Xiaomi ಕಂಪನಿಯ ಈ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ದಿಢೀರ್ ಹೆಚ್ಚಳ!
ಜನಪ್ರಿಯ ಶಿಯೋಮಿ ಮೊಬೈಲ್ ಕಂಪನಿಯು ಇತ್ತೀಚಿಗೆ ಕೆಲವು ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿ ಮಾರುಕಟ್ಟೆಯ ಗಮನ ಸೆಳೆದಿದೆ. ಆದರೆ ಕಂಪನಿಯು ಇದೀಗ ತನ್ನ ಕೆಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ದಿಢೀರ್ ಏರಿಕೆ ಮಾಡಿದ್ದು, ಗ್ರಾಹಕರು ಅಚ್ಚರಿಯಿಂದ ನೋಡುವಂತಾಗಿದೆ. ಹೌದು, ಟಿಪ್‌ಸ್ಟರ್ಯೊಬ್ಬರ ವರದಿ ಪ್ರಕಾರ ಇದೇ ಶಿಯೋಮಿ ಕಂಪನಿಯ Xiaomi 17T, ರೆಡ್ಮಿ ನೋಟ್ 15 5G, ರೆಡ್ಮಿ 15 5G ಮತ್ತು ರೆಡ್ಮಿ 15C 5G ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಏರಿಕೆ ಆಗಿದೆ. ಮಾಡೆಲ್ ಆದರಿಸಿ 5,000 ರೂ.ಗಳ ವರೆಗೂ ಬೆಲೆಯಲ್ಲಿ ಹೆಚ್ಚಳ ಆಗಿದೆ ಎಂದು ವರದಿಗಳಾಗಿವೆ. ಹಾಗಾದರೆ ಬೆಲೆ ಏರಿಕೆ ಕಂಡಿರುವ ಮಾಡೆಲ್‌ಗಳ ಹೊಸ ಬೆಲೆಯ ಬಗ್ಗೆ ಮಾಹಿತಿಯಲ್ಲಿ ಮುಂದೆ ತಿಳಿಯೋಣ.
SurveyAlso Read : ಬಜೆಟ್ ಬೆಲೆಯ Realme P4x 5G ಮೊಬೈಲ್ ಈಗ ಇನ್ನಷ್ಟು ರಿಯಾಯಿತಿಯಲ್ಲಿ ಲಭ್ಯ!
Xiaomi ಫೋನ್‌ಗಳ ಬೆಲೆಯಲ್ಲಿ ಏರಿಕೆ
ಶಿಯೋಮಿ 17T ಮಾಡೆಲ್ ಹೆಚ್ಚಿನ ದರ ಪರಿಷ್ಕರಣೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ಫೋನಿನ 12GB RAM + 256GB ವೇರಿಯಂಟ್ 59,999 ರೂ.ಗಳು ಇತ್ತು. ಆದರೆ ಇದೀಗ 12GB + 256GB ವೇರಿಯಂಟ್ ದರವು 64,999 ರೂ.ಗಳು ಆಗಿದೆ. ಹಾಗೆಯೇ 12GB RAM + 512GB ವೇರಿಯಂಟ್ 64,999 ರೂ.ಗಳು ಇತ್ತು. ಆದರೆ ಇದೀಗ 12GB + 512GB ವೇರಿಯಂಟ್ ದರವು 69,999 ರೂ.ಗಳು ಆಗಿದೆ.

ಹಾಗೆಯೇ ಶಿಯೋಮಿಯ ರೆಡ್ಮಿ ನೋಟ್ 15 5G ಸ್ಮಾರ್ಟ್‌ಫೋನಿನ 8GB RAM + 128GB ವೇರಿಯಂಟ್ 26,999 ರೂ.ಗಳು ಇತ್ತು. ಆದರೆ ಇದೀಗ 8GB RAM + 128GB ವೇರಿಯಂಟ್ ದರವು 28,999 ರೂ.ಗಳು ಆಗಿದೆ. ಹಾಗೆಯೇ 8GB RAM + 256GB ವೇರಿಯಂಟ್ 29,999 ರೂ.ಗಳು ಪ್ರೈಸ್ ಟ್ಯಾಗ್ ಹೊಂದಿತ್ತು. ಆದರೆ ಇದೀಗ 8GB RAM + 256GB ವೇರಿಯಂಟ್ ದರವು 31,999 ರೂ.ಗಳು ಬೆಲೆಯಲ್ಲಿ ಲಭ್ಯ.
ಅದೇ ರೀತಿ ರೆಡ್ಮಿ 15 5G ಫೋನಿನ 6GB RAM + 128GB ವೇರಿಯಂಟ್ 20,499 ರೂ.ಗಳು ಇತ್ತು. ಆದರೆ ಇದೀಗ 6GB RAM + 128GB ವೇರಿಯಂಟ್ ದರವು 21,499ರೂ.ಗಳು ಆಗಿದೆ. ಹಾಗೆಯೇ 8GB RAM + 128GB ವೇರಿಯಂಟ್ 22,499 ರೂ.ಗಳು ಇತ್ತು. ಆದರೆ ಇದೀಗ 8GB RAM + 128GB ವೇರಿಯಂಟ್ ದರವು 23,499 ರೂ.ಗಳು ಆಗಿದೆ. ಅಲ್ಲದೇ 8GB RAM + 256GB ವೇರಿಯಂಟ್ 24,499 ರೂ.ಗಳು ಇತ್ತು. ಆದರೆ ಇದೀಗ 8GB RAM + 256GB ವೇರಿಯಂಟ್ ದರವು 25,499 ರೂ.ಗಳು ಆಗಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile