84 ದಿನಗಳ ವ್ಯಾಲಿಡಿಟಿ ನೀಡುವ Jio, Airtel ಮತ್ತು Vi ಯೋಜನೆಗಳಲ್ಲಿ ಯಾರ ಪ್ಲಾನ್ ಬೆಸ್ಟ್?

84 ದಿನಗಳ ವ್ಯಾಲಿಡಿಟಿ ನೀಡುವ Jio, Airtel ಮತ್ತು Vi ಯೋಜನೆಗಳಲ್ಲಿ ಯಾರ ಪ್ಲಾನ್ ಬೆಸ್ಟ್?
HIGHLIGHTS

ಜಿಯೋದ 84 ದಿನಗಳ ಪ್ರಿಪೇಯ್ಡ್ ಯೋಜನೆ 666 ರೂಗಳಿಂದ ಪ್ರಾರಂಭವಾಗುತ್ತದೆ

ವೀಕೆಂಡ್ ರೋಲ್ ಓವರ್ ಆಯ್ಕೆಯೊಂದಿಗೆ Vi ಅನ್ಲಿಮಿಟೆಡ್ ಡೇಟಾ ಪ್ರಯೋಜನಗಳನ್ನು ಸಹ ನೀಡುತ್ತದೆ

ಏರ್‌ಟೆಲ್ 84 ದಿನಗಳ ವ್ಯಾಲಿಡಿಟಿಯ ಯೋಜನೆಯು ಅರ್ಹ ಬಳಕೆದಾರರಿಗೆ ಉಚಿತ ಅನ್ಲಿಮಿಟೆಡ್ 5G ಇಂಟರ್ನೆಟ್ ನೀಡುತ್ತದೆ

Jio, Airtel, Vi Plans: ಪ್ರತಿದಿನ ನಿಮ್ಮ ಕರೆ ಮತ್ತು ಡೇಟದೊಂದಿಗೆ ಜಿಯೋ,ಮ್ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ತಮ್ಮ ಗ್ರಾಹಕರ ವಿವಿಧ ಅವಶ್ಯಕತೆಗಳನ್ನು ಪೂರೈಸಲು ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳ ಶ್ರೇಣಿಯನ್ನು ಒದಗಿಸುತ್ತವೆ. ಕಡಿಮೆ ಬೆಲೆಯ ರೀಚಾರ್ಜ್‌ಗಳಿಂದ ವಾರ್ಷಿಕ ಯೋಜನೆಗಳೊಂದಿಗೆ OTT ಪ್ರಯೋಜನ ಮತ್ತು 84 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತಿವೆ. ಜಿಯೋ, ಏರ್‌ಟೆಲ್ ಮತ್ತು ವಿ ಕರೆಗಳು, ಹೈ ಸ್ಪೀಡ್ ಡೇಟಾ, SMS ಮತ್ತು ಇತರ ಪ್ರಯೋಜನಗಳೊಂದಿಗೆ ಲಭ್ಯವಿದೆ. 84 ದಿನಗಳ ವ್ಯಾಲಿಡಿಟಿ ಯೋಜನೆಯು ಸುಮಾರು ಅರ್ಧ ವರ್ಷದ ಮಾನ್ಯತೆಯನ್ನು ಒದಗಿಸುತ್ತದೆ. ತಿಂಗಳ ರೀಚಾರ್ಜ್ ತೊಂದರೆಗಳನ್ನು ಎದುರಿಸಲು ಬಯಸದ ಆದರೆ ವಾರ್ಷಿಕ ರೀಚಾರ್ಜ್ ಯೋಜನೆಗಳಿಗೆ ಬದ್ಧರಾಗಲು ಇಷ್ಟವಿಲ್ಲದವರಿಗೆ ವಿನ್ಯಾಸಗೊಳಿಸಲಾಗಿದೆ.

84 ದಿನಗಳ Jio ಯೋಜನೆಗಳು:

ಜಿಯೋ ರೂ. 666 ಯೋಜನೆ: ಈ ಯೋಜನೆ ದಿನಕ್ಕೆ 1.5GB ಡೇಟಾದಂತೆ ಒಟ್ಟಾರೆಯಾಗಿ 126GB ಹೈ-ಸ್ಪೀಡ್‌ ಡೇಟಾವನ್ನು ನೀಡುತ್ತದೆ. ಇದರಲ್ಲಿ ಅನ್ಲಿಮಿಟೆಡ್ ಕರೆಗಳು, ಪ್ರತಿದಿನ 100 SMS ಮತ್ತು JioTV, JioCinema, JioSecurity ಮತ್ತು JioCloud ನಂತಹ Jio ಅಪ್ಲಿಕೇಶನ್‌ಗಳ ಉಚಿತ ಬಳಕೆಯನ್ನು ಬಳಕೆದಾರರಿಗೆ ಒದಗಿಸಲಾಗುತ್ತದೆ. ಅಲ್ಲದೆ ಅರ್ಹತಾ ಚಂದಾದಾರರಿಗೆ ಈ ಪ್ಯಾಕೇಜ್ ಅನ್ಲಿಮಿಟೆಡ್ 5G ಡೇಟಾವನ್ನು ನೀಡುತ್ತದೆ.

ಜಿಯೋ ರೂ. 719 ಯೋಜನೆ: ಈ ಯೋಜನೆ ಅನ್ಲಿಮಿಟೆಡ್ ಕರೆಗಳು, ಪ್ರತಿದಿನ 100 SMS, Jio ಅಪ್ಲಿಕೇಶನ್‌ಗಳಿಗೆ ಪ್ರವೇಶ, ದಿನಕ್ಕೆ 2GB ಡೇಟಾದಂತೆ ಒಟ್ಟಾರೆಯಾಗಿ 168GB ಡೇಟಾ ಮತ್ತು 5G ಪ್ರವೇಶವನ್ನು ಪಡೆಯುತ್ತದೆ.

ಜಿಯೋ ರೂ. 1199 ಯೋಜನೆ: ಈ ಯೋಜನೆಯಲ್ಲಿ ಬಳಕೆದಾರರು ದಿನಕ್ಕೆ 3GB ಡೇಟಾ, ಅನ್ಲಿಮಿಟೆಡ್ ಕರೆಗಳು, ಪ್ರತಿದಿನ 100 SMS ಮತ್ತು Jio ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ಪಡೆಯುತ್ತಾರೆ. ಈ ಯೋಜನೆಯನ್ನು ಜಿಯೋ 5G ಆಫರ್‌ನಲ್ಲಿ ಸೇರಿಸಲಾಗಿದೆ.

84 ದಿನಗಳ Airtel ಯೋಜನೆಗಳು:

ಏರ್‌ಟೆಲ್ ರೂ. 455 ಯೋಜನೆ: ಈ ಯೋಜನೆಯಲ್ಲಿ ಬಳಕೆದಾರರು ಅನ್ಲಿಮಿಟೆಡ್ ಕರೆಗಳು, 6GB ಒಟ್ಟು ಡೇಟಾ, 900 SMS ಮತ್ತು ಅಪೊಲೊ ಸರ್ಕಲ್, FASTag ಕ್ಯಾಶ್‌ಬ್ಯಾಕ್, Hellotunes ಮತ್ತು Wynk ನ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯುತ್ತಾರೆ.

ಏರ್‌ಟೆಲ್ ರೂ. 719 ಯೋಜನೆ: ಈ ಯೋಜನೆಯಲ್ಲಿ ದಿನಕ್ಕೆ 1.5GB ಡೇಟಾ, ಅನ್ಲಿಮಿಟೆಡ್ ಕರೆಗಳು, ಪ್ರತಿದಿನ 100 SMS ಮತ್ತು  Airtel ಅಪ್ಲಿಕೇಶನ್ ಹಾಗೂ ವೆಬ್‌ನ ರೀಚಾರ್ಜ್‌ ಮೂಲಕ Disney+ Hotstar ಮೊಬೈಲ್‌ಗೆ ಉಚಿತ 3 ತಿಂಗಳ ಚಂದಾದಾರಿಕೆಯನ್ನು ಪಡೆಯಬಹುದು ಜೊತೆಗೆ ಏರ್‌ಟೆಲ್ 5G ಕವರೇಜ್ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ನೀವು ಪ್ರತಿದಿನ ಅನ್ಲಿಮಿಟೆಡ್ 5G ಇಂಟರ್ನೆಟ್ ಅನ್ನು ಬಳಸಬಹುದು.

ಏರ್‌ಟೆಲ್ ರೂ. 839 ಯೋಜನೆ: ಈ ಯೋಜನೆಯು ಏರ್‌ಟೆಲ್ 5G ಬೆಂಬಲಿತ ನಗರಗಳಲ್ಲಿನ ಬಳಕೆದಾರರಿಗೆ ಅನ್ಲಿಮಿಟೆಡ್ 5G ಇಂಟರ್ನೆಟ್ ಅನ್ನು ನೀಡುತ್ತದೆ. ಇನ್ನು ಉಳಿದ ಬಳಕೆದಾರರಿಗೆ ಈ ಯೋಜನೆಯು ದಿನಕ್ಕೆ 2GB ಡೇಟಾ, ಅನ್ಲಿಮಿಟೆಡ್ ಕರೆಗಳು, ಪ್ರತಿದಿನ 100 SMS ಮತ್ತು Disney+ Hotstar ಗೆ ಉಚಿತ ಚಂದಾದಾರಿಕೆಯಂತಹ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ.

84 ದಿನಗಳ Vodafone Idea ಯೋಜನೆಗಳು:

ವೊಡಾಫೋನ್ ಐಡಿಯಾದ ರೂ. 719 ಯೋಜನೆ: ಈ ಯೋಜನೆಯು ದಿನಕ್ಕೆ 1.5GB ಡೇಟಾ, ಪ್ರತಿದಿನ 100 SMS, ಅನ್ಲಿಮಿಟೆಡ್ ಕರೆಗಳು,ಮತ್ತು ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ.

ವೊಡಾಫೋನ್ ಐಡಿಯಾದ ರೂ. 839 ಯೋಜನೆ: ಈ ಯೋಜನೆಯಲ್ಲಿ Vi ದಿನಕ್ಕೆ 2GB ಡೇಟಾ, ಪ್ರತಿದಿನ 100 SMS ಮತ್ತು ವೀಕೆಂಡ್ ಡೇಟಾ ರೋಲ್‌ಓವರ್, binge all night ಹಾಗೂ ಇನ್ನು ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ.

ವೊಡಾಫೋನ್ ಐಡಿಯಾದ ರೂ. 1066 ಯೋಜನೆ: ಈ ಯೋಜನೆಯು ದಿನಕ್ಕೆ 2GB ಡೇಟಾ, ಅನ್ಲಿಮಿಟೆಡ್ ಕರೆಗಳು, ಪ್ರತಿದಿನ 100 SMS ಮತ್ತು wee ನಂತಹ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo