/var/www/html/wp-shared-data/advanced-cache.php
Amazon Republic Sale Ends Tonight 2026-Smart TV
65 Inch 4K Smart TV: ಪ್ರಸ್ತುತ ಅಮೆಜಾನ್ ಇ ಕಾಮರ್ಸ್ ಆಯೋಜಿಸಿರುವ Amazon Great Republic Day Sale 2026 ಸೇಲ್‌ನಲ್ಲಿ ಸ್ಮಾರ್ಟ್ ಟಿವಿಗಳಿಗೆ ಆಕರ್ಷಕ ರಿಯಾಯಿತಿ ನೀಡುತ್ತಿದೆ. ಅದರಲ್ಲಿಯೂ 50,000 ರೂಗಳ ಒಳಗೆ ಲಭ್ಯವಿರುವ 65 ಇಂಚಿನ ಆಯ್ದ ಸ್ಮಾರ್ಟ್ ಟಿವಿಗಳಿಗೆ ಸಖತ್ ರಿಯಾಯಿತಿ ಲಭ್ಯ ಇದೆ ಜೊತೆಗೆ ಆಯ್ದ ಬ್ಯಾಂಕ್‌ಗಳಿಂದ ಹೆಚ್ಚುವರಿ ಆಫರ್ ಸಹ ಸಿಗಲಿದೆ. ಅಂದಹಾಗೆ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಇನ್ನೇನು ಮುಕ್ತಾಯವಾಗುತ್ತಾ ಬಂದಿದೆ ಹೀಗಾಗಿ ಭರ್ಜರಿ ಆಫರ್‌ನಲ್ಲಿ ಹೊಸ ಸ್ಮಾರ್ಟ್ ಟಿವಿ ಖರೀದಿಸಬೇಕು ಎಂದು ಪ್ಲಾನ್ ಮಾಡಿಕೊಂಡಿರುವ ಗ್ರಾಹಕರಿಗೆ ಇದು ಸುಸಮಯ. ಹಾಗಾದರೇ 50,000 ರೂಗಳ ಒಳಗೆ ಲಭ್ಯವಿರುವ 65 ಇಂಚಿನ ಆಯ್ದ ಸ್ಮಾರ್ಟ್‌ಟಿವಿಗಳ ಕೊಡುಗೆ ಬಗ್ಗೆ ಮುಂದೆ ನೋಡೋಣ.
Also Read: ಗಣರಾಜ್ಯೋತ್ಸವ ಭದ್ರತೆಗೆ AI ಕಣ್ಗಾವಲು! ಅಪರಾಧಿಗಳ ಪತ್ತೆಗೆ ಸ್ಮಾರ್ಟ್ ಗ್ಲಾಸ್ ಧರಿಸಲಿರುವ ಪೊಲೀಸ್ ಸಿಬ್ಬಂದಿ
Vu ಸಂಸ್ಥೆಯ ಈ 65 ಇಂಚಿನ ಸ್ಮಾರ್ಟ್ ಟಿವಿ 4K QLED ಆಗಿದ್ದು ಇದರ ಸ್ಕ್ರೀನ 3840 x 2160 ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಅಲ್ಲದೇ ಈ ಟಿವಿಯು Dolby Atmos ಸಪೋರ್ಟ್ ಜೊತೆಗೆ 88W ಸೌಂಡ್ ವ್ಯವಸ್ಥೆ ಪಡೆದುಕೊಂಡಿದೆ. ಹಾಗೆಯೇ ಇದು Google TV OS ಒಳಗೊಂಡಿದ್ದು 16GB ROM ಹಾಗೂ 2GB RAM ಆಯ್ಕೆಯಲ್ಲಿ ಲಭ್ಯ. ಇದರೊಂದಿಗೆ ActiVoice Remote Control, Voice Assistant ಗಳಂತಹ ಸೌಲಭ್ಯಗಳನ್ನು ಪಡೆದಿದೆ. ಇನ್ನು ಅಮೆಜಾನ್ Great Republic Day Sale ನಲ್ಲಿ ಈ ಟಿವಿಯು 45,999 ರೂಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಗ್ರಾಹಕರು SBI ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 1500 ರೂಗಳ ವರೆಗೂ ಡಿಸ್ಕೌಂಟ್ ಸಿಗಲಿದೆ. ಅಲ್ಲದೇ No Cost EMI ಆಯ್ಕೆಯು ಸಹ ಲಭ್ಯ ಇದೆ.
TCL ಕಂಪನಿಯ ಈ 65 ಇಂಚಿನ ಸ್ಮಾರ್ಟ್ ಟಿವಿಯ ಸ್ಕ್ರೀನ 3840 x 2160 ಪಿಕ್ಸಲ್ ರೆಸಲ್ಯೂಶನ್ ಹೊಂದಿದ್ದು 4K LED ಡಿಸ್‌ಪ್ಲೇ ಪಡೆದಿದೆ. ಅಲ್ಲದೇ ಈ ಟಿವಿಯು Dolby Atmos, Dts-X ಆಯ್ಕೆಯ ಜೊತೆಗೆ 24W ಸೌಂಡ್ ಸೌಲಭ್ಯ ಹೊಂದಿದೆ. ಇದರೊಂದಿಗೆ ಈ ಟಿವಿ 16GB ROM ಹಾಗೂ 2GB RAM ಆಯ್ಕೆ ಪಡೆದಿದ್ದು 64-ಬಿಟ್ ಕ್ವಾಡ್ ಕೋರ್ ಪ್ರೊಸೆಸರ್ ಒಳಗೊಂಡಿದೆ. ಇನ್ನು ಅಮೆಜಾನ್ Great Republic Day Sale ನಲ್ಲಿ ಈ ಟಿವಿಯ ಬೆಲೆ 47,990 ರೂಗಳು ಆಗಿದೆ. ಆಸಕ್ತ ಗ್ರಾಹಕರು SBI ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 5000 ರೂಗಳ ವರೆಗೂ ಡಿಸ್ಕೌಂಟ್ ಪಡೆಯಬಹುದು. ಅಲ್ಲದೇ No Cost EMI ಆಯ್ಕೆಯು ಸಹ ಸಿಗಲಿದೆ.
TOSHIBA ಕಂಪನಿಯ ಈ 65 ಇಂಚಿನ ಸ್ಮಾರ್ಟ್ ಟಿವಿಯ ಸ್ಕ್ರೀನ 3840 x 2160 ಪಿಕ್ಸಲ್ ರೆಸಲ್ಯೂಶನ್ ಹೊಂದಿದ್ದು 4K Ultra HD ಡಿಸ್‌ಪ್ಲೇ ಪಡೆದಿದೆ. ಅಲ್ಲದೇ ಈ ಟಿವಿಯು 49W ಸೌಂಡ್ ಸೌಲಭ್ಯ ಹೊಂದಿರುವ ಜೊತೆಗೆ ಮಲ್ಟಿಪಲ್ ಸೌಂಡ್ ಮೋಡ್ ಆಯ್ಕೆ ಹೊಂದಿದೆ. ಅಂದಹಾಗೆ ಅಮೆಜಾನ್ ಆಯೋಜಿಸಿರುವ Great Republic Day Sale ನಲ್ಲಿ ಈ ಸ್ಮಾರ್ಟ್ ಟಿವಿಯ ಬೆಲೆ 49,999 ರೂಗಳು ಆಗಿದೆ. ಆಸಕ್ತ ಗ್ರಾಹಕರು SBI ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 2000 ರೂಗಳ ವರೆಗೂ ರಿಯಾಯಿತಿ ಪಡೆಯಬಹುದು. ಇದರೊಂದಿಗೆ No Cost EMI ಆಯ್ಕೆಯು ಸಹ ಖರೀದಿದಾರರಿಗೆ ಸಿಗಲಿದೆ.
Hisense 65 ಇಂಚಿನ ಟಿವಿಯು 4K Ultra HD ಡಿಸ್‌ಪ್ಲೇ ಜೊತೆಗೆ 3840 x 2160 ಪಿಕ್ಸಲ್ ರೆಸಲ್ಯೂಶನ್ ಸ್ಕ್ರೀನ್ ಪಡೆದುಕೊಂಡಿದೆ. ಹಾಗೆಯೇ ಈ ಟಿವಿಯು 48W ಸೌಂಡ್ ಸೌಲಭ್ಯ ಹೊಂದಿರುವ ಜೊತೆಗೆ Dolby Atoms ಸಪೋರ್ಟ್ ಕೂಡಾ ಒಳಗೊಂಡಿದೆ. ಇನ್ನು ಅಮೆಜಾನ್‌ನ Great Republic Day Sale ನಲ್ಲಿ ಈ ಸ್ಮಾರ್ಟ್ ಟಿವಿಯ ಬೆಲೆ 47,999 ರೂಗಳು ಆಗಿದೆ. ಆಸಕ್ತ ಗ್ರಾಹಕರು SBI ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 1500 ರೂಗಳ ವರೆಗೂ ರಿಯಾಯಿತಿ ಪಡೆಯಬಹುದು. ಇದರೊಂದಿಗೆ No Cost EMI ಆಯ್ಕೆಯು ಸಹ ಖರೀದಿದಾರರಿಗೆ ಸಿಗಲಿದೆ.
Kodak 65 ಇಂಚಿನ ಟಿವಿಯು Ultra HD (4K) ಡಿಸ್‌ಪ್ಲೇ ಜೊತೆಗೆ 3840 x 2160 ಪಿಕ್ಸಲ್ ರೆಸಲ್ಯೂಶನ್ ಸ್ಕ್ರೀನ್ ಪಡೆದುಕೊಂಡಿದೆ. ಹಾಗೆಯೇ ಈ ಟಿವಿಯು 60 W ಸೌಂಡ್ ಸೌಲಭ್ಯ ಹೊಂದಿರುವ ಜೊತೆಗೆ Dolby Atoms ಸಪೋರ್ಟ್ ಸಹ ಒಳಗೊಂಡಿದೆ. ಇನ್ನು ಅಮೆಜಾನ್‌ನ Great Republic Day Sale ನಲ್ಲಿ ಈ ಸ್ಮಾರ್ಟ್ ಟಿವಿಯ ಬೆಲೆ 40,999 ರೂಗಳು ಆಗಿದೆ. ಆಸಕ್ತ ಗ್ರಾಹಕರು SBI ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 1500 ರೂಗಳ ವರೆಗೂ ರಿಯಾಯಿತಿ ಪಡೆಯಬಹುದು. ಇದರೊಂದಿಗೆ No Cost EMI ಆಯ್ಕೆಯು ಸಹ ಖರೀದಿದಾರರಿಗೆ ಸಿಗಲಿದೆ.