Jio ಟೆಲಿಕಾಂನ ಅತ್ಯಂತ ಕಡಿಮೆ ಬೆಲೆಯ ರೀಚಾರ್ಜ್‌ ಪ್ಲಾನ್‌ ಮಾಹಿತಿ ಇಲ್ಲಿದೆ ನೋಡಿ!

HIGHLIGHTS

ಜಿಯೋದ ಈ ಅಗ್ಗದ ಪ್ಲಾನ್‌ ಅನಿಯಮಿತ ವಾಯ್ಸ್‌ ಕರೆಗಳ ಸೌಲಭ್ಯ ಪಡೆದಿದೆ

ಜಿಯೋ 189 ರೂ.ಗಳ ಯೋಜನೆಯಲ್ಲಿ 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಸಿಗಲಿದೆ

ಜಿಯೋ ಟೆಲಿಕಾಂನ ಈ ಪ್ಲಾನ್‌ನಲ್ಲಿ JioTV ಹಾಗೂ JioAICloud ಚಂದಾದಾರಿಕೆ ಲಭ್ಯ

Jio ಟೆಲಿಕಾಂನ ಅತ್ಯಂತ ಕಡಿಮೆ ಬೆಲೆಯ ರೀಚಾರ್ಜ್‌ ಪ್ಲಾನ್‌ ಮಾಹಿತಿ ಇಲ್ಲಿದೆ ನೋಡಿ!

ಟೆಲಿಕಾಂ ಕ್ಷೇತ್ರದಲ್ಲಿ ಲೀಡಿಂಗ್‌ ಕಂಪನಿ ಎಂದೇ ಗುರುತಿಸಿಕೊಂಡಿರುವ ರಿಲಾಯನ್ಸ್‌ Jio ಮಾರುಕಟ್ಟೆಯಲ್ಲಿ ವಿ ಹಾಗೂ ಏರ್‌ಟೆಲ್‌ ಕಂಪನಿಗಳಿಗೆ ಪೈಪೋಟಿ ನೀಡುತ್ತಾ ಸಾಗಿದೆ. ಜಿಯೋ ಟೆಲಿಕಾಂ ಭಿನ್ನ ಪ್ರೈಸ್‌ಟ್ಯಾಗ್‌ನಲ್ಲಿ ಹಲವು ರೀಚಾರ್ಜ್‌ ಪ್ಲಾನ್‌ಗಳನ್ನು ಪರಿಚಯಿಸುವ ಮೂಲಕ ಹೆಚ್ಚಿನ ಗಮನ ಸೆಳೆದಿದೆ. ಇನ್ನು ಜಿಯೋದ ಕೆಲವು ಯೋಜನೆಗಳು ಕಡಿಮೆ ದರದಲ್ಲಿ ಹೆಚ್ಚು ಆಕರ್ಷಕ ಎನಿಸಿವೆ. ಆ ಪೈಕಿ ಜಿಯೋ ಟೆಲಿಕಾಂನ 189 ರೂ.ಗಳ ಯೋಜನೆಯು ಅತ್ಯಂತ ಅಗ್ಗದ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನ್‌ ಆಗಿದೆ. ಈ ಅಗ್ಗದ ಬೆಲೆಯ ಯೋಜನೆಯು ಡೇಟಾ ಸೌಲಭ್ಯ ಪಡೆದುಕೊಂಡಿರುವ ಜೊತೆಗೆ ಆಕರ್ಷಕ ವ್ಯಾಲಿಡಿಟಿ ಪ್ರಯೋಜನ ಸಹ ಪಡೆದುಕೊಂಡಿದೆ. ಹಾಗಾದರೆ ಜಿಯೋ ಟೆಲಿಕಾಂನ 189 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯ ಸಂಪೂರ್ಣ ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ದೈತ್ಯ Xiaomi 17 Ultra ಮೊಬೈಲ್‌ ಖರೀದಿಗೆ ಇದುವೇ ಸರಿಯಾದ ಸಮಯ! ಅತ್ಯುತ್ತಮ ಆಫರ್ ಲಭ್ಯ

Jio ಟೆಲಿಕಾಂನ 189 ರೂ.ಗಳ ಪ್ಲಾನ್ ಮಾಹಿತಿ

ಜಿಯೋ ಟೆಲಿಕಾಂನ 189 ರೂಗಳ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನ್‌ ಕಡಿಮೆ ದರದಲ್ಲಿ ಆಕರ್ಷಕ ಯೋಜನೆಯಾಗಿ ಕಾಣಿಸಿಕೊಂಡಿದೆ. ಈ ಪ್ಲಾನ್‌ ಜಿಯೋ ವೆಬ್‌ಸೈಟ್‌ ರೀಚಾರ್ಜ್‌ನಲ್ಲಿ Affordable Packs ಸೆಕ್ಷನ್‌ನಲ್ಲಿ/ವಿಭಾಗದಲ್ಲಿ ಲಭ್ಯವಿದೆ. ಅಂದಹಾಗೆ ಈ ಪ್ರೀಪೇಯ್ಡ್‌ ಯೋಜನೆಯು ಬಳಕೆದಾರರಿಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 2GB ಡೇಟಾ ಪ್ರಯೋಜನ ನೀಡುತ್ತದೆ. ಅಲ್ಲದೇ ಈ ಯೋಜನೆಯು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದುಕೊಂಡಿದೆ. ಹಾಗೆಯೇ ಈ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಒಟ್ಟಾರೇ 300 SMS ಸೌಲಭ್ಯ ಸಹ ಲಭ್ಯ. ಹಾಗೆಯೇ ಈ ಪ್ಲಾನಿನಲ್ಲಿ JioTV ಹಾಗೂ JioAICloud ಚಂದಾದಾರಿಕೆ ಸೌಲಭ್ಯ ಲಭ್ಯ.

jio

ಜಿಯೋದ ಇತರೆ ಅಗ್ಗದ ಪ್ಲಾನ್‌ಗಳ ಮಾಹಿತಿ

ಜಿಯೋ ಸಂಸ್ಥೆಯ 365 ರೂಗಳ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯು ಬಳಕೆದಾರರಿಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 25GB ಡೇಟಾ ಪ್ರಯೋಜನ ನೀಡುತ್ತದೆ. ಅಲ್ಲದೇ ಈ ಯೋಜನೆಯು 30 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದುಕೊಂಡಿದೆ. ಹಾಗೆಯೇ ಈ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ. ಹಾಗೆಯೇ ಈ ಪ್ಲಾನಿನಲ್ಲಿ JioTV ಹಾಗೂ JioAICloud ಚಂದಾದಾರಿಕೆ ಸೌಲಭ್ಯ ಲಭ್ಯ.

ಜಿಯೋ ಕಂಪನಿಯ 339 ರೂಗಳ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 1.5GB ಡೇಟಾ ಸಿಗಲಿದೆ. ಹಾಗೆಯೇ ಈ ಯೋಜನೆಯು 30 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದುಕೊಂಡಿದೆ. ಹಾಗೆಯೇ ಈ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ. ಹಾಗೆಯೇ ಈ ಪ್ಲಾನಿನಲ್ಲಿ JioTV ಹಾಗೂ JioAICloud ಚಂದಾದಾರಿಕೆ ಸೌಲಭ್ಯ ಲಭ್ಯ. ಇದಲ್ಲದೇ 14.95 ರೂ.ಗಳ ಟಾಕ್‌ಟೈಮ್‌ ಸಹ ದೊರೆಯುತ್ತದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo