ನಾವು ಸತ್ತ ನಂತರ ನಮ್ಮ ಸೋಷಿಯಲ್ ಮೀಡಿಯಾ ಖಾತೆಗಳ ಗತಿ ಏನಾಗುತ್ತದೆ ಗೊತ್ತಾ?
ಈಗಾಗಲೇ ಶೀಷಿಕೆಯನ್ನು ನೋಡಿ ಅದ್ರ ಬಗ್ಗೆ ಸ್ವಲ್ಪ ಆಸಕ್ತಿ ಮೂಡುವುದು ಅನಿವಾರ್ಯ
ಇಂದಿನ ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ತುಂಬಾ ಪರಿಣಾಮ ಬೀರಿರುವುದು ನಿಜ.
ನಾವು ಸತ್ತ ಮೇಲೆ ನಮ್ಮ ಫೇಸ್‌ಬುಕ್ (Facebook), ಇನ್ಸ್ಟಾಗ್ರಾಮ್ (Instagram) ಅಥವಾ ಟ್ವಿಟರ್ ಖಾತೆ ಏನಾಗುತ್ತದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.
ಈಗಾಗಲೇ ಶೀಷಿಕೆಯನ್ನು ನೋಡಿ ಅದ್ರ ಬಗ್ಗೆ ಸ್ವಲ್ಪ ಆಸಕ್ತಿ ಮೂಡುವುದು ಅನಿವಾರ್ಯ. ಅಲ್ಲದೆ ಈ ರೀತಿಯ ಪ್ರಶ್ನೆ ಪ್ರತಿಯೊಬ್ಬರಲ್ಲೂ ಮೂಡಿರಬಹುದು. ಮರಣದ ನಂತರ ನಮ್ಮ ಸಾಮಾಜಿಕ ಮಾಧ್ಯಮದಲ್ಲಿರುವ (Social Media) ಖಾತೆಗಳು ಏನಾಗುತ್ತವೆ ಎಂಬ ಪ್ರಶ್ನೆ ಹುಟ್ಟಿರಬಹುದು. ಇಂದಿನ ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ತುಂಬಾ ಪರಿಣಾಮ ಬೀರಿರುವುದು ನಿಜ. ಹೆಚ್ಚಿನ ಜನರಲ್ಲಿ ಕನಿಷ್ಠ ಯಾವುದಾದರೂ ಒಂದು ರೀತಿಯ ಸಾಮಾಜಿಕ ಜಾಲತಾಣದ ಖಾತೆ ಇದ್ದೇ ಇರುತ್ತದೆ. ಆದರೆ ನಿಮ್ಮ ಸಾವಿನ ಬಳಿಕ ಈ ಖಾತೆ ಏನಾಗುವುದು ಎಂದು ನಿಮಗೆ ತಿಳಿದಿದೆಯಾ?. ನಾವು ಸತ್ತ ಮೇಲೆ ನಮ್ಮ ಫೇಸ್‌ಬುಕ್ (Facebook), ಇನ್ಸ್ಟಾಗ್ರಾಮ್ (Instagram) ಅಥವಾ ಟ್ವಿಟರ್ ಖಾತೆ ಏನಾಗುತ್ತದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.
Surveyಫೇಸ್‌ಬುಕ್ ಖಾತೆ (Facebook Account)
ವಿವಿಧ ರೀತಿಯ ಸಾಮಾಜಿಕ ಜಾಲತಾಣಗಳು ಅದರದ್ದೇ ಆಗಿರುವ ಕೆಲವೊಂದು ಖಾಸಗಿ ನಿಯಮಗಳನ್ನು ರೂಪಿಸಿರುತ್ತವೆ. ಫೇಸ್‌ಬುಕ್ ಅಂತೂ ನೀವು ಸತ್ತ ಮೇಲೆ ನಿಮ್ಮ ಖಾತೆಯನ್ನು ಯಾರು ನಿರ್ವಹಿಸಬೇಕೆಂಬುದನ್ನು ಮೊದಲೇ ನಿರ್ಧರಿಸುವುದಕ್ಕೆ ಬಳಕೆದಾರರಿಗೆ ಸೌಲಭ್ಯವನ್ನು ಕೂಡ ಒದಗಿಸಿದೆ. ಆದರೆ ಇದು ಅನೇಕರಿಗೆ ತಿಳಿದಿಲ್ಲವಷ್ಟೆ. ಇದಕ್ಕಾಗಿ ಮೊದಲು ನಿಮ್ಮ ಫೇಸ್‌ಬುಕ್ ಖಾತೆಯ ಸೆಟ್ಟಿಂಗ್‌ಗೆ ಹೋಗಿ ಅಲ್ಲಿ ಸೆಕ್ಯೂರಿಟಿ ಮತ್ತು ಪ್ರೈವಸಿಯಲ್ಲಿ ‘ಲಿಗಸಿ ಕಾಂಟ್ಯಾಕ್ಟ್’ ಕ್ಲಿಕ್ ಮಾಡಬೇಕು. ಅಲ್ಲಿ ನೀವು ಸಾಮಾಜಿಕ ಜಾಲತಾಣದಲ್ಲಿರುವಂತಹ ವ್ಯಕ್ತಿಯನ್ನು ನೀವು ಆಯ್ಕೆ ಮಾಡಿ ಸೆಲೆಕ್ಟ್ ಮಾಡಿದರೆ ನೀವು ಸತ್ತ ನಂತರ ಆ ವ್ಯಕ್ತಿ ನಿಮ್ಮ ಖಾತೆಯನ್ನು ನಿಭಾಯಿಸುವಂತಹವರಾಗಿತ್ತಾರೆ.
ಇನ್ಸ್ಟಾಗ್ರಾಮ್ ಖಾತೆ (Instagram Account)
ಹಾಗೆಯೆ ಫೇಸ್‌ಬುಕ್ ಬಳಕೆದಾರರು ತಮ್ಮ ಖಾತೆಗಳನ್ನು ಅಳಿಸಲು ಅಥವಾ ಅವರ ಸಾವಿನ ನಂತರ ಅವುಗಳನ್ನು ಸ್ಮರಣಾರ್ಥವಾಗಿ ಪರಿವರ್ತಿಸಲು ಆಯ್ಕೆಯನ್ನು ಹೊಂದಿರುತ್ತಾರೆ. ಸ್ಮರಣೀಯವಾದ ಫೇಸ್‌ಬುಕ್ ಪುಟವು ಇತರ ಪುಟಗಳಂತೆ ಕಾಣುತ್ತದೆ. ಆದರೆ ವ್ಯಕ್ತಿಯ ಹೆಸರಿನ ಮುಂದೆ “Remembering” ಎಂಬ ಪದವನ್ನು ನೋಡಬಹುದು. ಫೇಸ್‌ಬುಕ್‌ನಂತೆಯೇ ಇನ್ಸ್ಟಾಗ್ರಾಮ್ ಖಾತೆಯನ್ನು ಸ್ಮರಣೀಯಗೊಳಿಸಬಹುದು ಅಥವಾ ಅಳಿಸಬಹುದಾದ ಆಯ್ಕೆಯನ್ನು ಹೊಂದಿದೆ. ಆದರೆ ಖಾತೆಯನ್ನು ಸ್ಮರಣಾರ್ಥವಾಗಿಸಲು,ಜನರು ಮರಣದ ಪುರಾವೆಯೊಂದಿಗೆ ಇನ್ಸ್ಟಾಗ್ರಾಮ್ ಅನ್ನು ಸಂಪರ್ಕಿಸಬೇಕು.
ಟ್ವಿಟರ್ ಖಾತೆ (Twitter Account)
ವಿಶ್ವದಲ್ಲಿ ಮತ್ತೊಂದು ಜನಪ್ರಿಯ ಸಾಮಾಜಿಕ ಜಾಲತಾಣವೆಂದರೆ ಟ್ವಿಟರ್. ಸಾವಿನ ಬಳಿಕ ಖಾತೆ ಯಾರು ಮುಂದುವರಿಸಿಕೊಂಡು ಹೋಗಬಹುದು ಎನ್ನುವ ಬಗ್ಗೆ ಯಾವುದೇ ನಿಯಮವಿಲ್ಲ. ಆದರೆ ಮೃತನ ಕುಟುಂಬದವರು ಖಾತೆ ಮುಚ್ಚಬೇಕೆಂದು ಟ್ವಿಟರ್ಗೆ ಮನವಿ ಮಾಡಿಕೊಳ್ಳುವ ಅವಕಾಶವಿದೆ. ಖಾತೆದಾರನ ಕುಟುಂಬದವರು ಎಂದು ದೃಢಪಟ್ಟ ಬಳಿಕವಷ್ಟೇ ಆ ಖಾತೆಯ ಪೋಸ್ಟ್, ಫೋಟೋ ಮತ್ತು ಖಾತೆ ತೆಗೆದುಹಾಕಲಾಗುವುದು. ಮರಣಪ್ರಮಾಣ ಪತ್ರ ಸಲ್ಲಿಸುವುದು ಅತೀ ಅಗತ್ಯ.
ಜಿ- ಮೇಲ್ ಖಾತೆ (Gmail Account)
ಜಿ-ಮೇಲ್‌ನಲ್ಲಿ ಸಹ ಖಾತೆಯನ್ನು ನಿಷ್ಕ್ರಿಯ ಮಾಡುವ ಅವಕಾಶಗಳನ್ನು ಗೂಗಲ್ ನೀಡಿದ್ದು ಅದಕ್ಕಾಗಿ ‘ಪ್ರಿ ಸೆಲೆಕ್ಟೆಡ್ ಪೀರಿಡ್’ ಆಯ್ಕೆ ಮತ್ತು ಖಾತೆ ಡಿಆಕ್ಟಿವ್ ಮಾಡಲು ಕುಟುಂಬ ಸದಸ್ಯರಿಗೆ ಆಕ್ಸಸ್ ನೀಡುವ ಆಯ್ಕೆಗಳನ್ನು ನೀಡಿದೆ. ಬಳಕೆದಾರರು ಪ್ರಿ ಸೆಲೆಕ್ಟೆಡ್ ಪೀರಿಡ್ ಆಯ್ಕೆಯ ಡಿಆಕ್ಟಿವ್ ಮಾಡುವ ಅವಕಾಶ ಇದೆ. ಬಳಕೆದಾರ ಇಲ್ಲವಾದಾಗ ಅವರ ಕುಟುಂಬ ಸದಸ್ಯರು ಖಾತೆ ಡಿಆಕ್ಟಿವ್ ಮಾಡಲು ಆಕ್ಸಸ್ ನೀಡುವ ಆಯ್ಕೆ ಗೂಗಲ್ ನೀಡಿದೆ.
ಯೂಟ್ಯೂಬ್ ಖಾತೆ (YouTube Account)
ಯೂ ಟ್ಯೂಬ್ ಖಾತೆದಾರರು ತಮ್ಮ ಭವಿಷ್ಯದ ಬಗ್ಗೆ ನಿರ್ಧರಿಸಲು ಅವಕಾಶ ನೀಡಿದೆ. ಯೂ ಟ್ಯೂಬ್ನಲ್ಲಿ ಹಣ ಸಂಪಾದನೆ ಮಾಡುವಂತಹ ಲಕ್ಷಾಂತರ ಮಂದಿಗೆ ಇದು ತುಂಬಾ ಒಳ್ಳೆಯ ಆಯ್ಕೆ. ಸಾವಿನ ಬಳಿಕ ನಿಮ್ಮ ಚಾನೆಲ್ ಅನ್ನು ಯಾರು ನಿರ್ವಹಿಸಬಹುದು ಎನ್ನುವ ಬಗ್ಗೆ ಒಂದು ಕಾನೂನು ಪತ್ರ ಸಲ್ಲಿಸಬೇಕು. ಈ ಆಯ್ಕೆ ಮಾಡದೇ ಇದ್ದರೆ ಕೆಲವು ಸಮಯದ ತನಕ ಯಾವುದೇ ಪ್ರತಿಕ್ರಿಯೆ ಇಲ್ಲದೆ ಇರುವಂತಹ ನಿಮ್ಮ ಖಾತೆಯನ್ನು ಯೂ ಟ್ಯೂಬ್ ಮುಚ್ಚುತ್ತದೆ. ನೀವು ಗೂಗಲ್ನ ಇನ್ ಆ್ಯಕ್ಟಿವ್ ಅಕೌಂಟ್ ಮ್ಯಾನೇಜರ್ ಮೂಲಕ ಒಬ್ಬ ನಂಬಿಕಸ್ಥ ವ್ಯಕ್ತಿಗೆ ಖಾತೆಯ ನಿರ್ವಹಣೆ ನೀಡಬಹುದು.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile
