ಭಾರತೀಯ ಮಾರುಕಟ್ಟೆಯಲ್ಲಿ 5G ನೆಟ್ವರ್ಕ್ ಸಿದ್ಧವಾದಾಗ ವಿವೋ 5G ಫೋನ್ಗಳನ್ನು ಪ್ರಾರಂಭಿಸಲಿದೆ

ಭಾರತೀಯ ಮಾರುಕಟ್ಟೆಯಲ್ಲಿ 5G ನೆಟ್ವರ್ಕ್ ಸಿದ್ಧವಾದಾಗ ವಿವೋ 5G ಫೋನ್ಗಳನ್ನು ಪ್ರಾರಂಭಿಸಲಿದೆ
HIGHLIGHTS

ಸ್ಯಾಮ್ಸಂಗ್ ದಕ್ಷಿಣ ಕೊರಿಯಾದಲ್ಲಿ ಏಪ್ರಿಲ್ ತಿಂಗಳಲ್ಲಿ ವಿಶ್ವದ ಮೊಟ್ಟ ಮೊದಲ 5G ಸ್ಮಾರ್ಟ್ಫೋನ್ ತರುವ ನಿರೀಕ್ಷೆಯಿದೆ

ವಿಶ್ವದಲ್ಲಿ 5G ಎಂಬೆಡೆಡ್ ಸ್ಮಾರ್ಟ್ಫೋನ್ಗಳ ಭವಿಷ್ಯದ ಬೆಳವಣಿಗೆಗೆ ಇದು ಪ್ರಮುಖ ಅಂಶವಾಗಿದ್ದು ಚೀನಾ ಹ್ಯಾಂಡ್ಸೆಟ್ ತಯಾರಕ ವಿವೋ ಮಾರುಕಟ್ಟೆಗೆ ಸಿದ್ಧವಾದಾಗ ಭಾರತದಲ್ಲಿ 5G ಸ್ಮಾರ್ಟ್ಫೋನ್ ಬಿಡುಗಡೆ ಮಾಡಲಿದೆ ಎಂದು ಹೇಳಿದ್ದಾರೆ. ಅನೇಕ ಸ್ಮಾರ್ಟ್ಫೋನ್ ತಯಾರಕರು ಈಗಾಗಲೇ ತಮ್ಮ 5G ಫೋನ್ಗಳನ್ನು ವಿಶ್ವದೆಲ್ಲೇಡೆ ಮುಖ್ಯವಾಗಿ ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್ಸಂಗ್ ಮತ್ತು ಚೀನೀ ಸ್ಮಾರ್ಟ್ಫೋನ್ ತಯಾರಕರಾದ Huawei, Xiaomi ಮತ್ತು OPPO ಸೇರಿದಂತೆ ಘೋಷಿಸಿದ್ದಾರೆ.

ಸ್ಯಾಮ್ಸಂಗ್ ದಕ್ಷಿಣ ಕೊರಿಯಾದ ಮಾರುಕಟ್ಟೆಯಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ವಿಶ್ವದ ಮೊದಲ 5G  ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಭಾರತ ಸಿದ್ಧವಾದಾಗ ನಾವು 5G ಫೋನ್ ಅನ್ನು ಪ್ರಾರಂಭಿಸುತ್ತೇವೆಂದು ಚೀಪ್ ತಯಾರಿಕೆ ದೈತ್ಯ Qualcom, Haier, TCL ಮತ್ತು Midea ಕಂಪನಿಗಳು 5G ಸೇವೆಗಳು ಮತ್ತು ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ಹ್ಯಾಂಡ್ಸೆಟ್ ಪ್ಲೇಯರ್ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆಂದು ವಿವೋ ಇಂಡಿಯಾದ ಮಾರ್ಕೆಟಿಂಗ್ ಸ್ಟ್ರಾಟಜಿ ಮುಖ್ಯಸ್ಥರಾದ ನಿಪುನ್ ಮಾರಿಯಾ ಹೇಳಿದ್ದಾರೆ.

2016 ರಿಂದ ವಿವೊ ಫೋನ್ ತಯಾರಕರು 5G ಸಂಶೋಧನಾ ಸಂಸ್ಥೆಯನ್ನು ಬೀಜಿಂಗ್, ಚೈನಾದಲ್ಲಿ ಸ್ಥಾಪಿಸಿ 5G ತಂತ್ರಜ್ಞಾನ ಅಭಿವೃದ್ಧಿ ಮತ್ತು ಪ್ರಮಾಣೀಕರಣಕ್ಕೆ ಅಡಿಪಾಯ ಹಾಕಿದ್ದೇವೆ. ಈ 5G ಸ್ಮಾರ್ಟ್ಫೋನ್ಗಳನ್ನು ಸಂಯೋಜಿಸಲು ವಿವೋ ಬಯಸುತ್ತಿದೆ. 5G ಎಂಬೆಡೆಡ್ ಸ್ಮಾರ್ಟ್ಫೋನಿನ ಭವಿಷ್ಯದ ಬೆಳವಣಿಗೆಗೆ ಇದು ಪ್ರಮುಖ ಅಂಶವಾಗಿದ್ದು ನಾವು ಇವುಗಳನ್ನು ಇಂಟೆಲಿಜೆಂಟ್ ಫೋನ್ಗಳೆಂದು  ಕರೆಯುತ್ತೇವೆಂದು ಮರಿಯಾ ಹೇಳಿದ್ದಾರೆ. 2019 ಜನವರಿಯಲ್ಲಿ 60% ರಷ್ಟು ಮೌಲ್ಯದ ಮೌಲ್ಯವನ್ನು ಹೊಂದಿದೆ. 

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಬ್ರ್ಯಾಂಡ್ಗಳಲ್ಲಿ ವಿವೋ ಒಂದೆಂದು ಅವರು ಹೇಳಿದ್ದಾರೆ. ಕಂಪೆನಿಯು ದೇಶದಲ್ಲಿ ಮಾರಾಟ ಸೇವೆಗಳ ನಂತರ ಅದರ ಬಲಪಡಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದೆ. ಪ್ರಸ್ತುತ, ವಿವೊ ಫೋನ್ಗಳು ಲಭ್ಯವಿದ್ದ ಭಾರತದಲ್ಲಿ 70,000 ಕ್ಕಿಂತಲೂ ಹೆಚ್ಚು ಚಿಲ್ಲರೆ ವ್ಯಾಪಾರಿಗಳು ಮತ್ತು ಕಂಪನಿಯು 200 ಕ್ಕಿಂತ ಹೆಚ್ಚು ವಿಶೇಷ ಸ್ಟೋರ್ಗಳು ಮತ್ತು ಎರಡು ಅತ್ಯುತ್ತಮ ಅನುಭವ ಕೇಂದ್ರಗಳನ್ನು ಸಹ ಭಾರತದಲ್ಲಿ ಹೊಂದಿದೆ.

ಇಮೇಜ್ ಕ್ರೆಡಿಟ್

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo