ಜಿಯೋದ ಈ ಭರ್ಜರಿ ಪ್ಲಾನ್‌ಗಳಲ್ಲಿ OTT ಬೆನಿಫಿಟ್‌ನೊಂದಿಗೆ 4G ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳು

ಜಿಯೋದ ಈ ಭರ್ಜರಿ ಪ್ಲಾನ್‌ಗಳಲ್ಲಿ OTT ಬೆನಿಫಿಟ್‌ನೊಂದಿಗೆ 4G ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳು
HIGHLIGHTS

ರಿಲಯನ್ಸ್ ಜಿಯೋ (Reliance Jio) ತನ್ನ ಪ್ರಿಪೇಯ್ಡ್ (Prepaid) ಬಳಕೆದಾರರಿಗೆ ಹೊಸ ಉತ್ತಮ ಯೋಜನೆಗಳನ್ನು ಬಿಡುಗಡೆ ಮಾಡಿದೆ.

3 ತಿಂಗಳವರೆಗೆ ಉಚಿತವಾಗಿಯೇ OTT ಡಿಸ್ನಿ+ ಹಾಟ್‌ಸ್ಟಾರ್ (Disney+ Hotstar) ಮೊಬೈಲ್ ಚಂದಾದಾರಿಕೆಯ ಪ್ರಯೋಜನವನ್ನು ನೀಡುತ್ತದೆ

ರಿಲಯನ್ಸ್ ಜಿಯೋದ ರೂ 333 ಪ್ರಿಪೇಯ್ಡ್ ಯೋಜನೆಗಳು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.

ಮುಕೇಶ್ ಅಂಬಾನಿಯವರ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ (Reliance Jio) ತನ್ನ ಪ್ರಿಪೇಯ್ಡ್ (Prepaid) ಬಳಕೆದಾರರಿಗೆ ಹೊಸ ಉತ್ತಮ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಇದು ನಿಮಗೆ ಮೂರು ತಿಂಗಳವರೆಗೆ ಉಚಿತವಾಗಿಯೇ OTT ಡಿಸ್ನಿ+ ಹಾಟ್‌ಸ್ಟಾರ್ (Disney+ Hotstar) ಮೊಬೈಲ್ ಚಂದಾದಾರಿಕೆಯ ಪ್ರಯೋಜನವನ್ನು ನೀಡುತ್ತದೆ. ಈ ರಿಲಯನ್ಸ್ ಜಿಯೋ (Reliance Jio) ಪ್ಲಾನ್‌ಗಳ ಬೆಲೆ 151 ರೂ.ನಿಂದ 783 ರೂ.ವರೆಗೆ ಆರಂಭವಾಗುತ್ತದೆ. ಈ ರಿಲಯನ್ಸ್ ಜಿಯೋ (Reliance Jio) ಪ್ಲಾನ್‌ಗಳಿಂದ ನೀವು ಪಡೆಯುವ ಪ್ರಯೋಜನಗಳೇನು? ಮತ್ತು ಪ್ರತಿ ಪ್ಲಾನ್‌ನ ಬೆಲೆ ಮತ್ತು ವ್ಯಾಲಿಡಿಟಿ ಎಷ್ಟು ಇದರ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆಯುತ್ತೀರಿ.

ರಿಲಯನ್ಸ್ ಜಿಯೋ ರೂ 333 ಪ್ರಿಪೇಯ್ಡ್ ಯೋಜನೆ

ಜಿಯೋದ ರೂ 333 ಪ್ರಿಪೇಯ್ಡ್ ಯೋಜನೆಗಳು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಮತ್ತು ಇದು ಅನಿಯಮಿತ ಧ್ವನಿ ಕರೆಗಳನ್ನು ದಿನಕ್ಕೆ 1.5GB ಡೇಟಾವನ್ನು ನೀಡುತ್ತದೆ. ಇದು ತಿಂಗಳಿಗೆ 42GB ಡೇಟಾವನ್ನು ನೀಡುತ್ತದೆ. ಒಮ್ಮೆ ಈ ಮಿತಿಯು ಮುಗಿದ ನಂತರ ನೆಟ್‌ವರ್ಕ್‌ನ ವೇಗವು 64Kbps ಗೆ ಕಡಿಮೆಯಾಗುತ್ತದೆ. ಹೆಚ್ಚುವರಿಯಾಗಿ ಈ ಯೋಜನೆಯು ದಿನಕ್ಕೆ 100 SMS, Jio ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆ ಮತ್ತು ಮೂರು ತಿಂಗಳ Disney+ Hotstar ಮೊಬೈಲ್ ಚಂದಾದಾರಿಕೆಯನ್ನು ನೀಡುತ್ತದೆ.

ರಿಲಯನ್ಸ್ ಜಿಯೋ ರೂ 583 ಪ್ರಿಪೇಯ್ಡ್ ಯೋಜನೆ

ಜಿಯೋದ ರೂ 583 ಪ್ರಿಪೇಯ್ಡ್ ಯೋಜನೆಗಳು 56 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಮತ್ತು ಇದು ದಿನಕ್ಕೆ 1.5GB ಡೇಟಾದೊಂದಿಗೆ ಅನಿಯಮಿತ ಧ್ವನಿ ಕರೆಗಳನ್ನು ನೀಡುತ್ತದೆ. ಇದು ತಿಂಗಳಿಗೆ 84GB ಡೇಟಾವನ್ನು ನೀಡುತ್ತದೆ. ಒಮ್ಮೆ ಈ ಮಿತಿಯು ಮುಗಿದ ನಂತರ ನೆಟ್‌ವರ್ಕ್‌ನ ವೇಗವು 64Kbps ಗೆ ಕಡಿಮೆಯಾಗುತ್ತದೆ. ಈ ಯೋಜನೆಯು ದಿನಕ್ಕೆ 100 SMS, Jio ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆ ಮತ್ತು ಮೂರು ತಿಂಗಳ Disney+ Hotstar ಮೊಬೈಲ್ ಚಂದಾದಾರಿಕೆಯನ್ನು ಸಹ ನೀಡುತ್ತದೆ.

ರಿಲಯನ್ಸ್ ಜಿಯೋ ರೂ 783 ಪ್ರಿಪೇಯ್ಡ್ ಯೋಜನೆ

ಜಿಯೋದ ರೂ 783 ಪ್ರಿಪೇಯ್ಡ್ ಯೋಜನೆಗಳು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಮತ್ತು ಇದು ದಿನಕ್ಕೆ 1.5GB ಡೇಟಾದೊಂದಿಗೆ ಅನಿಯಮಿತ ಧ್ವನಿ ಕರೆಗಳನ್ನು ನೀಡುತ್ತದೆ. ಇದು ತಿಂಗಳಿಗೆ 126GB ಡೇಟಾವನ್ನು ನೀಡುತ್ತದೆ. ಒಮ್ಮೆ ಈ ಮಿತಿಯು ಮುಗಿದ ನಂತರ ನೆಟ್‌ವರ್ಕ್‌ನ ವೇಗವು 64Kbps ಗೆ ಕಡಿಮೆಯಾಗುತ್ತದೆ. ಈ ಯೋಜನೆಯು ದಿನಕ್ಕೆ 100 SMS, Jio ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆ ಮತ್ತು ಮೂರು ತಿಂಗಳ Disney+ Hotstar ಮೊಬೈಲ್ ಚಂದಾದಾರಿಕೆಯನ್ನು ಸಹ ನೀಡುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo