್ಷ ತನ್ನ Galax M ಸರಣಿಯನ್ನು ಭಾರತಕ್ಕೆ ಪರಿಚಯಿಸಿದೆ. ಈ Galaxy M ಸರಣಿಯ ಮೂರನೇ ಸ್ಮಾರ್ಟ್ಫೋನ್ Galaxy M30 ಇದಾಗಿದ್ದು ಇದರ ಹಿಂದೆ Galax M10 ಮತ್ತು Galax M20 ಸ್ಮಾರ್ಟ್ಫೋನ್ಗಳನ್ನು ಪ್ರಾರಂಭಿಸಲಾಯಿತು.  ಭಾರತದಲ್ಲಿರುವ ಚೀನೀ ಸ್ಮಾರ್ಟ್ಫೋನ್ ಕಂಪನಿಗಳ ಸ್ಮಾರ್ಟ್ಫೋನ್ ಮತ್ತು ಮಧ್ಯ ಶ್ರೇಣಿಗೆ ಸವಾಲು ನೀಡಲು ಸ್ಯಾಮ್ಸಂಗ್ ಈ ಸರಣಿಯನ್ನು ಪ್ರಾರಂಭಿಸಿದೆ. ಇದರಂತೆ ಲೆನೊವೊ ಸ್ವಾಮ್ಯದ ಮೋಟೋರೋಲಾ ಕಂಪನಿ ಸಹ ತನ್ನ ಎರಡು ಸ್ಮಾರ್ಟ್ಫೋನ್ಗಳನ್ನು ಅಂದ್ರೆ Moto G7 ಮತ್ತು Moto One ಮಿಡ್ ಬಜೆಟ್ ಶ್ರೇಣಿಯಲ್ಲಿ ಬಿಡುಗಡೆ ಮಾಡಿದೆ. ಇಲ್ಲಿ ನಾವು Samsung Galaxy M30 Vs Motorola One ಬಜೆಟ್ ರೇಂಜಲ್ಲಿ ಯಾವ ಸ್ಮಾರ್ಟ್ಫೋನ್ ಬೆಸ್ಟ್ ಎನ್ನುವುದನ್ನು ನೋಡೋಣ. 

Samsung Galaxy M30 Vs Motorola One: ಡಿಸೈನ್ ಮತ್ತು ಡಿಸ್ಪ್ಲೇ.
Galaxy M30 ಸ್ಮಾರ್ಟ್ಫೋನ್ 6.4 ಇಂಚಿನ ಪೂರ್ಣ HD+ ಸೂಪರ್ AMOLED ಜೊತೆಗೆ ಸ್ಯಾಮ್ಸಂಗ್ ಇತ್ತೀಚಿನ ಇನ್ಫಿನಿಟಿ ಯು ಡಿಸ್ಪ್ಲೇಯನ್ನು ನೀಡಲಾಗಿದೆ. ಈ ಫೋನ್ ಎರಡು ಬಣ್ಣದ ಆಯ್ಕೆಗಳಲ್ಲಿ ಹೊಳಪು ಕಪ್ಪು ಮತ್ತು ನೀಲಿ ಬಣ್ಣದಲ್ಲಿ ಬರುತ್ತದೆ. ಫೋನ್ ಒಂದು ತೆಳು ಅಂಚಿನ ಹೊಂದಿದೆ ಅದು ಉತ್ತಮ ನೋಟವನ್ನು ನೀಡುತ್ತದೆ. ಜೊತೆಗೆ ಫಿಂಗರ್ಪ್ರಿಂಟ್ ಸೆನ್ಸರ್ಗಳನ್ನು ಅದರ ಹಿಂದೆ ನೀಡಲಾಗಿದೆ. Moto One ಸ್ಮಾರ್ಟ್ಫೋನ್ 5.9 ಇಂಚಿನ ಪೂರ್ಣ HD+ ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ ಹಳೆಯ ಬೋಟ್ ಆಕಾರ ಫೀಚರ್ಗಳನ್ನು ಹೊಂದಿದೆ. ಅದರ ಮುಂಭಾಗ ಮತ್ತು ಹಿಂಬದಿಯ ಪ್ಯಾನಲ್ Galaxy M30 ಸ್ಮಾರ್ಟ್ಫೋನಲ್ಲಿ ಕಾಣಿಸದ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 2.5 ಡಿ ಅನ್ನು ಹೊಂದಿದೆ.

Samsung Galaxy M30 Vs Motorola One: ಪ್ರೊಸೆಸರ್.
Galaxy M30 ಸ್ಮಾರ್ಟ್ಫೋನ್ Exynos 7904 ಆಕ್ಟಾ ಕೋರ್ ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 4GB ಮತ್ತು 6GB ಯ RAM  ಆಯ್ಕೆಗಳಲ್ಲಿ ಲಭ್ಯವಿದೆ. ಅದರಂತೆ ಈ ಫೋನ್ 64GB ಮತ್ತು 128GB ಎರಡು ಸ್ಟೋರೇಜ್ ರೂಪಾಂತರಗಳೊಂದಿಗೆ ಬರುತ್ತದೆ. ಅಲ್ಲದೆ ಮೈಕ್ರೊ SD ಕಾರ್ಡ್ ಮೂಲಕ 256GB ವರೆಗೆ ಫೋನ್ನ ಇಂಟರ್ನಲ್ ಸ್ಟೋರೇಜ್ ವಿಸ್ತರಿಸಬಹುದು. ಇದರಲ್ಲಿ 5000mAh ಬ್ಯಾಟರಿಯನ್ನು ಹೊಂದಿದೆ.  15w ವ್ಯಾಟ್ ಟೈಪ್ ಸಿ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಆಂಡ್ರೋಯ್ಡ್ OSO 8.1 ಆಪರೇಟಿಂಗ್ ಸಿಸ್ಟಮ್ ಆಧಾರಿತ ಅನುಭವ 9.5 ಬಳಕೆದಾರ ಇಂಟರ್ಫೇಸ್ನಲ್ಲಿ ಫೋನ್ ಕಾರ್ಯನಿರ್ವಹಿಸುತ್ತದೆ. Moto One ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 625 ಚಿಪ್ಸೆಟ್ ಪ್ರೊಸೆಸರ್ ಹೊಂದಿದೆ. ಫೋನ್ 4GB RAM ಮತ್ತು 64GB ಸ್ಟೋರೇಜ್ ಜೊತೆಗೆ ಸ್ಟೋರೇಜ್ ಜೊತೆಗೆ ಬರುತ್ತದೆ. ಈ ಫೋನ್ ಆಂಡ್ರಾಯ್ಡ್ ಒನ್ ಪ್ರೋಗ್ರಾಂನ ಭಾಗವಾಗಿ  ಆಂಡ್ರಾಯ್ಡ್ ಇತ್ತೀಚಿನ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ 9 ಪೈ ಪಡೆದುಕೊಂಡಿದೆ. ಫೋನ್ಗೆ ಪವರ್ ನೀಡಲು 3000mAh ಬ್ಯಾಟರಿ ಹೊಂದಿದೆ. ಇದು 1515w ವ್ಯಾಟ್ ಟರ್ಬೊ ಪವರ್ ಚಾರ್ಜಿಂಗ್ ಹೊಂದಿದೆ.

Samsung Galaxy M30 Vs Motorola One: ಕ್ಯಾಮೆರಾ.
Galaxy M30 ಸ್ಮಾರ್ಟ್ಫೋನ್ ಕ್ಯಾಮೆರಾದ ಬಗ್ಗೆ ಮಾತನಾಡಬೇಕೆಂದರೆ ಇದರ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಲಭ್ಯವಿದ್ದು 13MP ಮೆಗಾಪಿಕ್ಸೆಲ್ f/1.9 ಅಪೆರ್ಚರೊಂದಿಗೆ ಪ್ರೈಮರಿ ಕ್ಯಾಮೆರಾ ಬಂದರೆ ಮತ್ತೋಂದು 5MP ಮೆಗಾಪಿಕ್ಸೆಲ್ f/2.2 ಅಪೆರ್ಚರೊಂದಿಗೆ ಅಲ್ಟ್ರಾ ವೈಡ್ ಆಂಗಲ್ ಸೆನ್ಸರ್ ಕೊನೆಯದು 5MP ಮೆಗಾಪಿಕ್ಸೆಲ್ f/2.2 ಅಪೆರ್ಚರೊಂದಿಗೆ ಡೆಪ್ತ್ ಸೆನ್ಸರ್ ಮತ್ತು LED ಫ್ಲಾಶ್ ಒಳಗೊಂಡಿದೆ. ಇದರ ಫ್ರಂಟಲ್ಲಿ 16MP ಮೆಗಾಪಿಕ್ಸೆಲ್ f/2.0 ಅಪೆರ್ಚರೊಂದಿಗೆ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ನೀಡಲಾಗಿದೆ. Motorola One ಸ್ಮಾರ್ಟ್ಫೋನ್ ಇದರ ಹಿಂಭಾಗದಲ್ಲಿ ಡುಯಲ್ ಕ್ಯಾಮೆರಾ ಸೆಟಪ್ ಲಭ್ಯವಿದ್ದು 13MP ಮೆಗಾಪಿಕ್ಸೆಲ್ f/2.0 ಅಪೆರ್ಚರೊಂದಿಗೆ ಪ್ರೈಮರಿ ಕ್ಯಾಮೆರಾ ಬಂದರೆ ಮತ್ತೋಂದು 2MP ಮೆಗಾಪಿಕ್ಸೆಲ್ f/2.4 ಅಪೆರ್ಚರೊಂದಿಗೆ ಡೆಪ್ತ್ ಸೆನ್ಸರ್ ಮತ್ತು LED ಫ್ಲಾಶ್ ಒಳಗೊಂಡಿದೆ. ಇದರ ಫ್ರಂಟಲ್ಲಿ 8MP ಮೆಗಾಪಿಕ್ಸೆಲ್ f/2.2 ಅಪೆರ್ಚರೊಂದಿಗೆ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ನೀಡಲಾಗಿದೆ.

ಈ ಹೊಸ Samsung Galaxy M30 ಸ್ಮಾರ್ಟ್ಫೋನ್ ಅಮೆಜಾನ್ ಮೂಲಕ ಇದರ 4GB+64GB ವೇರಿಯಂಟ್ ಕೇವಲ 14,990 ರೂಗಳಲ್ಲಿ ಬಂದ್ರೆ ಇದರ 6GB+128GB ರೂಪಾಂತರ 17,990 ರೂಗಳಲ್ಲಿ ಬರುತ್ತದೆ. ಮತ್ತೊಂಡೆಯಲ್ಲಿ Motorola One ಸ್ಮಾರ್ಟ್ಫೋನ್ ನಿಮಗೆ ಆಫ್ಲೈನ್ ಅಂಗಡಿಗಳಲ್ಲಿ ಕೇವಲ 13,999 ರೂಗಳಲ್ಲಿ ಪಡೆಯಬವುದು. ಕಂಪನಿ ಇದರ ಬೆಲೆಯನ್ನು ಖಂಡಿತವಾಗಿಯೂ ಕಡಿಮೆಗೊಳಿಸಿದೆ. ಅಲ್ಲದೆ ನೀವು ಇತ್ತೀಚಿನ ಆಂಡ್ರಾಯ್ಡ್ ಆವೃತ್ತಿಯನ್ನು ಪಡೆಯುತ್ತೀರಿ. ಆದರೂ Samsung Galaxy M30 ಕ್ಯಾಮೆರಾ ಮತ್ತು ಬ್ಯಾಟರಿಯ ವಿಷಯದಲ್ಲಿ Motorola One ಸ್ಮಾರ್ಟ್ಫೋನಿಗಿಂತ  ಉತ್ತಮವಾಗಿದೆ.

 

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :