Xiaomi Redmi Note 8 Pro ಬೆಲೆಯಲ್ಲಿ ಭಾರಿ ಕುಸಿತವಾಗಿ ಕೇವಲ ₹13,999 ರೂಗಳಲ್ಲಿ ಲಭ್ಯ

Xiaomi Redmi Note 8 Pro ಬೆಲೆಯಲ್ಲಿ ಭಾರಿ ಕುಸಿತವಾಗಿ ಕೇವಲ ₹13,999 ರೂಗಳಲ್ಲಿ ಲಭ್ಯ
HIGHLIGHTS

Redmi Note 8 Pro ಫೋನಿನ 6GB RAM ಮತ್ತು 64GB ಸ್ಟೋರೇಜ್ ಪ್ಯಾಕ್ ಮಾಡುವ ಫೋನ್‌ ಮೂಲ ಮಾದರಿಯ ಬೆಲೆಯಲ್ಲಿ ಮಾತ್ರ ಕಡಿಮೆಯಾಗಿದೆ.

ಭಾರತದಲ್ಲಿ ಇಂದಿನಿಂದ Xiaomi Redmi Note 8 Pro ಸ್ಮಾರ್ಟ್ಫೋನ್ ತನ್ನ ಬೆಲೆಯಲ್ಲಿ ಭಾರಿ ಕಡಿತವನ್ನು ಪಡೆದಿದೆ. ಚೀನಾದಲ್ಲಿ ಕರೋನವೈರಸ್ ಏಕಾಏಕಿ ಉಂಟಾದ ಪೂರೈಕೆ ಸರಪಳಿ ತೊಂದರೆಗಳ ಬಗ್ಗೆ ಹೇಳಿ Xiaomi ದೇಶದಲ್ಲಿ Redmi Note 8 ಬೇಸ್ ಮಾದರಿಯ ಬೆಲೆಯನ್ನು ಹೆಚ್ಚಿಸಿದ ಕೆಲವೇ ದಿನಗಳಲ್ಲಿ ಅದರ ದೊಡ್ಡಣ್ಣನಾದ Redmi Note 8 Pro ಫೋನಿನ ಬೆಲೆ ಕಡಿತವಾಗಿದೆ. ಆದ್ದರಿಂದ ನೀವು Redmi Note 8 Pro ಸ್ಮಾರ್ಟ್ಫೋನ್ ಪಡೆಯಲು ನೋಡುತಿದ್ದರೆ ಇದು ನಿಮಗೆ ಹೆಚ್ಚು ಆಸಕ್ತಿದಾಯಕ ಸಮಯವಾಗಿದೆ. Redmi Note 8 Pro ಫೋನಿನ 6GB RAM ಮತ್ತು 64GB ಸ್ಟೋರೇಜ್ ಪ್ಯಾಕ್ ಮಾಡುವ ಫೋನ್‌ ಮೂಲ ಮಾದರಿಯ ಬೆಲೆಯಲ್ಲಿ ಮಾತ್ರ ಕಡಿಮೆಯಾಗಿದೆ.

REDMI NOTE 8 PRO DISPLAY & DESIGN

ಈ ಸ್ಮಾರ್ಟ್ಫೋನ್ 6.53 ಇಂಚಿನ FHD+ ಡಿಸ್ಪ್ಲೇಯನ್ನು ಹೊಂದಿದ್ದು ಇದನ್ನು ಮಿನಿ ಡ್ರಾಪ್ ನಾಚ್ ಹೊಂದಿದೆ. ಈ ಮಿನಿ ಡ್ರಾಪ್ ಡಿಸ್ಪ್ಲೇ  ಸ್ಟ್ಯಾಂಡರ್ಡ್ ಡ್ಯೂಡ್ರಾಪ್ ನಾಚ್ ಡಿಸ್ಪ್ಲೇ ವಿನ್ಯಾಸಕ್ಕಿಂತ ಚಿಕ್ಕದಾಗಿದೆ ಎಂದು ರಿಯಲ್ಮೆ ಹೇಳುತ್ತದೆ. ಇದು 84.9% ಪ್ರತಿಶತದಷ್ಟು ಸ್ಕ್ರೀನ್ ಟು ಬಾಡಿಗೆ ಕಾರಣವಾಗಿದೆ. ಇದರ ಹಿಂಭಾಗದಲ್ಲಿ ಹೈ ಗ್ರಾಫಿಕ್ ತೀವ್ರವಾದ ಗೇಮಿಂಗ್ ಆಡುವಾಗ ಶಾಖವನ್ನು ಕಡಿಮೆ ಮಾಡಲು ಸ್ಮಾರ್ಟ್ಫೋನ್ ಲಿಕ್ವಿಡ್ ಕೂಲಿಂಗ್ ಸಿಸ್ಟಮ್ ತಂತ್ರಜ್ಞಾನವನ್ನು ಸಹ ಹೊಂದಿದೆ.
 
REDMI NOTE 8 PRO PROCESSOR & MEMORY

ಈ ಸ್ಮಾರ್ಟ್ಫೋನ್ ಮೀಡಿಯಾ ಟೆಕ್ ಹೆಲಿಯೊ G90T ಪ್ರೊಸೆಸರ್ ಚಲಿಸುತ್ತದೆ. ಮತ್ತು ಹೊಸ ಸಿಪಿಯುನೊಂದಿಗೆ ಸಾಗಿಸುವ ಮೊದಲ ಫೋನ್ ಆಗಿದೆ. ಆಕ್ಟಾ-ಕೋರ್ ಚಿಪ್‌ಸೆಟ್ ಅನ್ನು 12nm ಪ್ರಕ್ರಿಯೆಯಲ್ಲಿ ನಿರ್ಮಿಸಲಾಗಿದೆ ಮತ್ತು 2.05GHz ಕ್ಲಾಕ್ ಸ್ಪೀಡ್ ವೇಗವನ್ನು ಹೊಂದಿದೆ. ಪ್ರೊಸೆಸರ್ ಅನ್ನು Mali-76 ಜಿಪಿಯು ಜೊತೆ ಜೋಡಿಸಲಾಗಿದೆ. ಮೀಡಿಯಾ ಟೆಕ್ ಚಿಪ್ ಹೈಪರ್ ಎಂಜೈನ್ ಗೇಮಿಂಗ್ ತಂತ್ರಜ್ಞಾನವನ್ನು ಸಹ ಹೊಂದಿದೆ. ಇದು ‘ವರ್ಧಿತ’ ಗೇಮಿಂಗ್ ಅನುಭವವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಇದು 6GB ಮತ್ತು 8GB RAM ಜೊತೆಗೆ ಬರುತ್ತದೆ. ಇದರ ಕ್ರಮವಾಗಿ 64GB ಮತ್ತು 128GB UFS 2.1 ಇಂಟರ್ನಲ್ ಸ್ಟೋರೇಜ್ ಜೊತೆಗೆ ಜೋಡಿಸಲ್ಪಟ್ಟಿವೆ.

REDMI NOTE 8 PRO CAMERA & BATTERY

ಇದರಲ್ಲಿ ಕ್ವಾಡ್ ಕ್ಯಾಮೆರಾ ಸೆಟಪ್ ಹೊಂದಿದ್ದು ಪ್ರೈಮರಿ 64MP ವೈಡ್ ಕ್ಯಾಮೆರಾವನ್ನು ಒಳಗೊಂಡಿದ್ದು ಇದು f/1.9 ಅಪರ್ಚರ್ ಲೆನ್ಸ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಎರಡನೇಯದಾಗಿ 8MP ಒಳಗೊಂಡಿದ್ದು ಇದು f/2.2 ಅಪರ್ಚರ್ ಜೋಡಿಸಲ್ಪಟ್ಟಿದೆ. ನಂತರ 2MP + 2MP ಮ್ಯಾಕ್ರೋ ಮತ್ತು ಡೆಪ್ತ್ ಸೆನ್ಸರ್ f/2.4 ಅಪರ್ಚರ್ ಲೆನ್ಸ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಇದು ಉತ್ತಮವಾದ ಸ್ಲೋ-ಮೋಷನ್ ವಿಡಿಯೋ ರೆಕಾರ್ಡಿಂಗ್ ಮತ್ತು ಫುಲ್ HD ವಿಡಿಯೋ ರೆಕಾರ್ಡಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಇದರ ಮುಂಭಾಗದಲ್ಲಿ 20MP ಕ್ಯಾಮೆರಾ ಇದ್ದು ಅದು AI ಪೋಟ್ರೇಟ್ ಶಾಟ್ ಸೆರೆಹಿಡಿಯಬಲ್ಲದು.

ಈ ಫೋನಲ್ಲಿ 4500mAh ಬ್ಯಾಟರಿಯಿಂದ ಬೆಂಬಲಿಸಲಾಗುತ್ತದೆ. ಇದು PUBG ಆಡುವಾಗ ಸುಮಾರು 10.6 ಗಂಟೆಗಳ ಕಾಲ ಉಳಿಯುತ್ತದೆ. ಅಲ್ಲದೆ 20.8 ಗಂಟೆಗಳ ಆನ್‌ಲೈನ್ ವೀಡಿಯೊ ಪ್ಲೇಬ್ಯಾಕ್ ಅನ್ನು ನೀಡುತ್ತದೆ. ಇದು ರಿವರ್ಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಹ್ಯಾಂಡ್‌ಸೆಟ್‌ನಲ್ಲಿ ಮೂರು ಕಾರ್ಡ್ ಸ್ಲಾಟ್‌ಗಳಿವೆ. ಎರಡು ಡ್ಯುಯಲ್ ನ್ಯಾನೊ ಸಿಮ್‌ಗಳು ಮತ್ತು ಒಂದು ಮೈಕ್ರೊ SD ಕಾರ್ಡ್ ಸ್ಲಾಟ್ ಇದ್ದು 256GB ವರೆಗೆ ವಿಸ್ತರಿಸಬಹುದಾಗಿದೆ. ಹ್ಯಾಂಡ್‌ಸೆಟ್ ಸ್ಪ್ಲಾಶ್ ಪ್ರೊಫ್ ವಿನ್ಯಾಸವನ್ನು ಸಹ ಹೊಂದಿದೆ. ಇದರ ವೇಗವಾದ ಡೇಟಾ ವೇಗಕ್ಕಾಗಿ ಡ್ಯುಯಲ್ ವೈ-ಫೈ ಅನ್ನು ಬೆಂಬಲಿಸುತ್ತದೆ. ಮತ್ತು ಕರೆ ಮತ್ತು ಡೇಟಾವನ್ನು ಏಕಕಾಲದಲ್ಲಿ ಬೆಂಬಲಿಸುತ್ತದೆ.

REDMI NOTE 8 PRO PRICE & AVAILABILITY

Xiaomi Redmi Note 8 Pro 6GB+64GB  : 13,999
Xiaomi Redmi Note 8 Pro 6GB+128GB: 15,999
Xiaomi Redmi Note 8 Pro 8GB+128GB: 17,999
ಈ Redmi Note 8 Pro ಸ್ಮಾರ್ಟ್ಫೋನ್ 6GB RAM + 64GB ಸ್ಟೋರೇಜ್ ಆವೃತ್ತಿಯ ಬೆಲೆ 13,999 ರೂಗಳಾಗಿವೆ. ಇದರ 6GB RAM + 128GB ಸ್ಟೋರೇಜ್ ಆವೃತ್ತಿಯ ಬೆಲೆ 15,999 ರೂಗಳಾಗಿವೆ. ಕೊನೆಯದಾಗಿ 8GB RAM + 128GB ಸ್ಟೋರೇಜ್ ಆವೃತ್ತಿಯ ಬೆಲೆ 17,999 ರೂಗಳಾಗಿವೆ. ಇಂದು ಅಮೆಜಾನ್ ಮತ್ತು mi.com ಮೂಲಕ ಮಾರಾಟವಾಗುತ್ತಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo