Jio 5G vs Airtel 5G cheapest Base Prepaid Recharge Plans compare
Jio vs Airtel: ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಮತ್ತು ಏರ್‌ಟೆಲ್ ಪ್ರಮುಖ ಸ್ಥಾನದಲ್ಲಿರುವ ಕಂಪನಿಗಳಾಗಿವೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಎರಡೂ ಕಂಪನಿಗಳು ವಿವಿಧ ಬೆಲೆಯ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ನೀಡುತ್ತಿವೆ. ಅದರಲ್ಲೂ ಹೆಚ್ಚಿನ ಡೇಟಾ ಹಾಗೂ ದೀರ್ಘಾವಧಿಯ ವ್ಯಾಲಿಡಿಟಿ ಬಯಸುವ ಬಳಕೆದಾರರಿಗೆ ಕೆಲವು ಪ್ಲಾನ್‌ಗಳು ಹೆಚ್ಚು ಗಮನ ಸೆಳೆಯುತ್ತವೆ. ಈ ಪೈಕಿ ಜಿಯೋ ಮತ್ತು ಏರ್‌ಟೆಲ್‌ನ 3599 ರೂ.ಗಳ ರೀಚಾರ್ಜ್ ಪ್ಲಾನ್‌ಗಳು ಒಂದೇ ಬೆಲೆಯಲ್ಲಿದ್ದರೂ, ಕೆಲವು ಸೌಲಭ್ಯಗಳಲ್ಲಿ ವ್ಯತ್ಯಾಸ ಹೊಂದಿವೆ. ಹಾಗಾದರೆ ಜಿಯೋ ಹಾಗೂ ಏರ್‌ಟೆಲ್ ಟೆಲಿಕಾಂಗಳ 3599 ರೂ.ಗಳ ಬೆಲೆಯ ಈ ಎರಡು ಯೋಜನೆಗಳಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ? ಇಲ್ಲಿದೆ ಸಂಪೂರ್ಣ ಹೋಲಿಕೆ.
Also Read : ಭಾರತದಲ್ಲಿ iPhone 18 Pro ಸ್ಮಾರ್ಟ್‌ಫೋನ್ ಸರಣಿ ಸೇಲ್ ಪ್ರಾರಂಭ; ಬೆಲೆ ಮಾಹಿತಿ ಇಲ್ಲಿದೆ
ಜಿಯೋ 3599 ರೂ.ಗಳ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2.5GB ಡೇಟಾ ಸಿಗಲಿದೆ. ಪೂರ್ಣ ವ್ಯಾಲಿಡಿಟಿಗೆ ಒಟ್ಟು 912.5GB ಡೇಟಾ ಸೌಲಭ್ಯ ಲಭ್ಯವಿದೆ. ಹೀಗಾಗಿ ಹೆಚ್ಚು ಡೇಟಾ ಹಾಗೂ ವ್ಯಾಲಿಡಿಟಿ ಬಳಸುವವರಿಗೆ ಈ ಯೋಜನೆ ಆಕರ್ಷಕ ಆಯ್ಕೆಯಾಗಬಹುದು. ಈ ಪ್ಲಾನ್ 365 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ಅನಿಯಮಿತ ವಾಯ್ಸ್ ಕಾಲ್ ಸೌಲಭ್ಯ ಸಿಗಲಿದೆ. ಜೊತೆಗೆ ಪ್ರತಿದಿನ 100 SMS ಪ್ರಯೋಜನವೂ ದೊರೆಯುತ್ತದೆ. ಇದರ ಜತೆಗೆ ಜಿಯೋ ನೀಡುವ JioTV ಸೇರಿದಂತೆ ಹೆಚ್ಚುವರಿ OTT ಮನರಂಜನಾ ಪ್ರಯೋಜನಗಳ ಸೌಲಭ್ಯವೂ ಈ ಯೋಜನೆಯಲ್ಲಿದೆ. ಹೀಗಾಗಿ ಡೇಟಾ ಮಾತ್ರವಲ್ಲದೆ ಮನರಂಜನಾ ಸೇವೆಗಳನ್ನೂ ಬಯಸುವ ಬಳಕೆದಾರರಿಗೆ ಈ ಪ್ಲಾನ್ ಗಮನಾರ್ಹವಾಗಿದೆ.
ಹಾಗೆಯೇ ಭಾರ್ತಿ ಏರ್‌ಟೆಲ್‌ನ 3599 ರೂ.ಗಳ ಬೆಲೆಯಲ್ಲಿ ಕೂಡ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯನ್ನು ನೀಡುತ್ತಿದೆ. ಆದರೆ ಜಿಯೋಗೆ ಹೋಲಿಸಿದರೆ ಇದರ ಡೇಟಾ ಪ್ರಯೋಜನ ಸ್ವಲ್ಪ ಕಡಿಮೆಯಾಗಿದೆ. ಏರ್‌ಟೆಲ್‌ನ 3599 ರೂ.ಗಳ ವಾರ್ಷಿಕ ಪ್ಲಾನ್‌ನಲ್ಲಿ ಪ್ರತಿದಿನ 2GB ಡೇಟಾ ಸಿಗಲಿದೆ. ಈ ಯೋಜನೆಯ ವ್ಯಾಲಿಡಿಟಿ 365 ದಿನಗಳು ಆಗಿದ್ದು, ಬಳಕೆದಾರರಿಗೆ ಅನಿಯಮಿತ ವಾಯ್ಸ್ ಕಾಲ್ ಸೌಲಭ್ಯ ದೊರೆಯುತ್ತದೆ. ಇದರ ಜತೆಗೆ ಪ್ರತಿದಿನ 100 SMS ಪ್ರಯೋಜನವೂ ಲಭ್ಯವಿದೆ.
ಒಟ್ಟಿನಲ್ಲಿ ಹೆಚ್ಚಿನ ಡೇಟಾ ಮತ್ತು ಹೆಚ್ಚಿನ ವ್ಯಾಲಿಡಿಟಿ ಬಯಸುವವರಿಗೆ ಜಿಯೋ 3599 ರೂ.ಗಳ ವಾರ್ಷಿಕ ಪ್ಲಾನ್ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಜಿಯೋ ಯೋಜನೆಯಲ್ಲಿ ಏರ್‌ಟೆಲ್‌ಗಿಂತ ಪ್ರತಿದಿನ 500MB ಹೆಚ್ಚುವರಿ ಡೇಟಾ ಸಿಗುವುದರ ಜೊತೆಗೆ ಆಕರ್ಷಕ ವ್ಯಾಲಿಡಿಟಿಯೂ ಇದೆ. ಆದರೆ ಈಗಾಗಲೇ ಏರ್‌ಟೆಲ್ ನೆಟ್‌ವರ್ಕ್ ಬಳಸುತ್ತಿರುವವರು ವಾರ್ಷಿಕ ರೀಚಾರ್ಜ್‌ಗೆ 3599 ರೂ.ಗಳ ಪ್ಲಾನ್ ಸೂಕ್ತವಾಗಿರಬಹುದು.