Disney+ Hotstar ಜೊತೆಗೆ ಅನ್ಲಿಮಿಟೆಡ್ ಕರೆ ಮತ್ತು 4G ಡೇಟಾ ನೀಡುವ ಅತ್ಯುತ್ತಮ Jio ಪ್ಲಾನ್‌ಗಳು

Disney+ Hotstar ಜೊತೆಗೆ ಅನ್ಲಿಮಿಟೆಡ್ ಕರೆ ಮತ್ತು 4G ಡೇಟಾ ನೀಡುವ ಅತ್ಯುತ್ತಮ Jio ಪ್ಲಾನ್‌ಗಳು
HIGHLIGHTS

ಜಿಯೋ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯೊಂದಿಗೆ ಎರಡು ರೀಚಾರ್ಜ್ ಯೋಜನೆಗಳನ್ನು ನೀಡುತ್ತದೆ.

ಜಿಯೋ ಪ್ರಿಪೇಯ್ಡ್, ಪೋಸ್ಟ್‌ಪೇಯ್ಡ್ ಮತ್ತು ಜಿಯೋ ಫೈಬರ್ ಯೋಜನೆಗಳೊಂದಿಗೆ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಗಳನ್ನು ನೀಡುತ್ತದೆ.

ಪ್ರಿಪೇಯ್ಡ್ ರೀಚಾರ್ಜ್ ಮೂಲಕ ಡಿಸ್ನಿ + ಮತ್ತು ಹಾಟ್‌ಸ್ಟಾರ್ ಪ್ರೀಮಿಯಂ ಚಂದಾದಾರಿಕೆಗಳನ್ನು ಒದಗಿಸುವ ಮೊದಲ ಭಾರತೀಯ ಟೆಲಿಕಾಂ ಕಂಪನಿ ಜಿಯೋ ಆಗಿದೆ.

ರಿಲಯನ್ಸ್ ಜಿಯೋ (Reliance Jio) ನೀಡುತ್ತಿರುವ ಡಿಸ್ನಿ+ ಹಾಟ್‌ಸ್ಟಾರ್ (Disney+ Hotstar) ಭಾರತೀಯ OTT ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಗಿದೆ. ಇದರಲ್ಲಿ ನೀವು ಲೇಟೆಸ್ಟ್ ಮೂವೀಸ್, ವೆಬ್ ಸೀರಿಸ್, ಟಿವಿ ಸೀರಿಯಲ್ ಮತ್ತು ನಾಟಕಗಳನ್ನು ದೊಡ್ಡ ಕ್ಯಾಟಲಾಗ್‌ನಿಂದ ವೀಕ್ಷಿಸಬವುದು. ಸದ್ಯಕ್ಕೆ ರಿಲಯನ್ಸ್ ಜಿಯೋ (Reliance Jio) ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್‌ಗೆ ಚಂದಾದಾರಿಕೆಯನ್ನು ಒಳಗೊಂಡಿರುವ ಕೇವಲ ಎರಡು ರೀಚಾರ್ಜ್ ಯೋಜನೆಗಳನ್ನು ಮಾತ್ರ ಒಳಗೊಂಡಿದೆ. ಮತ್ತು ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂಗೆ ಚಂದಾದಾರಿಕೆಯನ್ನು ಒಳಗೊಂಡಿರುತ್ತದೆ. ಈ ರಿಲಯನ್ಸ್ ಜಿಯೋ (Reliance Jio) ಯೋಜನೆಗಳ ಅವಧಿಯು ಕ್ರಮವಾಗಿ 84 ಮತ್ತು 365 ದಿನಗಳನ್ನು ಹೊಂದಿದೆ. ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಜಿಯೋ ಪರಸ್ಪರ ತಮ್ಮ ಬದ್ಧತೆಗಳನ್ನು ಮರುಹೊಂದಿಸಿದ್ದಾರೆ.  ಮತ್ತು ಪ್ರಸ್ತುತ ಜಿಯೋದಿಂದ ಕೆಳಗಿನ ಯೋಜನೆಗಳನ್ನು ರಿಚಾರ್ಜ್ ಮಾಡುವುದರಿಂದ ಡಿಸ್ನಿ+ ಹಾಟ್‌ಸ್ಟಾರ್ (Disney+ Hotstar) ಒಟಿಟಿ ಸೇವೆಯ ಉಚಿತ ಚಂದಾದಾರಿಕೆಯೊಂದಿಗೆ  ಪ್ರವೇಶವನ್ನು ಪಡೆಯಬವುದು.

ಜಿಯೋ ರೂ.1499 ರಿಚಾರ್ಜ್ ಪ್ಲಾನ್

ರಿಲಯನ್ಸ್ ಜಿಯೋ (Reliance Jio) ನೀಡುತ್ತಿರುವ ಈ ಯೋಜನೆಯು ಅನಿಯಮಿತ ಕರೆಗಳನ್ನು ನೀಡುತ್ತದೆ. 84 ದಿನಗಳ ಪ್ಯಾಕ್ ಮಾನ್ಯತೆಯೊಂದಿಗೆ ದಿನಕ್ಕೆ 100 SMS ಲಭ್ಯವಿದೆ. ಇದು 2GB ದೈನಂದಿನ ಡೇಟಾ ಮಿತಿಯೊಂದಿಗೆ 168GB ಒಟ್ಟು ಡೇಟಾವನ್ನು ಸಹ ನೀಡುತ್ತದೆ. ಬಳಕೆದಾರರು  JioTV, JioCinema ಮತ್ತು ಹೆಚ್ಚಿನ ಅಪ್ಲಿಕೇಶನ್‌ಗಳಿಗೆ ಪೂರಕ ಪ್ರವೇಶದೊಂದಿಗೆ 1 ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಚಂದಾದಾರಿಕೆಯನ್ನು ಸಹ ಪಡೆಯುತ್ತಾರೆ.

ದಿನಕ್ಕೆ 100 SMS.
ಜಿಯೋ ಸಿನಿಮಾ, ಟಿವಿ, ಸೆಕ್ಯುರಿಟಿ, ಕ್ಲೌಡ್
ಅನಿಯಮಿತ ವಾಯ್ಸ್ ಕರೆ ಡೇಟಾ.
ಇದು ಹೆಚ್ಚಿನ ವೇಗದ ಸ್ಟ್ರೀಮಿಂಗ್ ಅನ್ನು ನೀಡುತ್ತದೆ.
ಇದರಲ್ಲಿ ಪ್ರತಿದಿನ 2GB ಡೇಟಾವನ್ನು ಬಳಸಿದ ನಂತರ ವೇಗವು 64 kbps ಗೆ ಇಳಿಯುತ್ತದೆ.
ಡಿಸ್ನಿ+ ಹಾಟ್‌ಸ್ಟಾರ್ 84 ದಿನಗಳವರೆಗೆ ಉಚಿತವಾಗಿದೆ.

ಜಿಯೋ ರೂ.4199 ರಿಚಾರ್ಜ್ ಪ್ಲಾನ್

ರಿಲಯನ್ಸ್ ಜಿಯೋ (Reliance Jio) ನೀಡುತ್ತಿರುವ ಈ ಪ್ರಿಪೇಯ್ಡ್ ಯೋಜನೆಯು ಅನಿಯಮಿತ ಕರೆಗಳನ್ನು 365 ದಿನಗಳ ಪ್ಯಾಕ್ ಮಾನ್ಯತೆಯೊಂದಿಗೆ ದಿನಕ್ಕೆ 100 SMS ನೀಡುತ್ತದೆ. ಇದು 3GB ದೈನಂದಿನ ಡೇಟಾ ಮಿತಿಯೊಂದಿಗೆ 1095GB ಒಟ್ಟು ಡೇಟಾವನ್ನು ಒಳಗೊಂಡಿದೆ. ಬಳಕೆದಾರರು  JioTV, JioCinema ಮತ್ತು ಹೆಚ್ಚಿನ ಅಪ್ಲಿಕೇಶನ್‌ಗಳಿಗೆ ಪೂರಕ ಪ್ರವೇಶದೊಂದಿಗೆ 1 ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಚಂದಾದಾರಿಕೆಯನ್ನು ಸಹ ಪಡೆಯುತ್ತಾರೆ.

ದಿನಕ್ಕೆ 100 SMS.
ಜಿಯೋ ಸಿನಿಮಾ, ಟಿವಿ, ಸೆಕ್ಯುರಿಟಿ, ಕ್ಲೌಡ್
ಅನಿಯಮಿತ ವಾಯ್ಸ್ ಕರೆ ಡೇಟಾ.
ಇದು ಹೆಚ್ಚಿನ ವೇಗದ ಸ್ಟ್ರೀಮಿಂಗ್ ಅನ್ನು ನೀಡುತ್ತದೆ.
ಇದರಲ್ಲಿ ಪ್ರತಿದಿನ 3GB ಡೇಟಾವನ್ನು ಬಳಸಿದ ನಂತರ ವೇಗವು 64 kbps ಗೆ ಇಳಿಯುತ್ತದೆ.
ಡಿಸ್ನಿ+ ಹಾಟ್‌ಸ್ಟಾರ್ ಒಂದು ವರ್ಷದವರೆಗೆ ಉಚಿತ ವ್ಯಾಲಿಡಿಟಿಯನ್ನು ನೀಡುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo