Install App Install App

Jio ಈ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಮತ್ತೇ ಬದಲಾಯಿಸಿದೆ! ಹೊಸ ಬೆಲೆ ಮತ್ತು ಲಾಭಗಳೇನು ನೋಡಿ!

ಇವರಿಂದ Ravi Rao | ಪ್ರಕಟಿಸಲಾಗಿದೆ 06 Dec 2021
HIGHLIGHTS
  • ರಿಲಯನ್ಸ್ ಜಿಯೋ (Reliance jio) ತನ್ನ ಈ ಹೊಸ ಪ್ರಿಪೇಯ್ಡ್ ರೀಚಾರ್ಜ್ (Prepaid Recharge) ಯೋಜನೆಗಳನ್ನು ಮತ್ತೆ ಪರಿಷ್ಕರಿಸಿದೆ.

  • ಜಿಯೋವಿನ ಪ್ರಿಪೇಯ್ಡ್ ಚಂದಾದಾರರಿಗೆ ಡಿಸ್ನಿ + ಹಾಟ್‌ಸ್ಟಾರ್ (disney+ hotstar) ಮೊಬೈಲ್ ಚಂದಾದಾರಿಕೆಯು ಕನಿಷ್ಠ 601 ರೂಗಳಿಂದ ಆರಂಭವಾಗಿದೆ.

  • ಒಂದು ವರ್ಷದ ಡಿಸ್ನಿ + ಹಾಟ್‌ಸ್ಟಾರ್ (disney+ hotstar) ಮೊಬೈಲ್ ಚಂದಾದಾರಿಕೆ ಹೊಂದಿರುವ ಜಿಯೋವಿನ ಮೊದಲ ಪ್ರೀಪೇಡ್ ಯೋಜನೆ

Jio ಈ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಮತ್ತೇ ಬದಲಾಯಿಸಿದೆ! ಹೊಸ ಬೆಲೆ ಮತ್ತು ಲಾಭಗಳೇನು ನೋಡಿ!
Jio ಈ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಮತ್ತೇ ಬದಲಾಯಿಸಿದೆ! ಹೊಸ ಬೆಲೆ ಮತ್ತು ಲಾಭಗಳೇನು ನೋಡಿ!

ರಿಲಯನ್ಸ್ ಜಿಯೋ (Reliance jio) ತನ್ನ ಈ ಹೊಸ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಮತ್ತೆ ಪರಿಷ್ಕರಿಸಿದ್ದು ಒಂದು ವರ್ಷದ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯೊಂದಿಗೆ ಹೊಸ ಐದು ಜಿಯೋ ಪ್ರೀಪೇಡ್ ಯೋಜನೆಗಳು ಕಾಣಿಸಿಕೊಂಡಿವೆ. ಕಳೆದ ವಾರ ಜಿಯೋ ಪ್ರೀಪೇಡ್ ಯೋಜನೆಗಳ ಸುಂಕದ ಹೆಚ್ಚಳ ಪರಿಷ್ಕರಣೆಯ ಪರಿಣಾಮವಾಗಿ ಈಗ ಜಿಯೋವಿನ ಪ್ರೀಪೇಡ್ ಚಂದಾದಾರರಿಗೆ ಡಿಸ್ನಿ + ಹಾಟ್‌ಸ್ಟಾರ್ (disney+ hotstar) ಮೊಬೈಲ್ ಚಂದಾದಾರಿಕೆಯು ಕನಿಷ್ಠ 601 ರೂಗಳಿಂದ ಆರಂಭವಾಗಿದೆ.

ರಿಲಯನ್ಸ್ ಜಿಯೋ (Reliance jio) 601 ರೂಗಳ ಪ್ರಿಪೇಯ್ಡ್ ಪ್ಲಾನ್ 

ಜಿಯೋ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ವಿವರಗಳ ಪ್ರಕಾರ 601 ರೂ. ಪ್ರೀಪೇಡ್ ಯೋಜನಯು ಒಂದು ವರ್ಷದ ಡಿಸ್ನಿ + ಹಾಟ್‌ಸ್ಟಾರ್ (disney+ hotstar) ಮೊಬೈಲ್ ಚಂದಾದಾರಿಕೆ ಹೊಂದಿರುವ ಜಿಯೋವಿನ ಮೊದಲ ಪ್ರೀಪೇಡ್ ಯೋಜನೆಯಾಗಿದೆ. ಈ 601 ರೂಗಳ ಪ್ರೀಪೇಡ್ ಯೋಜನೆಯು 28 ದಿನಗಳವರೆಗೆ ವ್ಯಾಲಿಡಿಯಲ್ಲಿ ದಿನಕ್ಕೆ 3GB ಹೈ-ಸ್ಪೀಡ್ ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMSಗಳನ್ನು ನೀಡಲಾಗಿದೆ. ಮೊದಲೇ ಹೇಳಿದಂತೆ ಈ ಯೋಜನೆಯು ಒಂದು ವರ್ಷಕ್ಕೆ ಡಿಸ್ನಿ + ಹಾಟ್‌ಸ್ಟಾರ್ (disney+ hotstar) ಮೊಬೈಲ್ ಚಂದಾದಾರಿಯನ್ನು ಒಳಗೊಂಡಿದ್ದು ಇದರ ಜೊತೆಗೆ ಈ ಯೋಜನೆಯು ಹೆಚ್ಚುವರಿ 6GB ಹೈ-ಸ್ಪೀಡ್ ಡೇಟಾವನ್ನು ಉಚಿತವಾಗಿ ನೀಡಲಾಗುತ್ತಿದೆ.

ರಿಲಯನ್ಸ್ ಜಿಯೋ (Reliance jio) 799 ರೂಗಳ ಪ್ರಿಪೇಯ್ಡ್ ಪ್ಲಾನ್

ಒಂದು ವರ್ಷದ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ ಹೊಂದಿರುವ ಜಿಯೋವಿನ ಎರಡನೇ ಪ್ರೀಪೇಡ್ ಯೋಜನೆಯು 799 ರೂಗಳಿಗೆ ಲಭ್ಯವಿದೆ. ಈ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು ಈ ಮೊದಲಿನ ಜಿಯೋವಿನ 666 ರೂಗಳ ಯೋಜನೆಯ ಪರಿಷ್ಕರಣೆಯಾಗಿದ್ದು ಈ ಮೊದಲಿನಂತೆಯೇ ಈ ಯೋಜನೆಯಲ್ಲಿ ಅನಿಯಮಿತ ಧ್ವನಿ ಕರೆ ಮತ್ತು 100 ದೈನಂದಿನ SMS ಸಂದೇಶ ಪ್ರಯೋಜನಗಳೊಂದಿಗೆ 2GB ದೈನಂದಿನ ಹೆಚ್ಚಿನ ವೇಗದ ಡೇಟಾವನ್ನು ನೀಡುತ್ತದೆ. 56 ದಿನಗಳವರೆಗೆ ವ್ಯಾಲಿಡಟಿ ಹೊಂದಿರುವ ಈ ಯೋಜನೆಯು ವಾರ್ಷಿಕ Disney+ Hotstar ಮೊಬೈಲ್ ಚಂದಾದಾರಿಕೆಯನ್ನು ಉಚಿತವಾಗಿ ಒಳಗೊಂಡಿದೆ.

ರಿಲಯನ್ಸ್ ಜಿಯೋ (Reliance jio) 888 ರೂಗಳ ಪ್ರಿಪೇಯ್ಡ್ ಪ್ಲಾನ್

ಒಂದು ವರ್ಷದ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ ಹೊಂದಿರುವ ಜಿಯೋವಿನ ಮೂರನೇ ಯೋಜನೆಯು 888 ರೂ.ಗಳಿಗೆ ಲಭ್ಯವಿದೆ. ಈ 888 ರೂಗಳ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ನಾವು ದಿನಕ್ಕೆ 2GB ಹೈಸ್ಪೀಡ್ ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ಪ್ರತಿದಿನ 100 SMS ಸಂದೇಶಗಳನ್ನು ಒಳಗೊಂಡಿರುವುದನ್ನು ನೋಡಬಹುದು 84 ದಿನಗಳ ಮಾನ್ಯತೆಯೊಂದಿಗೆ ಬಂದಿರುವ ಈ ಯೋಜನೆಯಲ್ಲಿ Disney+ Hotstar ಮೊಬೈಲ್ ವಾರ್ಷಿಕ ಚಂದಾದಾರಿಕೆಯ ಜೊತೆಗೆ ಹೆಚ್ಚುವರಿ 5GB ಡೇಟಾವನ್ನು ನೀಡಲಾಗುತ್ತಿದೆ. ಇವುಗಳು ಸೀಮಿತ ವ್ಯಾಲಿಡಿಯಲ್ಲಿ ಲಭ್ಯವಿದ್ದರೆ ಜಿಯೋವಿನ ವಾರ್ಷಿಕ್ ಯೋಜನೆಯೊಂದು ಕೂಡ Disney+ Hotstar ಚಂದಾದಾರಿಯನ್ನು ಹೊಂದಿದೆ.

ರಿಲಯನ್ಸ್ ಜಿಯೋ (Reliance jio) 3119 ರೂಗಳ ಪ್ರಿಪೇಯ್ಡ್ ಪ್ಲಾನ್

ಜಿಯೋವಿನ 3119 ರೂಗಳ ಪ್ರಿಪೇಯ್ಡ್ ಪ್ಲಾನ್ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರು ಒಂದು ವರ್ಷದ Disney+ Hotstar ಮೊಬೈಲ್ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ 2GB ದೈನಂದಿನ ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಸಂದೇಶಗಳ ಜೊತೆಗೆ ಒಟ್ಟಾರೆಯಾಗಿ 10GB ಹೆಚ್ಚುವರಿ ಡೇಟಾವನ್ನು 365 ದಿನಗಳವರೆಗೆ ನೀಡಲಾಗುತ್ತಿದೆ. ಈ ನಿಯಮಿತ ಯೋಜನೆಗಳ ಜೊತೆಗೆ ಜಿಯೋದ ಕೊನೆಯ ಮತ್ತು ಕೇವಲ ಡೇಟಾ ಮಾತ್ರ 659 ರೂ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು ಕೂಡ ಒಂದು ವರ್ಷಕ್ಕೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ನಿಡುತ್ತದೆ. ಜೊತೆಗೆ 56 ದಿನಗಳವರೆಗೆ 1.5GB ಹೈ-ಸ್ಪೀಡ್ ದೈನಂದಿನ ಡೇಟಾ ಸಿಗಲಿದೆ.

WEB TITLE

Reliance jio now revises disney+ hotstar prepaid plans at very low price

Tags
  • Reliance jio
  • jio revises plan
  • disney+ hotstar plans
  • jioprepaid plans
  • disney+ hotstar prepaid plans
  • jio hotstar plans
  • jio disney+ hotstar plans
  • jio plans
  • jio 601 plan
  • Jio 799 plan
  • jio 888 plan
  • jio 3119 plan
Install App Install App
Advertisements

ಟ್ರೆಂಡಿಂಗ್ ಲೇಖನಗಳು

Advertisements

LATEST ARTICLES ಎಲ್ಲವನ್ನು ವೀಕ್ಷಿಸಿ

Advertisements
DMCA.com Protection Status