ವೊಡಾಫೋನ್ ಐಡಿಯಾ 547GB ಡೇಟಾ & ಅನ್ಲಿಮಿಟೆಡ್ ಕರೆಯೊಂದಿಗೆ ಧೀರ್ಘಕಾಲ ವ್ಯಾಲಿಡಿಟಿಯ ಪ್ಲಾನನ್ನು ತಂದಿದೆ.

ವೊಡಾಫೋನ್ ಐಡಿಯಾ 547GB ಡೇಟಾ & ಅನ್ಲಿಮಿಟೆಡ್ ಕರೆಯೊಂದಿಗೆ ಧೀರ್ಘಕಾಲ ವ್ಯಾಲಿಡಿಟಿಯ ಪ್ಲಾನನ್ನು ತಂದಿದೆ.
HIGHLIGHTS

ಈ ಹೊಸ ಪ್ಲಾನ್ ದಿನಕ್ಕೆ 1.5GB ಡೇಟಾ ಹಾಗು ಅನ್ಲಿಮಿಟೆಡ್ ಕರೆಯೊಂದಿಗೆ 365 ದಿನಗಳ ವ್ಯಾಲಿಡಿಟಿ ಹೊಂದಿದೆ.

ಭಾರತದಲ್ಲಿ ಟೆಲಿಕಾಂ ಕಂಪೆನಿಯ ವೊಡಾಫೋನ್ ಐಡಿಯು ಹೊಸ ಪ್ರಿಪೇಡ್ ಯೋಜನೆಯನ್ನು ಧೀರ್ಘಕಾಲ ಅವಧಿಯೊಂದಿಗೆ ಜಾರಿಗೆ ತಂದಿದೆ. ಈ ಯೋಜನೆಯ ಬೆಲೆ 1999 ರೂಗಳಾಗಿದ್ದು ಬಳಕೆದಾರರಿಗೆ ದಿನಕ್ಕೆ 1.5GB ಡೇಟಾವನ್ನು ನೀಡಲಾಗುವುದು. ಈ ಯೋಜನೆಯ ಮಾನ್ಯತೆಯು 365 ದಿನಗಳ ಧೀರ್ಘಕಾಲ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್ ಸದ್ಯಕ್ಕೆ ಕೇರಳ ಪ್ರದೇಶಕ್ಕೆ ಮಾತ್ರ ಮಾನ್ಯವಾಗಿದ್ದು ಡೇಟಾ ಹೊರತುಪಡಿಸಿ ಬಳಕೆದಾರರಿಗೆ ಹಲವು ಇತರ ಸೌಲಭ್ಯಗಳನ್ನು ನೀಡಲಾಗುತ್ತದೆ. ಅಲ್ಲದೆ ಈ ಹೊಸ ಪ್ಲಾನಲ್ಲಿ ಬಳಕೆದಾರರಿಗೆ ಉಚಿತ SMS ಸೌಲಭ್ಯವು ನೀಡುತ್ತಿದೆ.

ಈ ಯೋಜನೆಯು ಕೇರಳ ಪ್ರದೇಶಕ್ಕೆ ಮಾತ್ರ ಪರಿಚಯಿಸಲ್ಪಟ್ಟಿದೆ. ಈ ಯೋಜನೆಯಲ್ಲಿ ದೈನಂದಿನ ಬಳಕೆದಾರರಿಗೆ 1.5GB ಡೇಟಾವನ್ನು ನೀಡಲಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ಬಳಕೆದಾರರಿಗೆ 547.5GB ಡೇಟಾವನ್ನು ನೀಡಲಾಗುವುದು. ಅಲ್ಲದೆ ದಿನಕ್ಕೆ 100 SMS ಗಳನ್ನು ನೀಡಲಾಗುವುದು. ಇದಲ್ಲದೆ ಅನಿಯಮಿತ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳನ್ನು ಬಳಕೆದಾರರಿಗೆ ನೀಡಲಾಗುವುದು.

ಈ ಯೋಜನೆಯಲ್ಲಿ ಮೊದಲು ಬಳಕೆದಾರರಿಗೆ 180 ದಿನಗಳು ಸಿಂಧುತ್ವ ಹೊಂದಿರುವ 125 GB ಡೇಟಾವನ್ನು ಪಡೆಯುತ್ತದೆ. ಇದು ದಿನಕ್ಕೆ ಡೇಟಾವನ್ನು ಪಡೆಯುವುದಿಲ್ಲ. ಇದಲ್ಲದೆ ಅನಿಯಮಿತ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳನ್ನು ನೀಡಲಾಗುವುದು. ಅಲ್ಲದೆ ದಿನಕ್ಕೆ 100 SMS ಗಳನ್ನು ನೀಡಲಾಗುವುದು. ಬಳಕೆದಾರರು ಜಿಯೋ ಅಪ್ಲಿಕೇಶನ್ಗಳ ಉಚಿತ ಚಂದಾವನ್ನು ಪಡೆಯುತ್ತಾರೆ.

 

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo