ಭಾರ್ತಿ ಏರ್ಟೆಲ್ ಈಗ ಕೇವಲ 76 ರೂಗಳ ಹೊಸ ರ್ಪ್ರೀಪೈಡ್ ಪ್ಲಾನಲ್ಲಿ 28 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತಿದೆ.

ಭಾರ್ತಿ ಏರ್ಟೆಲ್ ಈಗ ಕೇವಲ 76 ರೂಗಳ ಹೊಸ ರ್ಪ್ರೀಪೈಡ್ ಪ್ಲಾನಲ್ಲಿ 28 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತಿದೆ.
HIGHLIGHTS

ಈ ರೀಚಾರ್ಜ್ ಆಯ್ಕೆಯನ್ನು ಮೈ ಏರ್ಟೆಲ್ ಅಪ್ಲಿಕೇಶನ್ ಅಥವಾ ವೆಬ್ಸೈಟ್ ಮೂಲಕ ಮಾತ್ರ ಪಡೆಯಬಹುದು.

ಭಾರ್ತಿ ಏರ್ಟೆಲ್ ಈಗ ಹೊಸ 76 ರೂಗಳ ರೀಚಾರ್ಜ್ ಆಯ್ಕೆಯನ್ನು ಗ್ರಾಹಕರಿಗೆ 28 ದಿನಗಳ ವ್ಯಾಲಿಡಿಟಿಗೆ 26 ರೂಗಳ ಟಾಕ್ ಟೈಮ್ ನೀಡುತ್ತಿದೆ. ನಂತರ ಈ ಪ್ಲಾನಲ್ಲಿ ಎಲ್ಲಾ ವಾಯ್ಸ್ ಕರೆಗಳಿಗೆ ಬಳಕೆದಾರರಿಗೆ ಪ್ರತಿ ನಿಮಿಷಕ್ಕೆ 60 ಪೈಸೆ ವಿಧಿಸಲಾಗುತ್ತದೆ. ಇದಲ್ಲದೆ ಈ ವ್ಯಾಲಿಡಿಟಿಯಲ್ಲಿ ಏರ್ಟೆಲ್ ಅವಧಿ ಮುಗಿಯುವವರೆಗೆ 100MB ಯ 3G / 4G ಡೇಟಾವನ್ನು ಸಹ ನೀಡಲಿದೆ.

ಸದ್ಯಕ್ಕೆ ಹೊಸ ಏರ್ಟೆಲ್ ಚಂದಾದಾರರಿಗೆ ಮಾತ್ರ ಈ 76 ರೂಗಳ ರೀಚಾರ್ಜ್ ಲಭ್ಯವಿದೆ ಎಂದು ಗಮನಿಸುವುದು ಮುಖ್ಯವಾಗಿದೆ. ಹೊಸ SIM ಕಾರ್ಡ್ ಪಡೆದುಕೊಳ್ಳುವ ಸಮಯದಲ್ಲಿ ಹೊರತುಪಡಿಸಿ ರೀಚಾರ್ಜ್ ಆಯ್ಕೆಯನ್ನು ಮೈ ಏರ್ಟೆಲ್ ಅಪ್ಲಿಕೇಶನ್ ಅಥವಾ ವೆಬ್ಸೈಟ್ ಮೂಲಕ ಮಾತ್ರ ಪಡೆಯಬಹುದು. 

ನೀವು ಸಹ ನಿಮ್ಮ ನಂಬರ್ಗಾಗಿ ಒಮ್ಮೆ ಕಸ್ಟಮರ್ ಕೇರ್ಗೆ ಕರೆಮಾಡಿ ಖಚಿತಪಡಿಸಕೊಳ್ಳಬವುದು. ಏರ್ಟೆಲ್ ಮತ್ತೊಂದು ಪ್ಲಾನ್ 178 ರೂಗಳ ಪ್ಲಾನ್ ಇದು ದಿನಕ್ಕೆ 1GB ಯ 4G ಡೇಟಾವನ್ನು ನೀಡುತ್ತದೆ. ಮತ್ತು ಇದು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಪ್ಲಾನ್ ಅನಿಯಮಿತ ಸ್ಥಳೀಯ, ಎಸ್ಟಿಡಿ ಮತ್ತು ರಾಷ್ಟ್ರೀಯ ರೋಮಿಂಗ್ ಅನ್ನು ದಿನಕ್ಕೆ 100SMS ನೀಡುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo