Reliance Jio Rs 11 plan
Jio Plans: ನೀವು ರಿಲಯನ್ಸ್ ಜಿಯೋ ಬಳಕೆದಾರರಾಗಿದ್ದರೆ ಮತ್ತು ದೀರ್ಘಾವಧಿಯ ಮಾನ್ಯತೆಯ ಯೋಜನೆಗಳೊಂದಿಗೆ ರೀಚಾರ್ಜ್ ಮಾಡಲು ಬಯಸಿದರೆ ನೀವು ಖಂಡಿತವಾಗಿಯೂ ಆಯ್ದ ಯೋಜನೆಗಳ ಮೇಲೆ ಕಣ್ಣಿಡಬೇಕು.ಉದಾಹರಣೆಗೆ ನೀವು ಜಿಯೋದ ಈ 1,028 ರೂಗಳ ರಿಚಾರ್ಜ್ ಯೋಜನೆಯಲ್ಲಿ ಕ್ಯಾಶ್‌ಬ್ಯಾಕ್ ಮತ್ತು ಸ್ವಿಗ್ಗಿ ಒನ್ ಲೈಟ್ ಚಂದಾದಾರಿಕೆಯನ್ನು ನೀಡುತ್ತದೆ. ಆದರೆ ಅದೇ ಕೇವಲ 1 ರೂಗಳನ್ನು ಅಂದ್ರೆ 1029 ರೂಗಳನ್ನು ನೀಡುವ ಮೂಲಕ OTT ಅಪ್ಲಿಕೇಶನ್‌ನೊಂದಿಗೆ ಅನ್ಲಿಮಿಟೆಡ್ ಕರೆ ಮತ್ತು ಡೇಟಾವನ್ನು ಆನಂದಿಸಬಹುದು. ಹಾಗಾದ್ರೆ ಈ ಎರಡೂ ಯೋಜನೆಗಳು ಒಂದೇ ರೀತಿಯ ಮಾನ್ಯತೆ ಮತ್ತು ಡೇಟಾವನ್ನು ನೀಡುವುದರಿಂದ ನಿಮಗೆ ಯಾವುದು ಬೆಸ್ಟ್ ತಿಳಿಯಿರಿ.
ಈ ಯೋಜನೆಯೊಂದಿಗೆ ರೀಚಾರ್ಜ್ ಮಾಡುವ ಸಂದರ್ಭದಲ್ಲಿ ಜಿಯೋ ಬಳಕೆದಾರರಿಗೆ 84 ದಿನಗಳ ಮಾನ್ಯತೆಯೊಂದಿಗೆ 2GB ದೈನಂದಿನ ಡೇಟಾದ ಪ್ರಯೋಜನವನ್ನು ನೀಡಲಾಗುತ್ತಿದೆ. ಅವರು ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ವಾಯ್ಸ್ ಕರೆಗಳನ್ನು ಮಾಡಬಹುದು ಮತ್ತು ಪ್ರತಿದಿನ 100 SMS ಕಳುಹಿಸಬಹುದು. ಈ ಯೋಜನೆಯು 90 ದಿನಗಳವರೆಗೆ ಜಿಯೋಹಾಟ್‌ನ್ಸಾರ್ ಮೊಬೈಲ್ / ಟಿವಿ ಚಂದಾದಾರಿಕೆಯ ಪ್ರಯೋಜನವನ್ನು ನೀಡುತ್ತದೆ.
ಇದರಲ್ಲಿ ಸ್ವಿಗ್ಗಿ ಒನ್ ಲೈಟ್‌ನ ಚಂದಾದಾರಿಕೆಯನ್ನು ಮೂರು ತಿಂಗಳವರೆಗೆ ನೀಡಲಾಗುತ್ತಿದ್ದು600 ರೂ.ಗಳ ಮೌಲ್ಯದ ಪ್ರಯೋಜನಗಳು ಲಭ್ಯವಿದೆ. ಅಲ್ಲದೆ ಈ ಯೋಜನೆಯನ್ನು ಆಯ್ಕೆ ಮಾಡುವವರಿಗೆ 50 ರೂ.ಗಳ ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದ್ದು ಇದರ ಪ್ರಯೋಜನವು 1,028 ರೂ.ಗಳಿಗೆ ಮತ್ತೆ ರೀಚಾರ್ಜ್ ಮಾಡಿದರೆ ಲಭ್ಯವಿರುತ್ತದೆ. ಈ ಯೋಜನೆಯು ಅರ್ಹ ಬಳಕೆದಾರರಿಗೆ ಅನಿಯಮಿತ 5G ಡೇಟಾದ ಪ್ರಯೋಜನವನ್ನು ನೀಡುತ್ತದೆ.
ನೀವು ಅದೇ ಯೋಜನೆಯ ಮೇಲೆ ಕೇವಲ 1 ರೂ. ಹೆಚ್ಚು ಖರ್ಚು ಮಾಡಿ 1,029 ರೂಗಳ ಪ್ಲಾನ್‌ನೊಂದಿಗೆ ರೀಚಾರ್ಜ್ ಮಾಡಿದರೆ ನೀವು 2GB ದೈನಂದಿನ ಡೇಟಾ ಮತ್ತು ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಧ್ವನಿ ಕರೆ ಪ್ರಯೋಜನವನ್ನು 84 ದಿನಗಳ ಪೂರ್ಣ ಮಾನ್ಯತೆಯೊಂದಿಗೆ ಪಡೆಯುತ್ತೀರಿ. ಈ ಯೋಜನೆಯು ಅಮೆಜಾನ್ ಪ್ರೈಮ್ ಲೈಟ್ ಚಂದಾದಾರಿಕೆಯನ್ನು 84 ದಿನಗಳವರೆಗೆ ಮಾತ್ರ ನೀಡುತ್ತಿದೆ. ಈ ಯೋಜನೆಯು ದಿನಕ್ಕೆ 100 SMS ನೀಡುತ್ತದೆ ಮತ್ತು 90 ದಿನಗಳವರೆಗೆ Jio Hotstar ಮೊಬೈಲ್ / ಟಿವಿ ಚಂದಾದಾರಿಕೆಯೊಂದಿಗೆ ಬರುತ್ತದೆ. ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವಾಗ ಅರ್ಹ ಚಂದಾದಾರರು ಅನಿಯಮಿತ 5G ಡೇಟಾದ ಪ್ರಯೋಜನವನ್ನು ಪಡೆಯುತ್ತಾರೆ.