Jio ಕಂಪನಿಯಿಂದ 10,000 ರೂ.ಗಳ ಪ್ಲಾನ್ ಪರಿಚಯ! ಈ ಯೋಜನೆಯಲ್ಲಿ ಏನುಂಟು ಏನಿಲ್ಲ
ಜನಪ್ರಿಯ ರಿಲಯನ್ಸ್ Jio ತನ್ನ ಹೋಮ್ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ ಮತ್ತೊಂದು ಬೊಂಬಾಟ್ ಕೊಡುಗೆಯನ್ನು ಪರಿಚಯಿಸಿದೆ. 2026 ರ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕಂಪನಿಯು 10,000 ರೂ.ಗಳ ಬೆಲೆಯ ಹೊಸ ‘ಫ್ರೀಡಂ ಪ್ಯಾಕ್’ ಅನ್ನು ಟೆಲಿಕಾಂ ಮಾರುಕಟ್ಟೆಗೆ ತಂದಿದೆ. ಈ ವಿಶೇಷ ಯೋಜನೆ JioFiber ಹಾಗೂ JioAirFiber ಎರಡೂ ಸೇವೆಗಳಿಗೆ ಅನ್ವಯವಾಗಲಿದೆ. ಅಂದಹಾಗೆ ಈ ಹೊಸ ಯೋಜನೆಯು ಈಗಾಗಲೇ ಜಿಯೋ ಅಧಿಕೃತ ವೆಬ್‌ಸೈಟ್ ಹಾಗೂ MyJio ಆಪ್‌ನಲ್ಲಿಯೂ ಲಭ್ಯವಿದೆ. ಹಾಗಾದರೆ ಜಿಯೋ ಕಂಪನಿಯ ಈ ಹೊಸ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : ಭಾರತದಲ್ಲಿ ಬಜೆಟ್ ಬೆಲೆಯಲ್ಲಿ ಎಂಟ್ರಿ ಕೊಟ್ಟಿದೆ iQOO Z11 Lite ಮೊಬೈಲ್! ಫೀಚರ್ಸ್ ನೋಡಿ
Jio ಫ್ರೀಡಂ ಪ್ಯಾಕ್ ಸೌಲಭ್ಯಗಳು
ಜಿಯೋದ ಈ ಹೊಸ ಯೋಜನೆಯ ಪ್ರಮುಖ ಆಕರ್ಷಣೆ ಎಂದರೆ 15 ತಿಂಗಳ ಸೇವಾ ಮಾನ್ಯತೆ. ಜಿಯೋ ಬ್ರಾಡ್‌ಬ್ಯಾಂಡ್ ವಿಭಾಗದಲ್ಲಿ ಇಷ್ಟೊಂದು ದೀರ್ಘ ವ್ಯಾಲಿಡಿಟಿಯನ್ನು ನೀಡುತ್ತಿರುವುದು ಇದೇ ಮೊದಲ ಬಾರಿಗೆ. ಹೀಗಾಗಿ ದೀರ್ಘಾವಧಿಯ ಇಂಟರ್‌ನೆಟ್ ಸೇವೆ ಬೇಕೆನ್ನುವ ಗ್ರಾಹಕರಿಗೆ ಈ ಯೋಜನೆ ಉತ್ತಮ ಆಯ್ಕೆಯಾಗುವ ಸಾಧ್ಯತೆ ಇದೆ. ಇನ್ನು ಈ ಪ್ಯಾಕ್‌ನಲ್ಲಿ 100Mbps ಡೌನ್‌ಲೋಡ್ ಮತ್ತು 100Mbps ಅಪ್‌ಲೋಡ್ ಸ್ಪೀಡ್ ದೊರೆಯುತ್ತದೆ. ಇದರ ಜೊತೆಗೆ ಅನಿಯಮಿತ ವಾಯ್ಸ್ ಕರೆಗಳ ಸೌಲಭ್ಯವೂ ನೀಡಲಾಗಿದೆ. ಇದಲ್ಲದೆ, JioTV ಮೂಲಕ 1,000ಕ್ಕೂ ಹೆಚ್ಚು ಟಿವಿ ಚಾನೆಲ್‌ಗಳನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ವೀಕ್ಷಿಸಬಹುದು.

ಮನರಂಜನೆಗೆ ಹೆಚ್ಚಿನ ಒತ್ತು ನೀಡಿರುವ ಜಿಯೋ ಈ ಯೋಜನೆಯೊಂದಿಗೆ 12 ಜನಪ್ರಿಯ OTT ಪ್ಲಾಟ್‌ಫಾರ್ಮ್‌ಗಳ ಚಂದಾದಾರಿಕೆ ಕೂಡ ಉಚಿತವಾಗಿ ನೀಡುತ್ತಿದೆ. ಇದರಲ್ಲಿ JioHotstar, SonyLIV, ZEE5, SunNXT, Hoichoi, Discovery+, TimesPlay, Tarang Plus, Eros Now, Lionsgate Play, ShemarooMe ಹಾಗೂ ETV Win ಸೇರಿವೆ. ಇದರಿಂದ ಸಿನಿಮಾ, ವೆಬ್ ಸೀರೀಸ್, ಕ್ರೀಡೆ ಮತ್ತು ಲೈವ್ ಟಿವಿ ಸೇರಿದಂತೆ ವಿವಿಧ ರೀತಿಯ ಕಂಟೆಂಟ್ ಅನ್ನು ಒಂದೇ ಯೋಜನೆಯಲ್ಲಿ ಆನಂದಿಸಬಹುದು.
ಈ ಯೋಜನೆಯನ್ನು ಖರೀದಿಸುವ ಗ್ರಾಹಕರಿಗೆ ಉಚಿತ ಸೆಟ್-ಟಾಪ್ ಬಾಕ್ಸ್ ಕೂಡ ಲಭ್ಯವಾಗುತ್ತದೆ. ಇದರ ಮೂಲಕ ಟಿವಿ ಚಾನೆಲ್‌ಗಳು ಹಾಗೂ OTT ಸೇವೆಗಳನ್ನು ಒಂದೇ ಡಿವೈಸ್‌ನಲ್ಲಿ ಬಳಸಬಹುದು. ಹೀಗಾಗಿ ಪ್ರತ್ಯೇಕ DTH ಸಂಪರ್ಕ ಪಡೆಯುವ ಅಗತ್ಯವೇ ಇರುವುದಿಲ್ಲ. ಮನರಂಜನೆಗೆ ಬೇಕಾದ ಬಹುತೇಕ ಎಲ್ಲಾ ಸೇವೆಗಳು ಒಂದೇ ಪ್ಯಾಕ್‌ನಲ್ಲಿ ಸಿಗುತ್ತವೆ.
ಇದರ ಜೊತೆಗೆ JioPC ಸೇವೆಯನ್ನೂ ಈ ಯೋಜನೆಯಲ್ಲಿ ಸೇರಿಸಲಾಗಿದೆ. ಇದು ಟಿವಿಯಲ್ಲೇ ಕ್ಲೌಡ್ ಕಂಪ್ಯೂಟಿಂಗ್ ಅನುಭವವನ್ನು ನೀಡುವ ವಿಶೇಷ ಸೌಲಭ್ಯವಾಗಿದೆ. ಕಂಪ್ಯೂಟರ್ ಇಲ್ಲದಿದ್ದರೂ, ಟಿವಿಯ ಮೂಲಕ ಕೆಲವು ಡಿಜಿಟಲ್ ಸೇವೆಗಳನ್ನು ಬಳಸುವ ಅವಕಾಶವನ್ನು ಇದು ಒದಗಿಸುತ್ತದೆ. ಒಟ್ಟಾರೆಯಾಗಿ ದೀರ್ಘ ವ್ಯಾಲಿಡಿಟಿ, ಉಚಿತ OTT ಚಂದಾದಾರಿಕೆಗಳು, ಟಿವಿ ಚಾನೆಲ್‌ಗಳು, ಸೆಟ್-ಟಾಪ್ ಬಾಕ್ಸ್ ಮತ್ತು JioPC ಸೇರಿದಂತೆ ಹಲವು ಹೆಚ್ಚುವರಿ ಪ್ರಯೋಜನಗಳನ್ನು ಒಂದೇ ಯೋಜನೆಯಲ್ಲಿ ಲಭ್ಯ. ವಿಶೇಷವಾಗಿ ಇಂಟರ್‌ನೆಟ್, ಟಿವಿ ಮತ್ತು OTT ಸೇವೆಗಳನ್ನು ಒಂದೇ ಪ್ಲಾನ್‌ನಲ್ಲಿ ಪಡೆಯಲು ಬಯಸುವವರಿಗೆ ಇದು ಆಕರ್ಷಕ ಆಫರ್ ಆಗಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile