ಜನಪ್ರಿಯ Jio ತನ್ನ 10 ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಭಾಗವಾಗಿ ಜಿಯೋಹೋಮ್ (JioHome) ಗ್ರಾಹಕರಿಗೆ ಹೊಸ ಕೊಡುಗೆಯೊಂದನ್ನು ಘೋಷಿಸಿದೆ. ಜಿಯೋಹೋಮ್‌ನ 30 Mbps ಮತ್ತು 100 Mbps ಯೋಜನೆಗಳನ್ನು ಹೊಂದಿರುವ ಗ್ರಾಹಕರು ಈಗ ಅಮೆಜಾನ್ ಪ್ರೈಮ್ ಲೈಟ್ (Amazon Prime Lite) ಅನ್ನು ಒಂದು ವರ್ಷದವರೆಗೆ ಉಚಿತವಾಗಿ ಪಡೆಯಲಿದ್ದಾರೆ. ಈ ಪ್ರಯೋಜನವನ್ನು ಜಿಯೋಹೋಮ್‌ನ 3-ಇನ್-1( ಟಿವಿ + ಒಟಿಟಿ + ವೈ-ಫೈ) ಯೋಜನೆಯ ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ನೀಡಲಾಗುವುದು. ಜಿಯೋ 10 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಈ ಹೊಸ ಕೊಡುಗೆಯನ್ನು ನೀಡಲಾಗುತ್ತಿದೆ. ಈ ಕೊಡುಗೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಅಮೆಜಾನ್‌ನಲ್ಲಿ OnePlus Nord 6 ಮೊಬೈಲ್‌ಗೆ ಲಭ್ಯವಿರುವ ಆಫರ್ ಬೆಲೆ ಎಷ್ಟು ಗೊತ್ತಾ?
ಜಿಯೋಹೋಮ್ ಗ್ರಾಹಕರು ಅಮೆಜಾನ್ ಪ್ರೈಮ್ ಲೈಟ್ ಸೌಲಭ್ಯ ಪಡೆಯುತ್ತಾರೆ. ಈ ಒಂದು ವರ್ಷದ ಅಮೆಜಾನ್ ಪ್ರೈಮ್ ಲೈಟ್ ಸದಸ್ಯತ್ವದಲ್ಲಿ, ಗ್ರಾಹಕರು ಪ್ರೈಮ್ ವಿಡಿಯೋದಲ್ಲಿ ಸಿನಿಮಾಗಳನ್ನು ಮತ್ತು ಶೋ ಗಳ್ನು ವೀಕ್ಷಿಸುವ ಸೌಲಭ್ಯವನ್ನು ಪಡೆಯುತ್ತಾರೆ. ಇದಲ್ಲದೆ ಅರ್ಹ ಖರೀದಿಗಳ ಮೇಲೆ ಉಚಿತ ಮತ್ತು ವೇಗದ ಡೆಲಿವರಿಯೂ ಅಮೆಜಾನ್‌ನಲ್ಲಿ ಲಭ್ಯವಿರುತ್ತದೆ.
ಈ ಆಫರ್ ಸೆಪ್ಟೆಂಬರ್ 19 ರಿಂದ ಹಂತ ಹಂತವಾಗಿ ಪ್ರಾರಂಭವಾಗಲಿದೆ ಮತ್ತು ಮುಂದಿನ ಎರಡು ವಾರಗಳಲ್ಲಿ ಈ ಯೋಜನೆಗಳು ಎಲ್ಲಾ ಗ್ರಾಹಕರನ್ನು ತಲುಪಲಿದೆ. ಮೈಜಿಯೋ ಅಪ್ಲಿಕೇಶನ್‌ನ ಹೋಮ್‌ಪೇಜ್‌ನಲ್ಲಿ ಅಮೆಜಾನ್ ಪ್ರೈಮ್ ಲೈಟ್‌ನ ಆಫರ್ ಕಾಣಿಸಿಕೊಳ್ಳುತ್ತದೆ. ಆಫರ್ ಮೇಲೆ ಟ್ಯಾಪ್ ಮಾಡಿ ಮತ್ತು ಒಂದು ವರ್ಷದ ಉಚಿತ ಸದಸ್ಯತ್ವವನ್ನು ಸಕ್ರಿಯಗೊಳಿಸಲಾಗುತ್ತದೆ. ಸಕ್ರಿಯಗೊಳಿಸಿದ ದಿನದಿಂದ 12 ತಿಂಗಳ ಕೌಂಟ್ ಡೌನ್ ಪ್ರಾರಂಭವಾಗುತ್ತದೆ.
ಅದೇ ಸಮಯದಲ್ಲಿ, 888 ರೂ.ಗಳ ಪ್ಲಾನ್ ಹಾಗೂ 1,199 ರೂ.ಗಳ ಪ್ಲಾನ್ ಮತ್ತು 150 Mbps ಅಥವಾ ಅದಕ್ಕಿಂತ ಹೆಚ್ಚಿನ ಯೋಜನೆಗಳ ಗ್ರಾಹಕರು ಈಗಾಗಲೇ ಲಭ್ಯವಿರುವ 24 ತಿಂಗಳ ಅಮೆಜಾನ್ ಪ್ರೈಮ್ ಲೈಟ್ ಪ್ರಯೋಜನವನ್ನು ಪಡೆಯುವುದನ್ನು ಮುಂದುವರಿಸುತ್ತಾರೆ. ಇದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಅರ್ಹರಾದ ಹೊಸ ಮತ್ತು ಅಸ್ತಿತ್ವದಲ್ಲಿರುವ JioHome ಗ್ರಾಹಕರು MyJio ಆಪ್ ಮೂಲಕ ಈ ಪ್ರಯೋಜನವನ್ನು ಪಡೆಯಬಹುದು. ಬಳಕೆದಾರರು ತಮ್ಮ JioHome ಖಾತೆಗೆ ಸಂಬಂಧಿಸಿದ MyJio ಮುಖಪುಟದಲ್ಲಿ Amazon Prime Lite ಆಫರ್‌ನ ಬ್ಯಾನರ್ ಅನ್ನು ಕಾಣಬಹುದು. ಈ ಬ್ಯಾನರ್ ಮೂಲಕವೇ ನೇರವಾಗಿ ಒಂದು ವರ್ಷದ ಸದಸ್ಯತ್ವವನ್ನು ಸಕ್ರಿಯಗೊಳಿಸಬಹುದು. ಅಂದಹಾಗೆ ಗ್ರಾಹಕರು ಆಫರ್ ಅನ್ನು ಸಕ್ರಿಯಗೊಳಿಸಿದ ದಿನದಿಂದಲೇ 12 ತಿಂಗಳ ಉಚಿತ ಅವಧಿಯು ಪ್ರಾರಂಭವಾಗುತ್ತದೆ.