Jio ಟೆಲಿಕಾಂನ 3 ಅತ್ಯುತ್ತಮ ಪೋಸ್ಟ್‌ಪೇಯ್ಡ್‌ ಯೋಜನೆಗಳ ಮಾಹಿತಿ ಇಲ್ಲಿದೆ ನೋಡಿ

HIGHLIGHTS

ಜಿಯೋದ 649 ರೂ.ಗಳ ಪೋಸ್ಟ್‌ಪೇಡ್ ಪ್ಲಾನ್‌ನಲ್ಲಿ ಅನಿಯಮಿತ ಡೇಟಾ

ಜಿಯೋದ 749 ರೂ.ಗಳ ಪೋಸ್ಟ್‌ಪೇಡ್‌ನಲ್ಲಿ ನೆಟ್‌ಫ್ಲಿಕ್ಸ್‌ ಬೇಸಿಕ್‌ ಸೌಲಭ್ಯ

ಜಿಯೋದ 1549 ರೂ.ಗಳ ಪೋಸ್ಟ್‌ಪೇಡ್ ಪ್ಲಾನ್‌ನಲ್ಲಿ 300GB ಡೇಟಾ ಸಿಗುತ್ತೆ

Jio ಟೆಲಿಕಾಂನ 3 ಅತ್ಯುತ್ತಮ ಪೋಸ್ಟ್‌ಪೇಯ್ಡ್‌ ಯೋಜನೆಗಳ ಮಾಹಿತಿ ಇಲ್ಲಿದೆ ನೋಡಿ

ಲೀಡಿಂಗ್ ಟೆಲಿಕಾಂ ಸಂಸ್ಥೆ ಎನಿಸಿಕೊಂಡಿರುವ Jio ಭಿನ್ನ ಯೋಜನೆಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಪ್ರಸ್ತುತ ಮೊಬೈಲ್ ಬಳಕೆದಾರರಲ್ಲಿ ಪೋಸ್ಟ್‌ಪೇಯ್ಡ್ ಪ್ಲಾನ್‌ಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರಮುಖವಾಗಿ ಅನಿಯಮಿತ ಕರೆಗಳು, ಅಧಿಕ ಡೇಟಾ, ಕುಟುಂಬ ಸದಸ್ಯರಿಗೆ ಹೆಚ್ಚುವರಿ ಸಂಪರ್ಕ ಹಾಗೂ OTT ಸೌಲಭ್ಯಗಳನ್ನು ಬಯಸುವವರಿಗೆ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಉತ್ತಮ ಆಯ್ಕೆಯಾಗಿದೆ. ಈ ನಿಟ್ಟಿನಲ್ಲಿ ಜಿಯೋ ತನ್ನ ಬಳಕೆದಾರರಿಗಾಗಿ ವಿವಿಧ ಬೆಲೆಯ ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ಲಭ್ಯ ಮಾಡಿದೆ. ಅವುಗಳಲ್ಲಿ ಪೈಕಿ 649 ರೂ.ಗಳ ಪ್ಲಾನ್‌, 749 ರೂ.ಗಳ ಪ್ಲಾನ್‌ ಹಾಗೂ 1549 ರೂ.ಗಳ ಪ್ಲಾನ್‌ ಹೆಚ್ಚು ಜನಪ್ರಿಯವಾಗಿವೆ. ಹಾಗಾದರೆ ಜಿಯೋ ಟೆಲಿಕಾಂನ ಈ ಮೂರು ಪೋಸ್ಟ್‌ಪೇಯ್ಡ್‌ ಯೋಜನೆಯಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ. ಯೋಜನೆಗಳ ಪ್ರಮುಖ ಪ್ರಯೋಜನಗಳನ್ನು ನೋಡೋಣ.

Digit.in Survey
✅ Thank you for completing the survey!

Also Read : ಮಳೆಗಾಲದಲ್ಲಿ ಗುಡುಗು-ಮಿಂಚಿನ ಅಪಾಯವೇ? Damini App ನಿಮ್ಮ ಜೀವ ಉಳಿಸಬಹುದು

Jio 649 ರೂ.ಗಳ ಪೋಸ್ಟ್‌ಪೇಯ್ಡ್‌ ಯೋಜನೆ

ಜಿಯೋ ಸಂಸ್ಥೆಯ 649 ರೂ.ಗಳ ಪೋಸ್ಟ್‌ಪೇಡ್ ಯೋಜನೆಯಲ್ಲಿ ಒಂದು ರೆಗ್ಯುಲರ್ ಸಿಮ್‌ ಸಿಗುತ್ತದೆ. ಅಲ್ಲದೇ ಈ ಯೋಜನೆಯಲ್ಲಿ ಅನಿಯಮಿತ ಡೇಟಾ ಸೌಲಭ್ಯ ಸಹ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ಲೋಕಲ್, ನ್ಯಾಷನಲ್ ರೋಮಿಂಗ್ ವಾಯ್ಸ್‌ ಕರೆಗಳ ಪ್ರಯೋಜನ ಕೂಡಾ ಗ್ರಾಹಕರಿಗೆ ಲಭ್ಯವಿರುತ್ತದೆ. ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಸಿಗುತ್ತದೆ. ಇದರೊಂದಿಗೆ ನೆಟ್‌ಫ್ಲಿಕ್ಸ್‌ ಬೇಸಿಕ್‌ ಓಟಿಟಿ ಸೌಲಭ್ಯ ಸಹ ಸಿಗಲಿದೆ.

Jio Rs 899 Recharge Plan 90 Days Validity JioHotstar

ಜಿಯೋ 749 ರೂ.ಗಳ ಪೋಸ್ಟ್‌ಪೇಯ್ಡ್‌ ಯೋಜನೆ

ಜಿಯೋ ಸಂಸ್ಥೆಯ 749 ರೂ.ಗಳ ಪೋಸ್ಟ್‌ಪೇಡ್ ಯೋಜನೆಯಲ್ಲಿ ಒಂದು ರೆಗ್ಯುಲರ್ ಸಿಮ್‌ ಸಿಗುತ್ತದೆ. ಅಲ್ಲದೇ ಈ ಯೋಜನೆಯಲ್ಲಿ ಅನಿಯಮಿತ ಡೇಟಾ ಸೌಲಭ್ಯ ಸಹ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ಲೋಕಲ್, ನ್ಯಾಷನಲ್ ರೋಮಿಂಗ್ ವಾಯ್ಸ್‌ ಕರೆಗಳ ಪ್ರಯೋಜನ ಕೂಡಾ ಗ್ರಾಹಕರಿಗೆ ಲಭ್ಯವಿರುತ್ತದೆ. ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಸಿಗುತ್ತದೆ. ಇದರೊಂದಿಗೆ ನೆಟ್‌ಫ್ಲಿಕ್ಸ್‌ ಬೇಸಿಕ್‌ ಓಟಿಟಿ ಸೌಲಭ್ಯ ಸಹ ಸಿಗಲಿದೆ.

ಜಿಯೋ ಕಂಪನಿಯ 1549 ರೂ.ಗಳ ಪೋಸ್ಟ್‌ಪೇಡ್ ಪ್ಲಾನ್‌ನಲ್ಲಿ ಒಂದು ರೆಗ್ಯುಲರ್ ಸಿಮ್‌ ಆಯ್ಕೆ ಲಭ್ಯವಿರುತ್ತದೆ. ಅಲ್ಲದೇ ಈ ಪ್ಲಾನ್‌ನಲ್ಲಿ 300GB ಡೇಟಾ ಸೌಲಭ್ಯ ಸಹ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ಲೋಕಲ್, ನ್ಯಾಷನಲ್ ರೋಮಿಂಗ್ ವಾಯ್ಸ್‌ ಕರೆಗಳ ಪ್ರಯೋಜನ ಕೂಡಾ ಗ್ರಾಹಕರಿಗೆ ಲಭ್ಯವಿರುತ್ತದೆ. ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಸಿಗುತ್ತದೆ. ಇದರಲ್ಲಿ ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್ ಸೇರಿದಂತೆ ಇತರೆ ಓಟಿಟಿ ಚಂದಾದಾರಿಕೆಯ ಅವಕಾಶ ಲಭ್ಯವಾಗಲಿದೆ.

ಜಿಯೋದ ಅಗ್ಗದ ಪೋಸ್ಟ್‌ಪೇಯ್ಡ್‌ ಯೋಜನೆ

ಜಿಯೋ ಕಂಪನಿಯ 449 ರೂ.ಗಳ ಪೋಸ್ಟ್‌ಪೇಡ್ ಪ್ಲಾನ್‌ನಲ್ಲಿ ಒಂದು ರೆಗ್ಯುಲರ್ ಸಿಮ್‌ ಜೊತೆಗೆ 3 ಆಡ್‌ ಆನ್‌ ಸಿಮ್‌ ಆಯ್ಕೆ ದೊರೆಯುತ್ತದೆ. ಅಲ್ಲದೇ ಈ ಯೋಜನೆಯಲ್ಲಿ 75GB ಡೇಟಾ ಸೌಲಭ್ಯ ಸಹ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ಲೋಕಲ್, ನ್ಯಾಷನಲ್ ರೋಮಿಂಗ್ ವಾಯ್ಸ್‌ ಕರೆಗಳ ಪ್ರಯೋಜನ ಕೂಡಾ ಗ್ರಾಹಕರಿಗೆ ಲಭ್ಯವಿರುತ್ತದೆ. ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಸಿಗುತ್ತದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile