ದೇಶದ ತೃತೀಯ ಟೆಲಿಕಾಂ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ವೊಡಾಫೋನ್ ಐಡಿಯಾ (Vi) ತನ್ನ ಗ್ರಾಹಕರಿಗೆ ಮನರಂಜನೆ ಮತ್ತು ಡೇಟಾ ಪ್ರಯೋಜನಗಳನ್ನು ಒಂದೇ ರೀಚಾರ್ಜ್‌ನಲ್ಲಿ ನೀಡುವ ಉದ್ದೇಶದಿಂದ ಹೊಸ ಇದೀಗ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದೆ. ಅದುವೇ ವಿ ಟೆಲಿಕಾಂನ 200 ರೂ.ಗಳ Vi Movies ಮತ್ತು TV ಪ್ರಿಪೇಯ್ಡ್ ಪ್ಯಾಕ್ ಆಗಿದೆ. ಗ್ರಾಹಕರು ಪ್ರತ್ಯೇಕವಾಗಿ ಓಟಿಟಿ ಚಂದಾದಾರಿಕೆ ಮತ್ತು ಡೇಟಾ ಪ್ಯಾಕ್‌ಗಳನ್ನು ಖರೀದಿಸುವ ಅಗತ್ಯವಿಲ್ಲ ಎನ್ನಲಾಗಿದೆ. ಸಂಸ್ಥೆಯ ಈ ಹೊಸ ಯೋಜನೆಯು ಎಲ್ಲವನ್ನೂ ಒಂದೇ ಪ್ಯಾಕ್‌ನಲ್ಲಿ ಒದಗಿಸುತ್ತದೆ. ಹಾಗಾದರೆ ವಿ ಟೆಲಿಕಾಂನ ಹೊಸ ವಿ 200 ರೂ.ಗಳ ರೀಚಾರ್ಜ್ ಯೋಜನೆಯ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Xiaomi ಕಂಪನಿಯ ಈ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ದಿಢೀರ್ ಹೆಚ್ಚಳ!
ವೊಡಾಫೋನ್ ಐಡಿಯಾ ಟೆಲಿಕಾಂನ ಈ ಹೊಸ ಪ್ಯಾಕ್‌ನಲ್ಲಿ 20 ಕ್ಕೂ ಹೆಚ್ಚು ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ ಸಿಗಲಿದೆ. ಅಲ್ಲದೇ 200 ಕ್ಕೂ ಅಧಿಕ ಲೈವ್ ಟಿವಿ ಚಾನೆಲ್‌ಗಳು ಹಾಗೂ 30GB ಹೈ-ಸ್ಪೀಡ್ ಡೇಟಾ ದೊರೆಯಲಿದೆ. ಇದಲ್ಲದೆ ಅರ್ಹ ಪ್ರದೇಶಗಳಲ್ಲಿ ಬಳಕೆದಾರರು ಅನಿಯಮಿತ 5G ಸೇವೆಯ ಪ್ರಯೋಜನವನ್ನೂ ಪಡೆಯಬಹುದು. ಹೀಗಾಗಿ ಸಿನಿಮಾ, ವೆಬ್ ಸಿರೀಸ್, ಲೈವ್ ಟಿವಿ ಹಾಗೂ ವೇಗದ ಇಂಟರ್‌ನೆಟ್ ಅನ್ನು ಒಂದೇ ರೀಚಾರ್ಜ್ ಮೂಲಕ ಬಳಸುವ ಅವಕಾಶ ಈ ಯೋಜನೆ ನೀಡುತ್ತದೆ.
ವಿ ಟೆಲಿಕಾಂನ 200 ರೂ.ಗಳ Vi Movies ಮತ್ತು TV ಪ್ರಿಪೇಯ್ಡ್ ಪ್ಯಾಕ್ 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಆಸಕ್ತ ಗ್ರಾಹಕರು ವಿ ಆಪ್ ಸೇರಿದಂತೆ ಎಲ್ಲಾ ಪ್ರಮುಖ ರೀಚಾರ್ಜ್ ವೇದಿಕೆಗಳ ಮೂಲಕ ರೀಚಾರ್ಜ್ ಮಾಡಬಹುದು. ಕಡಿಮೆ ಬೆಲೆಯಲ್ಲಿ ಡೇಟಾ ಮತ್ತು ಮನರಂಜನಾ ಸೇವೆಗಳನ್ನು ಒಂದೇ ಪ್ಯಾಕ್‌ನಲ್ಲಿ ಪಡೆಯಲು ಬಯಸುವ ಗ್ರಾಹಕರಿಗೆ ಇದು ಉತ್ತಮ ಆಯ್ಕೆಯಾಗಬಹುದು.
ಈ ಹೊಸ Vi Movies & TV ಪ್ಯಾಕ್‌ನ ಪ್ರಮುಖ ವಿಶೇಷತೆ ಎಂದರೆ ಒಂದೇ ರೀಚಾರ್ಜ್‌ನಲ್ಲಿ ಹಲವು ಮನರಂಜನಾ ಸೇವೆಗಳನ್ನು ಪಡೆಯುವ ಅನುಕೂಲ. ಸಾಮಾನ್ಯವಾಗಿ ಬಳಕೆದಾರರು ಪ್ರತ್ಯೇಕವಾಗಿ ಹಲವು OTT ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರರಾಗಬೇಕಾಗುತ್ತದೆ. ಈ ಪ್ಯಾಕ್‌ನಲ್ಲಿ JioHotstar, ಸೋನಿ ಲೈವ್, ಜೀ5, Lionsgate Play, ShemarooMe, ManoramaMAX, ಫ್ಯಾನ್ ಕೋಡ್, ಫ್ಲೇಫಿಕ್ಸ್, Klikk, Atrangii, Chaupal, OTTplay Live, ಪಾಕೇಟ್ ಫಿಲ್ಮ್ಸ್, YuppTV, Addatimes, Kanccha Lannka, TimesPlay ಮತ್ತು NextGTV ಸೇರಿದಂತೆ ಒಟ್ಟು 20 ಕ್ಕೂ ಹೆಚ್ಚು OTT ಪ್ಲಾಟ್‌ಫಾರ್ಮ್‌ಗಳ ಸೇವೆಗಳು ಲಭ್ಯವಾಗಲಿವೆ.
ವೊಡಾಫೋನ್ ಐಡಿಯಾ ಕಂಪನಿಯ ಈ ಹೊಸ ಪ್ಲಾನಿನ ಇನ್ನೊಂದು ಪ್ರಮುಖ ಅಂಶವೆಂದರೆ ಈ ಸೇವೆಗಳು 16 ಭಾರತೀಯ ಭಾಷೆಗಳಲ್ಲಿ ಲಭ್ಯವಿರುತ್ತವೆ. ಹೀಗಾಗಿ ದೇಶದ ವಿವಿಧ ರಾಜ್ಯಗಳ ಬಳಕೆದಾರರು ತಮ್ಮ ಇಷ್ಟದ ಭಾಷೆಯಲ್ಲಿ ಮನರಂಜನಾ ವಿಷಯವನ್ನು ಸುಲಭವಾಗಿ ವೀಕ್ಷಿಸಬಹುದು.