OnePlus Nord 6 5G
ಒನ್‌ಪ್ಲಸ್ ಕಂಪನಿಯ ಜನಪ್ರಿಯ ಮೊಬೈಲ್‌ಗಳ ಪೈಕಿ ಒಂದಾದ OnePlus Nord 6 ಸ್ಮಾರ್ಟ್‌ಫೋನ್ ಇದೀಗ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಸಖತ್ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳು ಹಾಗೂ ಎಕ್ಸ್‌ಚೇಂಜ್ ಆಫರ್ ಮೂಲಕ ಈ ಮೊಬೈಲ್ ಖರೀದಿಸಿದರೆ ಇನ್ನಷ್ಟು ಡಿಸ್ಕೌಂಟ್ ಸಹ ಪಡೆಯಲು ಅವಕಾಶ ಇದೆ. ಕಂಪನಿಯ ಈ ಮೊಬೈಲ್ ಕ್ವಾಲ್ಕಮ್ Snapdragon 8s Gen 4 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಅಲ್ಲದೇ ಈ ಮೊಬೈಲ್ 9,000mAh ಬ್ಯಾಟರಿ ಸಪೋರ್ಟ್ ಸಹ ಪಡೆದಿದೆ. ಈ ಫೋನ್ ಫ್ರೆಶ್ ಮಿಂಟ್, ಪಿಚ್ ಬ್ಲಾಕ್ ಮತ್ತು ಕ್ವಿಕ್ ಸಿಲ್ವರ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯ. ಹಾಗಾದರೆ ಅಮೆಜಾನ್ ಇ ಕಾಮರ್ಸ್ ವೆಬ್‌ಸೈಟ್‌ನಲ್ಲಿ ಒನ್‌ಪ್ಲಸ್ ನಾರ್ಡ್ 6 ಮೊಬೈಲ್‌ಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಭಾರತದಲ್ಲಿ Lava Bold N4 Pro 5G ಬಿಡುಗಡೆ! ಬಿಗ್ ಬ್ಯಾಟರಿ ಜೊತೆಗೆ ಡ್ಯುಯಲ್ ಕ್ಯಾಮೆರಾ ಸೌಲಭ್ಯ
ಆಕರ್ಷಕ ಫೀಚರ್ಸ್ ಮೂಲಕ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿರುವ ಒನ್‌ಪ್ಲಸ್ ನಾರ್ಡ್ 6 ಮೊಬೈಲ್ ಸದ್ಯ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಭರ್ಜರಿ ರಿಯಾಯಿತಿ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್ 8GB + 256GB ಸ್ಟೋರೇಜ್ ವೇರಿಯಂಟ್ ಬೆಲೆ 52,999 ರೂ.ಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಮೊಬೈಲ್ 46,999 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಅಂದಹಾಗೆ ಈ ಫೋನ್ ಫ್ರೆಶ್ ಮಿಂಟ್, ಪಿಚ್ ಬ್ಲಾಕ್ ಮತ್ತು ಕ್ವಿಕ್ ಸಿಲ್ವರ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯ. ಇನ್ನು ಆಸಕ್ತ ಗ್ರಾಹಕರು ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಖರೀದಿಸಬಹುದಾಗಿದೆ.
ಒನ್‌ಪ್ಲಸ್ ನಾರ್ಡ್ 6 ಮೊಬೈಲ್ 6.78 ಇಂಚಿನ 1.5k ಸೂಪರ್ AMOLED ಡಿಸ್‌ಪ್ಲೇಯ ಹೊಂದಿದ್ದು, ಇದು 1,272×2,772 ಪಿಕ್ಸೆಲ್ ರೆಸಲ್ಯೂಶನ್ ಸಪೋರ್ಟ್ ಪಡೆದಿದೆ. ಇದರೊಂದಿಗೆ 165Hz ರಿಫ್ರೆಶ್ ರೇಟ್ ಸೌಲಭ್ಯದ ಜೊತೆಗೆ 1800 nits ಬ್ರೈಟ್ನೆಸ್ ಪಡೆದುಕೊಂಡಿದೆ. ಹಾಗೆಯೇ ಇದು ಕ್ವಾಲ್ಕಮ್ Snapdragon 8s Gen 4 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಈ ಫೋನ್ IP66, IP68, IP69 ಮತ್ತು IP69K ರೇಟಿಂಗ್ ಸೌಲಭ್ಯ ಬೆಂಬಲಿಸುತ್ತದೆ.
ಒನ್‌ಪ್ಲಸ್ ನಾರ್ಡ್ 6 ಮೊಬೈಲ್ ಹಿಂಬದಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೋನಿ LYT-600 CMOS ಸೆನ್ಸಾರ್ ಅನ್ನು ಹೊಂದಿದ್ದು ಸೆಕೆಂಡರಿ ಕ್ಯಾಮೆರಾವು 8MP ಅಲ್ಟ್ರಾ ವೈಡ್ ಲೆನ್ಸ್ ಸೌಲಭ್ಯದಲ್ಲಿ ಇದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್ 32MP ಕ್ಯಾಮೆರಾ ರಚನೆ ಒಳಗೊಂಡಿದೆ. ಹಾಗೆಯೇ ಈ ಫೋನ್ 9,000mAh ಸಿಲಿಕಾನ್ ಕಾರ್ಬನ್ ಬ್ಯಾಟರಿ ಸೌಲಭ್ಯ ಹೊಂದಿದೆ. ಇದಕ್ಕೆ ಪೂರಕವಾಗಿ 80W SuperVOOC ಚಾರ್ಜಿಂಗ್ ಜೊತೆಗೆ 27W ವೈರ್ಡ್ ರಿವರ್ಸ್ ಚಾರ್ಜಿಂಗ್ ಸಪೋರ್ಟ್ ಪಡೆದಿದೆ.