Jio Freedom Plans: ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಅದ್ಭುತವಾದ ಯೋಜನೆಯನ್ನು ನೀಡುತ್ತಿದೆ. ಇದು ಬಳಕೆದಾರರಿಗೆ ತುಂಬಾ ಉಪಯುಕ್ತವಾಗಿದೆ ಎಂದು ಸಾಬೀತುಪಡಿಸಬಹುದು. ಈ ಯೋಜನೆಯಲ್ಲಿ ಬಳಕೆದಾರರಿಗೆ ಹೈ ಸ್ಪೀಡ್ 25GB ಡೇಟಾವನ್ನು ನೀಡಲಾಗುತ್ತಿದೆ ಮತ್ತು ಅದು ಕೂಡ ಯಾವುದೇ ಮಿತಿಯಿಲ್ಲದೆ. ನಿಮ್ಮ ಇಚ್ಛೆಯಂತೆ ನೀವು ಅದನ್ನು ಬಳಸಬಹುದು. ಇದು ಸ್ವಾತಂತ್ರ್ಯ ಯೋಜನೆ (Jio Freedom Plans) ಎಂದೇ ಹೇಳಬಹುದು. ಇದರ ಬೆಲೆ 300 ರೂಪಾಯಿಗಿಂತ ಕಡಿಮೆಯಾಗಿದೆ. ಇದರಲ್ಲಿ ಡೇಟಾ, ಅನ್ಲಿಮಿಟೆಡ್ ಕರೆಗಳೊಂದಿಗೆ ನೀವು ಇತರ ಹಲವು ಪ್ರಯೋಜನಗಳನ್ನು ಪಡೆಯುತ್ತೀರಿ. ಹಾಗಾದರೆ ಈ ರಿಲಯನ್ಸ್ ಜಿಯೋದ 30 ದಿನಗಳ ವ್ಯಾಲಿಡಿಟಿ ಪ್ಲಾನ್ ಬಗ್ಗೆ ತಿಳಿಯಿರಿ.
Survey
✅ Thank you for completing the survey!
30 ದಿನಗಳ ವ್ಯಾಲಿಡಿಟಿ ಯೋಜನೆಗಳು:
ನಿಮಗೆ ತಿಳಿದಿರುವಂತೆ Jio, Vi ಮತ್ತು Airtel ಮೂರಲ್ಲೂ ಒಂದೇ ಬೆಲೆಯಲ್ಲಿ ಪಟ್ಟಿ ಮಾಡಲಾದ ಒಂದು ಪ್ರಿಪೇಯ್ಡ್ ಯೋಜನೆಯು ರೂ 296 ರ ಮಾಸಿಕ ಯೋಜನೆಯಾಗಿದೆ. ಈ ಯೋಜನೆಯು ಕರೆ, ಡೇಟಾ ಮತ್ತು ಹೆಚ್ಚುವರಿ ಪ್ರಯೋಜನಗಳನ್ನು ಒಳಗೊಂಡಿರುತ್ತದೆ. ಮತ್ತು 30 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಮಾಸಿಕ ಯೋಜನೆಯನ್ನು ಎದ್ದು ಕಾಣುವಂತೆ ಮಾಡಲು ಎರಡೂ ಕಂಪನಿಗಳು ಹೆಚ್ಚುವರಿ ವೈಶಿಷ್ಟ್ಯಗಳನ್ನು ಸಹ ನೀಡುತ್ತವೆ. ಯಾವ ಆಪರೇಟರ್ ಉತ್ತಮ ಮೌಲ್ಯವನ್ನು ನೀಡುತ್ತದೆ ಎಂಬುದನ್ನು ನಿರ್ಧರಿಸಲು Jio, Vi ಮತ್ತು Airtel ನೀಡುವ ರೂ 296 ಪ್ರಿಪೇಯ್ಡ್ ಯೋಜನೆಯ ನಿರ್ದಿಷ್ಟ ವಿವರಗಳನ್ನು ಹತ್ತಿರದಿಂದ ನೋಡುವುದು ಮುಖ್ಯವಾಗಿದೆ.
ಪೂರ್ತಿ ತಿಂಗಳು ಅಂದ್ರೆ 30 ದಿನಗಳ ವ್ಯಾಲಿಡಿಟಿಯೊಂದಿಗೆ ಕೈಗೆಟಕುವ ಬೆಲೆಯಲ್ಲಿ ಲಭ್ಯವಿರುವ ಈ ಪ್ಲಾನ್ ಬೆಲೆ 296 ರೂಗಳಾಗಿವೆ. ಇದರಲ್ಲಿ ಯಾವುದೇ ಮಿತಿಯಿಲ್ಲ ಬಳಕೆದಾರರಿಗೆ 25GB ಡೇಟಾವನ್ನು ನೀಡಲಾಗುತ್ತಿದೆ. ಈ ಯೋಜನೆಯ ಮಾನ್ಯತೆ 30 ದಿನಗಳಾಗಿದೆ. ನೀವು 30 ದಿನಗಳಲ್ಲಿ ಯಾವುದೇ ಸಮಯದಲ್ಲಿ ಒಟ್ಟಾರೆಯಾಗಿ 25GB ಹೈ ಸ್ಪೀಡ್ ಡೇಟಾವನ್ನು ಖರ್ಚು ಮಾಡಬಹುದು. ಇದಲ್ಲದೇ ಈ ಯೋಜನೆಯಲ್ಲಿ ಅನಿಯಮಿತ ಕರೆ ಸೌಲಭ್ಯವನ್ನೂ ನೀಡಲಾಗುತ್ತಿದೆ. ಇದಲ್ಲದೆ ಈ ಯೋಜನೆಯು ಪ್ರತಿದಿನ 100 SMS ಅನ್ನು ಸಹ ನೀಡುತ್ತದೆ. ಇದರೊಂದಿಗೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಸೌಲಭ್ಯವನ್ನು ಸಹ ಉಚಿತವಾಗಿ ನೀಡಲಾಗುತ್ತಿದೆ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile