OnePlus Nord 5 ಮತ್ತು OnePlus Nord CE5 ಬಿಡುಗಡೆ! ಆಫರ್ ಬೆಲೆ, ಡಿಸ್ಪ್ಲೇ, ಕ್ಯಾಮೆರಾ ಮತ್ತು ಬ್ಯಾಟರಿ ಎಲ್ಲವನ್ನು ತಿಳಿಯಿರಿ!

HIGHLIGHTS

OnePlus Nord 5 ಮತ್ತು OnePlus Nord CE5 ಸ್ಮಾರ್ಟ್ಫೋನ್ಗಳು ಅಧಿಕೃತವಾಗಿ ಬಿಡುಗಡೆಯಾಗಿವೆ.

OnePlus Nord 5 ಸ್ಮಾರ್ಟ್ ಫೋನ್ ಆರಂಭಿಕ ಬ್ಯಾಂಕ್ ಆಫರ್ನೊಂದಿಗೆ 29,999 ರೂಗಳಿಗೆ ಬಿಡುಗಡೆಯಾಗಿದೆ.

OnePlus Nord CE5 ಸ್ಮಾರ್ಟ್ ಫೋನ್ ಆರಂಭಿಕ ಬ್ಯಾಂಕ್ ಆಫರ್ನೊಂದಿಗೆ 22,999 ರೂಗಳಿಗೆ ಬಿಡುಗಡೆಯಾಗಿದೆ.

OnePlus Nord 5 ಮತ್ತು OnePlus Nord CE5 ಬಿಡುಗಡೆ! ಆಫರ್ ಬೆಲೆ, ಡಿಸ್ಪ್ಲೇ, ಕ್ಯಾಮೆರಾ ಮತ್ತು ಬ್ಯಾಟರಿ ಎಲ್ಲವನ್ನು ತಿಳಿಯಿರಿ!

ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಒನ್‌ಪ್ಲಸ್ (OnePlus) ಭಾರತದಲ್ಲಿ ಇಂದು ತನ್ನ ಎರಡು ಪವರ್ಫುಲ್ ಸ್ಮಾರ್ಟ್ಫೋನ್ಗಳನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಕಂಪನಿ ಇಂದು OnePlus Nord 5 ಮತ್ತು OnePlus Nord CE5 ಫೋನ್ಗಳನ್ನು ಪರಿಚಯಿಸಿದೆ. ಈ ಎರಡು ಸ್ಮಾರ್ಟ್ಫೋನ್ಗಳು ಇತ್ತೀಚಿನಹೊಸ ಮತ್ತು ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಕೈಗೆಟಕುವ ಬೆಲೆಗೆ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಆರಂಭಿಕ OnePlus Nord CE5 ಸ್ಮಾರ್ಟ್ ಫೋನ್ ಆರಂಭಿಕ ಬ್ಯಾಂಕ್ ಆಫರ್ನೊಂದಿಗೆ 22,999 ರೂಗಳಿಗೆ ಬಂದ್ರೆ OnePlus Nord 5 ಸ್ಮಾರ್ಟ್ ಫೋನ್ ಆರಂಭಿಕ ಬ್ಯಾಂಕ್ ಆಫರ್ನೊಂದಿಗೆ 29,999 ರೂಗಳಿಗೆ ಬಿಡುಗಡೆಯಾಗಿದೆ. ಹಾಗಾದ್ರೆ ಇವೆರಡು ಸ್ಮಾರ್ಟ್ಫೋನ್ಗಳ ಆಫರ್ ಬೆಲೆ ಮತ್ತು ಫೀಚರ್ಗಳೇನು ಸಂಪೂರ್ಣವಾಗಿ ಈ ಕೆಳಗೆ ಪರಿಶೀಲಿಸಬಹುದು.

Digit.in Survey
✅ Thank you for completing the survey!

OnePlus Nord 5 ಮತ್ತು OnePlus Nord CE5 ಆಫರ್ ಬೆಲೆ, ಬ್ಯಾಂಕ್ ಆಫರ್‌ಗಳು:

ಮೊದಲಿಗೆ OnePlus Nord 5 ಸ್ಮಾರ್ಟ್ಫೋನ್ 8GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ ₹31,999 ರಿಂದ ಪ್ರಾರಂಭವಾದರೆ ಮತ್ತೊಂದು 12GB + 256GB ರೂಪಾಂತರದ ಬೆಲೆ ₹34,999 ಆಗಿದೆ. OnePlus Nord CE5 ಸ್ಮಾರ್ಟ್ಫೋನ್ 8GB RAM + 128GB ಸ್ಟೋರೇಜ್ ಬ್ಯಾಂಕ್ ಆಫರ್ ಜೊತೆಗೆ ₹22,999 ರುಗಳಾಗಿವೆ ಮತ್ತೊಂದು 8GB + 256GB ಸ್ಟೋರೇಜ್ ₹24,999 ರೂಗಳು ಮತ್ತು ಕೊನೆಯದಾಗಿ 12GB + 256GB ಸ್ಟೋರೇಜ್ ₹26,999 ರೂಗಳಿಗೆ ಲಭ್ಯ.

OnePlus Nord 5 and OnePlus Nord CE5

ಈ ಎರಡೂ ಫೋನ್ ಆಯ್ದ ಕ್ರೆಡಿಟ್ ಕಾರ್ಡ್‌ಗಳ ಮೇಲೆ ₹2,000 ತ್ವರಿತ ಬ್ಯಾಂಕ್ ರಿಯಾಯಿತಿಯನ್ನು ನೀಡುತ್ತವೆ. OnePlus Nord 5 ಸ್ಮಾರ್ಟ್ಫೋನ್ ಸ್ಮಾರ್ಟ್ಫೋನ್ 9ನೇ ಜುಲೈ ಮೊದಲ ಮಾರಾಟಕ್ಕೆ ಲಭ್ಯವಾಗಲಿದ್ದು ಇದರ ರಂದು ಮತ್ತು OnePlus Nord CE5 ಸ್ಮಾರ್ಟ್ಫೋನ್ 12ನೇ ಜುಲೈಗೆ ಮೊದಲ ಮಾರಾಟಕ್ಕೆ ಬರಲಿದೆ.

Also Read: Free Ration: ಉಚಿತ ರೇಷನ್ ಪಡೆಯಲು ಮನೆಯಲ್ಲೇ ಕುಳಿತು ಈ 2 ನಿಮಿಷದ ಕೆಲಸ ಮಾಡಿಕೊಳ್ಳಿ!

OnePlus Nord 5 ಮತ್ತು OnePlus Nord CE5 ಡಿಸ್ಪ್ಲೇ ಮತ್ತು ಕ್ಯಾಮೆರಾ ವಿವರಗಳು

OnePlus Nord 5 ಅದ್ಭುತವಾದ 6.83-ಇಂಚಿನ 1.5K AMOLED ಡಿಸ್ಪ್ಲೇಯನ್ನು ಹೊಂದಿದ್ದು 144Hz ರಿಫ್ರೆಶ್ ದರ ಮತ್ತು ಗೊರಿಲ್ಲಾ ಗ್ಲಾಸ್ 7i ರಕ್ಷಣೆಯನ್ನು ಹೊಂದಿದೆ. ಇದು OIS ಹೊಂದಿರುವ 50MP ಸೋನಿ LYT-700 ಮುಖ್ಯ ಕ್ಯಾಮೆರಾ ಮತ್ತು 50MP ಸ್ಯಾಮ್‌ಸಂಗ್ JN5 ಮುಂಭಾಗದ ಕ್ಯಾಮೆರಾವನ್ನು ಹೊಂದಿದ್ದು ಎರಡೂ 4K 60fps ವೀಡಿಯೊ ಸಾಮರ್ಥ್ಯವನ್ನು ಹೊಂದಿವೆ. OnePlus Nord CE5 ಸ್ಮಾರ್ಟ್ಫೋನ್ 6.77 ಇಂಚಿನ FHD+ AMOLED 120Hz ಡಿಸ್ಪ್ಲೇ, OIS ಹೊಂದಿರುವ 50MP ಸೋನಿ LYT-600 ಮುಖ್ಯ ಕ್ಯಾಮೆರಾ ಮತ್ತು 16MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

OnePlus Nord 5 ಮತ್ತು OnePlus Nord CE5 ಹಾರ್ಡ್‌ವೇರ್ ಮತ್ತು ಬ್ಯಾಟರಿ ವಿವರಗಳು

ಕಾರ್ಯಕ್ಷಮತೆಯ ವಿಷಯದಲ್ಲಿ OnePlus Nord 5 ಫ್ಲ್ಯಾಗ್‌ಶಿಪ್-ಗ್ರೇಡ್ ಸ್ನಾಪ್‌ಡ್ರಾಗನ್ 8s Gen 3 SoC ನಿಂದ ಚಾಲಿತವಾಗಿದ್ದರೆ OnePlus Nord CE5 ಮೀಡಿಯಾ ಟೆಕ್ ಡೈಮೆನ್ಸಿಟಿ 8350 ಅಪೆಕ್ಸ್ ಅನ್ನು ಬಳಸುತ್ತದೆ. OnePlus Nord 5 ದೊಡ್ಡ 6800mAh ಬ್ಯಾಟರಿಯನ್ನು ಹೊಂದಿದ್ದು 80W SUPERVOOC ಚಾರ್ಜಿಂಗ್ ಹೊಂದಿದೆ. OnePlus Nord CE5 ಫೋನ್ 7100mAh ಬ್ಯಾಟರಿಯೊಂದಿಗೆ ಇನ್ನಷ್ಟು ದೊಡ್ಡದಾಗಿದೆ ಜೊತೆಗೆ 80W ವೇಗದ ಚಾರ್ಜಿಂಗ್ ಅನ್ನು ಸಹ ಒಳಗೊಂಡಿದೆ. ಈ ಎರಡೂ ಫೋನ್‌ಗಳು ಆಂಡ್ರಾಯ್ಡ್ 15 ಆಧಾರಿತ ಆಕ್ಸಿಜನ್ ಓಎಸ್ 15 ಅನ್ನು ರನ್ ಮಾಡುತ್ತವೆ.

OnePlus Nord 5 ಮತ್ತು OnePlus Nord CE5 ಕನೆಕ್ಟಿವಿಟಿ ಮತ್ತು ಸೆನ್ಸರ್ಗಳು

ಎರಡೂ ಫೋನ್‌ಗಳು ಡ್ಯುಯಲ್ ಸಿಮ್ 5G ಸಂಪರ್ಕ, ವೈ-ಫೈ 6 ಮತ್ತು ಬ್ಲೂಟೂತ್ 5.4 ಅನ್ನು ನೀಡುತ್ತವೆ. OnePlus Nord 5 ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP65 ರೇಟಿಂಗ್‌ನೊಂದಿಗೆ ಬರುತ್ತದೆ. ಇದು ಬಾಳಿಕೆಯನ್ನು ಖಚಿತಪಡಿಸುತ್ತದೆ. ಈ ಎರಡೂ ಸ್ಮಾರ್ಟ್ಫೋನ್ಗಳು ಸುರಕ್ಷಿತ ಅನ್‌ಲಾಕಿಂಗ್‌ಗಾಗಿ ಇನ್-ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಒಳಗೊಂಡಿವೆ. OnePlus Nord 5 ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳು ಮತ್ತು AI ಕಾರ್ಯಗಳಿಗಾಗಿ ಗೂಗಲ್ ಜೆಮಿನಿ ಏಕೀಕರಣವನ್ನು ಸಹ ಒಳಗೊಂಡಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo