Airtel-Vi Offer: ಯಾವುದು ಈ ಪ್ಲಾನ್ ಲೈವ್ ಕ್ರಿಕೆಟ್, ಸಿನಿಮಾ ಮತ್ತು ವೆಬ್ ಸೀರೀಸ್ ಎಲ್ಲವು ಉಚಿತ!

Airtel-Vi Offer: ಯಾವುದು ಈ ಪ್ಲಾನ್ ಲೈವ್ ಕ್ರಿಕೆಟ್, ಸಿನಿಮಾ ಮತ್ತು ವೆಬ್ ಸೀರೀಸ್ ಎಲ್ಲವು ಉಚಿತ!
HIGHLIGHTS

ಏರ್‌ಟೆಲ್ ಮತ್ತು ವೊಡಾಫೋನ್‌ನ ಗ್ರಾಹಕರಿಗೆ ಡಿಸ್ನಿ + ಹಾಟ್‌ಸ್ಟಾರ್ ಒಂದು OTP ಮನರಂಜನಾ ವೇದಿಕೆಯಾಗಿದೆ.

ನೀವು ಹೊಸ ಚಲನಚಿತ್ರಗಳು, ವೆಬ್ ಸೀರೀಸ್ ಮತ್ತು ಲೈವ್ ಕ್ರಿಕೆಟ್ ಅನ್ನು ವೀಕ್ಷಿಸಬಹುದು.

ಟೆಲಿಕಾಂ ಕಂಪನಿಯು ಬಳಕೆದಾರರಿಗೆ ಅತ್ಯುತ್ತಮ ಆಫರ್‌ ಅನ್ನು ನೀಡಿದ್ದು ಉಚಿತವಾಗಿ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಪಡೆಯಬಹುದು.

Airtel-Vi Offer: ಏರ್‌ಟೆಲ್ ಮತ್ತು ವೊಡಾಫೋನ್‌ನ ಗ್ರಾಹಕರಿಗೆ ಡಿಸ್ನಿ + ಹಾಟ್‌ಸ್ಟಾರ್ ಒಂದು OTP ಮನರಂಜನಾ ವೇದಿಕೆಯಾಗಿದೆ. ನೀವು ಹೊಸ ಚಲನಚಿತ್ರಗಳು, ವೆಬ್ ಸೀರೀಸ್ ಮತ್ತು ಲೈವ್ ಕ್ರಿಕೆಟ್ ಅನ್ನು ವೀಕ್ಷಿಸಬಹುದು. ಇಲ್ಲಿ ಪ್ರಮುಖ ವಿಷಯವೆಂದರೆ ನೀವು ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಗಾಗಿ ರೂ 200 ಮತ್ತು ರೂ 300 ಪಾವತಿಸಬೇಕಾಗುತ್ತದೆ. ಆದರೆ ಮೊಬೈಲ್ ಟೆಲಿಕಾಂ ಕಂಪನಿಯು ಬಳಕೆದಾರರಿಗೆ ಅತ್ಯುತ್ತಮ ಆಫರ್‌ ಅನ್ನು ನೀಡಿದ್ದು ಉಚಿತವಾಗಿ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಪಡೆಯಬಹುದು.

ಉಚಿತ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಪಡೆಯಬಹುದು

ಅನೇಕ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರಿಗೆ ಕರೆ ಮತ್ತು ಇಂಟರ್ನೆಟ್ ಡೇಟಾ ಜೊತೆಗೆ ಮನರಂಜನೆಯನ್ನು ಒದಗಿಸುತ್ತಾವೆ. ಇದಕ್ಕಾಗಿ ಅವರು ಹಲವಾರು ಅದ್ಭುತ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಾರಂಭಿಸಿದ್ದಾರೆ. ಇದಲ್ಲದೆ ಪ್ರತಿದಿನ ಉಚಿತ ಡೇಟಾ, ಅನ್‌ಲಿಮಿಟೆಡ್ ಕರೆ ಮತ್ತು ಸಂಪೂರ್ಣ ಮನರಂಜನೆಗಾಗಿ ಉಚಿತ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಸೇರಿಸಲಾಗಿದೆ. ಏರ್‌ಟೆಲ್ ಮತ್ತು ವೊಡಾಫೋನ್‌ನ ಕೆಲವು ಉತ್ತಮ ಯೋಜನೆಗಳ ಬಗೆಗಿನ ಡಿಟೈಲ್ಸ್‌ ಇಲ್ಲಿದೆ ನೋಡಿ.

Vodafone-Idea ರೂ 399 ರೀಚಾರ್ಜ್‌ಯೋಜನೆ

ಏರ್‌ಟೆಲ್‌ನ ರೂ 399 ರೀಚಾರ್ಜ್ ಯೋಜನೆಯಲ್ಲಿ ಬಹಳಷ್ಟು ಪ್ರಯೋಜನಗಳನ್ನು ನೀವು ಪಡೆಯಬಹುದು. ಇಲ್ಲಿ ಪ್ರತಿ ದಿನ 2.5 GB ಡೇಟಾವನ್ನು ಸ್ವೀಕರಿಸುತ್ತೀರಿ. ಇದರೊಂದಿಗೆ ದೇಶಾದ್ಯಂತ ಎಲ್ಲಾ ನೆಟ್‌ವರ್ಕ್‌ಗಳಿಗೆ ಅನ್‌ಲಿಮಿಟೆಡ್ ಕರೆ ಮತ್ತು ದಿನಕ್ಕೆ 100 SMS ಸಿಗಲಿದೆ. ಈ ರೀಚಾರ್ಜ್ ಯೋಜನೆಯ ವ್ಯಾಲಿಡಿಟಿ 28 ದಿನಗಳು. ಹೆಚ್ಚುವರಿಯಾಗಿ ಏರ್‌ಟೆಲ್ ತನ್ನ ಗ್ರಾಹಕರಿಗೆ ಈ ರೀಚಾರ್ಜ್ ಯೋಜನೆಯೊಂದಿಗೆ ಡಿಸ್ನಿ + ಹಾಟ್‌ಸ್ಟಾರ್‌ಗೆ ಉಚಿತ 3-ತಿಂಗಳ ಚಂದಾದಾರಿಕೆಯನ್ನು ನೀಡುತ್ತದೆ. ಅಲ್ಲದೆ ನೀವು ಕಂಪನಿಯ Xstream ಅಪ್ಲಿಕೇಶನ್ ಅನ್ನು ಉಚಿತವಾಗಿ ಬಳಸಬಹುದು.

ಏರ್‌ಟೆಲ್ ರೂ 499 ರೀಚಾರ್ಜ್‌ ಯೋಜನೆ

ಏರ್‌ಟೆಲ್‌ನ ರೂ 499 ರೀಚಾರ್ಜ್ ಯೋಜನೆಯೊಂದಿಗೆ ನೀವು ದೇಶಾದ್ಯಂತ ಎಲ್ಲಾ ನೆಟ್‌ವರ್ಕ್‌ಗಳಿಗೆ ಅನ್‌ಲಿಮಿಟೆಡ್ ಕರೆ ಮತ್ತು ಪ್ರತಿದಿನ 3 GB ಡೇಟಾ ಜೊತೆಗೆ ದಿನಕ್ಕೆ 100 SMS ಅನ್ನು ಪಡೆಯುತ್ತೀರಿ. ಈ ರೀಚಾರ್ಜ್ ಯೋಜನೆಯ ವ್ಯಾಲಿಡಿಟಿ 28 ದಿನಗಳು. ಅಲ್ಲದೆ ಏರ್‌ಟೆಲ್‌ನ 399 ರೀಚಾರ್ಜ್ ಪ್ಯಾಕೇಜ್‌ನಂತೆ ನೀವು ಡಿಸ್ನಿ + ಹಾಟ್‌ಸ್ಟಾರ್‌ಗೆ ಉಚಿತ 3 ತಿಂಗಳ ಚಂದಾದಾರಿಕೆಯನ್ನು ಸ್ವೀಕರಿಸುತ್ತೀರಿ ಮತ್ತು Xstream ಅಪ್ಲಿಕೇಶನ್ ಅನ್ನು ಉಚಿತವಾಗಿ ಬಳಸಬಹುದು. ಇದಲ್ಲದೆ ಫಾಸ್ಟ್‌ಟ್ಯಾಗ್‌ನಲ್ಲಿ ರೂ 100 ಕ್ಯಾಶ್‌ಬ್ಯಾಕ್ ಅನ್ನು ನೀಡಲಾಗುತ್ತದೆ.

Vodafone-Idea (Vi)ರೂ 399 ರೀಚಾರ್ಜ್ ಯೋಜನೆ

Vodafone ನ ರೂ 399 ರೀಚಾರ್ಜ್ ಯೋಜನೆಯಲ್ಲಿ ನೀವು ಪ್ರತಿದಿನ 2.5 GB ಡೇಟಾವನ್ನು ಪಡೆಯುತ್ತೀರಿ. ಇದಲ್ಲದೆ ಅನ್‌ಲಿಮಿಟೆಡ್ ಕರೆ ಮತ್ತು ಪ್ರತಿ ದಿನ 100 SMS ಸಿಗಲಿದ್ದು ಈ ರೀಚಾರ್ಜ್ ಯೋಜನೆಯ ವ್ಯಾಲಿಡಿಟಿ 28 ದಿನಗಳು. ಹೆಚ್ಚುವರಿಯಾಗಿ ಈ ರೀಚಾರ್ಜ್ ಯೋಜನೆಯಲ್ಲಿ ಡಿಸ್ನಿ + ಹಾಟ್‌ಸ್ಟಾರ್‌ಗೆ 3  ತಿಂಗಳವರೆಗೆ ಉಚಿತ ಚಂದಾದಾರಿಕೆಯನ್ನು ನೀಡುವುದರ ಜೊತೆಗೆ ಹಲವಾರು ಅದ್ಭುತ ಪ್ರಯೋಜನಗಳೊಂದಿಗೆ ಕಂಪನಿಯು Binge All Night, Data Delights ಮತ್ತು Weekend Data Rollover ನಂತಹ ಇತರ ಪ್ರಯೋಜನಗಳನ್ನು ನೀಡುತ್ತಿದೆ.

Vodafone-Idea (Vi) ರೂ 499 ರೀಚಾರ್ಜ್ ಯೋಜನೆ

Vodafone ನ ರೂ 499 ರೀಚಾರ್ಜ್ ಯೋಜನೆಯಲ್ಲಿ ಪ್ರತಿದಿನ 3 GB ಡೇಟಾವನ್ನು ಪಡೆಯುತ್ತೀರಿ. ಇದಲ್ಲದೆ ಅನ್‌ಲಿಮಿಟೆಡ್ ಕರೆ ಮತ್ತು ಪ್ರತಿ ದಿನ 100 SMS ಸಿಗಲಿದ್ದು ಈ ರೀಚಾರ್ಜ್ ಯೋಜನೆಯ ವ್ಯಾಲಿಡಿಟಿ 28 ದಿನಗಳು. ಇದರೊಂದಿಗೆ ನೀವು 3 ತಿಂಗಳವರೆಗೆ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಪಡೆಯಬಹುದು ಮತ್ತು Binge All Night, Data Delights ಮತ್ತು Weekend Data Rollover ನಂತಹ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo