Jio Plans: ಅನ್ಲಿಮಿಟೆಡ್ ಕರೆ ಮತ್ತು 5G ವೇಗದ ಡೇಟಾದೊಂದಿಗೆ OTT ಸೇವೆಯನ್ನು ನೀಡುವ ಈ ಪ್ಲಾನ್ ಬೆಲೆ ಎಷ್ಟು?

Jio Plans: ಅನ್ಲಿಮಿಟೆಡ್ ಕರೆ ಮತ್ತು 5G ವೇಗದ ಡೇಟಾದೊಂದಿಗೆ OTT ಸೇವೆಯನ್ನು ನೀಡುವ ಈ ಪ್ಲಾನ್ ಬೆಲೆ ಎಷ್ಟು?
HIGHLIGHTS

ರಿಲಯನ್ಸ್ ಜಿಯೋನ ಆಯ್ದ ಕೆಲವು ಪೋಸ್ಟ್‌ಪೇಯ್ಡ್ ಯೋಜನೆಗಳೊಂದಿಗೆ ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ನೀಡುತ್ತಿದೆ.

ರಿಲಯನ್ಸ್ ಜಿಯೋ ವೆಲ್ಕಮ್ ಆಫರ್ ಹೊಂದಿರುವ ಬಳಕೆದಾರರು 5G ಮೂಲಕ OTT ವಿಷಯವನ್ನು ಸ್ಟ್ರೀಮ್ ಮಾಡಬಹುದು.

ಜಿಯೋ ಪೋಸ್ಟ್‌ಪೇಯ್ಡ್ ಗ್ರಾಹಕರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನೆಟ್‌ಫ್ಲಿಕ್ಸ್‌ನಿಂದ OTT ವಿಷಯಗಳನ್ನು ಸ್ಟ್ರೀಮ್ ಮಾಡಬಹುದು.

Jio Plans 2023: ನೀವು ರಿಲಯನ್ಸ್ ಜಿಯೋವಿನ ಬಳಕೆದಾರರಾಗಿದ್ದಾರೆ ನೀವು Jio 5G ವೆಲ್ಕಮ್ ಆಫರ್ ಅನ್ನು ಸ್ವೀಕರಿಸಬಹುದು. ಕೇವಲ 239 ಅಥವಾ ಅದಕ್ಕಿಂತ ಹೆಚ್ಚಿನ ರೀಚಾರ್ಜ್ ಯೋಜನೆಯೊಂದಿಗೆ ನೀವು ಈಗ ಅನ್‌ಲಿಮಿಟೆಡ್ ಕರೆ ಮತ್ತು ಹೈ-ಸ್ಪೀಡ್  5G ಡೇಟಾದ ಲಾಭವನ್ನು ಪಡೆಯಬಹುದು. ಅಷ್ಟೇ ಅಲ್ಲದೆ ನಿರ್ದಿಷ್ಟ ಜಿಯೋ ಪೋಸ್ಟ್‌ಪೇಯ್ಡ್ ಯೋಜನೆಗಳ ಬಳಕೆದಾರರು ರಿಲಯನ್ಸ್ ಜಿಯೋದಿಂದ ಉಚಿತ ನೆಟ್‌ಫ್ಲಿಕ್ಸ್ ಮೊಬೈಲ್ ಪ್ಲಾನ್ ಚಂದಾದಾರಿಕೆಯನ್ನು ಪಡೆಯಬಹುದು. ಇದರಿಂದ ಜಿಯೋ ಪೋಸ್ಟ್‌ಪೇಯ್ಡ್ ಗ್ರಾಹಕರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನೆಟ್‌ಫ್ಲಿಕ್ಸ್‌ನಿಂದ OTT ವಿಷಯಗಳನ್ನು ಸ್ಟ್ರೀಮ್ ಮಾಡಬಹುದು.

ಜಿಯೋ ಪೋಸ್ಟ್‌ಪೇಯ್ಡ್ ಯೋಜನೆ-

5G ನೆಟ್‌ವರ್ಕ್‌ನಲ್ಲಿ ಯಾವುದೇ ಸಮಯದಲ್ಲಿ ಎಲ್ಲೇ ಇದ್ದರೂ ಉಚಿತವಾಗಿ ಚಲನಚಿತ್ರಗಳು ಮತ್ತು ಟಿವಿ ಶೋಗಳನ್ನು ವೀಕ್ಷಿಸಬಹುದು. ಪಾವತಿಸಿದ OTT ಅಪ್ಲಿಕೇಶನ್‌ಗಳಿಗಾಗಿ ಆಯ್ದ ಪೋಸ್ಟ್‌ಪೇಯ್ಡ್ ರೀಚಾರ್ಜ್ ಯೋಜನೆಗಳಿಗೆ ಉಚಿತ ಪ್ರವೇಶ ಸೇರಿದಂತೆ ಹಲವಾರು ಪ್ರಯೋಜನಗಳನ್ನು Jio ನೀಡುತ್ತದೆ. ಜಿಯೋ ಪ್ರೈಮ್ ಪ್ರಯೋಜನಗಳೊಂದಿಗೆ OTT ಚಂದಾದಾರಿಕೆಯು Netflix ಮತ್ತು Amazon Prime ಸದಸ್ಯತ್ವಕ್ಕೆ ಉಚಿತ ಪ್ರವೇಶವನ್ನು ಒಳಗೊಂಡಿದೆ. ನೀವು OTT ಪ್ರಯೋಜನಗಳೊಂದಿಗೆ ಪೋಸ್ಟ್‌ಪೇಯ್ಡ್ ಪ್ಯಾಕೇಜ್‌ಗಾಗಿ ಹುಡುಕುತ್ತಿದ್ದರೆ ಈ Jio ಯೋಜನೆಗಳನ್ನು ನೋಡಬಹುದು. ಕರೆ, ಡೇಟಾ ಮತ್ತು OTT ಯೋಜನಗಳನ್ನು ಒಳಗೊಂಡಿರುವ Jio ಯೋಜನೆಗಳ ಫುಲ್‌ ಡಿಟೈಲ್ಸ್‌ ಇಲ್ಲಿದೆ ನೋಡಿ.

ಜಿಯೋ 399 ಯೋಜನೆ-

ಈ ರೆಂಟಲ್ ಯೋಜನೆಯು ಒಟ್ಟು 75GB ಡೇಟಾವನ್ನು ನೀಡುತ್ತದೆ. ಅನ್‌ಲಿಮಿಟೆಡ್ ಧ್ವನಿ ಕರೆಗಳು ಮತ್ತು ಪ್ರತಿದಿನ 100 SMS ಹಾಗೂ ಪ್ರತಿ GB ಗೆ 10 ರೂ ವೆಚ್ಚವಾಗಲಿದೆ. ನೆಟ್‌ಫ್ಲಿಕ್ಸ್ (ಮೊಬೈಲ್ ಯೋಜನೆ) ಮತ್ತು ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು OTT ಪ್ರಯೋಜನಗಳಲ್ಲಿ ಸೇರಿಸಲಾಗಿದೆ. Jio ತನ್ನ  JioTV ಮತ್ತು JioCloud ನಂತಹ ಅಪ್ಲಿಕೇಶನ್‌ಗಳಲ್ಲಿಯೂ ಸಹ ಪ್ರಯೋಜನಗಳನ್ನು ಹೆಚ್ಚಿಸಿದೆ. ಅಷ್ಟೇ ಅಲ್ಲದೆ ಈ ಪ್ಯಾಕೇಜ್ ಅರ್ಹ ಚಂದಾದಾರರಿಗೆ 5G ಸ್ಪೀಡ್ ಸಹ ನೀಡುತ್ತದೆ.

ಜಿಯೋ 599 ಯೋಜನೆ-

ಈ ಯೋಜನೆಯಲ್ಲಿ ಅನ್‌ಲಿಮಿಟೆಡ್ ಧ್ವನಿ ಕರೆಗಳು, ಪ್ರತಿದಿನ 100 SMS ಹಾಗೂ ಪ್ರತಿ GB ಗೆ 10 ರೂ ವೆಚ್ಚವಾಗಲಿದ್ದು ಕುಟುಂಬ ಯೋಜನೆಯ ಅಡಿಯಲ್ಲಿ ಹೆಚ್ಚುವರಿ ಜಿಯೋ ಸಿಮ್ ಅನ್ನು ಒಳಗೊಂಡಿದೆ. ಈ ಪ್ಯಾಕೇಜ್‌ನಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಜಿಯೋ ಅಪ್ಲಿಕೇಶನ್‌ಗಳನ್ನು ಉಚಿತ OTT ಚಂದಾದಾರಿಕೆಯಲ್ಲಿ ಸೇರಿಸಲಾಗಿದೆ.

ಜಿಯೋ 799 ಯೋಜನೆ-

ಜಿಯೋದ ಈ ಕುಟುಂಬ ಯೋಜನೆಯು ಎರಡು ಜಿಯೋ ಸಿಮ್‌ಗಳು ಮತ್ತು 150GB ಒಟ್ಟು ಡೇಟಾ ಅನ್ನು ಒಳಗೊಂಡಿದ್ದು ಹಾಗೂ ಪ್ರತಿ GB ಗೆ 10 ರೂ ವೆಚ್ಚವಾಗಲಿದೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯ ಜೊತೆಗೆ ಬಳಕೆದಾರರು ಅನ್‌ಲಿಮಿಟೆಡ್ ಧ್ವನಿ ಕರೆಗಳು ಮತ್ತು ಪ್ರತಿದಿನ 100 SMS ನಂತಹ ಪ್ರಯೋಜನಗಳನ್ನು ಪಡೆಯಬಹುದು.

ಜಿಯೋ 999 ಯೋಜನೆ-

ಜಿಯೋದ ಈ ಕುಟುಂಬ ಯೋಜನೆಯು ಮೂರು ಜಿಯೋ ಸಿಮ್‌ಗಳು ಮತ್ತು 200GB ಒಟ್ಟು ಡೇಟಾವನ್ನು ಒಳಗೊಂಡಿದ್ದು ಹಾಗೂ ಪ್ರತಿ GB ಗೆ 10 ರೂ ವೆಚ್ಚವಾಗಲಿದೆ. ಈ ಪೋಸ್ಟ್‌ಪೇಯ್ಡ್ ರೀಚಾರ್ಜ್ ಯೋಜನೆಯು ಅನ್‌ಲಿಮಿಟೆಡ್ ವಾಯ್ಸ್ ಕರೆಗಳು, ಪ್ರತಿದಿನ  100 SMS ಹಾಗೂ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo