ಸ್ವದೇಶಿ ಮೊಬೈಲ್ ತಯಾರಿಕಾ ಕಂಪನಿ Lava ಕೆಲವು ಎಂಟ್ರಿ ಲೆವೆಲ್ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಆ ಪೈಕಿ ಸಂಸ್ಥೆಯು ಇದೀಗ ತನ್ನ Bold ಸರಣಿಯಲ್ಲಿ ಹೊಸದಾಗಿ Lava Bold N2 ಸ್ಮಾರ್ಟ್‌ಫೋನ್ ಪರಿಚಯಿಸಲು ಸಿದ್ಧವಾಗಿದೆ. Lava Bold N2 ಮೊಬೈಲ್ ಇದೇ ಫೆಬ್ರವರಿ 17 ರಂದು (ನಾಳೆ) ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಇನ್ನು ಮುಂಬರುವ Lava Bold N2 ಮೊಬೈಲ್ 13MP ರಿಯರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿರುವುದು ಬಹುತೇಕ ಖಚಿತ ಎನ್ನಲಾಗಿದೆ. ಇನ್ನುಳಿದಂತೆ ಮುಂಬರುವ Lava Bold N2 ಮೊಬೈಲ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ನಾಳೆಯಿಂದ Samsung ಕಂಪನಿಯ ಈ ಹೊಸ ಮೊಬೈಲ್ ಮಾರಾಟ ಶುರು! ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯ
ಲಾವಾ ಕಂಪನಿಯ Lava Bold N2 ಮೊಬೈಲ್ ಇದೇ ಫೆಬ್ರವರಿ 17 ರಂದು (ನಾಳೆ) ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಸಂಗತಿಯನ್ನು ಸಂಸ್ಥೆಯು ಸಾಮಾಜಿಕ ಜಾಲತಾಣ X ಖಾತೆಯ ಮೂಲಕ ಹಂಚಿಕೊಂಡಿದ್ದು ಅಮೆಜಾನ್ ಇ ಕಾಮರ್ಸ್ ತಾಣದ ಮೂಲಕ ಲಾಂಚ್ ಮಾಡಲಿದೆ. ಫೋನ್ ಕುರಿತು ಕಂಪನಿಯು ಬಿ ಫಿಯರ್‌ಲೆಸ್, ಬಿ ಬೋಲ್ಡ್ ಎಂಬ ಟ್ಯಾಗ್‌ಲೈನ್‌ನೊಂದಿಗೆ ಟೀಸ್ ಮಾಡಲಾಗಿದೆ. ಇನ್ನು ಫೋನಿನ ಬೆಲೆಯ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಬಹಿರಂಗವಾಗಿಲ್ಲ. ಅದಾಗ್ಯೂ, ಈ ಮುಂಬರುವ ಸ್ಮಾರ್ಟ್‌ಫೋನ್ ಬಜೆಟ್ ಬೆಲೆಯಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳು ಇವೆ.
Lava Bold N2 ಮೊಬೈಲ್ ಬ್ಲ್ಯಾಕ್ ಮತ್ತು ಸಿಲ್ವರ್ ಕಲರ್ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವುದು ಬಹುತೇಕ ಪಕ್ಕಾ ಎಂದು ಹೇಳಲಾಗಿದೆ. ಹಾಗೆಯೇ ಈ ಮೊಬೈಲ್ ಹಿಂಭಾಗದಲ್ಲಿ 13MP ಪ್ರಾಥಮಿಕ ಕ್ಯಾಮೆರಾ ಸೆನ್ಸಾರ್ ಇರಲಿದ್ದು ಅದರ ಜೊತೆಗೆ LED ಫ್ಲ್ಯಾಷ್ ಸೌಲಭ್ಯ ಸಹ ಪಡೆದಿರುವ ನಿರೀಕ್ಷೆಯಿದೆ. ಅಂದಹಾಗೆ ಈ ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿರುವ ಸಾಧ್ಯತೆಗಳು ಇವೆ. ಅಲ್ಲದೇ ಈ ಮೊಬೈಲ್ Unisoc 9863A ಚಿಪ್‌ಸೆಟ್ ಪ್ರೊಸೆಸರ್ ಹೊಂದಿರುವ ನಿರೀಕ್ಷೆಗಳು ಇವೆ.
Lava Bold N2 ಎಂಟ್ರಿ ಲೆವೆಲ್ ಮಾದರಿಯ ಸ್ಮಾರ್ಟ್‌ಫೋನ್ ಆಗಿರಲಿದ್ದು ಇದು 4 GB RAM ಮತ್ತು 64 GB ಆಂತರೀಕ ಸ್ಟೋರೇಜ್ ಆಯ್ಕೆ ಪಡೆಯಬಹುದು. ಹಾಗೆಯೇ ಈ ಸ್ಮಾರ್ಟ್‌ಫೋನ್ 18W ಚಾರ್ಜಿಂಗ್ ಸಪೋರ್ಟ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆಯುವ ಸಾಧ್ಯತೆಯಿದೆ. ಟೀಸರ್‌ನಿಂದ ತಿಳಿದಂತೆ ಈ ಫೋನ್‌ನ ಬಲಭಾಗದಲ್ಲಿ ಪವರ್ ಬಟನ್ ಮತ್ತು ವಾಲ್ಯೂಮ್ ಕಂಟ್ರೋಲ್‌ಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೇ ಯುಎಸ್‌ಬಿ ಟೈಪ್-ಸಿ ಪೋರ್ಟ್, 3.5mm ಆಡಿಯೊ ಜ್ಯಾಕ್ ಮತ್ತು ಸ್ಪೀಕರ್ ಗ್ರಿಲ್ ಅನ್ನು ಬೋಲ್ಡ್ ಎನ್ 2 ನ ಕೆಳಭಾಗದಲ್ಲಿ ಇರಿಸಲಾಗುತ್ತದೆ. ಅಂದಹಾಗೆ ಈ ಹಿಂದಿನ Lava Bold N1 ಫೋನ್ ಮೇ 2025 ರಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿತ್ತು.