ರಿಲಯನ್ಸ್ ಜಿಯೋದ ಕೇವಲ ₹11 ರೂಗಳಿಗೆ ಬರೋಬ್ಬರಿ 10GB ಡೇಟಾ ನೀಡುವ ವೋಚರ್ ಪ್ಯಾಕ್ ಪರಿಚಯ
ರಿಲಯನ್ಸ್ ಜಿಯೋದ ಈ ಹೊಸ ಡೇಟಾ ವೋಚರ್ ಪ್ಯಾಕ್ ಕೇವಲ 1 ಗಂಟೆಯ ವ್ಯಾಲಿಡಿಟಿಯೊಂದಿಗೆ ಬರುತ್ತದೆ.
ಯಾರಿಗೆ ಸಿನಿಮಾ, ಗೇಮ್ ಅಥವಾ ಯಾವುದೇ ಸಾಫ್ಟ್ವೇರ್ ಡೌನ್ಲೋಡ್ ಮಾಡಲು ಬಯಸುವ ಬಳಕೆದಾರರಿಗೆ ಉತ್ತಮವಾಗಿದೆ.
Reliance Jio ₹11 Data Pack: ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋದ (Reliance Jio) ಸದ್ದಿಲ್ಲದೆ ಕೇವಲ ₹11 ರೂಗಳಿಗೆ ಬರೋಬ್ಬರಿ 10GB ಡೇಟಾ ನೀಡುವ ಹೊಸ 4G ಡೇಟಾ ವೋಚರ್ ಪ್ಯಾಕ್ ಅನ್ನು ಕೇವಲ 1 ಗಂಟೆಯ ವ್ಯಾಲಿಡಿಟಿಯೊಂದಿಗೆ ಪರಿಚಯಿಸಿದೆ. ಮತ್ತು ಇದೊಂದು ಡೇಟಾ ವೋಚರ್ ಪ್ಯಾಕ್ ಆಗಿದ್ದು ಇದರಲ್ಲಿ ಡೇಟಾ ಹೊರೆತು ಬೇರೆ ಯಾವುದೇ ಕರೆ ಅಥವಾ SMS ಲಭ್ಯವಿರೋದಿಲ್ಲ ಎನ್ನುವುದನ್ನು ಗಮನದಲ್ಲಿರಲಿ. ಈ ಜಿಯೋ ಯೋಜನೆಯನ್ನು ರಿಲಯನ್ಸ್ ಜಿಯೋದ (Reliance Jio) ದೇಶಾದ್ಯಂತ ಎಲ್ಲ ಗ್ರಾಹಕರಿಗೆ ಲಭ್ಯವಿದ್ದು ಇದನ್ನು ತುರ್ತು ಸಮಯಕ್ಕಾಗಿ ಬಳಸಲು ಉತ್ತಮವಾಗಲಿದೆ.
Surveyರಿಲಯನ್ಸ್ ಜಿಯೋದ ಈ ಪ್ಲಾನ್ ಯಾವ ಬಳಕೆದಾರರಿಗೆ ಬೆಸ್ಟ್?
ರಿಲಯನ್ಸ್ ಜಿಯೋದಿಂದ (Reliance Jio) ಪರಿಚಯಿಸಲಾಗಿರುವ ಈ ಲೇಟೆಸ್ಟ್ ಡೇಟಾ ವೋಚರ್ ಪ್ಯಾಕ್ 4G ಸೇವೆಗಳನ್ನು ಬಳಸುತ್ತಿರುವ ಬಳಕೆದಾರರ ಕಡೆಗೆ ಹೆಚ್ಚು ಕೇಂದ್ರೀಕೃತವಾಗಿದೆ. ಯಾಕೆಂದರೆ ನೀವು 5G ಬಳಸುತ್ತಿದ್ದಾರೆ ನಿಮಗೆ ಈಗಾಗಲೇ ಅನ್ಲಿಮಿಟೆಡ್ ಡೇಟಾ ಲಭ್ಯವಿರುತ್ತದೆ. ಅಲ್ಲದೆ ಈ ಡೇಟಾ ಪ್ಯಾಕ್ ಅನ್ನು ಬಳಸಲು ನಿಮ್ಮ ಬಳಿ ಪ್ರೈಮರಿ ರಿಚಾರ್ಜ್ ಪ್ಲಾನ್ ಇದ್ದರೆ ಮಾತ್ರ ಈ ಪ್ಯಾಕ್ ಬಳಸಬಹುದು. ನೇರವಾಗಿ ಕೇವಲ ಈ ಪ್ಯಾಕ್ ಮಾತ್ರ ರಿಚಾರ್ಜ್ ಮಾಡಿ ಬಳಸಲು ಸಾಧ್ಯವಿಲ್ಲ ಎನ್ನುವುದು ನೆನಪಿನಲ್ಲಿರಲಿ.
Also Read: ನಿಮ್ಮ Aadhaar Card ಮಾಹಿತಿಯನ್ನು ಅಪ್ಡೇಟ್ ಅಥವಾ ಸರಿಪಡಿಸಿಕೊಳ್ಳಲು 14ನೇ ಡಿಸೆಂಬರ್ ಕೊನೆ ದಿನ!
ರಿಲಯನ್ಸ್ ಜಿಯೋದ (Reliance Jio) ₹11 ಡೇಟಾ ಪ್ಯಾಕ್:
ಇನ್ನೂ 4G ನೆಟ್ವರ್ಕ್ ಬಳಸುತ್ತಿರುವ ಬಳಕೆದಾರರಲ್ಲಿ ಯಾರಿಗೆ ಸಿನಿಮಾ, ಗೇಮ್ ಅಥವಾ ಯಾವುದೇ ಸಾಫ್ಟ್ವೇರ್ ಡೌನ್ಲೋಡ್ ಮಾಡಲು ಬಯಸಿದರೆ ಕೇವಲ 11 ರೂಗಳಿಗೆ ಬರೋಬ್ಬರಿ 10GB ಡೇಟಾ ನೀಡುವ ಈ ಹೊಸ ಡೇಟಾ ವೋಚರ್ ಪ್ಯಾಕ್ ಅನ್ನು ಕೇವಲ 1 ಗಂಟೆಗೆ ರಿಚಾರ್ಜ್ ಮಾಡಿ ಬಳಸಬಹುದು. ಈ ಒಂದು ಗಂಟೆಯೊಳಗೆ ನೀವು 10GB ಡೇಟಾ ಬಳಸಿ ಅಥವಾ ಬಳಸದೆ ಬಿಡಿ ಈ ಪ್ಯಾಕ್ ನಿಷ್ಕ್ರಿಯವಾಗುತ್ತದೆ. ಈ ಮೂಲಕ ತುರ್ತು ಸಮಯದಲ್ಲಿ ಹೆಚ್ಚು ಡೇಟಾ ಬೇಕಾದವರಿಗೆ ಮಾತ್ರ ಇದು ಸೂಕ್ತ. ಅದನ್ನು ಬಿಟ್ಟು ಬೇರೆ ಯಾರು ಇದನ್ನು ಅಷ್ಟಾಗಿ ಬಳಸೋದಿಲ್ಲ ಅನ್ನೋದು ನನ್ನ ಅಭಿಪ್ರಾಯ ನೀವೇನು ಅಂತೀರಾ ಕಮೆಂಟ್ ಮಾಡಿ ತಿಳಿಸಬಹುದು.

ಈಗಾಗಲೇ Airtel ಸಹ ಈ ಡೇಟಾ ಪ್ಯಾಕ್ ಹೊಂದಿದೆ:
ರಿಲಯನ್ಸ್ ಜಿಯೋದಿಂದ (Reliance Jio) ಪರಿಚಯಿಸಿರುವ ಈ ಲೇಟೆಸ್ಟ್ ಡೇಟಾ ವೋಚರ್ ಪ್ಯಾಕ್ ಮಾದರಿಯ ಯೋಜನೆಯನ್ನು ಈಗಾಗಲೇ ಏರ್‌ಟೆಲ್ (Airtel) ಕೂಡ ಹೊಂದಿದ್ದು ಇದು ಜಿಯೋ ಪ್ಲಾನ್‌ನಂತೆಯೇ ಕೇವಲ ಡೇಟಾದೊಂದಿಗೆ ಬರುತ್ತದೆ. ಇದು ಅನೇಕ ಬಳಕೆದಾರರನ್ನು ಆಕರ್ಷಿಸುವ ಯೋಜನೆಯಲ್ಲ ಅಂದ್ರೆ ತಪ್ಪಿಲ್ಲ ಆದರೆ ಈಗಾಗಲೇ ಹೇಳಿರುವಂತೆ ತುರ್ತು ಸಮಯದಲ್ಲಿ ಕೇವಲ 1 ಗಂಟೆಯ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಕೇವಲ 11 ರೂಗಳ ವೆಚ್ಚದಲ್ಲಿರುವ ಪ್ಲಾನ್ ನಮಗೂ ಯಾವಾಗಲಾದರೂ ಕೆಲಸಕ್ಕೆ ಬರುತ್ತೆ ಅಂತಾರೆ ಕೆಲ ಬಳಕೆದಾರರು. ಹಾಗಾಗಿ ಬಳಕೆದಾರರು ಸಂಪೂರ್ಣ 10GB ಅನ್ನು ಬಳಸಲು ಬಯಸದಿದ್ದರೂ ಸಹ ಅವರು ಅದನ್ನು ಬಳಸಬಹುದು.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile