Xolo Era 4X ಸ್ಮಾರ್ಟ್ಫೋನ್ 5.45 ಇಂಚಿನ ಡಿಸ್ಪ್ಲೇ & 3000mAh ಬ್ಯಾಟರಿಯೊಂದಿಗೆ ಕೇವಲ 4444 ರೂಗಳಲ್ಲಿ ಬಿಡುಗಡೆಯಾಗಿದೆ.

Xolo Era 4X ಸ್ಮಾರ್ಟ್ಫೋನ್ 5.45 ಇಂಚಿನ ಡಿಸ್ಪ್ಲೇ & 3000mAh ಬ್ಯಾಟರಿಯೊಂದಿಗೆ ಕೇವಲ 4444 ರೂಗಳಲ್ಲಿ ಬಿಡುಗಡೆಯಾಗಿದೆ.
HIGHLIGHTS

ಭಾರತದಲ್ಲಿ Xolo Era 4X ಪ್ರತ್ಯೇಕವಾಗಿ ಅಮೆಜಾನ್ ಪ್ರಮುಖ ವಿಶೇಷಣಗಳೊಂದಿಗೆ ಹೊರ ಬಂದಿದೆ.

ಲಾವಾ ಸಬ್ ಬ್ರ್ಯಾಂಡ್ Xolo Era 4X ಅನ್ನು ಪ್ರಾರಂಭಿಸಿ ಒಂದು ವರ್ಷ ಅವಧಿಯ ಮಧ್ಯಂತರದ ನಂತರ ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಪುನರಾಗಮನವನ್ನು ಮಾಡಿದೆ. ಭಾರತದಲ್ಲಿ ಇದು ಪ್ರತ್ಯೇಕವಾಗಿ ಅಮೆಜಾನ್ ಪ್ರಮುಖ ವಿಶೇಷಣಗಳೊಂದಿಗೆ Xolo Era 4X ಅನ್ನು ಈಗ ಪಟ್ಟಿ ಮಾಡಲಾಗಿದೆ. 

ಕೇವಲ 4444 ರೂಗಳು 1GB ಯ RAM ಮತ್ತು 2GB ಯ ರೂಪಾಂತರಕ್ಕೆ 5,555 ರೂ. ಇದು ಜನವರಿ 9 ರಿಂದ ಅಮೆಜಾನಲ್ಲಿ ಮಾರಾಟವಾಗಲಿದೆ.  ಈ ಫೋನಿನ ವಿಶೇಷತೆಯೆಂದರೆ ಇದು 30 ದಿನಗಳ ಹಣದ ಹಿಂತಿರುಗಿಸುವಿಕೆಯ ಆಫರೊಂದಿಗೆ ಬರುತ್ತದೆ.  ಈ ಸ್ಮಾರ್ಟ್ಫೋನ್ 5.9 ಇಂಚಿನ HD+ ಡಿಸ್ಪ್ಲೇಯನ್ನು 18: 9 ಆಕಾರ ಅನುಪಾತ ಮತ್ತು 2.5D ಪ್ರೊಟೆಕ್ಷನೊಂದಿಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಒದಗಿಸುತ್ತದೆ. 

ಇದು 1.5GHz ಕ್ವಾಡ್ ಕೋರ್ MTK 6739 ಪ್ರೊಸೆಸರ್ ಮೂಲಕ 1 / 2GB RAM ಮತ್ತು 16GB ಇಂಟರ್ನಾಟ್ಲ್ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಈ ಫೋನ್ ನಿಮಗೆ ಆಂಡ್ರಾಯ್ಡ್ 8.1 ಓರಿಯೊ ಔಟ್ ಆಫ್-ಬಾಕ್ಸ್ ಅನ್ನು ನಡೆಸುತ್ತದೆ. ಮತ್ತು ಈಗಾಗಲೇ ಮೇಲೆ ಹೇಳಿರುವಂತೆ 3000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. 

ಈ ಫೋನ್ಗೆ ಫಿಂಗರ್ಪ್ರಿಂಟ್ ಸೆನ್ಸರ್ ನೀಡಿಲ್ಲವಾದರೂ ಸೆಕ್ಯೂರಿಟಿಗಾಗಿ ಫೇಸ್ ಅನ್ಲಾಕ್ನೊಂದಿಗೆ ಬರುತ್ತದೆ. ಇದರಲ್ಲಿ ಕ್ಯಾಮೆರಾಗಾಗಿ LED ಫ್ಲಾಶ್ನೊಂದಿಗೆ 8MP ಮೆಗಾಪಿಕ್ಸೆಲ್ ಬ್ಯಾಕ್ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ ಸೆಲ್ಫಿ ಫ್ಲ್ಯಾಷ್ಗೆ 5MP ಫ್ರಂಟ್ ಸೆನ್ಸಾರ್ ಸಹ ಬೆಂಬಲವಿದೆ.

 

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo