Jio Plans: ಜಿಯೋ ಗ್ರಾಹಕರು ಕೇವಲ 1 ರೂಪಾಯಿ ಹೆಚ್ಚಾಗಿ ನೀಡಿ OTT ಅಪ್ಲಿಕೇಶನ್‌ನೊಂದಿಗೆ ಅನ್ಲಿಮಿಟೆಡ್ ಕರೆ ಮತ್ತು ಡೇಟಾವನ್ನು ಆನಂದಿಸಬಹುದು!

Jio Plans: ಜಿಯೋ ಗ್ರಾಹಕರು ಕೇವಲ 1 ರೂಪಾಯಿ ಹೆಚ್ಚಾಗಿ ನೀಡಿ OTT ಅಪ್ಲಿಕೇಶನ್‌ನೊಂದಿಗೆ ಅನ್ಲಿಮಿಟೆಡ್ ಕರೆ ಮತ್ತು ಡೇಟಾವನ್ನು ಆನಂದಿಸಬಹುದು!
HIGHLIGHTS

ರಿಲಯನ್ಸ್ ಜಿಯೋ ತಮ್ಮ ಬಳಕೆದಾರರಿಗೆ ಕೈಗೆಟಕುವ ರಿಚಾರ್ಜ್ ಯೋಜನೆಗಳನ್ನು ಹೊಂದಿದೆ.

ಜಿಯೋದ 1028 ರೂಗಳ ರಿಚಾರ್ಜ್ ಪ್ಲಾನ್ ಕ್ಯಾಶ್‌ಬ್ಯಾಕ್ ಮತ್ತು ಸ್ವಿಗ್ಗಿ ಒನ್ ಲೈಟ್ ಚಂದಾದಾರಿಕೆಯನ್ನು ನೀಡುತ್ತದೆ.

ಜಿಯೋದ 1029 ರೂಗಳ ರಿಚಾರ್ಜ್ ಪ್ಲಾನ್ OTT ಅಪ್ಲಿಕೇಶನ್‌ನೊಂದಿಗೆ ಅನ್ಲಿಮಿಟೆಡ್ ಕರೆ ಮತ್ತು ಡೇಟಾವನ್ನು ನೀಡುತ್ತಿದೆ.

Jio Plans: ನೀವು ರಿಲಯನ್ಸ್ ಜಿಯೋ ಬಳಕೆದಾರರಾಗಿದ್ದರೆ ಮತ್ತು ದೀರ್ಘಾವಧಿಯ ಮಾನ್ಯತೆಯ ಯೋಜನೆಗಳೊಂದಿಗೆ ರೀಚಾರ್ಜ್ ಮಾಡಲು ಬಯಸಿದರೆ ನೀವು ಖಂಡಿತವಾಗಿಯೂ ಆಯ್ದ ಯೋಜನೆಗಳ ಮೇಲೆ ಕಣ್ಣಿಡಬೇಕು.ಉದಾಹರಣೆಗೆ ನೀವು ಜಿಯೋದ ಈ 1,028 ರೂಗಳ ರಿಚಾರ್ಜ್ ಯೋಜನೆಯಲ್ಲಿ ಕ್ಯಾಶ್‌ಬ್ಯಾಕ್ ಮತ್ತು ಸ್ವಿಗ್ಗಿ ಒನ್ ಲೈಟ್ ಚಂದಾದಾರಿಕೆಯನ್ನು ನೀಡುತ್ತದೆ. ಆದರೆ ಅದೇ ಕೇವಲ 1 ರೂಗಳನ್ನು ಅಂದ್ರೆ 1029 ರೂಗಳನ್ನು ನೀಡುವ ಮೂಲಕ OTT ಅಪ್ಲಿಕೇಶನ್‌ನೊಂದಿಗೆ ಅನ್ಲಿಮಿಟೆಡ್ ಕರೆ ಮತ್ತು ಡೇಟಾವನ್ನು ಆನಂದಿಸಬಹುದು. ಹಾಗಾದ್ರೆ ಈ ಎರಡೂ ಯೋಜನೆಗಳು ಒಂದೇ ರೀತಿಯ ಮಾನ್ಯತೆ ಮತ್ತು ಡೇಟಾವನ್ನು ನೀಡುವುದರಿಂದ ನಿಮಗೆ ಯಾವುದು ಬೆಸ್ಟ್ ತಿಳಿಯಿರಿ.

ಇದನ್ನೂ ಓದಿ: iQOO Z9x 5G ಫೋನ್‌ಗಿಂತ ಕಡಿಮೆ ಬೆಲೆಗೆ ಬೇರೆ 5G ಫೋನ್ ಇಲ್ಲ! 50MP ಕ್ಯಾಮೆರಾ ಮತ್ತು 6000mAh ಬ್ಯಾಟರಿ ಕೇವಲ ₹9,499 ರೂಗಳಿಗೆ ಮಾರಾಟ!

ರಿಲಯನ್ಸ್ ಜಿಯೋದ 1,028 ರೂ. ಯೋಜನಗಳೇನು?

ಈ ಯೋಜನೆಯೊಂದಿಗೆ ರೀಚಾರ್ಜ್ ಮಾಡುವ ಸಂದರ್ಭದಲ್ಲಿ ಜಿಯೋ ಬಳಕೆದಾರರಿಗೆ 84 ದಿನಗಳ ಮಾನ್ಯತೆಯೊಂದಿಗೆ 2GB ದೈನಂದಿನ ಡೇಟಾದ ಪ್ರಯೋಜನವನ್ನು ನೀಡಲಾಗುತ್ತಿದೆ. ಅವರು ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ವಾಯ್ಸ್ ಕರೆಗಳನ್ನು ಮಾಡಬಹುದು ಮತ್ತು ಪ್ರತಿದಿನ 100 SMS ಕಳುಹಿಸಬಹುದು. ಈ ಯೋಜನೆಯು 90 ದಿನಗಳವರೆಗೆ ಜಿಯೋಹಾಟ್‌ನ್ಸಾರ್ ಮೊಬೈಲ್ / ಟಿವಿ ಚಂದಾದಾರಿಕೆಯ ಪ್ರಯೋಜನವನ್ನು ನೀಡುತ್ತದೆ.

Reliance Jio 1028 and 1029 Recharge Plans - Jio Plans
Reliance Jio 1028 and 1029 Recharge Plans – Jio Plans

ಇದರಲ್ಲಿ ಸ್ವಿಗ್ಗಿ ಒನ್ ಲೈಟ್‌ನ ಚಂದಾದಾರಿಕೆಯನ್ನು ಮೂರು ತಿಂಗಳವರೆಗೆ ನೀಡಲಾಗುತ್ತಿದ್ದು600 ರೂ.ಗಳ ಮೌಲ್ಯದ ಪ್ರಯೋಜನಗಳು ಲಭ್ಯವಿದೆ. ಅಲ್ಲದೆ ಈ ಯೋಜನೆಯನ್ನು ಆಯ್ಕೆ ಮಾಡುವವರಿಗೆ 50 ರೂ.ಗಳ ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದ್ದು ಇದರ ಪ್ರಯೋಜನವು 1,028 ರೂ.ಗಳಿಗೆ ಮತ್ತೆ ರೀಚಾರ್ಜ್ ಮಾಡಿದರೆ ಲಭ್ಯವಿರುತ್ತದೆ. ಈ ಯೋಜನೆಯು ಅರ್ಹ ಬಳಕೆದಾರರಿಗೆ ಅನಿಯಮಿತ 5G ಡೇಟಾದ ಪ್ರಯೋಜನವನ್ನು ನೀಡುತ್ತದೆ.

ರಿಲಯನ್ಸ್ ಜಿಯೋದ ರೂ. 1,029 ಯೋಜನ (Jio Plans)

ನೀವು ಅದೇ ಯೋಜನೆಯ ಮೇಲೆ ಕೇವಲ 1 ರೂ. ಹೆಚ್ಚು ಖರ್ಚು ಮಾಡಿ 1,029 ರೂಗಳ ಪ್ಲಾನ್‌ನೊಂದಿಗೆ ರೀಚಾರ್ಜ್ ಮಾಡಿದರೆ ನೀವು 2GB ದೈನಂದಿನ ಡೇಟಾ ಮತ್ತು ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಧ್ವನಿ ಕರೆ ಪ್ರಯೋಜನವನ್ನು 84 ದಿನಗಳ ಪೂರ್ಣ ಮಾನ್ಯತೆಯೊಂದಿಗೆ ಪಡೆಯುತ್ತೀರಿ. ಈ ಯೋಜನೆಯು ಅಮೆಜಾನ್ ಪ್ರೈಮ್ ಲೈಟ್ ಚಂದಾದಾರಿಕೆಯನ್ನು 84 ದಿನಗಳವರೆಗೆ ಮಾತ್ರ ನೀಡುತ್ತಿದೆ. ಈ ಯೋಜನೆಯು ದಿನಕ್ಕೆ 100 SMS ನೀಡುತ್ತದೆ ಮತ್ತು 90 ದಿನಗಳವರೆಗೆ Jio Hotstar ಮೊಬೈಲ್ / ಟಿವಿ ಚಂದಾದಾರಿಕೆಯೊಂದಿಗೆ ಬರುತ್ತದೆ. ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವಾಗ ಅರ್ಹ ಚಂದಾದಾರರು ಅನಿಯಮಿತ 5G ಡೇಟಾದ ಪ್ರಯೋಜನವನ್ನು ಪಡೆಯುತ್ತಾರೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo