Airtel ಕಂಪನಿಯ 619 ರೂ.ಗಳ ಪ್ಲಾನ್‌ನಲ್ಲಿ ಭರ್ಜರಿ ಡೇಟಾ ಜೊತೆಗೆ 60 ದಿನಗಳ ವ್ಯಾಲಿಡಿಟಿ!

HIGHLIGHTS

ಕಡಿಮೆ ಬೆಲೆಗೆ ಅಧಿಕ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ಪ್ಲಾನ್ ಬೆಸ್ಟ್‌

ಏರ್‌ಟೆಲ್‌ ಟೆಲಿಕಾಂನ ಈ ರೀಚಾರ್ಜ್‌ ಪ್ಲಾನ್‌ನಲ್ಲಿ 60 ದಿನಗಳ ವ್ಯಾಲಿಡಿಟಿ

ಏರ್‌ಟೆಲ್‌ ಟೆಲಿಕಾಂನ ಈ ಪ್ಲಾನಿನಲ್ಲಿ ಉಚಿತ ವಾಯ್ಸ್‌ ಕರೆ ಹಾಗೂ SMS ಸೌಲಭ್ಯ

Airtel ಕಂಪನಿಯ 619 ರೂ.ಗಳ ಪ್ಲಾನ್‌ನಲ್ಲಿ ಭರ್ಜರಿ ಡೇಟಾ ಜೊತೆಗೆ 60 ದಿನಗಳ ವ್ಯಾಲಿಡಿಟಿ!

ಜನಪ್ರಿಯ Airtel ಸಂಸ್ಥೆಯು ಕೆಲವು ಆಕರ್ಷಕ ಯೋಜನೆಗಳ ಮೂಲಕ ತನ್ನದೇ ಚಂದಾದಾರರ ಬಳಗವನ್ನು ಹೊಂದಿದೆ. ಅಲ್ಲದೇ ಸಂಸ್ಥೆಯು ಕೆಲವು ಅಧಿಕ ಡೇಟಾ ಹಾಗೂ ಅಧಿಕ ವ್ಯಾಲಿಡಿಟಿ ಪ್ಲಾನ್‌ಗಳ ಮೂಲಕ ಏರ್‌ಟೆಲ್‌ ಟೆಲಿಕಾಂ ಹಾಗೂ ವಿ ಟೆಲಿಕಾಂ ಕಂಪನಿಗಳಿಗೆ ನೇರ ಪೈಪೋಟಿ ನೀಡುತ್ತಾ ಮುಂದೆ ಸಾಗಿದೆ. ಆ ಪೈಕಿ ಏರ್‌ಟೆಲ್‌ ಟೆಲಿಕಾಂನ ದೈನಂದಿನ ಅಧಿಕ ಡೇಟಾ ಪ್ರಯೋಜನ ಒಳಗೊಂಡ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನ್‌ಗಳು ಅಧಿಕ ಬಳಕೆದಾರರನ್ನು ಆಕರ್ಷಿಸಿವೆ. ಮುಖ್ಯವಾಗಿ ಅಧಿಕ ದೈನಂದಿನ ಡೇಟಾ ಸೌಲಭ್ಯ ಬಯಸುವ ಬಳಕೆದಾರರ ಗಮನ ಸೆಳೆದಿವೆ. ಅದಾಗ್ಯೂ ಕಡಿಮೆ ಅಗ್ಗದ ಪ್ರೈಸ್‌ನ ಕೆಲವು ಯೋಜನೆಗಳಲ್ಲಿ ಅತ್ಯುತ್ತಮ ವ್ಯಾಲಿಡಿಟಿ ಜೊತೆಗೆ ಡೇಟಾ ಹಾಗೂ ಆಕರ್ಷಕ ಪ್ರಯೋಜನಗಳು ಸಹ ಸಿಗುತ್ತವೆ. ಅವುಗಳಲ್ಲಿ 619 ರೂ.ಗಳ ಪ್ಲಾನ್ ಗಮನ ಸೆಳೆದಿದೆ. ಹಾಗಾದರೆ ಏರ್‌ಟೆಲ್‌ ಟೆಲಿಕಾಂನ 619 ರೂ.ಗಳ ಯೋಜನೆಯಲ್ಲಿ ಡೇಟಾ ಪ್ರಯೋಜನ ಹಾಗೂ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Samsung Galaxy Watch 9 ಬಿಡುಗಡೆ: ಹೊಸ ಸ್ನಾಪ್‌ಡ್ರಾಗನ್ ವೇರ್ ಎಲೈಟ್ ಚಿಪ್‌ ಸೌಲಭ್ಯ

Airtel 619 ರೂ.ಗಳ ಪ್ಲಾನ್ ಸೌಲಭ್ಯಗಳು

ಏರ್‌ಟೆಲ್‌ ಟೆಲಿಕಾಂನ 619 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯಲ್ಲಿ ಕೂಡಾ ಬಳಕೆದಾರರಿಗೆ ಪ್ರತಿದಿನ 1.5GB ಡೇಟಾ ಪ್ರಯೋಜನ ಸಿಗಲಿದೆ. ಅಲ್ಲದೇ ಈ ಯೋಜನೆಯು 60 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಹಾಗೆಯೇ ಈ ಯೋಜನೆಯಲ್ಲಿ ಅಡೋಬ್ ಪ್ರೀಮಿಯರ್ ಎಕ್ಸ್‌ಪ್ರೆಸ್ ಚಂದಾದಾರಿಕೆಯ ಸೌಲಭ್ಯ ಸಹ ಲಭ್ಯ. ಕಡಿಮೆ ಬೆಲೆಯಲ್ಲಿ ಈ ಯೋಜನೆ ಗಮನ ಸೆಳೆದಿದೆ.

Airtel

ಏರ್‌ಟೆಲ್‌ನ ಇತರೆ ಪ್ರಮುಖ ಯೋಜನೆಗಳು

ಏರ್‌ಟೆಲ್‌ ಟೆಲಿಕಾಂನ 579 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 1.5GB ಡೇಟಾ ಸೌಲಭ್ಯ ದೊರೆಯುತ್ತದೆ. ಅಲ್ಲದೇ ಈ ಯೋಜನೆಯು 56 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಆಗುತ್ತದೆ.

ಏರ್‌ಟೆಲ್‌ ಟೆಲಿಕಾಂನ 979 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗಲಿದೆ. ಅಲ್ಲದೇ ಈ ಯೋಜನೆಯು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಹಾಗೆಯೇ ಈ ಯೋಜನೆಯಲ್ಲಿ ಸೋನಿ ಲೈವ್‌ ಸೇರಿದಂತೆ ಇತರೆ ಕೆಲವು ಓಟಿಟಿ ಚಂದಾದಾರಿಕೆಯ ಸೌಲಭ್ಯ ಸಿಗಲಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile