Jio Plan: ರಿಲಯನ್ಸ್ ಜಿಯೋ ಟೆಲಿಕಾಂ ಕಂಪನಿಯು ತನ್ನ ಪ್ರಿಪೇಯ್ಡ್ ಹೊಸ ವರ್ಷದ ಕೊಡುಗೆಗಳನ್ನು ಎಲ್ಲಾ ಬಳಕೆದಾರರಿಗೆ ಪರಿಚಯಿಸಿದೆ. ರಿಲಯನ್ಸ್ ಜಿಯೋ ಈ ವರ್ಷ 2023 ರಲ್ಲಿ ವಿಶೇಷ ವಾರ್ಷಿಕ ಯೋಜನೆಯನ್ನು ಪರಿಚಯಿಸಿದೆ. ಇದರ ಬೆಲೆ 2023 ರೂಗಳಾಗಿದೆ. ಹೊಸ ಯೋಜನೆಯನ್ನು ಪರಿಚಯಿಸುವುದರ ಜೊತೆಗೆ ಜಿಯೋ ತನ್ನ ಅಸ್ತಿತ್ವದಲ್ಲಿರುವ ಯೋಜನೆಗಳಲ್ಲಿ ಒಂದಕ್ಕೆ ಹೆಚ್ಚುವರಿ ಪ್ರಯೋಜನಗಳನ್ನು ಸೇರಿಸಿದೆ. ಈ ವಾರ್ಷಿಕ ಪ್ರಿಪೇಯ್ಡ್ ಯೋಜನೆಗಳು ಮಾಸಿಕ ಪ್ರಿಪೇಯ್ಡ್ ಯೋಜನೆಗಳಿಗಿಂತ ಹೆಚ್ಚು ಅನುಕೂಲಕರವಾಗಿದೆ. ಏಕೆಂದರೆ ಅವುಗಳು ಮಾಸಿಕ ಯೋಜನೆಗಳ ಮೇಲೆ ಪ್ರಯೋಜನಗಳನ್ನು ನೀಡುತ್ತವೆ.
Survey
✅ Thank you for completing the survey!
ಜಿಯೋ ₹2,999 ಯೋಜನೆ:
ಜಿಯೋ ಯೋಜನೆಯು ಅನಿಯಮಿತ 912.5GB ಡೇಟಾದೊಂದಿಗೆ ಬರುತ್ತದೆ. ಮತ್ತು ಬಳಕೆದಾರರಿಗೆ ಪ್ರತಿದಿನ 2.5GB ಬಳಸಲು ಅನುಮತಿಸಲಾಗುತ್ತದೆ. ಇದು ಖಾಲಿಯಾದ ನಂತರ ಬಳಕೆದಾರರು 64kbps ಕಡಿಮೆ ವೇಗದಲ್ಲಿ ಅನಿಯಮಿತ ಇಂಟರ್ನೆಟ್ ಅನ್ನು ಬಳಸಬಹುದು. ಇದು ಬಳಕೆದಾರರಿಗೆ ದಿನಕ್ಕೆ 100 SMS ಜೊತೆಗೆ ಅನಿಯಮಿತ ವಾಯ್ಸ್ ಕರೆ ಪ್ರಯೋಜನಗಳನ್ನು ಒದಗಿಸುತ್ತದೆ. ಈ ಯೋಜನೆಯ ಮಾನ್ಯತೆಯು 365 ದಿನಗಳವರೆಗೆ ಇರುತ್ತದೆ ಮತ್ತು ಜಿಯೋ ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆಯನ್ನು ನೀಡುತ್ತದೆ.
ಈ ಯೋಜನೆಯು ಹೊಸ ಯೋಜನೆ ಅಲ್ಲ ಆದರೆ ಯೋಜನೆಗೆ ಕೆಲವು ಹೊಸ ಪ್ರಯೋಜನಗಳನ್ನು ಸೇರಿಸುವುದು ಗಮನಾರ್ಹವಾಗಿದೆ. ಈ ಹೆಚ್ಚುವರಿ ಪ್ರಯೋಜನಗಳು 23 ದಿನಗಳ ಹೆಚ್ಚುವರಿ ಮಾನ್ಯತೆ ಮತ್ತು 75GB ಹೆಚ್ಚುವರಿ ಹೈ-ಸ್ಪೀಡ್ ಡೇಟಾವನ್ನು ಪಡೆಯಬವುದು. ವಾರ್ಷಿಕ ಯೋಜನೆಗಳೊಂದಿಗೆ ನೀವು ಪ್ರತಿ ವರ್ಷ ನಿಮ್ಮ ಫೋನ್ ಸಂಖ್ಯೆಯನ್ನು ರೀಚಾರ್ಜ್ ಮಾಡಬೇಕಾಗಿಲ್ಲ. ನೀವು ವರ್ಷಕ್ಕೊಮ್ಮೆ ರೀಚಾರ್ಜ್ ಮಾಡಿ ರಿಚಾರ್ಜ್ ಅನ್ನೋ ತಲೆನೋವಿನಿಂದ ದೂರ ಉಳಿಯಬವುದು.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile