ಪ್ರಮುಖ ಮೊಬೈಲ್ ಬ್ರಾಂಡ್ ಎನಿಸಿಕೊಂಡಿರುವ Vivo ಕಂಪನಿಯ V ಸರಣಿಯ ಸ್ಮಾರ್ಟ್‌ಫೋನ್‌ಗಳು ಆಕರ್ಷಕ ಫೀಚರ್ಸ್ ಮೂಲಕ ಗ್ರಾಹಕರ ಗಮನ ಸೆಳೆದಿವೆ. ಆದರೆ ಇದೀಗ ವಿವೋ V ಸರಣಿಯ Vivo V70 ಮತ್ತು Vivo V70 Elite ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ದಿಢೀರ್ ಬೆಲೆ ಹೆಚ್ಚಳ ಕಂಡಿದ್ದು, ಮೊಬೈಲ್ ಪ್ರಿಯರಿಗೆ ಶಾಕ್ ಎನಿಸಿದೆ. ವಿವೋದ ಈ ಎರಡು ಫೋನ್‌ಗಳು ಅಲ್ಲದೇ ಸಂಸ್ಥೆಯ Y ಸರಣಿಯ ಕೆಲವು ಮೊಬೈಲ್‌ಗಳ ದರದಲ್ಲಿ ಏರಿಕೆ ಆಗಿದೆ. ಈ ಫೋನ್‌ಗಳ ಬೆಲೆಯಲ್ಲಿ ಏರಿಕೆ ಆಗಿರುವ ಕುರಿತು ಹಲವು ಟಿಪ್‌ಸ್ಟಾರ್ ಹಾಗೂ ಎಕ್ಸ್ ಖಾತೆಯ ಕೆಲವು ಫೋಸ್ಟ್‌ಗಳು ಸೂಚಿಸುತ್ತಿವೆ. ಹಾಗಾದರೆ ವಿವೋ ಸಂಸ್ಥೆಯ ವಿವೋ V70 ಮತ್ತು ವಿವೋ V70 ಇಲೈಟ್ ಸ್ಮಾರ್ಟ್‌ಫೋನ್‌ಗಳ ಹೊಸ ಬೆಲೆ ಹಾಗೂ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : 50MP ಸೆಲ್ಫಿ ಕ್ಯಾಮೆರಾ ಇರುವ Vivo V50 5G ಮೊಬೈಲ್ ಬೆಲೆಯಲ್ಲಿ ಭಾರೀ ಇಳಿಕೆ! ಫೀಚರ್ಸ್ ನೋಡಿ
ದೇಶೀಯ ಮೊಬೈಲ್ ಮಾರುಕಟ್ಟೆಯಲ್ಲಿ ವಿವೋ ಕಂಪನಿಯ ಕೆಲವು ಮೊಬೈಲ್‌ಗಳು ಭಾರೀ ಡಿಮ್ಯಾಂಡ್ ಪಡೆದುಕೊಂಡಿವೆ. ಅಲ್ಲದೇ ಕೆಲವು ಸ್ಮಾರ್ಟ್‌ಫೋನ್‌ಗಳು ಜನಪ್ರಿಯತೆ ಹೊಂದಿವೆ. ಅಂತಹ ಲಿಸ್ಟ್‌ನಲ್ಲಿ ವಿವೋ V70 ಮತ್ತು ವಿವೋ V70 ಇಲೈಟ್ ಸ್ಮಾರ್ಟ್‌ಫೋನ್‌ಗಳು ಸೇರಿವೆ. ಆದರೆ ಇದೀಗ ಈ ಎರಡು ಸ್ಮಾರ್ಟ್‌ಫೋನ್‌ಗಳ ದರದಲ್ಲಿ ಹೆಚ್ಚಳ ಆಗಿರುವುದು ಖರೀದಿದಾರರಿಗೆ ಅಚ್ಚರಿ ಎನಿಸಿದೆ. ಈ ಫೋನ್‌ಗಳ ಪರಿಷ್ಕರಣೆಯಾದ ಹೊಸ ಬೆಲೆಗಳು ಅವುಗಳ ಸ್ಟೋರೇಜ್ ಮಾಡೆಲ್ ಅವಲಂಬಿಸಿ 1,000 ರೂ.ಗಳಿಂದ ರಿಂದ 4,000 ರೂ. ಗಳ ವರೆಗೆ ಇರುತ್ತದೆ.
ವಿವೋ V70 ಎಲೈಟ್ ಫೋನಿನ 8GB + 256GB ಸ್ಟೋರೇಜ್ ವೇರಿಯಂಟ್ ಹಳೆಯ ದರವು 54,999 ರೂ.ಗಳು ಆಗಿದೆ. ಆದರೆ ಬೆಲೆ ಏರಿಕೆಯ ನಂತರ ಹೊಸ ಬೆಲೆಯು 58,999 ರೂ.ಗಳು ಆಗಿದೆ. ಅದೇ ರೀತಿ ಈ ಫೋನಿನ 12GB + 256GB ಸ್ಟೋರೇಜ್ ವೇರಿಯಂಟ್ ಹಳೆಯ ದರವು 59,999 ರೂ.ಗಳು ಆಗಿದೆ. ಹೊಸ ಬೆಲೆಯು 63,999 ರೂ.ಗಳು ಆಗಿದೆ.
ವಿವೋ V70 ಸ್ಮಾರ್ಟ್‌ಫೋನಿನ 8GB + 256GB ಸ್ಟೋರೇಜ್ ವೇರಿಯಂಟ್ ಹಳೆಯ ಪ್ರೈಸ್‌ಟ್ಯಾಗ್ 49,999 ರೂ.ಗಳು ಆಗಿದೆ. ಆದರೆ ಬೆಲೆ ಏರಿಕೆಯ ನಂತರ ಹೊಸ ಬೆಲೆಯು 53,999 ರೂ.ಗಳು ಆಗಿದೆ. ಅದೇ ರೀತಿ ಈ ಫೋನಿನ 12GB + 256GB ಸ್ಟೋರೇಜ್ ವೇರಿಯಂಟ್ ಹಳೆಯ ಪ್ರೈಸ್ 53,999 ರೂ.ಗಳು ಆಗಿದೆ. ಹೊಸ ಬೆಲೆಯು 56,999 ರೂ.ಗಳು ಆಗಿದೆ.
ಇತ್ತೀಚಿನ ವಿವೋ V70 ಎಲೈಟ್ ಮೊಬೈಲ್ 120Hz ರಿಫ್ರೆಶ್ ರೇಟ್ ಬೆಂಬಲದ ಜೊತೆಗೆ 6.59 ಇಂಚಿನ AMOLED ಡಿಸ್‌ಪ್ಲೇ ಅನ್ನು ಒಳಗೊಂಡಿದೆ. ಹಾಗೆಯೇ Qualcomm Snapdragon 8s Gen 3 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದುಕೊಂಡಿದೆ. ಈ ಮೊಬೈಲ್ ಹಿಂಭಾಗದಲ್ಲಿ ಮೂರು ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು ಇದರ ಮುಖ್ಯ ಕ್ಯಾಮೆರಾವು 50MP ZEISS ಲೆನ್ಸ್ ಅನ್ನು ಪಡೆದುಕೊಂಡಿದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಮುಂಭಾಗದಲ್ಲಿ 50MP Zeiss ಕ್ಯಾಮೆರಾ ಸೆನ್ಸಾರ್ ಅನ್ನು ಇದಗಿಸಲಾಗಿದೆ.
ಇನ್ನು ವಿವೋ V70 ಮೊಬೈಲ್ 6.59 ಇಂಚಿನ AMOLED ಡಿಸ್‌ಪ್ಲೇ ಪಡೆದುಕೊಂಡಿದೆ. ಅಲ್ಲದೇ ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 Gen 4 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಒಳಗೊಂಡಿದೆ. ಈ ಮೊಬೈಲ್ ಹಿಂಭಾಗದಲ್ಲಿ ಮೂರು ರಿಯರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು ಇದರ ಮುಖ್ಯ ಕ್ಯಾಮೆರಾವು 50MP ಲೆನ್ಸ್ ಅನ್ನು ಪಡೆದುಕೊಂಡಿದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಮುಂಭಾಗದಲ್ಲಿ 50MP ಕ್ಯಾಮೆರಾ ಸೆನ್ಸಾರ್ ಅನ್ನು ಒಳಗೊಂಡಿದೆ.