ದಸರಾ ಹಬ್ಬದ ಪ್ರಯುಕ್ತ ಅಮೆಜಾನ್ ಆಯೋಜಿಸಿರುವ Amazon Great Indian Festival Sale 2026 ಸೇಲ್ ಗ್ರಾಹಕರ ಗಮನ ಸೆಳೆಯುತ್ತಿದೆ. ಈ ಮಾರಾಟದಲ್ಲಿ ಆಯ್ದ ಫೋನ್ಗಳಿಗೆ ಭರ್ಜರಿ ರಿಯಾಯಿತಿ ಲಭ್ಯವಿದೆ. ಆ ಪೈಕಿ ವಿವೋ ಕಂಪನಿಯ Vivo X300 FE ಮೊಬೈಲ್ ಬೊಂಬಾಟ್ ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್ಗಳ ಕೊಡುಗೆಗಳು ಹಾಗೂ ಎಕ್ಸ್ಚೇಂಜ್ ಆಫರ್ ಮೂಲಕ ಈ ಮೊಬೈಲ್ ಖರೀದಿಸಿದರೆ ಇನ್ನಷ್ಟು ಡಿಸ್ಕೌಂಟ್ ಸಹ ಪಡೆಯಲು ಅವಕಾಶ ಇದೆ. ಈ ಮೊಬೈಲ್ ಸ್ನಾಪ್ಡ್ರಾಗನ್ 8 ಇಲೈಟ್ ಜೆನ್ 5 ಚಿಪ್ಸೆಟ್ ಸಾಮರ್ಥ್ಯ ಪಡೆದಿದೆ. ಅಲ್ಲದೇ ಈ ಸ್ಮಾರ್ಟ್ಫೋನ್ 6,500mAh ಬ್ಯಾಟರಿ ಸಪೋರ್ಟ್ ಸಹ ಪಡೆದಿದೆ. ಅಲ್ಲದೇ ಈ ಮೊಬೈಲ್ ಆಕರ್ಷಕ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಹಾಗಾದರೆ ಅಮೆಜಾನ್ ಇ ಕಾಮರ್ಸ್ ವೆಬ್ಸೈಟ್ನಲ್ಲಿ ವಿವೋ X300 FE ಸ್ಮಾರ್ಟ್ಫೋನಿಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಬಜೆಟ್ ದರದ Redmi 15C 5G ಮೊಬೈಲ್ ಈಗ ಮತ್ತಷ್ಟು ಸಸ್ತಾ ಬೆಲೆಯಲ್ಲಿ ಖರೀದಿಗೆ ಲಭ್ಯ!
ಪ್ರೀಮಿಯಂ ಬೆಲೆ ಹಾಗೂ ಆಕರ್ಷಕ ಫೀಚರ್ಸ್ ಮೂಲಕ ಗ್ರಾಹಕರ ಗಮನ ಸೆಳೆದಿರುವ ವಿವೋ X300 FE ಮೊಬೈಲ್ ಅಮೆಜಾನ್ ಇ ಕಾಮರ್ಸ್ ಪ್ಲಾಟ್ಫಾರ್ಮ್ ನಲ್ಲಿ ಅತ್ಯುತ್ತಮ ಡಿಸ್ಕೌಂಟ್ ಪಡೆದುಕೊಂಡಿದೆ. ಈ ಮೊಬೈಲ್ 8GB + 256GB ಸ್ಟೋರೇಜ್ ವೇರಿಯಂಟ್ ಬೆಲೆ 1,09,999 ರೂ.ಗಳು ಆಗಿದ್ದು, ಆದರೆ ಆಫರ್ನಲ್ಲಿ ಪ್ರಸ್ತುತ ಈ ಮೊಬೈಲ್ 89,999 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಇನ್ನು ಈ ಮೊಬೈಲ್ ಅನ್ನು ಗ್ರಾಹಕರು ಲಿಲಾಕ್ ಪರ್ಪಲ್, ನಾಯ್ರ್ ಬ್ಲ್ಯಾಕ್ ಮತ್ತು ಅರ್ಬನ್ ಆಲಿವ್ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಸಬಹುದು. ವಿವೋ X300 FE ಸ್ಮಾರ್ಟ್ಫೋನ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.
ವಿವೋ X300 FE ಮೊಬೈಲ್ 6.31 ಇಂಚಿನ AMOLED ಡಿಸ್ಪ್ಲೇ ಅನ್ನು ಹೊಂದಿರುವ ಜೊತೆಗೆ ಇದರ ಸ್ಕ್ರೀನ್ 120Hz ವರೆಗೆ ರಿಫ್ರೆಶ್ ರೇಟ್ ಅನ್ನು ಪಡೆದಿದೆ. ಇದರ ಡಿಸ್ಪ್ಲೇಯು 94.38 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತ ಪಡೆದುಕೊಂಡಿದೆ. ಇದರೊಂದಿಗೆ ಈ ಫೋನ್ ಆಕ್ಟಾ ಕೋರ್ ಸ್ನಾಪ್ಡ್ರಾಗನ್ 8 ಇಲೈಟ್ ಜೆನ್ 5 ಚಿಪ್ಸೆಟ್ ಪ್ರೊಸೆಸರ್ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಇದು ಆಂಡ್ರಾಯ್ಡ್ 16 ಆಧಾರಿತ OriginOS 6 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಹಾಗೆಯೇ ವಿವೋ X300 FE ಮೊಬೈಲ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್ಅಪ್ ಅನ್ನು ಪಡೆದುಕೊಂಡಿವೆ. ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ ಹಾಗೆಯೇ ಸೆಕೆಂಡರಿ ಕ್ಯಾಮೆರಾವು 8 ಮೆಗಾಪಿಕ್ಸೆಲ್ ವೈಲ್ಡ್ ಆಂಗಲ್ ಸೆನ್ಸಾರ್ ರಚನೆ ಹೊಂದಿದೆ. ತೃತೀಯ ಕ್ಯಾಮೆರಾವು 50 ಮೆಗಾಪಿಕ್ಸಲ್ ಟೆಲಿಫೋಟೋ ಸೆನ್ಸಾರ್ ಅನ್ನು ಪಡೆದುಕೊಂಡಿದೆ. ಇನ್ನು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ ಈ ಮೊಬೈಲ್ 50 ಮೆಗಾಪಿಕ್ಸೆಲ್ ಕ್ಯಾಮೆರಾ ಪಡೆದುಕೊಂಡಿದೆ. ಹಾಗೆಯೇ ಈ ಮೊಬೈಲ್ 6,500mAh ಬ್ಯಾಟರಿ ಬ್ಯಾಕ್ಅಪ್ ಜೊತೆಗೆ 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಪಡೆದುಕೊಂಡಿದೆ.
Disclosure: This Article Contains Affiliate Links