50MP ಸೆಲ್ಫಿ ಕ್ಯಾಮೆರಾ ಇರುವ Vivo V50 5G ಮೊಬೈಲ್ ಬೆಲೆಯಲ್ಲಿ ಭಾರೀ ಇಳಿಕೆ! ಫೀಚರ್ಸ್ ನೋಡಿ
ಫ್ಲಿಪ್‌ಕಾರ್ಟ್‌ನಲ್ಲಿ ವಿವೋ V50 5G ಬಿಗ್ ಡಿಸ್ಕೌಂಟ್‌ನಲ್ಲಿ ಲಭ್ಯ
ವಿವೋ V50 5G ಸ್ಮಾರ್ಟ್‌ಫೋನ್ 50MP ಸೆಲ್ಫಿ ಕ್ಯಾಮೆರಾ ರಚನೆ ಪಡೆದಿದೆ
ವಿವೋ V50 5G ಮೊಬೈಲ್ 6,000mAh ಬ್ಯಾಟರಿ ಸೌಲಭ್ಯ ಪಡೆದುಕೊಂಡಿದೆ
ಚೀನಾ ಮೂಲದ ವಿವೋ ಮೊಬೈಲ್ ಕಂಪನಿಯ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಪೈಕಿ ಒಂದಾದ Vivo V50 5G ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಪ್ರಸ್ತುತ ಈ ಸ್ಟೈಲಿಶ್ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಉತ್ತಮ ಆಫರ್ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳು ಹಾಗೂ ಎಕ್ಸ್‌ಚೇಂಜ್ ಆಫರ್ ಮೂಲಕ ಈ ಮೊಬೈಲ್ ಖರೀದಿಸಿದರೆ ಇನ್ನಷ್ಟು ಡಿಸ್ಕೌಂಟ್ ಸಹ ಪಡೆಯಲು ಅವಕಾಶ ಇದೆ. ಸಂಸ್ಥೆಯ ಈ ಮೊಬೈಲ್ Snapdragon 7 Gen 3 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಅಲ್ಲದೇ ಈ ಫೋನ್ 6,000mAh ಬ್ಯಾಟರಿ ಬ್ಯಾಕ್‌ಅಪ್ ಸಹ ಪಡೆದಿದೆ. ಅಲ್ಲದೇ ಈ ಫೋನ್ ರೋಜ ರೆಡ್, ಸ್ಟೇರಿ ನೈಟ್ ಹಾಗೂ ಟೈಟಾನಿಯಂ ಗ್ರೇ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಹಾಗಾದರೆ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ವೆಬ್‌ಸೈಟ್‌ನಲ್ಲಿ ವಿವೋ V50 5G ಸ್ಮಾರ್ಟ್‌ಫೋನಿಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : Jio ಗ್ರಾಹಕರೇ ನಿಮಗೆ ಪ್ರತಿದಿನ 2GB ಡೇಟಾ ಅಗತ್ಯ ಇದ್ದರೇ, ಈ ಯೋಜನೆಗಳನ್ನು ಗಮನಿಸಿ!
Vivo V50 5G ಬೆಲೆಯಲ್ಲಿ ಆಕರ್ಷಕ ಡಿಸ್ಕೌಂಟ್
ಅತ್ಯುತ್ತಮ ಕ್ಯಾಮೆರಾ ಸೇರಿದಂತೆ ಬೊಂಬಾಟ್ ಫೀಚರ್ಸ್ ಮೂಲಕ ಸ್ಮಾರ್ಟ್‌ಫೋನ್ ಪ್ರಿಯರ ಗಮನ ಸೆಳೆದಿರುವ ವಿವೋ V50 5G ಫೋನ್ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಆಕರ್ಷಕ ರಿಯಾಯಿತಿ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್ 8GB RAM + 256GB ಸ್ಟೋರೇಜ್ ವೇರಿಯಂಟ್ ಬೆಲೆ 42,999 ರೂ.ಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಮೊಬೈಲ್ 31,454 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ (ಸದ್ಯ ನೋಟಿಫೈ ಮಿ ಇದೆ). ಇದಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಅಂದಹಾಗೆ ಈ ಫೋನ್ ರೋಜ ರೆಡ್, ಸ್ಟೇರಿ ನೈಟ್ ಹಾಗೂ ಟೈಟಾನಿಯಂ ಗ್ರೇ ಕಲರ್ ಆಯ್ಕೆಗಳಲ್ಲಿ ಲಭ್ಯ.

ವಿವೋ V50 5G ಮೊಬೈಲ್‌ನ ಪ್ರಮುಖ ಫೀಚರ್ಸ್
ವಿವೋ V50 5G ಮೊಬೈಲ್ 6.7 ಇಂಚಿನ AMOLED ಡಿಸ್‌ಪ್ಲೇ ಅನ್ನು ಹೊಂದಿರುವ ಜೊತೆಗೆ 120Hz ವರೆಗೆ ರಿಫ್ರೆಶ್ ರೇಟ್ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೇ ಸೂರ್ಯನ ಬೆಳಕಿನಲ್ಲಿ 4,500 nits ವರೆಗೆ ಗರಿಷ್ಠ ಬ್ರೈಟ್ನೆಸ್ ಒದಗಿಸುವ ಸೌಲಭ್ಯ ಪಡೆದುಕೊಂಡಿದೆ. ಅಂದಹಾಗೆ ಈ ಮೊಬೈಲ್ ಕ್ವಾಲ್ಕಮ್ Snapdragon 7 Gen 3 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ 128GB, 256GB ಹಾಗೂ 512GB ಆಂತರೀಕ ಸ್ಟೋರೇಜ್ ಆಯ್ಕೆಯನ್ನು ಒಳಗೊಂಡಿದೆ.
ಹಾಗೆಯೇ ವಿವೋ V50 5G ಮೊಬೈಲ್ ಕ್ಯಾಮೆರಾ ವಿಭಾಗವು ಅತ್ಯುತ್ತಮ ಆಗಿದೆ. ಈ ಫೋನ್ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇದರ ಮೊದಲ ಕ್ಯಾಮೆರಾವು 50MP ಸೆನ್ಸಾರ್ ಆಗಿದ್ದು, ಸೆಕೆಂಡರಿ ಕ್ಯಾಮೆರಾವು ಸಹ 50MP ಸೆನ್ಸಾರ್ ಸಾಮರ್ಥ್ಯ ಪಡೆದಿದೆ. ಹಾಗೆಯೇ ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಕೂಡಾ ಈ ಮೊಬೈಲ್ 50MP ಸೆನ್ಸಾರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇನ್ನು ಈ ಫೋನ್ 6,000mAh ಬ್ಯಾಟರಿ ಜೊತೆಗೆ 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
