ಇನ್ಮೇಲೆ ದೇಶಾದ್ಯಂತ ಉಚಿತ ವಾಯ್ಸ್ Wi-Fi ಕಾಲಿಂಗ್ ಸೌಲಭ್ಯ

ಇನ್ಮೇಲೆ ದೇಶಾದ್ಯಂತ ಉಚಿತ ವಾಯ್ಸ್ Wi-Fi ಕಾಲಿಂಗ್ ಸೌಲಭ್ಯ
HIGHLIGHTS

ಮೊಬೈಲ್ ನೆಟ್‌ವರ್ಕ್ ಇಲ್ಲದೆ ವೈ-ಫೈ ಮೂಲಕ ಕರೆ ಮಾಡುವುದನ್ನು VoWiFi ಕರೆ ಎಂದು ಕರೆಯಲಾಗುತ್ತದೆ.

ನಿಮ್ಮ ಸ್ಮಾರ್ಟ್‌ಫೋನ್ ವೈಫೈ ಕರೆಗಳನ್ನು ಬೆಂಬಲಿಸುವ ಆಯ್ಕೆ ನಿಮ್ಮ ಫೋನಲಿದ್ದರೆ ಮಾತ್ರ ನೀವು ವೈಫೈ ಕರೆ ಮಾಡಲು ಸಾಧ್ಯವಾಗುತ್ತದೆ.

ಭಾರತದಲ್ಲಿ ರಿಲಯನ್ಸ್ ಜಿಯೋ ಇಂದಿನಿಂದ ತನ್ನೆಲ್ಲಾ ಗ್ರಾಹಕರಿಗೆ ದೇಶದ ಎಲ್ಲಾ ವಲಯಗಳಲ್ಲಿ ವಾಯ್ಸ್ ಓವರ್ ವೈ-ಫೈ ಕಾಲಿಂಗ್ ಸೇವೆಯನ್ನು ಪ್ರಾರಂಭಿಸಿದೆ. ಈಗ ಜಿಯೋ ಗ್ರಾಹಕರು ಈ ಸೇವೆಯಡಿಯಲ್ಲಿ ವೈ-ಫೈ ನೆಟ್‌ವರ್ಕ್ ಸಹಾಯದಿಂದ ಉಚಿತವಾಗಿ ಕರೆ ಮಾಡಲು ಸಾಧ್ಯವಾಗುತ್ತದೆ. ಕೆಲವು ದಿನಗಳ ಹಿಂದೆ ಕಂಪನಿಯು ಈ ಸೇವೆಯನ್ನು ದೆಹಲಿ-ಎನ್‌ಸಿಆರ್ ಮತ್ತು ಚೆನ್ನೈ ವಲಯದಲ್ಲಿ ಪರಿಚಯಿಸಿತು ಆದರೆ ಜನವರಿ 16 ರ ವೇಳೆಗೆ ಇದನ್ನು ದೇಶಾದ್ಯಂತ ಪ್ರಾರಂಭಿಸಲಾಗುವುದು. ಜಿಯೋನ ಈ ಸೇವೆಯನ್ನು ಸದ್ಯಕ್ಕೆ 150ಕ್ಕೂ ಹೆಚ್ಚು ಸ್ಮಾರ್ಟ್‌ಫೋನ್‌ಗಳು ಬೆಂಬಲಿಸಲಿವೆ.

ಈ ವಾಯ್ಸ್ ಓವರ್ ವೈ-ಫೈ ಅಥವಾ ವೈಫೈ ಮೂಲಕ ಇದು ಕಾರ್ಯನಿರ್ವಹಿಸುತ್ತದೆ. ಇದನ್ನು VoIP ಎಂದೂ ಸಹ ಕರೆಯುತ್ತಾರೆ. ವೈಫೈ ಮೂಲಕ ನೀವು ಮನೆಯ ವೈಫೈ, ಸಾರ್ವಜನಿಕ Wi-Fi ಮತ್ತು Wi-Fi ಹಾಟ್‌ಸ್ಪಾಟ್‌ಗಳನ್ನು ಬಳಸಿಕೊಂಡು ಕರೆಗಳನ್ನು ಮಾಡಬಹುದು. ಉದಾಹರಣೆಗೆ ನಿಮ್ಮ ಮೊಬೈಲ್‌ನಲ್ಲಿ ನೀವು ನೆಟ್‌ವರ್ಕ್ ಹೊಂದಿಲ್ಲದಿದ್ದರೆ ನೀವು ಇನ್ನೊಬ್ಬರಿಂದ ವೈ-ಫೈ ಅಥವಾ ಹಾಟ್‌ಸ್ಪಾಟ್ ತೆಗೆದುಕೊಳ್ಳುವ ಮೂಲಕ ಫೋನ್‌ನಲ್ಲಿ ಆರಾಮವಾಗಿ ಸಾಮಾನ್ಯ ಕರೆಗಳನ್ನು ಮಾತನಾಡಬಹುದು. ವೈಫೈ ಯ ಅತಿದೊಡ್ಡ ಪ್ರಯೋಜನವೆಂದರೆ ರೋಮಿಂಗ್ ಆಗಿದೆ ಏಕೆಂದರೆ ನೀವು ಯಾವುದೇ ವೈಫೈ ಮೂಲಕ ಉಚಿತವಾಗಿ ಮಾತನಾಡಬಹುದು.

ಈ VoWiFi ಕರೆಯನ್ನು ಅರ್ಥಮಾಡಿಕೊಳ್ಳುವಲ್ಲಿ ನೀವು ಇನ್ನೂ ತೊಂದರೆ ಅನುಭವಿಸುತ್ತಿದ್ದರೆ ನೀವು ವಾಟ್ಸಾಪ್ ಕರೆ ಮಾಡುವಿಕೆಯನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ನೀವು ವಾಟ್ಸಾಪ್ ಮೂಲಕ ಯಾರೊಂದಿಗೂ ಮಾತನಾಡಿದರೆ ಹೇಗೆ ನಿಮ್ಮ ಬ್ಯಾಲೆನ್ಸ್ ಖರ್ಚು ಆಗುವುದಿಲ್ಲವೋ ಹಾಗೆಯೇ ಇದು. ಏಕೆಂದರೆ ವಾಟ್ಸಾಪ್ ಕರೆಯಲ್ಲಿ ನೀವು ಇಂಟರ್ನೆಟ್ ನೆಟ್ವರ್ಕ್ ಅನ್ನು ಬಳಸುತ್ತೀರಿ. ಸರಳವಾಗಿ ಹೇಳುವುದಾದರೆ ಮೊಬೈಲ್ ನೆಟ್‌ವರ್ಕ್ ಇಲ್ಲದೆ ವೈ-ಫೈ ಮೂಲಕ ಕರೆ ಮಾಡುವುದನ್ನು VoWiFi ಕರೆ ಎಂದು ಕರೆಯಲಾಗುತ್ತದೆ.

ಮೊದಲನೆಯದಾಗಿ ನಿಮ್ಮ ಸ್ಮಾರ್ಟ್‌ಫೋನ್ ವೈಫೈ ಕರೆಗಳನ್ನು ಬೆಂಬಲಿಸುವ ಆಯ್ಕೆ ನಿಮ್ಮ ಫೋನಲಿದ್ದರೆ ಮಾತ್ರ ನೀವು ವೈಫೈ ಕರೆ ಮಾಡಲು ಸಾಧ್ಯವಾಗುತ್ತದೆ. ಫೋನ್‌ನ ಸೆಟ್ಟಿಂಗ್‌ಗಳಲ್ಲಿನ ನೆಟ್‌ವರ್ಕ್ ಸೆಟ್ಟಿಂಗ್‌ಗಳಿಗೆ ಹೋಗುವ ಮೂಲಕ ನೀವು ಇದನ್ನು ಪರಿಶೀಲಿಸಬಹುದು. ನಿಮ್ಮ ಫೋನ್‌ನ ನೆಟ್‌ವರ್ಕ್ ಸೆಟ್ಟಿಂಗ್‌ಗಳಲ್ಲಿ ವೈ-ಫೈ ಕರೆ ಮಾಡುವ ಆಯ್ಕೆಯು ಗೋಚರಿಸಿದರೆ ಅದನ್ನು ಮಾಡುವ ಮೂಲಕ ನೀವು ವೈಫೈ ಕರೆ ಮಾಡಬಹುದು. ಈಗ https://www.jio.com/en-in/jio-wifi-calling ಮೇಲೆ ಕ್ಲಿಕ್ ಮಾಡಿ 'Compatible Handsets' ವಿಭಾಗದಲ್ಲಿ ಫೋನಿನ ಬ್ರಾಂಡ್ ಮತ್ತು ಮಾಡೆಲ್ ಹೆಸರು ಆಯ್ಕೆ ಮಾಡಿ ಯಾವ ಯಾವ ಫೋನ್‌ಗಳಿಗೆ ಜಿಯೋವಿನ ಈ ವೈಫೈ ಬೆಂಬಲವಿದೆ ಎಂಬ ಮಾಹಿತಿಯನ್ನು ನೀವು ಪಡೆಯಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo