Jio ಸಂಸ್ಥೆಯ ಈ ಪ್ಲಾನಿನಲ್ಲಿ ದಿನವೂ 2.5GB ಡೇಟಾ! ಬೆಲೆ ಜಸ್ಟ್ 399 ರೂ.ಗಳು
ಜಿಯೋದ ಈ ಅಗ್ಗದ ಪ್ಲಾನಿನಲ್ಲಿ ನಿತ್ಯ 2.5GB ಡೇಟಾ ಪ್ರಯೋಜನ
ಜಿಯೋ ಟೆಲಿಕಾಂನ 399 ರೂ.ಗಳ ಪ್ಲಾನ್‌ನಲ್ಲಿ 28 ದಿನಗಳ ವ್ಯಾಲಿಡಿಟಿ ಲಭ್ಯ
ಈ ಪ್ಲಾನಿನಲ್ಲಿ ಬಳಕೆದಾರರಿಗೆ ಅನಿಯಮಿತ ವಾಯ್ಸ್ ಕರೆಗಳ ಪ್ರಯೋಜನ ಸಿಗುತ್ತದೆ
ದೇಶದ ಟೆಲಿಕಾಂ ವಲಯದಲ್ಲಿ ರಿಲಯನ್ಸ್ Jio ಏರ್‌ಟೆಲ್ ಹಾಗೂ ವಿ ಕಂಪನಿಗಳಿಗೆ ನೇರ ಪೈಪೋಟಿ ನೀಡಿ ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿದೆ. ಜಿಯೋ ಆಕರ್ಷಕ ರೀಚಾರ್ಜ್ ಪ್ಲಾನ್‌ಗಳ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆದಿದೆ. ಜಿಯೋ ರೀಚಾರ್ಜ್ ಪಟ್ಟಿಯಲ್ಲಿ ಬಜೆಟ್ ಬೆಲೆಯಲ್ಲಿ ಅಧಿಕ ಡೇಟಾ ಸೌಲಭ್ಯ ಪಡೆದ ಪ್ಲಾನ್‌ಗಳು ಸೇರಿವೆ. ಅದಾಗ್ಯೂ, ಹೆಚ್ಚಿನ ವ್ಯಾಲಿಡಿಟಿ ಜೊತೆಗೆ ಪ್ರತಿದಿನ ನಿಗದಿತ ಡೇಟಾ ಪ್ರಯೋಜನ ನೀಡುವ ಯೋಜನೆಗಳು ಬೇಡಿಕೆಯಲ್ಲಿ ಕಾಣಿಸಿಕೊಂಡಿವೆ. ಆ ಪೈಕಿ ಜಿಯೋ ಟೆಲಿಕಾಂನ 399 ರೂ.ಗಳ ಬೆಲೆಯ ಪ್ರೀಪೇಯ್ಡ್ ರೀಚಾರ್ಜ್ ಯೋಜನೆ ಹೆಚ್ಚು ಆಕರ್ಷಕವಾಗಿ ಕಾಣಿಸಿಕೊಂಡಿದೆ. ಈ ಬಜೆಟ್ ಬೆಲೆಯ ಯೋಜನೆಯು ದೈನಂದಿನ ಡೇಟಾ ಸೌಲಭ್ಯ ಪಡೆದುಕೊಂಡಿರುವ ಜೊತೆಗೆ 28 ದಿನಗಳ ವ್ಯಾಲಿಡಿಟಿ ಸಹ ಒಳಗೊಂಡಿದೆ. ಹಾಗಾದರೆ ಜಿಯೋ ಟೆಲಿಕಾಂನ 399 ರೂ.ಗಳ ಪ್ಲಾನ್ ಹಾಗೂ ಇತರೆ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಗಳ ಸಂಪೂರ್ಣ ಮಾಹಿತಿ ಮುಂದೆ ತಿಳಿಯೋಣ.
SurveyAlso Read : ಡಿಸ್ಕೌಂಟ್‌ನಲ್ಲಿ OnePlus 13R ಖರೀದಿಸುವ ಪ್ಲಾನ್ ಇದ್ರೆ, ಈ ಚಾನ್ಸ್ ಕಳ್ಕೋಬೇಡಿ!
Jio ಟೆಲಿಕಾಂನ 399 ರೂ.ಗಳ ಯೋಜನೆಯ ಮಾಹಿತಿ
ಜಿಯೋ ಟೆಲಿಕಾಂನ 399 ರೂ.ಗಳ ವಾರ್ಷಿಕ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ಯೋಜನೆಯಲ್ಲಿ ಪ್ರತಿದಿನ 2.5GB ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಈ ಪ್ಲಾನಿನಲ್ಲಿ ಅನಿಯಮಿತ ವಾಯ್ಸ್ ಕರೆಗಳ ಪ್ರಯೋಜನ ಸಹ ಲಭ್ಯವಾಗಲಿದೆ. ಅಂದಹಾಗೆ ಈ ರೀಚಾರ್ಜ್ ಪ್ಲಾನಿನಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಕೂಡಾ ಸಿಗಲಿದೆ. ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 70GB ಡೇಟಾ ಸಿಗಲಿದೆ.

ಜಿಯೋದ ಇತರೆ ಆಕರ್ಷಕ ಯೋಜನೆಗಳು
ಜಿಯೋ ಟೆಲಿಕಾಂನ 2025 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟು 200 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ಯೋಜನೆಯಲ್ಲಿ ಪ್ರತಿದಿನ 2.5GB ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಈ ಪ್ಲಾನಿನಲ್ಲಿ ಅನಿಯಮಿತ ವಾಯ್ಸ್ ಕರೆಗಳ ಪ್ರಯೋಜನ ಸಹ ಲಭ್ಯವಾಗಲಿದೆ. ಅಂದಹಾಗೆ ಈ ರೀಚಾರ್ಜ್ ಪ್ಲಾನಿನಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಕೂಡಾ ಸಿಗಲಿದೆ. ಇನ್ನು ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 500GB ಡೇಟಾ ಸಿಗಲಿದೆ.
ಜಿಯೋ ಟೆಲಿಕಾಂನ 3599 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಒಟ್ಟು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಲಭ್ಯವಾಗುತ್ತದೆ. ಈ ಯೋಜನೆಯಲ್ಲಿ ಪ್ರತಿದಿನ 2.5GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಈ ಪ್ಲಾನಿನಲ್ಲಿ ಅನಿಯಮಿತ ವಾಯ್ಸ್ ಕರೆಗಳ ಪ್ರಯೋಜನ ಸಹ ಲಭ್ಯವಾಗಲಿದೆ. ಅಂದಹಾಗೆ ಈ ರೀಚಾರ್ಜ್ ಪ್ಲಾನಿನಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಕೂಡಾ ಸಿಗಲಿದೆ. ಅಲ್ಲದೇ ಜಿಯೋ ಟಿವಿ ಚಂದಾದಾರಿಕೆ ಲಭ್ಯ ಜೊತೆಗೆ ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 912.5 GB ಡೇಟಾ ಸಿಗಲಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile