ಪ್ರೇಮಿಗಳ ದಿನಕ್ಕಾಗಿ Vi ಭರ್ಜರಿ ಆಫರ್! 5GB ಹೆಚ್ಚುವರಿ ಡೇಟಾದೊಂದಿಗೆ ರೂ 5000 ಮೌಲ್ಯದ ಗಿಫ್ಟ್ ವೋಚರ್‌ ಉಚಿತ!

ಪ್ರೇಮಿಗಳ ದಿನಕ್ಕಾಗಿ Vi ಭರ್ಜರಿ ಆಫರ್! 5GB ಹೆಚ್ಚುವರಿ ಡೇಟಾದೊಂದಿಗೆ ರೂ 5000 ಮೌಲ್ಯದ ಗಿಫ್ಟ್ ವೋಚರ್‌ ಉಚಿತ!
HIGHLIGHTS

Vi ಅಪ್ಲಿಕೇಶನ್‌ನಲ್ಲಿ ಲಿಸ್ಟ್ ಮಾಡಲಾದ ಈ ಹೊಸ ಯೋಜನೆಗಳೊಂದಿಗೆ ರೀಚಾರ್ಜ್ ಮೇಲೆ ಆಫರ್ ಗಳು ಲಭ್ಯವಿದೆ.

ಈ ವೊಡಾಫೋನ್ ಐಡಿಯಾದ ರೀಚಾರ್ಜ್ ಯೋಜನೆಗಳನ್ನು ಖರೀದಿಸುವ ಗ್ರಾಹಕರು 5GB ವರೆಗೆ ಹೆಚ್ಚುವರಿ ಡೇಟಾವನ್ನು ಪಡೆಯಬಹುದು.

ವ್ಯಾಲೆಂಟೈನ್ಸ್ ಡೇಗಾಗಿ ಕಂಪನಿಯು ವಿಶೇಷ ಸ್ಪರ್ಧೆಯನ್ನು ಸಹ ಯೋಜಿಸಿದೆ.

Vi Love Tunes: ವ್ಯಾಲೆಂಟೈನ್ಸ್ ಡೇಗಾಗಿ ವೊಡಾಫೋನ್ ಐಡಿಯಾ ತನ್ನ ಗ್ರಾಹಕರಿಗೆ ಸ್ಪೆಷಲ್ ಗಿಫ್ಟ್ ಅನ್ನು ನೀಡಿದೆ. ಕಂಪನಿಯು ತನ್ನ ವ್ಯಾಲೆಂಟೈನ್ಸ್ ಡೇ ಆಫರ್ ಅನ್ನು ಘೋಷಿಸಿದ್ದು ಅದರ ಭಾಗವಾಗಿ ಗ್ರಾಹಕರು ತಮ್ಮ ಮೊಬೈಲ್ ರೀಚಾರ್ಜ್ ಮಾಡುವಾಗ ಹೆಚ್ಚುವರಿ ಡೇಟಾವನ್ನು ಸಹ ಪಡೆಯಬಹುದಾಗಿದೆ. Vi ಯಾವುದೇ ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಾರಂಭಿಸಿಲ್ಲ. ಬದಲಿಗೆ ಈ ಆಫರ್ ಅಸ್ತಿತ್ವದಲ್ಲಿರುವ ಯೋಜನೆಗಳಿಗೆ ಅನ್ವಯವಾಗಲಿದೆ. ಹೆಚ್ಚುವರಿ 5GB ಡೇಟಾವನ್ನು ಪಡೆಯಬಹುದು. ನೀವು ರೂ.5000 ವರೆಗಿನ ಗಿಫ್ಟ್ ಗಳನ್ನು ಸಹ ಗೆಲ್ಲಬಹುದು. ಈ ವ್ಯಾಲೆಂಟೈನ್ಸ್ ಡೇ ವಿಶೇಷ ಆಫರ್ ಗಳ ಫುಲ್‌ ಡಿಟೈಲ್ಸ್‌ ಇಲ್ಲಿದೆ ನೋಡಿ.

ವೊಡಾಫೋನ್ ಐಡಿಯಾ (Vi) ಯೋಜನೆ 

ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ (Vi) ಈ ಪ್ರೇಮಿಗಳ ದಿನದಂದು ವಿಶೇಷ ಆಫರ್‌ಗಳನ್ನು ಪ್ರಾರಂಭಿಸಿದೆ. ಈ ಆಫರ್‌ಗಳ ಅಡಿಯಲ್ಲಿ ಗ್ರಾಹಕರು ರೀಚಾರ್ಜ್ ಯೋಜನೆಗಳಲ್ಲಿ 5GB ವರೆಗೆ ಹೆಚ್ಚುವರಿ ಡೇಟಾವನ್ನು ಪಡೆಯಬಹುದು. Vi app ಮೂಲಕ ಮಾಡಿದ Vodafone Idea ರೀಚಾರ್ಜ್‌ಗಳಿಗೆ ಮಾತ್ರ ಈ ಆಫರ್‌ ಅನ್ವಯಿಸುತ್ತದೆ. ಅಂದರೆ ಫೆಬ್ರವರಿ 14 ರಿಂದ ನೀವು Vi ಅಪ್ಲಿಕೇಶನ್ ಬಳಸಿ ಲಿಸ್ಟ್ ಮಾಡಲಾದ ಯೋಜನೆಗಳಲ್ಲಿ ಒಂದನ್ನು ರೀಚಾರ್ಜ್ ಮಾಡಿದರೆ ನೀವು ಹೆಚ್ಚುವರಿ 5GB ಡೇಟಾವನ್ನು ಪಡೆಯುತ್ತೀರಿ. Vi Love Tunes ಕಾಂಟೆಸ್ಟ್ ಎಂಬ ವಿಶೇಷ ಸ್ಪರ್ಧೆಯನ್ನು ಸಹ ಕಂಪನಿಯು ಘೋಷಿಸಿದ್ದು ಅದೃಷ್ಟಶಾಲಿ ಸ್ಪರ್ಧಿಗಳು ರೂ.5000 ವರೆಗಿನ ಮೌಲ್ಯದ ಗಿಫ್ಟ್ ವೋಚರ್‌ಗಳನ್ನು ಸಹ ಪಡೆಯಬಹುದು.

ವ್ಯಾಲೆಂಟೈನ್ಸ್ ಡೇಗಾಗಿ Vi ವಿಶೇಷ ಆಫರ್‌

ವ್ಯಾಲೆಂಟೈನ್ಸ್ ಡೇಗಾಗಿ Vi ವಿಶೇಷ ಆಫರ್‌ ಅನ್ನು ಪ್ರಾರಂಭಿಸಿದ್ದು ಫೆಬ್ರವರಿ 14 ರೊಳಗೆ ರೂ 299 ಅಥವಾ ಅದಕ್ಕಿಂತ ಹೆಚ್ಚಿನ ವೆಚ್ಚದ ಯೋಜನೆಯೊಂದಿಗೆ ಬಳಕೆದಾರರು ರೀಚಾರ್ಜ್ ಮಾಡಿದರೆ 5GB ವರೆಗೆ ಹೆಚ್ಚುವರಿ ಡೇಟಾವನ್ನು ಪಡೆಯಬಹುದು. ಈ 5GB ಹೆಚ್ಚುವರಿ ಡೇಟಾ ನಿಮಗೆ 28 ದಿನಗಳವರೆಗೆ ಸಿಗಲಿದೆ. ಹೆಚ್ಚುವರಿಯಾಗಿ ನೀವು ರೂ 199 ಮತ್ತು ರೂ 299 ರವರೆಗಿನ ಪ್ಯಾಕ್‌ನೊಂದಿಗೆ ರೀಚಾರ್ಜ್ ಮಾಡಿದರೆ ನೀವು 2GB ವರೆಗಿನ ಹೆಚ್ಚುವರಿ ಡೇಟಾದಿಂದ ಪ್ರಯೋಜನ ಪಡೆಯಬಹುದು ಅದು ಸಹ 28 ದಿನಗಳು ವ್ಯಾಲಿಡಿಟಿಯನ್ನು ಹೊಂದಿರುತ್ತದೆ.

ವ್ಯಾಲೆಂಟೈನ್ಸ್ ಡೇ ಸ್ಪರ್ಧೆಯನ್ನು ಕಂಪನಿ ಯೋಜಿಸಿದ್ದು Vi Love Tunes ಸ್ಪರ್ಧೆಯಲ್ಲಿ ಭಾಗವಹಿಸುವವರು 5,000 ರೂಪಾಯಿವರೆಗಿನ ಗಿಫ್ಟ್ ಕಾರ್ಡ್‌ಗಳನ್ನು ಕಂಪನಿ ಕಡೆಯಿಂದ ಗೆಲ್ಲುವ ಅವಕಾಶವನ್ನು ಹೊಂದಿರುತ್ತಾರೆ. ಹೆಚ್ಚಿನ ವಿವರಗಳಿಗಾಗಿ ನೀವು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಕಂಪನಿಯ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿಯೂ ಮಾಹಿತಿಯನ್ನು ಒದಗಿಸಲಾಗಿದ್ದು ಪ್ರೇಮಿಗಳ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ನೀವು ಈ ಆಫರ್‌ಗಳ ರೀಚಾರ್ಜ್ ಗಿಫ್ಟ್ ಅನ್ನು ಸಹ ನೀಡಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo