BSNL Plans 2024
BSNL Plan 2023: ಭಾರತೀಯ ಸರ್ಕಾರದ ಟೆಲಿಕಾಂ ಆಪರೇಟರ್ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಗ್ರಾಹಕರಿಗೆ ಅನೇಕ ಯೋಜನೆಗಳನ್ನು ನೀಡುತ್ತದೆ. ಬಿಎಸ್ಎನ್ಎಲ್ ಕೆಲವು ರೀಚಾರ್ಜ್ ಪ್ಲಾನ್‌ಗಳ ಬೆಲೆ ತುಂಬಾ ಕಡಿಮೆ ಅಂದರೆ 50 ರೂಗಿಂತ ಕಡಿಮೆಯಾಗಿದೆ. ಇದರಲ್ಲಿ ಅನೇಕ ವಿಶೇಷ ಪ್ರಯೋಜನಗಳನ್ನು ಪ್ಲಾನ್ ಹೊಂದಿದೆ. ನಾವು ಮಾತನಾಡುತ್ತಿರುವ ಯೋಜನೆಯ ಬೆಲೆ 48 ರೂಗಳಾಗಿದೆ. ಇದು ಬಿಎಸ್ಎನ್ಎಲ್ ವೋಚರ್ ಯೋಜನೆಯಾಗಿದ್ದು ನೀವು ದೀರ್ಘಾವಧಿಯ ಮಾನ್ಯತೆಯನ್ನು ಪಡೆಯುತ್ತೀರಿ.
Also Read: Amazon GIF Sale 2023 ನಾಳೆ ಕೊನೆ: ಲೇಟೆಸ್ಟ್ 5G ಸ್ಮಾರ್ಟ್‌ಫೋನ್‌ಗಳು Affordable ಬೆಲೆಗೆ ಖರೀದಿಸಿ!
ನಿಮಗೆ ಈಗಾಗಲೇ ತಿಳಿದಿರುವಂತೆ ಈ ಬಿಎಸ್ಎನ್ಎಲ್ ಯೋಜನೆಯ ಬೆಲೆ ಕೇವಲ 48 ರೂಗಳಾಗಿದೆ. ಆದರೆ ಇದರಲ್ಲಿ ನೀವು 30 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತೀರಿ. ಈ ಯೋಜನೆಯ ರಿಚಾರ್ಜ್ನಲ್ಲಿ ನಿಮಗೆ ರೂ 10 ಮೌಲ್ಯ ಮಾತ್ರ ಲಭ್ಯವಿರುತ್ತದೆ. ಇದನ್ನು ನೀವು ಕರೆ ಮಾಡಲು ಬಳಸಬಹುದು. ಇದರಲ್ಲಿ ಪ್ರತಿ ನಿಮಿಷಕ್ಕೆ 20 ಪೈಸೆಯಂತೆ ಖರ್ಚು ಆಗುತ್ತದೆ. ಗಮನಿಸಿ ಈ ಯೋಜನೆಯಲ್ಲಿ ನೀವು ಡೇಟಾ ಮತ್ತು SMS ಸೌಲಭ್ಯಗಳನ್ನು ಪಡೆಯುವುದಿಲ್ಲ. ಇದು ಕೇವಲ ನಿಮ್ಮ ಸಿಮ್ ಕಾರ್ಡ್ ಆಕ್ಟಿವ್ ಆಗಿಡಲು ಉತ್ತಮ ವ್ಯಾಲಿಡಿಟಿ ಪ್ಲಾನ್ ಆಗಿದೆ.
ಈ ಯೋಜನೆಯು ಒಂದು ತಿಂಗಳ ವ್ಯಾಲಿಡಿಟಿಯನ್ನು ಬಯಸುವ ಬಳಕೆದಾರರಿಗೆ ಆಗಿದೆ. ಆದರೆ ಹೆಚ್ಚು ಹಣ ಕೊಡಲು ಬಯಸದೆ ಇದು ನಿಮ್ಮ ಪ್ರೈಮರಿ ನಂಬರ್ ಜೊತೆಗೆ ನೀವು ಬಳಸಬಹುದಾದ ವಾಯ್ಸ್ ಕರೆ ವೋಚರ್ ಆಗಿದೆ. ನೀವು ಈ ಯೋಜನೆಯನ್ನು ರೀಚಾರ್ಜ್ ಮಾಡಲು ಬಯಸಿದರೆ ಬಿಎಸ್ಎನ್ಎಲ್ ಸೆಲ್ಫ್‌ಕೇರ್ ಅಪ್ಲಿಕೇಶನ್ ಮೂಲಕ ಸುಲಭವಾಗಿ ರೀಚಾರ್ಜ್ ಮಾಡಬಹುದು. ಈ ಅಪ್ಲಿಕೇಶನ್ ಆಪಲ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದೆ.
➥ಬಿಎಸ್ಎನ್ಎಲ್ ತನ್ನ 4G ಅನ್ನು ಪ್ರಾರಂಭಿಸಲು ಯೋಜಿಸಿದೆ ಎಂದು ಇತ್ತೀಚೆಗೆ ವರದಿಯೊಂದು ಬಹಿರಂಗಪಡಿಸಿದೆ.
➥ಈ ಸೌಲಭ್ಯವನ್ನು ಡಿಸೆಂಬರ್‌ನಲ್ಲಿ ಪ್ರಾರಂಭಿಸಬಹುದು ಮತ್ತು ಮುಂದಿನ ವರ್ಷ ಜೂನ್‌ನಲ್ಲಿ ಇಡೀ ಭಾರತಕ್ಕೆ ವಿಸ್ತರಿಸಲಾಗುವುದೆಂದು ಕಂಪನಿ ಹೇಳಿದೆ.
➥ಇದರ 4G ನಂತರ 5G ನೆಟ್‌ವರ್ಕ್‌ಗೆ ಅಪ್‌ಗ್ರೇಡ್ ಮಾಡಲು ಯೋಜಿಸಲಾಗಿದೆ ಎಂದು ಕಂಪನಿ ಹೇಳಿದ್ದು ಈಗ ಕಂಪನಿಯು ಅದನ್ನು ಹೇಗೆ ಯೋಜಿಸುತ್ತದೆ ಎಂಬುದನ್ನು ನೋಡಬೇಕಾಗಿದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ
ಬಿಎಸ್ಎನ್ಎಲ್ ಇತ್ತೀಚೆಗೆ ತಮ್ಮ 4G ನೆಟ್‌ವರ್ಕ್‌ನ ದೇಶಾದ್ಯಂತ ಅಧಿಕೃತವಾಗಿ ಪ್ರಚಾರ ಶುರು ಮಾಡಿದೆ. ಅಲ್ಲದೆ ಇದೀಗ ಆಯ್ದ ವಲಯಗಳಲ್ಲಿ ತನ್ನ ಬಳಕೆದಾರರಿಗೆ ಉಚಿತ 4G ಸಿಮ್ ಅಪ್‌ಗ್ರೇಡ್‌ಗಳನ್ನು ನೀಡುತ್ತಿದೆ. ನೀವು ಬಿಎಸ್ಎನ್ಎಲ್ ಬಳಕೆದಾರರಾಗಿದ್ದರೆ ಮತ್ತು ಹೆಚ್ಚಿನ ವೇಗದ 4G ನೆಟ್‌ವರ್ಕ್ ಅನ್ನು ಪ್ರವೇಶಿಸಲು ಬಯಸಿದರೆ ನಿಮ್ಮ ಪ್ರಸ್ತುತ ಸಿಮ್ ಕಾರ್ಡ್ ಅನ್ನು 4G ಸಿಮ್‌ಗೆ ಅಪ್‌ಗ್ರೇಡ್ ಮಾಡುವುದು ಕಡ್ಡಾಯವಾಗಿದೆ. ಬಿಎಸ್ಎನ್ಎಲ್ ಆಂಧ್ರಪ್ರದೇಶದ ಟ್ವಿಟ್ಟರ್‌ನಲ್ಲಿ ಪೋಸ್ಟ್ ಪ್ರಕಾರ 2G/3G ಸಿಮ್‌ನಿಂದ 4G ಸಿಮ್ ಕಾರ್ಡ್‌ಗೆ ಅಪ್‌ಗ್ರೇಡ್ ಮಾಡುವವರು 3 ತಿಂಗಳ ವ್ಯಾಲಿಡಿಟಿಯೊಂದಿಗೆ 4GB ಹೆಚ್ಚುವರಿಯ 4G ಡೇಟಾವನ್ನು ನೀಡುತ್ತಿದೆ.